ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್.
ಈ ವಾರ ರಿಲೀಸ್ ಆಗಿರೋ ಸಿನಿಮಾಗಳಲ್ಲಿ ಲವ್ OTP ಕೂಡ ಒಂದು. ಅಕಿರ ಅನೀಶ್ ಒಂದೂವರೆ ದಶಕದ ಕನಸು ಕೊನೆಗೂ ನನಸಾಗಿದೆ. ಕನ್ನಡದ ಜೊತೆಗೆ ಪಕ್ಕದ ಟಾಲಿವುಡ್‌ಗೂ ಎಂಟ್ರಿ ಕೊಟ್ಟಿರೋ ಅನೀಶ್, ಯೂತ್‌ಫುಲ್ ಸಬ್ಜೆಕ್ಟ್‌ನಿಂದ ಸಕ್ಸಸ್ ಸಿಹಿ ಕಂಡಿದ್ದಾರೆ. ಹಾಗಾದ್ರೆ ಹೇಗಿದೆ ಲವ್ ಓಟಿಪಿ..? ಕಥೆ ಏನು..? ಟೀಂ ಏನು ಹೇಳುತ್ತೆ, ಪ್ರೇಕ್ಷಕರು ಕೊಟ್ಟ ಮಾರ್ಕ್ಸ್ ಎಷ್ಟು ಅಂತೀರಾ..? ಈ ಸ್ಟೋರಿ ನೋಡಿ.
ಲವ್ ಓಟಿಪಿ.. ಕನ್ನಡದ ಜೊತೆ ತೆಲುಗಿನಲ್ಲಿ ಕೂಡ ಈ ವಾರ ರಿಲೀಸ್ ಆಗಿರೋ ದ್ವಿಭಾಷಾ ಸಿನಿಮಾ. ಈ ಹಿಂದೆ ರಾಮಾರ್ಜುನ ಸಿನಿಮಾ ನಿರ್ದೇಶಿಸಿ, ನಟಿಸಿದ್ದ ಅಕಿರ ಅನೀಶ್, ಒನ್ಸ್ ಅಗೈನ್ ಈ ಲವ್ ಓಟಿಪಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ ಜೊತೆಗೆ ಲೀಡ್ನಲ್ಲಿ ನಟಿಸಿದ್ದಾರೆ ಕೂಡ. ಚಿತ್ರದಲ್ಲಿ ಸ್ವರೂಪಿಣಿ ಹಾಗೂ ಜಾಹ್ನವಿಕಾ ಅನ್ನೋ ಇಬ್ಬರು ನಾಯಕಿಯರಿದ್ದು, ಚೇತನ್ ಗಂಧರ್ವ ಕೂಡ ವಿಶೇಷ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಅಲ್ಲದೆ, ಜೂನಿಯರ್ ಎನ್ಟಿಆರ್ ಆಪ್ತಮಿತ್ರ ರಾಜೀವ್ ಕನಕಾಲ, ತುಳಸಿ ಅವರು ಈ ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.
ಲವ್ OTP ಗೆ ಚಿತ್ರರಸಿಕರು ಕೊಟ್ರಾ ಗೆಲುವಿನ OTP..?
ಕನ್ನಡದ ಜೊತೆ ಆಂಧ್ರದಲ್ಲೂ ಲವ್ OTPಗೆ ಬಹುಪರಾಕ್
ನನಸಾಯ್ತು ಅಪ್ಪು ನೆಚ್ಚಿನ ಅನೀಶ್ ಕಂಡ ದಶಕದ ಆ ಕನಸು
ಯೆಸ್.. ರಿಲೀಸ್‌ಗೂ ಮೊದಲೇ ಹೈದ್ರಾಬಾದ್ ಹಾಗೂ ಬೆಂಗಳೂರಿನಲ್ಲಿ ಸ್ಪೆಷಲ್ ಆಗಿ ಪ್ರೀಮಿಯರ್ ಕಂಡ ಲವ್ ಓಟಿಪಿ ಚಿತ್ರಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ. ಅಪ್ಪು ನೆಚ್ಚಿನ ಅಕಿರ ಅನೀಶ್ ಕಳೆದ ಒಂದೂವರೆ ದಶಕದಿಂದ ಒಂದೊಳ್ಳೆ ಸಕ್ಸಸ್ಗಾಗಿ ಎದುರು ನೋಡ್ತಿದ್ರು. ಆ ಬಹುನಿರೀಕ್ಷಿತ ಸಕ್ಸಸ್, ಈ ಲವ್ ಓಟಿಪಿಯಿಂದ ಸಿಕ್ಕಿದೆ. ಅದಕ್ಕೆ ಕಾರಣ ಚಿತ್ರದ ಕಥೆ, ಪಾತ್ರಗಳು, ಮೇಕಿಂಗ್, ಹಿನ್ನೆಲೆ ಧ್ವನಿ. ಅದ್ರಲ್ಲೂ ಜನ್ ಝೀ ಜನರೇಷನ್‌ಗೆ ಸಂಬಂಧಿಸಿದ ಯೂತ್ಫುಲ್ ಕಥೆ ನೋಡುಗರಿಗೆ ಬೇಗ ಕನೆಕ್ಟ್ ಆಗ್ತಿದೆ.
ಇನ್ನು ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಗ್ರಾಂಡ್ ಓಪನಿಂಗ್ ಪಡೆದ ಲವ್ OTP ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಡೊಳ್ಳು ಕುಣಿತಕ್ಕೆ ನಟಿ ಸ್ವರೂಪಿಣಿ ನೃತ್ಯ ಮಾಡಿ ಸಿನಿಮಾವನ್ನ ಸಂಭ್ರಮಿಸಿದ್ದಾರೆ. ನಟ ನಿರ್ದೇಶಕ ಅನೀಶ್ ಹಾಗು ಚಿತ್ರತಂಡ ತ್ರಿವೇಣಿ ಚಿತ್ರಮಂದಿರಕ್ಕೆ ಆಗಮಿಸಿ ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಿಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಯೂತ್ ಸಬ್ಜೆಕ್ಟ್.. ಪೇರೆಂಟ್ಸ್ ಕೂಡ ಮಸ್ಟ್ ನೋಡ್ಲೇಬೇಕು
ಅನೀಶ್ ಲವ್ OTP ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಫಿದಾ
ಹದಿ ಹರೆಯದ ಮನಸುಗಳ ಪ್ರೀತಿ, ಸ್ನೇಹ, ಮನದ ಭಾವನೆಗಳ ಏರಿಳಿತಗಳು. ಅದಕ್ಕೆ ಜನರೇಷನ್ ಗ್ಯಾಪ್ ಇರೋ ಪೋಷಕರ ವರ್ತನೆಗಳು. ಲವ್, ಆ್ಯಕ್ಷನ್, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್, ಎಮೋಷನ್ಸ್, ತಂದೆ-ಮಗನ ಬಾಂಡಿಂಗ್. ತಂದೆ-ಮಗಳ ಬಾಂಧವ್ಯ ಹೀಗೆ ಸಾಕಷ್ಟು ವಿಷಯಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿದೆ. ನಮ್ಮಗಳ ಕಣ್ಮುಂದೆಯೇ ನಡೀತಿರೋ ವಿಷಯಗಳು ಅನಿಸುತ್ತೆ ಆದ್ರೆ ಅದನ್ನ ಪ್ರಸ್ತುತ ಪಡಿಸಿರೋ ವಿಧಾನ ಮಾತ್ರ ಅದ್ಭುತ. ಅನೀಶ್ ಈ ಬಾರಿ ಈ ವಿಚಾರದಲ್ಲಿ ಸೆಂಚುರಿ ಬಾರಿಸಿದ್ದಾರೆ.
ಅನೀಶ್‌ಗಾಗಿ ಅವ್ರ ಬಹುಕಾಲದ ಗೆಳೆಯ ವಿಜಯ್ ರೆಡ್ಡಿ ಈ ಸಿನಿಮಾಗೆ ಬಂಡವಾಳ ಹಾಕಿ, ಸಿನಿಮಾನ ಬಹಳ ರಿಚ್ ಆಗಿ ಕಟ್ಟಿಕೊಟ್ಟಿದ್ದಾರೆ. ಅಂದಹಾಗೆ ರಾಕಿಂಗ್ ಸ್ಟಾರ್ ಯಶ್ ಅಂದು ಹೇಳಿದ್ದ ಆ ಡೈಲಾಗ್ ಅನೀಶ್ ಮೇಲೂ ದೊಡ್ಡ ಮಟ್ಟದ ಪ್ರಭಾವ ಬೀರಿದೆ. ಅಣ್ತಮ್ಮಾ.. ಇಲ್ಲಿ ಯಾರು ಯಾರನ್ನೂ ಹೀರೋ ಮಾಡಲ್ಲ. ನಮಗೆ ನಾವೇ ಹೀರೋ ಆಗ್ಬೇಕು ಅಂದಿದ್ರು. ಅದೀಗ ಅನೀಶ್‌ಗೆ ಮನದಟ್ಟಾಗಿ ತಮಗೆ ತಾವೇ ಫ್ರೇಮ್ ಇಟ್ಕೊಂಡು ಸಕ್ಸಸ್ ಆಗಿದ್ದಾರೆ. ಮಕ್ಕಳಿಂದ ಮುದುಕರವರೆಗೆ ಇಡೀ ಕುಟುಂಬ ಕೂತು ನೋಡುವಂತಹ ಫ್ಯಾಮಿಲಿ ಕಮ್ ಯೂತ್ ಎಂಟರ್ಟೈನರ್ ನೀಡಿದ್ದಾರೆ.





