ಗ್ಲಾಮರ್ ಪ್ರಪಂಚದಲ್ಲಿ ಬೋಲ್ಡ್ ದೃಶ್ಯಗಳೇ ಸಕ್ಸಸ್ ಫಾರ್ಮುಲಾ ಅಂದುಕೊಂಡಿರೋ ಈ ಕಾಲದಲ್ಲೂ ತಮ್ಮ ಸ್ವಂತ ಸಿದ್ಧಾಂತಕ್ಕೆ ಕಟ್ಟುಬಿದ್ದು, ಇಡೀ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದ್ದಾರೆ ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ. ಸಿನಿಮಾಗಳಲ್ಲಿ ಇಂಟಿಮೇಟ್ ಸೀನ್‌ಗಳು ಹಾಗೂ ಚುಂಬನದ ದೃಶ್ಯಗಳಲ್ಲಿ ನಟಿಸುವುದರ ಬಗ್ಗೆ ಮತ್ತು ತಮ್ಮ ವೈಯಕ್ತಿಕ ಜೀವನದ ಶಿಸ್ತಿನ ಬಗ್ಗೆ ಅವರು ಆಡಿದ ಒಂದು ಮಾತು ಈಗ ಸಕ್ಕತ್ ವೈರಲ್ ಆಗ್ತಿದೆ.
ಭಲೇ ಸಾಯಿ ಪಲ್ಲವಿ.. ಸೀತೆಯ ಮಾತು ಕೇಳಿ ಜನ ಪಾವನ
ಇಂಟಿಮೇಟ್ ಸೀನ್‌ಗೆ ಸಾಯಿ ಪಲ್ಲವಿ ಬಿಗ್ ನೋ..!
ಕಿಸ್‌ಗಿಂತ ಕ್ಯಾರೆಕ್ಟರ್ ಮುಖ್ಯ..ಸಾಯಿ ಪಲ್ಲವಿ ಸ್ಟ್ರಿಕ್ಟ್ ರೂಲ್ಸ್..!
ಬೋಲ್ಡ್‌ನೆಸ್ ಬೇಡ.. ಬೌಂಡರಿ ದಾಟಲ್ಲ ರಾಮಾಯಣದ ಸೀತೆ
ಗ್ಲಾಮರ್, ಬೋಲ್ಡ್‌ನೆಸ್ ಮತ್ತು ಸಾಲು ಸಾಲು ಲಿಪ್ ಲಾಕ್ ದೃಶ್ಯಗಳೇ ಸಿನಿಮಾಗಳ ಸಕ್ಸಸ್ ಸೂತ್ರ ಅಂತ ನಂಬಿರೋ ಈ ಡಿಜಿಟಲ್ ಯುಗದಲ್ಲಿ, ರಾಮಾಯಣದ ಸೀತೆಯಂತೆ ನೆಮ್ಮದಿಯ ಜೀವನವೇ ನಿಜವಾದ ಆಸ್ತಿ ಅಂತ ಸಾರಿದ್ದಾರೆ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ.ಸಿನಿಮಾ ಇಂಡಸ್ಟ್ರಿ ಅಂದಮೇಲೆ ಕೋಟಿ ಕೋಟಿ ಆಫರ್, ಬಿಂದಾಸ್ ಲೈಫ್ ಸ್ಟೈಲ್ ಮತ್ತು ದೊಡ್ಡ ಬ್ರಾಂಡ್‌ಗಳ ಹವಾ ಇದ್ದೇ ಇರುತ್ತೆ. ಆದ್ರೆ ಸಾಯಿ ಪಲ್ಲವಿ ಮೇಡಂಗೆ ಈ ಕೃತಕ ಗ್ಲಾಮರ್ ಲೈಫ್ ಎಳ್ಳಷ್ಟೂ ಬೇಕಿಲ್ಲ. ಕೋಟಿ ಕೋಟಿ ಆಫರ್ ಮಾಡಿದ್ರೂ ಫೇರ್‌ನೆಸ್ ಕ್ರೀಮ್ ಜಾಹೀರಾತನ್ನೇ ನನ್ನ ಜನಕ್ಕೆ ನಾನು ತಪ್ಪು ಸಂದೇಶ ಕೊಡಲ್ಲ ಅಂತ ಕಾಲಿನಿಂದ ಒದ್ದು ಬಂದಿರೋ ಏಕೈಕ ರಿಯಲ್ ಹೆರೋಯಿನ್ ಈಕೆ.
ಸದ್ಯ ಬಾಯ್‌ಫ್ರೆಂಡ್ ಇದ್ದಾಗ ನಟನೆಯ ನೆಪದಲ್ಲೂ ಬೇರೆಯವರಿಗೆ ಕಿಸ್ ಮಾಡಲ್ಲ.
ಒಬ್ಬ ಗಂಡಸು ಅಥವಾ ಹೆಂಗಸಿಗೆ ಉತ್ತಮ ಜೀವನ ನಡೆಸಲು ಬೇಕಾಗಿರುವುದು ಒಂದು ಸಂತೋಷದ ಕುಟುಂಬ, ಒಂದು ಕಾರು ಮತ್ತು ಇರಲು ಒಂದು ಮನೆ. ಇವೆಲ್ಲವೂ ನನ್ನ ಬಳಿ ಈಗಾಗಲೇ ಇವೆ. ಇನ್ನೊಂದು ಕಾರು ಖರೀದಿಸಲು ನಾನು ಬೇರೊಬ್ಬರನ್ನು ಚುಂಬಿಸುವ ಅಗತ್ಯವಿಲ್ಲ. ನನ್ನ ಅಭಿನಯಕ್ಕಾಗಿ ನನ್ನನ್ನು ಸಿನಿಮಾದಲ್ಲಿ ನಟಿಸಲು ಬಯಸಿದರೆ, ನನ್ನನ್ನು ಆಯ್ಕೆ ಮಾಡಿ. ಒಂದು ವೇಳೆ ಅಂತರಂಗದ ದೃಶ್ಯಗಳಿಗಾಗಿದ್ದರೆ, ಬೇರೆಯವರನ್ನು ನಟಿಸಲು ತಗೊಳ್ಳಿ ಅಂತ ಸಾಯಿ ಪಲ್ಲವಿ ಹೇಳಿರೋ ಮಾತು ಕೇಳಿ ಟ್ರೋಲರ್ಸ್, ಫ್ಯಾನ್ಸ್ ಎಲ್ಲರೂ ಶಾಕ್ ವಿತ್ ರೆಸ್ಪೆಕ್ಟ್ ಮೂಡ್‌ಗೆ ಹೋಗಿದ್ದಾರೆ.
ಮಾರ್ಕೆಟ್ ಇದ್ರೂ ಇಲ್ಲದಿದ್ರೂ ಕೇವಲ ಕಾಟನ್ ಸೀರೆ, ಯಾವುದೇ ಮೇಕಪ್ ಇಲ್ಲದ ನ್ಯಾಚುರಲ್ ಲುಕ್‌ನಲ್ಲೇ ಇಂಡಸ್ಟ್ರಿಯ ಎಲ್ಲಾ ಬೋಲ್ಡ್ ನಟಿಯರ ಮಾರ್ಕೆಟ್‌ಗೆ ತಣ್ಣೀರು ಎರಚಿದ್ದಾರೆ.ಇನ್ನು ಸಾಯಿ ಪಲ್ಲವಿ ಸಿನಿಮಾ ಆಯ್ಕೆಗಳನ್ನ ನೋಡಿದ್ರೆ ಮೈ ನವಿರೇಳುತ್ತೆ. ಪ್ರೇಮಮ್ ನ ಮಲರ್ ಟೀಚರ್ ಆಗಿ ಎಂಟ್ರಿ ಕೊಟ್ಟು ಇಡೀ ದಕ್ಷಿಣ ಭಾರತದ ಹುಡುಗರ ನಿದ್ರೆ ಕೆಡಿಸಿದ್ದ ಪಲ್ಲವಿ, ಫಿದಾದಲ್ಲಿ ಭಾನುವತಿಯಾಗಿ ಗತ್ತು ತೋರಿಸಿ, ಸಾಯಿ ಅಭ್ಯಂಗಮ್ ರೇಂಜ್‌ಗೆ ಶ್ಯಾಮ್ ಸಿಂಗ ರಾಯ್ ಮತ್ತು ಗಾರ್ಗಿಯಲ್ಲಿ ಅಭಿನಯದ ಪ್ರಳಯವನ್ನೇ ಸೃಷ್ಟಿಸಿದರು. ಕೇವಲ ತುಂಡು ಬಟ್ಟೆ, ಗ್ಲಾಮರ್ ಚೆಲ್ಲಿದರೆ ಮಾತ್ರವೇ ಗೆಲುವು ಸಿಗಲ್ಲ, ಸೀರೆ ಉಟ್ಟು ಕಣ್ಣಲ್ಲೇ ಕಥೆ ಹೇಳಿದ್ರೂ ಥಿಯೇಟರ್ ಶೇಕ್ ಆಗುತ್ತೆ ಅನ್ನೋದಕ್ಕೆ ಸಾಯಿ ಪಲ್ಲವಿ ಮಾಸ್ ಹಿಟ್ ಸಿನಿಮಾಗಳೇ ಸಜೀವ ಸಾಕ್ಷಿ.
ಇಂದಿನ ತಲೆಮಾರಿನ ನಟಿಯರು ‘ಇಂಟಿಮೇಟ್ ಸೀನ್’ ಅಂತೆಲ್ಲಾ ಬೋಲ್ಡ್ ಕಂಟೆಂಟ್ ಹೆಸರಿನಲ್ಲಿ ಬೌಂಡರಿ ದಾಟುತ್ತಿದ್ರೆ, ಸಾಯಿ ಪಲ್ಲವಿ ಮಾತ್ರ ನನಗೆ ನಟನೆಗಾಗಿ ಆಫರ್ ಕೊಡಿ, ಅಂತರಂಗದ ದೃಶ್ಯಗಳಿಗಾದ್ರೆ ಬೇರೆಯವರನ್ನ ಹುಡುಕಿಕೊಳ್ಳಿ ಅಂತ ಮುಖದ ಮೇಲೆಯೇ ಡೈರೆಕ್ಟರ್ಸ್‌ಗೆ ಸವಾಲ್ ಹಾಕಿದ್ದಾರೆ. ಈ ಬೋಲ್ಡ್ ಆಟಿಟ್ಯೂಡ್ ಮತ್ತು ತನ್ನ ಮೌಲ್ಯಗಳಿಗೆ ಕೊಡುವ ಬೆಲೆಯೇ ಇವರನ್ನು ಬರೀ ನಟಿಯನ್ನಾಗಿ ಮಾಡದೆ, ಪ್ರತಿಯೊಬ್ಬರ ಮನೆಯ ಮಗಳಂತೆ ಕೊಂಡಾಡುವಂತೆ ಮಾಡಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





