• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

IND vs WI 2nd ODI: ಗಿಲ್-ರೋಹಿತ್ ಅಬ್ಬರಕ್ಕೆ ವಿಂಡೀಸ್ ಧೂಳೀಪಟ, ಭಾರತಕ್ಕೆ ಭರ್ಜರಿ ಜಯ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 30, 2026 - 10:34 pm
in ಕ್ರೀಡೆ
0 0
0
ಬೆಂಗಳೂರಲ್ಲಿ (10)

ಗುವಾಹಟಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಬರೋಬ್ಬರಿ 406 ರನ್‌ಗಳ ಕಠಿಣ ಗುರಿಯನ್ನು ಭಾರತ ಕೇವಲ 43.3 ಓವರ್‌ಗಳಲ್ಲಿ ಬೆನ್ನಟ್ಟಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಶುಭ್‌ಮನ್ ಗಿಲ್ ಅಜೇಯ ದ್ವಿಶತಕ ಸಿಡಿಸಿದರೆ, ರೋಹಿತ್ ಶರ್ಮಾ ಶತಕದೊಂದಿಗೆ ಅಬ್ಬರಿಸಿದರು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ.

ವಿಂಡೀಸ್‌ನಿಂದ 405 ರನ್‌ಗಳ ಬೃಹತ್ ಮೊತ್ತ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆರಂಭಿಕ ಬ್ಯಾಟರ್ ಜಾನ್ ಕ್ಯಾಂಪ್ಬೆಲ್ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಬಲವಾದ ಆರಂಭ ಒದಗಿಸಿದರು. ಕೇವಲ 65 ಎಸೆತಗಳಲ್ಲಿ ಶತಕ ಪೂರೈಸಿದ ಕ್ಯಾಂಪ್ಬೆಲ್, ಒಟ್ಟು 68 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿದರು.

RelatedPosts

ಸ್ವಾಮೀಜಿ ಭೇಟಿಗೆ ₹5 ಕೋಟಿ ಪಡೆದ್ರಾ ವಿರಾಟ್ ಕೊಹ್ಲಿ? ಆರೋಪಕ್ಕೆ ಕೊಹ್ಲಿ ತಂಡದಿಂದ ಸ್ಪಷ್ಟನೆ

21 ವರ್ಷಗಳ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಯಣ ಅಂತ್ಯ: ಮೆಸ್ಸಿ ಭಾವುಕ ವಿದಾಯ

ಭಾರತ ಮಹಿಳಾ ತಂಡಕ್ಕೆ ನೂತನ ನಾಯಕಿಯಾಗಿ ಸ್ಮೃತಿ ಮಂಧನಾ ನೇಮಕ

IPL 2027: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ

ADVERTISEMENT
ADVERTISEMENT

ಇದರ ಬೆನ್ನಲ್ಲೇ ನಾಯಕ ಶೈ ಹೋಪ್ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ ನೀಡಿದ ಜೀವದಾನದ ಲಾಭ ಪಡೆದ ಹೋಪ್, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿದರು. 94 ಎಸೆತಗಳನ್ನು ಎದುರಿಸಿದ ಅವರು 104 ರನ್ ಗಳಿಸಿ ಶತಕ ಪೂರ್ಣಗೊಳಿಸಿದರು.

ಜಂಗೂ ಸ್ಫೋಟಕ ಬ್ಯಾಟಿಂಗ್

ನಂತರ ಕ್ರೀಸ್‌ಗೆ ಬಂದ ಆಮಿರ್ ಜಂಗೂ ಕೂಡ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೇವಲ 69 ಎಸೆತಗಳಲ್ಲಿ 114 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ ಜಂಗೂ, ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈದರು.

ಕ್ಯಾಂಪ್ಬೆಲ್, ಹೋಪ್ ಮತ್ತು ಜಂಗೂ ಅವರ ಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಮೂವರು ಬ್ಯಾಟರ್‌ಗಳು ಶತಕ ದಾಖಲಿಸಿರುವುದು ಇದೇ ಮೊದಲ ಬಾರಿ ಎಂಬ ವಿಶೇಷ ದಾಖಲೆ ಕೂಡ ನಿರ್ಮಾಣವಾಯಿತು.

ಭಾರತದ ಪರ ಗುರ್ನೂರ್ ಬ್ರಾರ್, ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಆದರೆ ಬೃಹತ್ ಗುರಿಯನ್ನು ತಡೆಯಲು ಭಾರತೀಯ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.

ಗಿಲ್-ರೋಹಿತ್ ಅಬ್ಬರ

406 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ನಾಯಕ ಶುಭ್‌ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಜೊತೆಯಾಟ ನೀಡಿದರು. ವಿಂಡೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ರನ್‌ಗಳ ವೇಗವನ್ನು ನಿರಂತರವಾಗಿ ಹೆಚ್ಚಿಸಿತು.

ರೋಹಿತ್ ಶರ್ಮಾ ತಮ್ಮ ಅನುಭವಕ್ಕೆ ತಕ್ಕಂತೆ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಶತಕ ಪೂರೈಸಿದರು. ಅವರ ಇನ್ನಿಂಗ್ಸ್ ಭಾರತಕ್ಕೆ ಚೇಸ್‌ನಲ್ಲಿ ಅಗತ್ಯ ಆತ್ಮವಿಶ್ವಾಸ ನೀಡಿತು. ರೋಹಿತ್ ವಿಕೆಟ್‌ ಬಿದ್ದ ಬಳಿಕವೂ ಗಿಲ್ ತಮ್ಮ ಅಬ್ಬರವನ್ನು ಮುಂದುವರಿಸಿದರು.

ಗಿಲ್ ಐತಿಹಾಸಿಕ ದ್ವಿಶತಕ

ನಾಯಕ ಶುಭ್‌ಮನ್ ಗಿಲ್ ಆರಂಭದಿಂದ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಅಜೇಯ ದ್ವಿಶತಕ ದಾಖಲಿಸಿದರು. ಅವರ ಬ್ಯಾಟ್‌ನಿಂದ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಯೇ ಹರಿಯಿತು.

ಗಿಲ್ ಅವರ ಅಜೇಯ 223 ರನ್‌ಗಳ ಇನ್ನಿಂಗ್ಸ್‌ನ ನೆರವಿನಿಂದ ಭಾರತ ಗುರಿಯನ್ನು ಕೇವಲ 43.3 ಓವರ್‌ಗಳಲ್ಲಿ ತಲುಪಿತು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಭಾರತ 400ಕ್ಕೂ ಅಧಿಕ ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದ ಐತಿಹಾಸಿಕ ದಾಖಲೆ ನಿರ್ಮಿಸಿತು.

ಸರಣಿ ಭಾರತದ ವಶ

ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಒಟ್ಟು 800ಕ್ಕೂ ಅಧಿಕ ರನ್‌ಗಳು ದಾಖಲಾಗಿದ್ದು, ಒಂದು ದ್ವಿಶತಕ ಮತ್ತು ಮೂರು ಶತಕಗಳು ಮೂಡಿಬಂದವು. ಹೀಗಾಗಿ ಗುವಾಹಟಿ ಪಂದ್ಯ ಏಕದಿನ ಕ್ರಿಕೆಟ್‌ನ ಅತ್ಯಂತ ರೋಚಕ ಹೈ-ಸ್ಕೋರಿಂಗ್ ಪಂದ್ಯಗಳ ಸಾಲಿಗೆ ಸೇರಿದೆ.

ವೆಸ್ಟ್ ಇಂಡೀಸ್ ನೀಡಿದ 405 ರನ್‌ಗಳ ಬೃಹತ್ ಸವಾಲಿಗೆ ಯಾವುದೇ ಹಂತದಲ್ಲೂ ಹೆದರದ ಭಾರತ, ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿ 8 ವಿಕೆಟ್‌ಗಳ ಜಯ ದಾಖಲಿಸಿತು. ಮೊದಲ ಪಂದ್ಯದಲ್ಲೂ ಗೆದ್ದಿದ್ದ ಭಾರತ ಇದೀಗ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಕೊನೆಯ ಪಂದ್ಯಕ್ಕೂ ಮುನ್ನವೇ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

11 (11)

ದೀಪಾವಳಿಗೆ ರೈತರಿಗೆ ₹2,000 ಗಿಫ್ಟ್‌? ಪಿಎಂ ಕಿಸಾನ್ 24ನೇ ಕಂತಿನ ಹಣ ಯಾವಾಗ ಜಮೆ?

by ದಿಶಾ ಕೆ. ಎಸ್.
October 15, 2026 - 10:25 pm
0

11 (10)

ಮೈಸೂರಿನಲ್ಲಿ ಮಳೆ ಅವಾಂತರ: ಯುವ ದಸರಾ ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತ!

by ದಿಶಾ ಕೆ. ಎಸ್.
October 15, 2026 - 9:41 pm
0

11 (9)

ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಮೋದಿ ಸನ್ಮಾನ

by ದಿಶಾ ಕೆ. ಎಸ್.
October 15, 2026 - 8:05 pm
0

11 (8)

ಬೆಂಗಳೂರಿನಲ್ಲಿ ವರುಣನ ಆರ್ಭಟ; ಹಲವೆಡೆ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ!

by ದಿಶಾ ಕೆ. ಎಸ್.
October 15, 2026 - 7:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (62)
    ಸ್ವಾಮೀಜಿ ಭೇಟಿಗೆ ₹5 ಕೋಟಿ ಪಡೆದ್ರಾ ವಿರಾಟ್ ಕೊಹ್ಲಿ? ಆರೋಪಕ್ಕೆ ಕೊಹ್ಲಿ ತಂಡದಿಂದ ಸ್ಪಷ್ಟನೆ
    October 7, 2026 | 0
  • Your paragraph text (5)
    21 ವರ್ಷಗಳ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಯಣ ಅಂತ್ಯ: ಮೆಸ್ಸಿ ಭಾವುಕ ವಿದಾಯ
    October 7, 2026 | 0
  • ಭಾರತ ಮಹಿಳಾ ತಂಡಕ್ಕೆ ನೂತನ ನಾಯಕಿಯಾಗಿ ಸ್ಮೃತಿ ಮಂಧನಾ ನೇಮಕ (1)
    ಭಾರತ ಮಹಿಳಾ ತಂಡಕ್ಕೆ ನೂತನ ನಾಯಕಿಯಾಗಿ ಸ್ಮೃತಿ ಮಂಧನಾ ನೇಮಕ
    October 7, 2026 | 0
  • ಚಿನ್ನದ ಬೆಲೆ ಮತ್ತೆ ಇಳಿಕೆ (2)
    IPL 2027: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ
    October 6, 2026 | 0
  • Untitled design 2026 10 06T120043.932
    ಭಾರತೀಯ ಮಹಿಳಾ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್
    October 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version