ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಉದಯೋನ್ಮುಖ ಕಲಾವಿದರ ತಂಡದಿಂದ ತಯಾರಾಗಿರೋ ಚಿತ್ರ ಪ್ಯಾರ್. ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿರೋ ಈ ಸಿನಿಮಾ.. ಅದ್ಧೂರಿ ಪ್ರಮೋಷನ್ಸ್‌ಗೆ ಚಾಲನೆ ನೀಡಿತು. ಪಂಚಮುಖಿ ಗಣಪನ ಕೃಪೆಯಿಂದ ಸಂಚಾರಕ್ಕೆ ತೆರಳಿದ ಟ್ಯಾಬ್ಲೋ ಹಾಗೂ ಅದರ ಬಗ್ಗೆ ಟೀಂ ಹೇಳಿದ್ದೇನು ಅನ್ನೋದನ್ನ ನೀವೇ ನೋಡ್ಕೊಂಡ್ ಬನ್ನಿ.
- ತಂದೆ-ಮಗಳ ಎಮೋಷನ್ ಜೊತೆ ಪ್ರಿಯತಮನ ‘ಪ್ಯಾರ್’
- ಹದಿಹರೆಯದ ಮನಸುಗಳಿಗೆ ಕ್ರೇಜಿಸ್ಟಾರ್ ಕ್ರೇಜಿ ಸಂದೇಶ
- ‘ಪ್ಯಾರ್’ ಪ್ರಮೋಷನ್ಸ್ ಶುರು.. ಪಂಚಮುಖಿ ಗಣಪನ ಕೃಪೆ
ಪ್ಯಾರ್.. ಪ್ರೀತಿ, ಮೊಹಬ್ಬತ್, ಇಷ್ಕ್, ಪ್ರೇಮದ ಮತ್ತೊಂದು ಹೆಸರು. ಟೈಟಲ್ ಕೇಳಿದ್ರೆ ಸಾಕು ಇದೊಂದು ಔಟ್ ಅಂಡ್ ಔಟ್ ಫೀಲ್ ಗುಡ್ ಮೂವಿ ಅನಿಸಲಿದೆ. ಮಿಗಿಲಾಗಿ ಅದ್ಭುತ ಪ್ರೇಮದೃಶ್ಯಕಾವ್ಯ ಅನ್ನೋದು ಪಕ್ಕಾ. ಅದ್ರಂತೆ ಸಿನಿಮಾ ಒಂದು ಹುಡುಗ-ಹುಡುಗಿಯ ನಡುವಿನ ಪ್ರೇಮ್ ಕಹಾನಿಯೂ ಹೌದು.. ತಂದೆ-ಮಗಳ ಪ್ರೀತಿಯ ಕೈಗನ್ನಡಿಯೂ ಹೌದು.
ಟೀಸರ್ ಹಾಗೂ ಸಾಂಗ್ಸ್‌ನಿಂದ ಚಿತ್ರಪ್ರೇಮಿಗಳಲ್ಲಿ ಸಿನಿಮಾ ನೋಡುವ ಕೌತುಕತೆ ಹೆಚ್ಚಿಸಿರೋ ಪ್ಯಾರ್‌ಗೆ ಸುಪ್ರೀತ್ ಆ್ಯಕ್ಷನ್ ಕಟ್ ಹೇಳಿದ್ದು, ನಾಗಶ್ರೀ ಬಂಡವಾಳ ಹೂಡಿ, ರಿಚ್ ಆಗಿ ನಿರ್ಮಾಣ ಮಾಡಿದ್ದಾರೆ. ಪ್ರೀತಿ ಪ್ರೇಮದ ಜತೆ, ಒಬ್ಬ ಮಗಳು ತಂದೆಗೋಸ್ಕರ ಏನಾದರು ಮಾಡಲು ಸಿದ್ದವಾದ್ರೆ ಏನಾಗಬಹುದು ಅನ್ನೋ ಅದ್ಭುತ ಕಥಾಹಂದರ ಇಂದಿನ ಹದಿಹರೆಯದ ಮನಸುಗಳಿಗೆ ಮನರಂಜನೆ ಜೊತೆ ಗಟ್ಟಿ ಸಂದೇಶ ಕೂಡ ನೀಡಲಿದೆ.
ರಿಶ್ವಿನ್ ಹಾಗೂ ರಾಶಿಕಾ ಶೆಟ್ಟಿ ನಾಯಕ-ನಾಯಕಿಯಾಗಿ ಬಣ್ಣ ಹಚ್ಚಿದ್ದು, ನಾಯಕನಟಿ ತಂದೆಯ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸ್ಪೆಷಲ್ ಆಗಿ ಕಾಣಸಿಗುತ್ತಾರೆ. ಪಳನಿ ಡಿ ಸೇನಾಪತಿ ಸಂಗೀತ ಈ ಸಿನಿಮಾಗಿದ್ದು, ಹಾಡುಗಳು ಸಖತ್ ಕಲರ್‌ಫುಲ್ ಹಾಗು ಬ್ಯೂಟಿಫುಲ್ ಆಗಿ ಮೂಡಿಬಂದಿವೆ. ಇತ್ತೀಚೆಗೆ ಚಿತ್ರದ ಪ್ರಮೋಷನ್ಸ್ ಕಿಕ್‌ಸ್ಟಾರ್ಟ್ ಮಾಡಿದ ಚಿತ್ರತಂಡ, ಮಹಾಲಕ್ಷ್ಮೀ ಲೇಔಟ್‌ನಲ್ಲಿರೋ ಪಂಚಮುಖಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ, ಆಲಯದ ಮುಂದೆ ಟ್ಯಾಬ್ಲೋ ಸಂಚಾರಕ್ಕೆ ಕೂಡ ಅಧಿಕೃತ ಚಾಲನೆ ನೀಡಿತು.
ಇತ್ತೀಚೆಗೆ ಸಿನಿಮಾ ಮಾಡೋದು ಎಷ್ಟು ಕಷ್ಟವೋ ಪ್ರಮೋಷನ್ಸ್ ಅದಕ್ಕಿಂತ ಕಷ್ಟ ಅನ್ನೋದು ಓಪನ್ ಸೀಕ್ರೆಟ್. ಹಾಗಾಗಿ ಪ್ಯಾರ್ ಸಿನಿಮಾ ಕನ್ನಡ ಚಿತ್ರಪ್ರೇಮಿಗಳಿಗೆ ತಲುಪಿಸುವುದಕ್ಕೆ ಟೀಂ ವೆರೈಟಿ ಆಫ್ ಪ್ರಮೋಷನ್ಸ್ ಪ್ಲ್ಯಾನ್ ಮಾಡ್ತಿದೆ. ಮಕ್ಕಳಿಂದ ಮುದುಕರವರೆಗೆ ಕನೆಕ್ಟ್ ಆಗುವಂತಹ ಕಂಟೆಂಟ್ ಇರೋ ಈ ಪ್ಯಾರ್ ಚಿತ್ರ ಸದ್ಯದಲ್ಲೇ ಥಿಯೇಟರ್‌ಗೂ ಎಂಟ್ರಿ ಕೊಡಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





