ಬಾಕ್ಸ್ ಆಫೀಸ್‌ನಲ್ಲಿ ತೀವ್ರ ನಿರಾಸೆ ಮೂಡಿಸಿ, ಸಂಪೂರ್ಣವಾಗಿ ನಿಂತೇ ಹೋಯ್ತು ಅನ್ಕೊಂಡಿದ್ದ ಬ್ಲಾಕ್‌ಬಸ್ಟರ್ ಸೀಕ್ವೆಲ್ ಸಿನಿಮಾವೊಂದು ಈಗ ಮತ್ತೆ ಸೈಲೆಂಟ್ ಆಗಿ ಜೀವ ಪಡೆದುಕೊಳ್ಳುತ್ತಿದೆ.
ನಿಂತು ಹೋಯ್ತು ಅಂದಿದ್ದ ಇಂಡಿಯನ್ 3ಗೆ ಮತ್ತೆ ಜೀವ..!
ಇಂಡಿಯನ್-3ಗೆ ಕಮಲ್ ರೆಡಿ.. ಶಂಕರ್ ಗೆ ಪುನರ್ಜನ್ಮ..!?
ಶಂಕರ್ ಸೀಕ್ರೆಟ್ ಅಸ್ತ್ರ ಇಂಡಿಯನ್ 3.. ಸೇನಾಪತಿ ವರ್ಕ್ ಮೋಡ್ ಆನ್
ಇಂಡಿಯನ್ 3 ಬಾಕಿ ಪ್ಯಾಚ್‌ವರ್ಕ್‌ಗೆ ಸಿದ್ಧತೆ.. ರಿಲೀಸ್ ಯಾವಾಗ..?
ಕಮಲ್ ಹಾಸನ್ ಮತ್ತು ಶಂಕರ್ ಕಾಂಬಿನೇಶನ್ ನ ಇಂಡಿಯನ್ 2 ಬಾಕ್ಸ್ ಆಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತೆ ಅನ್ಕೊಂಡಿದ್ದ ಫ್ಯಾನ್ಸ್‌ಗೆ ಸಿಕ್ಕಿದ್ದು ಅಲ್ಟ್ರಾ-ಲೆವೆಲ್ ನಿರಾಸೆ. ಬಿಡುಗಡೆಯಾಗಿ ವಿಮರ್ಶಕರಿಂದ ಅಟ್ಟರ್ ಫ್ಲಾಪ್ ಪಟ್ಟ ಗಿಟ್ಟಿಸಿಕೊಂಡಿದ್ದ ಸೇನಾಪತಿಯ ಕಥೆ ಅಲ್ಲಿಗೆ ಮುಗಿಯಿತು, ಇಂಡಿಯನ್ 3 ಕನಸು ಕಸದ ಬುಟ್ಟಿಗೆ ಬಿತ್ತು ಅಂತಲೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ, ಕಾಲಿವುಡ್ ಅಂಗಳದಿಂದ ಹೊರಬಿದ್ದಿರೋ ಆ ಒಂದು ಹೊಚ್ಚ ಹೊಸ ಸುದ್ದಿ ಈಗ ತಮಿಳು ಸಿನಿರಂಗದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
1996ರ ಇಂಡಿಯನ್ ಕಲ್ಟ್ ಕ್ಲಾಸಿಕ್ ಹಿಟ್ ಆದ ಮೇಲೂ, 2024ರಲ್ಲಿ ಬಂದ ಸೀಕ್ವೆಲ್ ಹೀನಾಯವಾಗಿ ಸೋತಿದ್ದಕ್ಕೆ ಶಂಕರ್ ಮತ್ತು ನಿರ್ಮಾಣ ಸಂಸ್ಥೆ ಲೈಕಾ ನಡುವಿನ ವಿವಾದಗಳೇ ಪ್ರಮುಖ ಕಾರಣವಾಗಿತ್ತು. ಆದರೆ, ಬಿಟ್ಟುಕೊಡದ ನಿರ್ದೇಶಕ ಶಂಕರ್ ಇದೀಗ ಇಂಡಿಯನ್ 3 ಕೆಲಸಗಳನ್ನು ಅಂತಿಮವಾಗಿ ಮುಂದುವರಿಸಲು ಸೈಲೆಂಟ್ ಆಗಿ ಗ್ರೌಂಡ್ ವರ್ಕ್ ಆರಂಭಿಸಿದ್ದಾರೆ. ಬಹುಪಾಲು ಶೂಟಿಂಗ್ ಈಗಾಗಲೇ ಇಂಡಿಯನ್ 2 ಜೊತೆಯಲ್ಲೇ ಮುಗಿದಿರುವುದರಿಂದ, ಬಾಕಿ ಇರುವ ಪ್ಯಾಚ್‌ವರ್ಕ್ ಮತ್ತು CG ಕೆಲಸಗಳನ್ನು ಬೇಗ ಮುಗಿಸಿ ಪ್ರೇಕ್ಷಕರ ಮುಂದೆ ತರಲು ಚೆನ್ನೈ ಮೂಲಗಳು ಮಾಸ್ ಪ್ಲಾನ್ ನಡೆಸಿವೆ.
ಇತ್ತ ನಿರ್ದೇಶಕ ಶಂಕರ್ ವೃತ್ತಿಜೀವನದಲ್ಲೂ ಈಗ ಭಾರೀ ಸವಾಲಿನ ವಾತಾವರಣವಿದೆ. ಭಾರತದ ನಂಬರ್ 1 ನಿರ್ದೇಶಕ ಎನಿಸಿಕೊಂಡಿದ್ದ ಅವರಿಗೆ ಇಂಡಿಯನ್ 2 ಸೋಲಿನ ಬೆನ್ನಲ್ಲೇ ಗೇಮ್ ಚೇಂಜರ್ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿದ್ದು ದೊಡ್ಡ ಹಿನ್ನಡೆಯಾಗಿದೆ. ಜೊತೆಗೆ ಹಿಂದಿ ಪ್ರಾಜೆಕ್ಟ್ ಕೂಡ ನಿಂತು ಹೋಗಿರುವುದರಿಂದ, ತಮ್ಮ ಹಳೆಯ ಗತ್ತನ್ನು ಮರಳಿ ಪಡೆಯಲು ಶಂಕರ್ ಈ ಇಂಡಿಯನ್ 3 ಚಿತ್ರವನ್ನೇ ತಮ್ಮ ಸೀಕ್ರೆಟ್ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.
ವಿಶೇಷವೆಂದರೆ, ಈ ಮೂರನೇ ಭಾಗದಲ್ಲಿ ಕಮಲ್ ಹಾಸನ್ ಮತ್ತೆ ತಮ್ಮ ಐಕಾನಿಕ್ ಸೇನಾಪತಿ ಅವತಾರದಲ್ಲಿ ಅಬ್ಬರಿಸಲಿದ್ದಾರೆ. ಕೆಜಿಎಫ್ ಮತ್ತು ಬಾಹುಬಲಿ ತಂದ ಸೀಕ್ವೆಲ್ ಸೌಂಡ್ ನಡುವೆ, ತೀವ್ರ ಟೀಕೆಗೆ ಗುರಿಯಾಗಿದ್ದ ಪ್ರಾಂಚೈಸಿಯೊಂದನ್ನು ಶಂಕರ್ ತಮ್ಮ ತೀಕ್ಷ್ಣವಾದ ಪೋಸ್ಟ್-ಪ್ರೊಡಕ್ಷನ್ ಜಾದೂವಿನಿಂದ ಹೇಗೆ ಗೆಲುವಿನ ದಾರಿಗೆ ತರುತ್ತಾರೆ ಎಂಬುದು ಇಡೀ ದಕ್ಷಿಣ ಭಾರತದ ಚಿತ್ರರಂಗ ಕಾದು ನೋಡುತ್ತಿರುವ ಹೈ-ವೋಲ್ಟೇಜ್ ವಿಚಾರ.
ಸದ್ಯಕ್ಕೆ ಶೂಟಿಂಗ್ ಪುನರಾರಂಭದ ಬಗ್ಗೆ ಯಾವುದೇ ಅಧಿಕೃತ ಅನೌನ್ಸ್‌ಮೆಂಟ್ ಹೊರಬಂದಿಲ್ಲವಾದರೂ, ಕಾಲಿವುಡ್ ನಲ್ಲಿ ಈ ಸುದ್ದಿ ಭಾರಿ ಸಂಚಲನ ಮೂಡಿಸಿದೆ. ಶಂಕರ್ ಅವರ ಕ್ರಿಯೇಟಿವ್ ಜೀನಿಯಸ್ ಮತ್ತು ಕಮಲ್ ಹಾಸನ್ ಅವರ ಅದ್ಭುತ ನಟನೆ ಇಂಡಿಯನ್ 3 ಚಿತ್ರದಲ್ಲಿ ಒಂದಾಗಿ, ಪ್ರೇಕ್ಷಕರಿಗೆ ಕಣ್ಣು ಕೋರೈಸುವಂತಹ ವಿಷುಯಲ್ ವಂಡರ್ ನೀಡೋದಂತೂ ಗ್ಯಾರಂಟಿ. ಈ ಮಾಸ್ಟರ್ ಕಾಂಬಿನೇಷನ್ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಹೊಸ ಇತಿಹಾಸ ಸೃಷ್ಟಿಸಲಿ ಎಂಬುದೇ ಎಲ್ಲಾ ಸಿನಿಮಾ ಪ್ರೇಮಿಗಳ ಆಸೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





