• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಟ್ರಂಪ್‌‌ಗಿಂತಲೂ ಹೈ ಸ್ಯಾಲರಿ..ಇವರೇ ನೋಡಿ ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಪ್ರಧಾನಿ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 9, 2026 - 12:41 pm
in Flash News, ವಿದೇಶ
0 0
0
ವ್ಯರ್ಥವಾಗಬಹುದು, (12)

ಸಿಂಗಾಪುರ: ಜಾಗತಿಕ ಮಟ್ಟದಲ್ಲಿ ರಾಜಕಾರಣಿಗಳ ವೇತನ ವ್ಯವಸ್ಥೆ ಸದಾ ಚರ್ಚೆಯ ವಿಷಯವಾಗಿದೆ. ಆದರೆ, ಸಿಂಗಾಪುರ ತನ್ನ ನಾಯಕರಿಗೆ ನೀಡುವ ಸಂಬಳದ ಮೊತ್ತವು ಎಲ್ಲರ ಗಮನ ಸೆಳೆದಿದೆ. ಸಿಂಗಾಪುರ ಸರ್ಕಾರವು ತನ್ನ ರಾಜಕೀಯ ನಾಯಕರ ವೇತನ ವ್ಯವಸ್ಥೆಯನ್ನು ಪರಿಷ್ಕರಿಸಿದ್ದು, ಪ್ರಧಾನಮಂತ್ರಿ ಲಾರೆನ್ಸ್ ವೋಂಗ್ಅವರ ವಾರ್ಷಿಕ ಆಧಾರಿತ ವೇತನವು3.6 ಮಿಲಿಯನ್ ಸಿಂಗಾಪುರ ಡಾಲರ್ ಅಂದರೆ ಸುಮಾರು ₹26.9 ಕೋಟಿ ಮಟ್ಟಕ್ಕೆ ಏರಿಕೆಯಾಗಲಿದೆ. 

ಈ ವೇತನ ಜಾರಿಗೆ ಬಂದರೆ, ಸಿಂಗಾಪುರ ಪ್ರಧಾನಿ ವಿಶ್ವದ ಅತಿ ಹೆಚ್ಚು ವೇತನ ಪಡೆಯುವ ಸರ್ಕಾರದ ಮುಖ್ಯಸ್ಥರ ಪೈಕಿ ಅಗ್ರಸ್ಥಾನದಲ್ಲಿರಲಿದ್ದಾರೆ. ಅಮೆರಿಕ ಅಧ್ಯಕ್ಷರು ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳ ನಾಯಕರ ಅಧಿಕೃತ ವೇತನಕ್ಕೆ ಹೋಲಿಸಿದರೆ ಈ ಮೊತ್ತ ಹಲವು ಪಟ್ಟು ಹೆಚ್ಚಾಗಿದೆ ಎಂಬುದು ಈ ಬೆಳವಣಿಗೆಯ ಪ್ರಮುಖ ಅಂಶವಾಗಿದೆ.

RelatedPosts

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಬಿಸಿ: ಸ್ಪರ್ಧಿಗಳಿಗೆ ಶುರುವಾಯ್ತು ಢವಢವ!

ನಾಪತ್ತೆಯಾಗಿದ್ದ ಇಬ್ಬರು ಯುವತಿಯರು 8 ತಿಂಗಳ ಬಳಿಕ ಪತ್ತೆ!

ಸತೀಶ್ ಜಾರಕಿಹೊಳಿ ಆಪ್ತರ ಮನೆಗಳ ಮೇಲೂ ED ದಾಳಿ: ಒಟ್ಟು ಆರು ಕಡೆ ರೇಡ್

ಬೆಂಗಳೂರಿಗರೇ ಗಮನಿಸಿ: ಈ ಫ್ಲೈಓವರ್‌ಗಳಲ್ಲಿ ಬೈಕ್, ಆಟೋ ಸಂಚಾರಕ್ಕೆ ಅವಕಾಶ!

ADVERTISEMENT
ADVERTISEMENT

ಸಿಂಗಾಪುರದ ರಾಜಕೀಯ ನಾಯಕರ ವೇತನ ನಿಗದಿಪಡಿಸುವ ವಿಧಾನವೇ ಈ ಚರ್ಚೆಗೆ ಮತ್ತಷ್ಟು ಮಹತ್ವ ನೀಡಿದೆ. ಸಾಮಾನ್ಯವಾಗಿ ಸರ್ಕಾರದ ಮುಖ್ಯಸ್ಥರು ಮತ್ತು ಸಚಿವರ ವೇತನವನ್ನು ನಿಗದಿಪಡಿಸುವಾಗ ದೇಶದ ಆರ್ಥಿಕ ಪರಿಸ್ಥಿತಿ, ಸಾರ್ವಜನಿಕ ಸೇವೆಯ ಜವಾಬ್ದಾರಿ ಹಾಗೂ ಇತರ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಆದರೆ ಸಿಂಗಾಪುರದಲ್ಲಿ ಖಾಸಗಿ ವಲಯದ ಅತ್ಯುನ್ನತ ಆದಾಯ ಗಳಿಸುವವರನ್ನು ಆಧಾರವಾಗಿಟ್ಟುಕೊಂಡು ನಿರ್ದಿಷ್ಟ ಸೂತ್ರದ ಮೂಲಕ ರಾಜಕೀಯ ನಾಯಕರ ವೇತನವನ್ನು ನಿರ್ಧರಿಸಲಾಗುತ್ತದೆ.

ಟಾಪ್ 1,000 ಗಳಿಕೆದಾರರು ಪ್ರಮುಖ ಮಾನದಂಡ

ಸಿಂಗಾಪುರದ ವೇತನ ವ್ಯವಸ್ಥೆಯ ಮೊದಲ ಹಂತದಲ್ಲಿ ದೇಶದ ಅತಿ ಹೆಚ್ಚು ಆದಾಯ ಗಳಿಸುವ ಟಾಪ್ 1,000 ನಾಗರಿಕರ ಆದಾಯವನ್ನು ಪರಿಗಣಿಸಲಾಗುತ್ತದೆ. ಆದರೆ ಈ ಗುಂಪಿನಲ್ಲಿರುವ ಅತಿ ಹೆಚ್ಚು ಸಂಪಾದಿಸುವ ಕೆಲವರ ಆದಾಯದಿಂದ ಸರಾಸರಿ ಮೊತ್ತದ ಮೇಲೆ ಹೆಚ್ಚು ಪರಿಣಾಮ ಬೀರದಂತೆ ‘ಮಿಡಿಯನ್ ಇನ್‌ಕಮ್’ ಅನ್ನು ಮಾನದಂಡವಾಗಿ ಬಳಸಲಾಗುತ್ತದೆ.

ಈ ವಿಧಾನಕ್ಕೆ ಪ್ರಮುಖ ಕಾರಣವೆಂದರೆ, ಖಾಸಗಿ ವಲಯದಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಮತ್ತು ಹೆಚ್ಚಿನ ಅನುಭವ ಹೊಂದಿರುವ ಪ್ರತಿಭಾವಂತ ವ್ಯಕ್ತಿಗಳನ್ನು ಸಾರ್ವಜನಿಕ ಸೇವೆಗೆ ಆಕರ್ಷಿಸುವುದು. ರಾಜಕೀಯ ಕ್ಷೇತ್ರಕ್ಕೆ ಬರುವ ಸಂದರ್ಭದಲ್ಲಿ ಅವರು ಖಾಸಗಿ ವಲಯದ ಆದಾಯದ ದೊಡ್ಡ ಭಾಗವನ್ನು ತ್ಯಜಿಸಬೇಕಾಗಬಹುದು. ಹೀಗಾಗಿ ಅವರ ಸಾಮರ್ಥ್ಯ ಮತ್ತು ಜವಾಬ್ದಾರಿಗೆ ಅನುಗುಣವಾದ ವೇತನ ವ್ಯವಸ್ಥೆ ರೂಪಿಸಲಾಗಿದೆ ಎಂಬುದು ಸಿಂಗಾಪುರದ ವಾದವಾಗಿದೆ.

40% ಕಡಿತದ ಬಳಿಕ ಸಚಿವರ ವೇತನ

ಆದರೆ ಟಾಪ್ 1,000 ಗಳಿಕೆದಾರರ ಆದಾಯವನ್ನು ರಾಜಕಾರಣಿಗಳಿಗೆ ನೇರವಾಗಿ ನೀಡುವುದಿಲ್ಲ. ಸಾರ್ವಜನಿಕ ಸೇವೆಯ ಸ್ವರೂಪವನ್ನು ಪರಿಗಣಿಸಿ, ಆ ಆದಾಯದ ಮಾನದಂಡದಲ್ಲಿ 40% ಕಡಿತ ಮಾಡಲಾಗುತ್ತದೆ.

ಈ ಕಡಿತದ ನಂತರ ಎಂಟ್ರಿ-ಲೆವೆಲ್ ಸಚಿವರ ವಾರ್ಷಿಕ ವೇತನವು ಸುಮಾರು 1.8 ಮಿಲಿಯನ್ ಸಿಂಗಾಪುರ ಡಾಲರ್ ಆಗುತ್ತದೆ ಎಂದು ನೀಡಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ. ಅಂದರೆ ಖಾಸಗಿ ವಲಯದ ಅತಿ ಹೆಚ್ಚು ಆದಾಯ ಗಳಿಸುವವರ ಮಟ್ಟವನ್ನು ಸಂಪೂರ್ಣವಾಗಿ ಅನುಸರಿಸದೆ, ಸಾರ್ವಜನಿಕ ಸೇವೆಗೆ ಪ್ರವೇಶಿಸುವವರಿಗೆ ನಿರ್ದಿಷ್ಟ ಆರ್ಥಿಕ ತ್ಯಾಗದ ಅಂಶವನ್ನೂ ವ್ಯವಸ್ಥೆಯಲ್ಲಿ ಉಳಿಸಲಾಗಿದೆ.

ಪ್ರಧಾನಿಗೆ ಸಚಿವರ ವೇತನದ ದುಪ್ಪಟ್ಟು

ಇಲ್ಲಿಂದ ಪ್ರಧಾನಮಂತ್ರಿಯ ವೇತನದ ಲೆಕ್ಕಾಚಾರ ಆರಂಭವಾಗುತ್ತದೆ. ಸಚಿವರ ವೇತನವನ್ನು ಮಾನದಂಡವಾಗಿಸಿಕೊಂಡು ಪ್ರಧಾನಮಂತ್ರಿಗೆ ಅದರ ಎರಡು ಪಟ್ಟು ವೇತನ ನಿಗದಿಪಡಿಸಲಾಗುತ್ತದೆ.

ಅದರಂತೆ 1.8 ಮಿಲಿಯನ್ ಸಿಂಗಾಪುರ ಡಾಲರ್ ಸಚಿವರ ವೇತನದ ದುಪ್ಪಟ್ಟಾಗಿ ಪ್ರಧಾನಮಂತ್ರಿಯ ವಾರ್ಷಿಕ ಬೆಂಚ್‌ಮಾರ್ಕ್ ವೇತನ 3.6 ಮಿಲಿಯನ್ ಸಿಂಗಾಪುರ ಡಾಲರ್ ಆಗುತ್ತದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು ₹26.9 ಕೋಟಿಗೆ ಸಮಾನವಾಗುತ್ತದೆ.

ಭ್ರಷ್ಟಾಚಾರ ತಡೆಗೂ ಹೆಚ್ಚಿನ ವೇತನ?

ರಾಜಕೀಯ ನಾಯಕರಿಗೆ ಇಷ್ಟು ದೊಡ್ಡ ಪ್ರಮಾಣದ ವೇತನ ನೀಡುವುದರ ಹಿಂದೆ ಸಿಂಗಾಪುರ ಸರ್ಕಾರದ ಮತ್ತೊಂದು ಪ್ರಮುಖ ವಾದವಿದೆ. ಸ್ಪರ್ಧಾತ್ಮಕ ಹಾಗೂ ಪಾರದರ್ಶಕ ವೇತನ ವ್ಯವಸ್ಥೆಯ ಮೂಲಕ ಖಾಸಗಿ ವಲಯದ ಅತ್ಯುತ್ತಮ ಪ್ರತಿಭೆಗಳನ್ನು ಆಡಳಿತಕ್ಕೆ ಸೆಳೆಯಬಹುದು ಎಂಬುದು ಅದರ ನಿಲುವು.

ಇದರ ಜೊತೆಗೆ, ನಾಯಕರಿಗೆ ಅವರ ಜವಾಬ್ದಾರಿ ಮತ್ತು ಸಾಮರ್ಥ್ಯಕ್ಕೆ ತಕ್ಕಷ್ಟು ಅಧಿಕೃತ ವೇತನ ದೊರೆತರೆ ಅಕ್ರಮ ಹಣ ಸಂಪಾದನೆ ಅಥವಾ ಭ್ರಷ್ಟಾಚಾರದ ಪ್ರಲೋಭನವನ್ನು ಕಡಿಮೆ ಮಾಡಬಹುದು ಎಂಬ ವಾದವೂ ಇದೆ.

ಹೀಗಾಗಿ ಸಿಂಗಾಪುರದ ರಾಜಕೀಯ ವೇತನ ವ್ಯವಸ್ಥೆ ಕೇವಲ ಪ್ರಧಾನಮಂತ್ರಿಯ ಸಂಬಳ ಎಷ್ಟು ಎಂಬ ಪ್ರಶ್ನೆಗೆ ಸೀಮಿತವಾಗಿಲ್ಲ. ಅತ್ಯುತ್ತಮ ಪ್ರತಿಭೆಯನ್ನು ರಾಜಕೀಯಕ್ಕೆ ತರುವುದು, ಸಾರ್ವಜನಿಕ ಸೇವೆಯ ಗುಣಮಟ್ಟ ಹೆಚ್ಚಿಸುವುದು ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ಕಡಿಮೆ ಮಾಡುವುದು ಎಂಬ ಹಲವು ಉದ್ದೇಶಗಳನ್ನು ಒಳಗೊಂಡಿರುವ ವಿಶಿಷ್ಟ ಮಾದರಿಯಾಗಿ ಇದು ಚರ್ಚೆಗೆ ಬಂದಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ವ್ಯರ್ಥವಾಗಬಹುದು, (12)

ಟ್ರಂಪ್‌‌ಗಿಂತಲೂ ಹೈ ಸ್ಯಾಲರಿ..ಇವರೇ ನೋಡಿ ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಪ್ರಧಾನಿ!

by ಶಾಲಿನಿ ಕೆ. ಡಿ
September 9, 2026 - 12:41 pm
0

ವ್ಯರ್ಥವಾಗಬಹುದು, (11)

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಬಿಸಿ: ಸ್ಪರ್ಧಿಗಳಿಗೆ ಶುರುವಾಯ್ತು ಢವಢವ!

by ಶಾಲಿನಿ ಕೆ. ಡಿ
September 9, 2026 - 12:07 pm
0

ವ್ಯರ್ಥವಾಗಬಹುದು, (10)

ನಾಪತ್ತೆಯಾಗಿದ್ದ ಇಬ್ಬರು ಯುವತಿಯರು 8 ತಿಂಗಳ ಬಳಿಕ ಪತ್ತೆ!

by ಶಾಲಿನಿ ಕೆ. ಡಿ
September 9, 2026 - 11:33 am
0

ವ್ಯರ್ಥವಾಗಬಹುದು, (8)

ಸತೀಶ್ ಜಾರಕಿಹೊಳಿ ಆಪ್ತರ ಮನೆಗಳ ಮೇಲೂ ED ದಾಳಿ: ಒಟ್ಟು ಆರು ಕಡೆ ರೇಡ್

by ಶಾಲಿನಿ ಕೆ. ಡಿ
September 9, 2026 - 11:09 am
0

ಸಂಬಂಧಿಸಿದ ಪೋಸ್ಟ್‌ಗಳು

  • ವ್ಯರ್ಥವಾಗಬಹುದು, (11)
    ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಬಿಸಿ: ಸ್ಪರ್ಧಿಗಳಿಗೆ ಶುರುವಾಯ್ತು ಢವಢವ!
    September 9, 2026 | 0
  • ವ್ಯರ್ಥವಾಗಬಹುದು, (10)
    ನಾಪತ್ತೆಯಾಗಿದ್ದ ಇಬ್ಬರು ಯುವತಿಯರು 8 ತಿಂಗಳ ಬಳಿಕ ಪತ್ತೆ!
    September 9, 2026 | 0
  • ವ್ಯರ್ಥವಾಗಬಹುದು, (8)
    ಸತೀಶ್ ಜಾರಕಿಹೊಳಿ ಆಪ್ತರ ಮನೆಗಳ ಮೇಲೂ ED ದಾಳಿ: ಒಟ್ಟು ಆರು ಕಡೆ ರೇಡ್
    September 9, 2026 | 0
  • ವ್ಯರ್ಥವಾಗಬಹುದು, (6)
    ಬೆಂಗಳೂರಿಗರೇ ಗಮನಿಸಿ: ಈ ಫ್ಲೈಓವರ್‌ಗಳಲ್ಲಿ ಬೈಕ್, ಆಟೋ ಸಂಚಾರಕ್ಕೆ ಅವಕಾಶ!
    September 9, 2026 | 0
  • ದೀಪಿಕಾ ಪಡುಕೋಣೆ-ರಣ್‌ವೀರ್ ಮಗಳು ದುವಾ ಹುಟ್ಟುಹಬ್ಬದ ಸಂಭ್ರಮ..!
    ಮಗಳ ಬರ್ತ್‌ಡೇಗೆ ವಿಶೇಷ ಫೋಟೋ ಹಂಚಿಕೊಂಡ ದೀಪಿಕಾ-ರಣವೀರ್ ಸಿಂಗ್
    September 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version