ಲೇಖಕರು: ಪ್ರಶಾಂತ್, ಎಸ್. ಸ್ಪೆಷಲ್ ಡೆಸ್ಕ್
ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕೋಲಾಹಲ ಎಬ್ಬಿಸಿದೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಎಚ್ಚರಿಕೆ ನಂತರವೂ ಸಚಿವರು, ಶಾಸಕರು ಬಹಿರಂಗ ಹೇಳಿಕೆ ಗಳನ್ನ ನೀಡುತ್ತಿದ್ದಾರೆ. ಸದ್ದಿಲ್ಲದೇ ಚರ್ಚೆಗಳು, ಗೌಪ್ಯ ಮೀಟಿಂಗ್ಗಳು ನಡೆಯುತ್ತಿವೆ. ಇದರ ಮಧ್ಯೆ ಭೈರವಿ ಅಮ್ಮ ರಾಜ್ಯ ರಾಜಕಾರಣ ಕ್ಷಿಪ್ರಕ್ರಾಂತಿಯ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಅಘೋರಿ ಭೈರವಿ ಅಮ್ಮ ಮುಂದಿನ ಸಿಎಂ ಯಾರಾಗಲಿದ್ದಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಭೈರವಿ ಅಮ್ಮ ಹೇಳಿರುವ ಭವಿಷ್ಯದ ಪ್ರಕಾರ ಡಿಸಿಎಂ ಡಿಕೆ ಶಿವಕುಮಾರ್ ಕನಸು ನನಸಾಗಲಿದೆಯಂತೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಮುಖ್ಯಮಂತ್ರಿ ಆಗುವ ಆಸೆಯನ್ನ ವ್ಯಕ್ತಪಡಿಸುತ್ತಿರುವ ಡಿಸಿಎಂ ಡಿಕೆಶಿಗೆ ರಾಜ್ಯವನ್ನ ಆಳುವ ಯೋಗ ಬರಲಿದೆಯಂತೆ. ಇದೇ ಅವಧಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ. ಅದು ನಾಳೆಯೇ ಆಗಬಹುದು, ಅತಿ ಶೀಘ್ರದಲ್ಲೇ ಆಗಬಹುದು ಅಂತ ಭೈರವಿ ಅಮ್ಮ ಭವಿಷ್ಯ ಹೇಳಿದ್ದಾರೆ.
ಮೂರು ವರ್ಷದ ಹಿಂದೆಯೇ ನಾನು ಡಿಕೆ ಶಿವಕುಮಾರ್ ಅವರ ಮನೆಗೆ ಹೋಗಿದ್ದೆ. ನನಗೆ ಗಣಪನ ವಿಗ್ರಹ ಹಾಗೂ ಅವರ ಪತ್ನಿಯ ಸೀರೆ ನೀಡಿ ಹುಡಿ ತುಂಬಿಸಿದ್ದರು. ಮುಂದೇನಾಗುತ್ತೆ ಅಂತ ಡಿಕೆಶಿ ಕೇಳಿದಾಗ, ಯಾರದ್ದೋ ದುಡ್ಡು ಯಲ್ಲಾಮ್ಮನ ಜಾತ್ರೆ ಆಗುತ್ತೆ ಎಂದಿದ್ದೆ. ನೀವು ದುಡಿದ ದುಡ್ಡನ್ನು ಇನ್ನೊಬ್ಬರು ತಿಂದು ತೇಗುತ್ತಾರೆ ಎಂದು ಹೇಳಿದ್ದೆ ಅದರಂತೆ ಆಗಿದೆ.
ನಾನು ಇದುವರೆಗೆ ಸುಳ್ಳಾಗಿಲ್ಲ. ಸುಳ್ಳಾಗುವುದೂ ಇಲ್ಲ. ಮುಖ್ಯಮಂತ್ರಿ ಬದಲಾವಣೆಯಲ್ಲ. ಆ ಸೀಟಿನಲ್ಲಿ ಡಿಕೆ ಶಿವಕುಮಾ ಅವರೇ ಕೂತುಕೊಳ್ಳಬೇಕು. ನನಗೆ ಡಿಕೆ ಶಿವಕುಮಾರ್ ಮೇಲೆ ಆಗಲಿ, ಸಿದ್ದರಾಮಯ್ಯ ಅವರ ಮೇಲೆ ಆಗಲಿ, ಬಿಜೆಪಿ ಪಕ್ಷದ ಮೇಲೆ ಆಗಲಿ ಅಭಿಮಾನ ಇಲ್ಲ. ನಮಗೆ ಎಲ್ಲಾರೂ ಒಂದೇ. ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕಾಲ ನಾಳೆಯೇ ಬರಬಹುದು. ಇದೇ ಅವಧಿಯಲ್ಲಿ ಸಿಎಂ ಆಗುವುದು ಖಚಿತ ಎಂದು ಭವಿಷ್ಯ ಹೇಳಿದ್ದಾರೆ.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಕುರ್ಚಿ ಕದನ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಸಿದ್ದರಾಮಯ್ಯ ಕೂತಿದ್ದರೂ, ಡಿಸಿಎಂ ಡಿಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಆಗುವ ಆಸೆ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಮುಖ್ಯಮಂತ್ರಿ ಆಗುವ ಕನಸು, ನನಸು ಆಗುವುದಕ್ಕೆ ಹಾತೋರೆಯುತ್ತಿದ್ದಾರೆ. ಇದರ ನಡುವೆ ಅಘೋರಿ ಭೈರವಿ ಅಮ್ಮ, ಡಿಸಿಎಂ ಡಿಕೆಶಿ ಮುಖ್ಯಮಂತ್ರಿ ಆಗಲಿದ್ದಾರೆ ಅಂತ ಭವಿಷ್ಯ ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಕಾಯುತ್ತಿರುವ ಆ ಶುಭಘಳಿಗೆ, ಪಟ್ಟಾಭಿಷೇಕದ ಕನಸಿನ ದಿನ ಯಾವಾಗ ಬರಲಿದೆ..? ಭೈರವಿ ಅಮ್ಮನ ಈ ಭವಿಷ್ಯವೂ ಕೂಡ ನಿಜವಾಗುತ್ತಾ..? ಎಂದು ಕಾಯಬೇಕಿದೆ.
ಲೇಖಕರು: ಪ್ರಶಾಂತ್, ಎಸ್. ಸ್ಪೆಷಲ್ ಡೆಸ್ಕ್