ಅಬ್ಸೆಷನ್.. ಅಬ್ಸೆಷನ್.. ಅಬ್ಸೆಷನ್.. ಸದ್ಯ ವರ್ಲ್ಡ್ ಸಿನಿದುನಿಯಾದಲ್ಲಿ ಕೇಳಿಬರ್ತಿರೋ ಒಂದೇ ಒಂದು ಹೆಸರು ಈ ಅಬ್ಸೆಷನ್. ಕೇವಲ ಆರೇಳು ಕೋಟಿಯಲ್ಲಿ ತಯಾರಾದ ಈ ಸಣ್ಣ ಬಜೆಟ್ ಮೂವಿ, 2 ಸಾವಿರ ಕೋಟಿ ಗಳಿಕೆಯಿಂದ ಎಲ್ಲರ ಹುಬ್ಬೇರಿಸಿದೆ. ಇಷ್ಟಕ್ಕೂ ಅಂಥದ್ದೇನಿದೆ ಈ ಚಿತ್ರದಲ್ಲಿ..? ಡೈರೆಕ್ಟರ್ ಯಾರು..? Gen Zಗೆ ಕನೆಕ್ಟ್ ಆಗ್ತಿರೋದ್ಯಾಕೆ ಅನ್ನೋದ್ರ ಕಂಪ್ಲೀಟ್ ಕಹಾನಿ ನಿಮಗಾಗಿ ಕಾಯ್ತಿದೆ. ಈ ಧಮಾಕೇದಾರ್ ಸ್ಟೋರಿ ನೋಡಿ.
- 7 ಕೋಟಿ ಚಿತ್ರ 2000 ಕೋಟಿ ಗಳಿಕೆ.. ‘ಅಬ್ಸೆಷನ್’ ಟ್ರೆಂಡಿಂಗ್
- ವರ್ಲ್ಡ್ ಬಾಕ್ಸ್ ಆಫೀಸ್‌ನ ಸುನಾಮಿ, ಸುಂಟರಗಾಳಿ ಅಬ್ಸೆಷನ್
- 26 ವರ್ಷದ ಯೂಟ್ಯೂಬರ್ ನಿರ್ದೇಶನದ ಯೂತ್ ವೆಂಚರ್
- ಸೈಕಲಾಜಿಕಲ್ ಹಾರರ್ ಚಿತ್ರಕ್ಕೆ ವಿಶ್ವ ಸಿನಿದುನಿಯಾನೇ ಥಂಡಾ
ಅಬ್ಸೆಷನ್.. ಮೇ 15ರಂದು ತೆರೆಕಂಡ ಹಾಲಿವುಡ್ ಸಿನಿಮಾ. ಇದು ಅಮೆರಿಕಾದ ಸೂಪರ್‌ನ್ಯಾಚುರಲ್ ಸೈಕಲಾಜಿಕಲ್ ಹಾರರ್ ಜಾನರ್ ಸಿನಿಮಾ. ಅಬ್ಸೆಷನ್ ತೆರೆಕಂಡ ಒಂದು ತಿಂಗಳಿಗೂ ಮೊದಲೇ ಬರೋಬ್ಬರಿ 2 ಸಾವಿರ ಕೋಟಿಗೂ ಅಧಿಕ ಮೊತ್ತದ ಹಣವನ್ನ ಬಾಕ್ಸ್ ಆಫೀಸ್ ಮೂಲಕ ಗಳಿಸಿದೆ ಅಂದ್ರೆ ನೀವು ನಂಬಲೇಬೇಕು. ಯೆಸ್.. ಸದ್ಯ ವಿಶ್ವ ಸಿನಿದುನಿಯಾದಲ್ಲಿ ಅಬ್ಸೆಷನ್ ಚಿತ್ರ ಟಾಕ್ ಆಫ್ ದಿ ಟೌನ್ ಆಗಿದೆ. ಬಾಕ್ಸ್ ಆಫೀಸ್‌ನ ಸುನಾಮಿ, ಸುಂಟರಗಾಳಿಯಾಗಿ ಎಲ್ಲರ ಹುಬ್ಬೇರಿಸಿದೆ.
ಅಂದಹಾಗೆ ಅಬ್ಸೆಷನ್ ಚಿತ್ರಕ್ಕೆ ವರ್ಲ್ಡ್‌ನ ಗ್ರೇಟೆಸ್ಟ್ ನಿರ್ದೇಶಕರ ಸಾಲಿನಲ್ಲಿರೋ ಡೈರೆಕ್ಟರ್ ಏನೂ ಆ್ಯಕ್ಷನ್ ಕಟ್ ಹೇಳಿಲ್ಲ. ಅಥವಾ ನೂರಾರು ಕೋಟಿ ರೂಪಾಯಿ ಬಂಡವಾಳ ಹಾಕಿ ಈ ಸಿನಿಮಾನ ತಯಾರಿಸಿಲ್ಲ. ಇದರ ಬಜೆಟ್ ಕೇಳಿದ್ರೆ ನೀವು ಶಾಕ್ ಆಗ್ತೀರಾ.. ಹೌದು.. ಕೇವಲ ಆರೇಳು ಕೋಟಿ ರೂಪಾಯಿಯಲ್ಲಿ ಈ ಅಬ್ಸೆಷಬ್ ಚಿತ್ರ ನಿರ್ಮಾಣವಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದೆ ಅನ್ನೋದು ಅಚ್ಚರಿ.
ಈ ಸಿನಿಮಾದ ಮತ್ತೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ, ಇದನ್ನ ಕೇವಲ 26 ವರ್ಷದ ಒಬ್ಬ ಯೂಟ್ಯೂಬರ್ ಬರೆದು, ನಿರ್ದೇಶಿಸಿ, ತಾನೇ ಎಡಿಟ್ ಕೂಡ ಮಾಡಿದ್ದಾರೆ. ಯೆಸ್.. ಕರ್ರಿ ಬಾರ್ಕರ್ ಅನ್ನೋ ಯಂಗ್‌ಸ್ಟರ್ ಈ ಅಬ್ಸೆಷನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಆತನ ಆಲೋಚನಾ ಲಹರಿ, ಫಿಲ್ಮ್ ಮೇಕಿಂಗ್ ಪರಿಗೆ ಇಡೀ ವರ್ಲ್ಡ್ ದಿನಿದುನಿಯಾ ಥಂಡಾ ಹೊಡೆಯುತ್ತಿದೆ. ಅಂದಹಾಗೆ ಕರ್ರಿ ಬಾರ್ಕರ್ ಟಾರ್ಗೆಟ್ ಆಡಿಯೆನ್ಸ್ Gen Z ಯೂತ್. ಹಾಗಾಗಿಯೇ ಅದು ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗೋಕೆ ಕಾರಣವಾಗಿದೆ.
ಮ್ಯೂಸಿಕ್ ಸ್ಟೋರ್‌ನಲ್ಲಿ ಕೆಲಸ ಮಾಡೋ ಯುವಕ-ಯುವತಿಯರ ನಡುವೆ ಶುರುವಾಗೋ ರೊಮ್ಯಾಂಟಿಕ್ ಫೀಲಿಂಗ್ಸ್, ಹದಿಹರೆಯದ ಮನಸ್ಸುಗಳ ಭಾವನಾತ್ಮಕ ಏರಿಳಿತಗಳ ಮೇಲೆ ಚಿತ್ರ ಕೇಂದ್ರೀಕೃತವಾಗಿದೆ. ಬೇರ್ ಹಾಗೂ ನಿಕ್ಕಿ ನಡುವಿನ ಸೈಕಲಾಜಿಕಲ್ ಹಾರರ್ ಜರ್ನಿಯೇ ಈ ಅಬ್ಸೆಷನ್ ಸಿನಿಮಾ. ಯೂತ್‌ಗೆ ಕನೆಕ್ಟ್ ಆಗುವ ಅಂಶಗಳು ಇರೋದ್ರಿಂದ ಯೂತ್‌ಫುಲ್ ಎಂಟರ್‌ಟೈನರ್ ಆಗಿ ವಿಶ್ವದ ಮೂಲೆ ಮೂಲೆಯಲ್ಲಿ ಈ ಚಿತ್ರ ಸದ್ದು ಮಾಡುವಂತಾಗಿದೆ.
ಡೌಂಟನ್ ಅಬ್ಬೆ, ನೊಸ್ಪೆರಾಟು, ಬರ್ನ್, ಆಫ್ಟರ್ ರೀಡಿಂಗ್ ಅಂತಹ ಹಾಲಿವುಡ್‌ನ ಘಟಾನುಘಟಿ ಸಿನಿಮಾಗಳು ಈ ಅಬ್ಸೆಷನ್ ಮುಂದೆ ಡಲ್ ಹೊಡೆದಿವೆ. ಟೊರೆಂಟೋ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆರೇಳು ಕೋಟಿಯಲ್ಲಿ ತಯಾರಾದ ಈ ಅಬ್ಸೆಷನ್ ಚಿತ್ರವನ್ನ ಫೋಕಸ್ ಫೀಚರ್ಸ್ ಸಂಸ್ಥೆ ಸುಮಾರು 15 ದಶಲಕ್ಷ ಡಾಲರ್ ಹಣ ನೀಡಿ ಖರೀದಿಸಿತ್ತು. ಆದ್ರೆ ಈ ಸಿನಿಮಾಗೆ ಜಾಗತಿಕ ಮಟ್ಟದಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರಶಂಸೆ, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ ಅನ್ನೋದನ್ನ ಯಾರೂ ನಿರೀಕ್ಷಿಸಿರಲಿಲ್ಲ.
ಹಾಸ್ಯ ನಟ, ಬರಹಗಾರ ಕೂಡ ಆಗಿರೀ ಡೈರೆಕ್ಟರ್ ಕರ್ರಿ ಬಾರ್ಕರ್, ಶಾರ್ಟ್ ಫಿಲ್ಮ್ ಮೇಕರ್ ಆಗಿ ಗುರ್ತಿಸಿಕೊಂಡಿದ್ರು. ದಟ್ಸ್ ಎ ಬ್ಯಾಡ್ ಐಡಿಯಾ ಅನ್ನೋ ಕಾಮಿಡಿ ಚಾನೆಲ್‌ನಿಂದ ಫೇಮಸ್ ಆಗಿದ್ದ ಬಾರ್ಕರ್, ಇಂಥದ್ದೊಂದು ಕಥೆ ಕಟ್ಟಿ, ಅದಕ್ಕೆ ದೃಶ್ಯರೂಪ ನೀಡಿರೋದು ಗ್ರೇಟ್. ಅಂದಹಾಗೆ ನಾಯಕನಟಿ ನಿಕ್ಕಿಗಾಗಿ ಹೀರೋ ಬ್ಯಾರನ್ ಬೇರ್ ಬೈಲಿ, ಆಕೆ ತನ್ನನ್ನ ಪ್ರೀತಿಸುವಂತೆ ಇನ್ ವಿಶ್ ವಿಲ್ಲೋ ಅನ್ನೋ ನಿಗೂಢ ಗೊಂಬೆ ಬಳಿ ಬೇಡಿಕೊಂಡು, ಅದನ್ನ ಮುರಿಯುತ್ತಾನೆ. ನಂತ್ರ ಏನೆಲ್ಲಾ ಆಗುತ್ತೆ ಅನ್ನೋದೇ ಸಿನಿಮಾ. 1 ಗಂಟೆ 9 ನಿಮಿಷಗಳ ಟೈಮ್ ಲೆಂಥ್ ಇರೋ ಅಬ್ಸೆಷನ್ ಚಿತ್ರ ಸದ್ಯ ಈ ವರ್ಷದ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ಇನ್ನೂ ಎಷ್ಟೆಲ್ಲಾ ಕೋಟಿ ಲೂಟಿ ಮಾಡುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





