• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, November 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ದಿ ವಿಲನ್’ ಬಳಿಕ ಮತ್ತೆ ಒಂದಾದ ಕಿಚ್ಚ ಸುದೀಪ್-ಪ್ರೇಮ್ ಕಾಂಬಿನೇಷನ್

ಪ್ರೇಮ್ ನಿರ್ದೇಶನ.. ಕಿಚ್ಚನ ಆರ್ಭಟ.. ಟೈಟಲ್‌ಗೆ ಕ್ಷಣಗಣನೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 22, 2026 - 3:17 pm
in ಸಿನಿಮಾ
0 0
0
Untitled Design (58)

ವಿಲನ್ ಬೆನ್ನಲ್ಲೇ ಈಗ ಮತ್ತೊಮ್ಮೆ ಕೈಜೋಡಿಸಿರೋ ಆ ಪವರ್‌ಫುಲ್ ಕಾಂಬಿನೇಷನ್ ಏನು ಹೇಳೋಕೆ ಬರ್ತಿದ್ದಾರೆ. ಪಾಸ್‌ಪೋರ್ಟ್ ಮತ್ತು ಕೆಂಪು ಹೃದಯದ ಸನ್‌ಗ್ಲಾಸ್ ಇಟ್ಕೊಂಡು ಕಿಚ್ಚ ಕೊಟ್ಟಿರೋ ಆ ಸಸ್ಪೆನ್ಸ್ ಪೋಸ್ಟರ್ ಈಗ ಫ್ಯಾನ್ಸ್ ತಲೆಯಲ್ಲಿ ಹುಳ ಬಿಟ್ಟಿದೆ ಅಷ್ಟಕ್ಕೂ ಆ ಪೋಸ್ಟರ್ ಹಿಂದಿರೋ ಸೀಕ್ರೆಟ್ ಏನು..? ಎಲ್ಲಿ, ಯಾವಾಗ ನಡೀತಿದೆ ಆ ಬಿಗ್ ಇವೆಂಟ್..? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…

  • ‘ದಿ ವಿಲನ್’ ಬಳಿಕ ಮತ್ತೆ ಒಂದಾದ ಕಿಚ್ಚ–ಪ್ರೇಮ್ ಕಾಂಬಿನೇಷನ್
  • ಪಾಸ್‌ಪೋರ್ಟ್..ಸನ್‌ಗ್ಲಾಸ್ ಪೋಸ್ಟರ್‌ನಲ್ಲಿದೆ ಟೈಟಲ್ ಸುಳಿವು
  • ಪ್ರೇಮ್ ನಿರ್ದೇಶನ.. ಕಿಚ್ಚನ ಆರ್ಭಟ.. ಟೈಟಲ್‌ಗೆ ಕ್ಷಣಗಣನೆ
  • ನವೆಂಬರ್ 27ಕ್ಕೆ ಟೈಟಲ್ ಟೀಸರ್ ಲೋಕ ಅನಾವರಣ

ಸ್ಯಾಂಡಲ್‌ವುಡ್‌ನ ಬಾದ್‌ಷಾ ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾದ ಬಿಗ್ ಅಪ್‌ಡೇಟ್ ಕೊಟ್ಟು ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದ್ದಾರೆ. ನಿರ್ದೇಶಕ ಪ್ರೇಮ್ ಜೊತೆಗಿನ ಹೊಸ ಸಿನಿಮಾದ ಟೈಟಲ್ ಟೀಸರ್ ಇದೇ ನವೆಂಬರ್ 27ರ ಶುಕ್ರವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಓರಿಯನ್ ಮಾಲ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಿಚ್ಚ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ, ಮರದ ಮೇಲೆ ಕಡು ಬಣ್ಣದ ಭಾರತೀಯ ಪಾಸ್‌ಪೋರ್ಟ್ ಹಾಗೂ ಅದರ ಮೇಲೆ ಕೆಂಪು ಹೃದಯದ ಆಕಾರದ ಸನ್‌ಗ್ಲಾಸ್ ಇಟ್ಟಿರುವ ದೃಶ್ಯ ಗಮನ ಸೆಳೆಯುತ್ತಿದ್ದು, ಟೈಟಲ್ ಏನಿರಬಹುದು ಎಂಬ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.

RelatedPosts

ಬಿಗ್‌ಬಾಸ್ ಜೋಡಿ ಈಗ ಹಸೆಮಣೆ ಏರಲು ರೆಡಿ: ನಿಶ್ಚಿತಾರ್ಥ ಮಾಡಿಕೊಂಡ ಶಿಶಿರ್–ಐಶ್ವರ್ಯ.!

ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂ. ಗೆದ್ದ ಯುವಕ

ಪಂಜ ವೈಷ್ಣವ್ ತೇಜ್ ನಾಯಕತ್ವದ ‘ಹನುಮಾನ್ 2-ದಿ ರೈಸ್ ಆಫ್ ವಾನರಾಸ್’ ಅಧಿಕೃತ ಘೋಷಣೆ

29 ದಿನ 22 ಕೋಟಿ ಮಿನಿಟ್ಸ್..ಅಯ್ಯನ ಮನೆ-2 ರೆಕಾರ್ಡ್

ADVERTISEMENT
ADVERTISEMENT

ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ನಡುವಿನ ಬಾಂಧವ್ಯ ಕೇವಲ ಸಿನಿಮಾಗೆ ಸೀಮಿತವಾದುದಲ್ಲ, ಇಬ್ಬರ ನಡುವೆ ಗಟ್ಟಿ ಸ್ನೇಹ ಮತ್ತು ಪರಸ್ಪರ ಗೌರವವಿದೆ. 2018ರಲ್ಲಿ ಶಿವರಾಜ್‌ಕುಮಾರ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ತಂದು ಪ್ರೇಮ್ ನಿರ್ದೇಶಿಸಿದ್ದ ‘ದಿ ವಿಲನ್’ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದಾದ ಬಳಿಕ 2026ರಲ್ಲಿ ಧ್ರುವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ‘ಕಾಳ ಭೈರವ’ ಎಂಬ ಪವರ್‌ಫುಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿಮಾ ತೂಕ ಹೆಚ್ಚಿಸಿದ್ದರು. ಅಷ್ಟೇ ಅಲ್ಲ, ‘ಕೆಡಿ’ ಹಾಡಿನ ವಿವಾದದ ಸಂದರ್ಭದಲ್ಲೂ ಪ್ರೇಮ್ ಪರವಾಗಿ ಕಿಚ್ಚ ದನಿ ಎತ್ತಿ ನಿಂತಿದ್ದ ಅವರ ಬಾಂಧವ್ಯ ಇಂಡಸ್ಟ್ರಿಯಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

‘ದಿ ವಿಲನ್’ ನಂತರ ಮತ್ತೊಮ್ಮೆ ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಫುಲ್ ಫ್ಲೆಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಈ ಪ್ರಾಜೆಕ್ಟ್, ಕಳೆದ ಸೆಪ್ಟೆಂಬರ್‌ನಲ್ಲಿ ಕಿಚ್ಚನ ಹುಟ್ಟುಹಬ್ಬದ ವೇಳೆ ಘೋಷಣೆಯಾದಾಗಿನಿಂದಲೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಹೊಸ ಪ್ರಪಂಚ, ಹೊಸ ಅಧ್ಯಾಯ, ಹೊಸ ಆರಂಭ ಎಂಬ ಅಡಿಬರಹದೊಂದಿಗೆ ಸದ್ದು ಮಾಡಿದ್ದ ಈ ಸಿನಿಮಾದ ಕಥಾಹಂದರ, ಟೈಟಲ್ ಹಾಗೂ ತಾರಾಗಣದ ಗುಟ್ಟನ್ನು ತಂಡ ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಟ್ಟಿದೆ. ಆದರೆ ಪಾಸ್‌ಪೋರ್ಟ್ ಮತ್ತು ಸ್ಟೈಲಿಶ್ ಕೂಲಿಂಗ್ ಗ್ಲಾಸ್ ಇರುವ ಈ ಪೋಸ್ಟರ್ ನೋಡಿದ ಫ್ಯಾನ್ಸ್, ಇದೊಂದು ಸ್ಟೈಲಿಶ್ ಮತ್ತು ಟ್ವಿಸ್ಟ್‌ಗಳಿರುವ ಕಥೆಯಿರಬಹುದೆಂದು ಲೆಕ್ಕಾಚಾರ ಹಾಕುತ್ತಿದ್ದಾರೆ.

ಒಂದು ಕಡೆ ಬಿಗ್ ಬಾಸ್ ಕನ್ನಡ ಸೀಸನ್ 13 ನಿರೂಪಣೆಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಕಿಚ್ಚ ಸುದೀಪ್, ಸಿನಿಮಾ ರಂಗದಲ್ಲೂ ಬ್ಯುಸಿಯಾಗಿದ್ದಾರೆ. ಅನೂಪ್ ಭಂಡಾರಿ ಜೊತೆಗಿನ ಬಿಲ್ಲ ರಂಗ ಬಾಷಾ ಹಾಗೂ ಕಳೆದ ಸೆಪ್ಟೆಂಬರ್‌ನಲ್ಲಿ ಘೋಷಣೆಯಾದ ಐತಿಹಾಸಿಕ ಕಥಾಹಂದರದ ದೇವರಾಯ  ಸಿನಿಮಾಗಳ ನಡುವೆಯೇ ಪ್ರೇಮ್ ಜೊತೆಗಿನ ಹೊಸ ಚಿತ್ರದ ಟೈಟಲ್ ಟೀಸರ್ ಲಾಂಚ್ ಮಾಡುತ್ತಿರುವುದು ಸುದೀಪ್ ಫ್ಯಾನ್ಸ್‌ಗೆ ಹಬ್ಬದೂಟ ನೀಡಿದಂತಾಗಿದೆ.

ಸದ್ಯ ‘ಟೈಟಲ್ ಟೀಸರ್ ಅನೌನ್ಸ್‌ಮೆಂಟ್ ಡೇಟ್ ಸದ್ಯದಲ್ಲೇ’ ಎಂದು ತೇಲಿಸಿದ್ದ ಕಿಚ್ಚ ಈಗ ಅಧಿಕೃತ ದಿನಾಂಕ ಮತ್ತು ಸ್ಥಳವನ್ನು ಫಿಕ್ಸ್ ಮಾಡಿದ್ದಾರೆ. ನವೆಂಬರ್ 27ರ ಸಂಜೆ ಓರಿಯನ್ ಮಾಲ್‌ನಲ್ಲಿ ಕಿಚ್ಚ ಮತ್ತು ಪ್ರೇಮ್ ಜೋಡಿ ಯಾವ ಟೈಟಲ್ ಮೂಲಕ ಎಂಟ್ರಿ ಕೊಡುತ್ತಾರೆ..? ಟೀಸರ್‌ನಲ್ಲಿ ಏನೆಲ್ಲಾ ಸರ್‌ಪ್ರೈಸ್ ಇರಲಿದೆ ಎಂಬುದನ್ನು ತಿಳಿಯಲು ಸ್ಯಾಂಡಲ್‌ವುಡ್ ಮತ್ತು ಕಿಚ್ಚನ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (60)

ಪ್ರತಿಭಟನೆ ಕೈಬಿಡಿ, ಅಧಿವೇಶನದ ಬಳಿಕ ಸಿಹಿಸುದ್ದಿ ಕೊಡ್ತೀವಿ: ಆಶಾ ಕಾರ್ಯಕರ್ತೆಯರಿಗೆ ಯು.ಟಿ. ಖಾದರ್ ಮನವಿ

by ಶಾಲಿನಿ ಕೆ. ಡಿ
November 22, 2026 - 3:42 pm
0

Untitled Design (58)

‘ದಿ ವಿಲನ್’ ಬಳಿಕ ಮತ್ತೆ ಒಂದಾದ ಕಿಚ್ಚ ಸುದೀಪ್-ಪ್ರೇಮ್ ಕಾಂಬಿನೇಷನ್

by ಶಾಲಿನಿ ಕೆ. ಡಿ
November 22, 2026 - 3:17 pm
0

Untitled design (56)

ಬಿಗ್‌ಬಾಸ್ ಜೋಡಿ ಈಗ ಹಸೆಮಣೆ ಏರಲು ರೆಡಿ: ನಿಶ್ಚಿತಾರ್ಥ ಮಾಡಿಕೊಂಡ ಶಿಶಿರ್–ಐಶ್ವರ್ಯ.!

by ಶಾಲಿನಿ ಕೆ. ಡಿ
November 22, 2026 - 2:47 pm
0

Untitled Design (55)

ಆಹಾರದಲ್ಲಿ ಹುಳುಗಳು ಪತ್ತೆ ಕೇಸ್: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲ್, ವಾರ್ಡನ್ ಸಸ್ಪೆಂಡ್!

by ಶಾಲಿನಿ ಕೆ. ಡಿ
November 22, 2026 - 1:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (56)
    ಬಿಗ್‌ಬಾಸ್ ಜೋಡಿ ಈಗ ಹಸೆಮಣೆ ಏರಲು ರೆಡಿ: ನಿಶ್ಚಿತಾರ್ಥ ಮಾಡಿಕೊಂಡ ಶಿಶಿರ್–ಐಶ್ವರ್ಯ.!
    November 22, 2026 | 0
  • Untitled design (50)
    ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂ. ಗೆದ್ದ ಯುವಕ
    November 22, 2026 | 0
  • Your paragraph text (40)
    ಪಂಜ ವೈಷ್ಣವ್ ತೇಜ್ ನಾಯಕತ್ವದ ‘ಹನುಮಾನ್ 2-ದಿ ರೈಸ್ ಆಫ್ ವಾನರಾಸ್’ ಅಧಿಕೃತ ಘೋಷಣೆ
    November 21, 2026 | 0
  • Your paragraph text (39)
    29 ದಿನ 22 ಕೋಟಿ ಮಿನಿಟ್ಸ್..ಅಯ್ಯನ ಮನೆ-2 ರೆಕಾರ್ಡ್
    November 21, 2026 | 0
  • Your paragraph text (35)
    ಮಹಾನಟಿ ತೊಡೆ ಸವರಿದ ನಿರ್ಮಾಪಕ..ಸ್ಪಷ್ಟನೆ ಕೊಟ್ಟ ನಟಿ ಕೀರ್ತಿ ಸುರೇಶ್
    November 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version