ನಾನಿ ಏನೇ ಮಾಡಿದ್ರೂ ಟ್ರೆಂಡ್. ಯಾಕಂದ್ರೆ ವೆರೈಟಿ ಜಾನರ್ ಸಿನಿಮಾಗಳಿಂದಾಗಿ ಆತ ಚಿತ್ರಪ್ರೇಮಿಗಳ ಹೃದಯದ ಪರ್ಮನೆಂಟ್ ಬ್ರ್ಯಾಂಡ್. ಸದ್ಯ ದಿ ಪ್ಯಾರಡೈಸ್ ಸಿನಿಮಾ ಬರ್ತಿದ್ದು, ಟೀಸರ್ ಹಾಗೂ ಸಾಂಗ್ಸ್ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದಾರೆ. ಈ ಚಿತ್ರದ ಟ್ರೈಲರ್ಗಾಗಿ ಕಾಯ್ತಿದ್ದ ಫ್ಯಾನ್ಸ್ ಹಾಗೂ ಜನಕ್ಕೆ ಶಾಕಿಂಗ್ ಅನೌನ್ಸ್ಮೆಂಟ್ ನೀಡಿದ್ದಾರೆ ನಾನಿ. ನೋ ಟ್ರೈಲರ್.. ಡೈರೆಕ್ಟ್ ಮೂವಿ ಎಂದಿದ್ದಾರೆ.
- ಶಾಕ್ ಕೊಟ್ಟ ನಾನಿ.. ಡೈರೆಕ್ಟ್ ಮೂವಿ ನೋ ಪ್ಯಾರಡೈಸ್ ಟ್ರೈಲರ್
- ಸಿಕ್ಕಾಪಟ್ಟೆ ಹೈಪ್.. ಚಿತ್ರಪ್ರೇಮಿಗಳಲ್ಲಿ ಕ್ರೇಜ್ ಹೆಚ್ಚಿಸಿದ ಪ್ಯಾರಡೈಸ್
- 24/7 ವರ್ಕ್.. ಟ್ರೈಲರ್ ಕಟ್ಗಿಲ್ಲ ಟೈಮ್.. ಸೆ-24ಕ್ಕೆ ರಿಲೀಸ್..!
- ನ್ಯಾಚುರಲ್ ಸ್ಟಾರ್ ಕರಿಯರ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಪ್ರಾಜೆಕ್ಟ್
ಪ್ಯಾರಡೈಸ್.. ನಾನಿ ನಟನೆಯ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಸಖತ್ ರಾ & ರಗಡ್ ಆಗಿರೋ ಈ ಸಿನಿಮಾದ ಕಥೆ ಕಲ್ಟ್ ಮೂವಿ ಫೀಲ್ ನೀಡ್ತಿದೆ. ನಾನಿ ಲುಕ್ಸ್ ಮಾತ್ರ ಸಿಕ್ಕಾಪಟ್ಟೆ ಕಿಕ್ ಕೊಡ್ತಿದ್ದು, ಎರಡು ಜಡೆಗಳ ಮೂಲಕ ಮತ್ತಷ್ಟು ಕ್ರೇಜ್ ಹೆಚ್ಚಿಸಿದೆ. ಶ್ರೀಕಾಂತ್ ಒಡೆಲಾ ಆ್ಯಕ್ಷನ್ ಕಟ್ ಹೇಳಿರೋ ಪ್ಯಾರಡೈಸ್ ನಿಮ್ಮನ್ನ ಹೊಚ್ಚ ಹೊಸ ಪ್ರಪಂಚಕ್ಕೆ ಕೊಂಡೊಯ್ಯುವುದು ಪಕ್ಕಾ.
ಈಗಾಗ್ಲೇ ಟೀಸರ್ ಹಾಗೂ ಎರಡು ಸಾಂಗ್ಸ್ನಿಂದ ಸಿನಿಮಾದ ಗತ್ತು, ಗಮ್ಮತ್ತು ಎಂಥದ್ದು ಅನ್ನೋದು ಇಡೀ ಸಿನಿದುನಿಯಾಗೆ ಗೊತ್ತು ಮಾಡಿದೆ ಚಿತ್ರತಂಡ. ನಾನಿ ನೆಕ್ಸ್ಟ್ ಲೆವೆಲ್ ಡ್ಯಾನ್ಸ್, ಕೀರ್ತಿ ಸುರೇಶ್ ಮೈ ಚಳಿ ಬಿಟ್ಟು ಕುಣಿದಿರೋ ಪರಿಗೆ ಎಲ್ರೂ ಫಿದಾ ಆಗಿದ್ದಾರೆ. ಸಿನಿಮಾ ಕೂಡ ಇದೇ ಸೆಪ್ಟೆಂಬರ್ 24ಕ್ಕೆ ವರ್ಲ್ಡ್ವೈಡ್ ತೆರೆಗೆ ಬರ್ತಿದ್ದು, ಚಿತ್ರತಂಡ ಅದನ್ನ ಚಿತ್ರಪ್ರೇಮಿಗಳಿಗೆ ಉಣಬಡಿಸೋಕೆ ತುದಿಗಾಲಲ್ಲಿ ನಿಂತಿದೆ.
ಇತ್ತೀಚೆಗೆ ನಟ ನಾನಿ ಸೇರಿದಂತೆ ಇಡೀ ಚಿತ್ರತಂಡ ಮೊದಲ ಬಾರಿಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಸಿದೆ. ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸೋ ಮೂಲಕ ಸಾಕಷ್ಟು ವಿಷಯಗಳನ್ನ ಮುಕ್ತವಾಗಿ ಹಂಚಿಕೊಂಡಿದೆ. ಅಲ್ಲಿ ನಾಣಿ ಮಾತಾಡ್ತಾ.. ಪ್ಯಾರಡೈಸ್ ಟ್ರೈಲರ್ ರಿಲೀಸ್ ಮಾಡ್ತಿಲ್ಲ. ಡೈರೆಕ್ಟ್ ಸಿನಿಮಾನೇ ತೋರಿಸ್ತೀವಿ ಅನ್ನೋ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದು ನಾನಿ ಫ್ಯಾನ್ಸ್ ಜೊತೆ ಚಿತ್ರರಸಿಕರು ಕೂಡ ಬೇಸರ ಮಾಡಿಕೊಂಡಿದ್ದು, ಅದಕ್ಕೆ ಅಸಲಿ ಕಾರಣ ಏನು ಅನ್ನೋದನ್ನ ನಾನಿ ಅದೇ ವೇದಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.
ಹೌದು.. ಇದು ಉದ್ದೇಶಪೂರ್ವಕವಾಗಿ ಮಾಡ್ತಿರೋದಲ್ಲ. ನಿಮ್ಮನ್ನ ನಾವು ಹಗುರವಾಗಿಯೂ ಪರಿಗಣಿಸಿಲ್ಲ ಎಂದ ನಾನಿ. ಈ ಸಿನಿಮಾದ ಔಟ್ಪುಟ್ಗಾಗಿ ಹಗಲಿರುಳು ಚಿತ್ರತಂಡ ಕೆಲಸ ಮಾಡ್ತಿದೆ. ಈಗಾಗ್ಲೇ ಎರಡು ಬಾರಿ ಅಂದುಕೊಂಡ ಡೇಟ್ಗೆ ಬರಲಾಗಿಲ್ಲ. ಹಾಗಾಗಿ ಈ ಸಲ ಸೆ-24ಕ್ಕೆ ಕನ್ಫರ್ಮ್ ಆಗಿ ಬರ್ತಿದ್ದೀವಿ. ನಿಮಗೆ ಓಪನಿಂಗ್ನಿಂದ ಎಂಡ್ ತನಕ ಮಸ್ತ್ ಮನರಂಜನೆ ಫಿಕ್ಸ್ ಅಂತಾರೆ ನಾನಿ. ಅಲ್ಲಿಗೆ ಟ್ರೈಲರ್ ಕಟ್ಗೆ ಇವರ ಬಳಿ ಸಮಯ ಇಲ್ಲ ಅನ್ನೋದು ಖಾತರಿ ಆಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





