• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶಾರೂಖ್ ನ್ಯೂ ರೆಕಾರ್ಡ್..ವಿಶ್ವದ ಸಾರ್ವಕಾಲಿಕ ಶ್ರೇಷ್ಠ ನಟ

ವಿಶ್ವದ 100 ಶ್ರೇಷ್ಠ ಸಿನಿಮಾ ತಾರೆಯರ ಪಟ್ಟಿಯಲ್ಲಿ SRK

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 20, 2026 - 4:54 pm
in ಸಿನಿಮಾ
0 0
0
Untitled Design (22)

ವಿಶ್ವ ಸಿನಿಮಾ ದುನಿಯಾದಲ್ಲೇ ಭಾರತದ ಬಾವುಟ ಮತ್ತೊಮ್ಮೆ ಬಾನೆತ್ತರಕ್ಕೆ ಹಾರಿದೆ. ಹಾಲಿವುಡ್ ದಿಗ್ಗಜರ ನಡುವೆ ಬಾಲಿವುಡ್ ಕಿಂಗ್ ಖಾನ್ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡ್ತಿದ್ದಾರೆ. ಕೇವಲ ಬಾಕ್ಸ್ ಆಫೀಸ್ ಕಲೆಕ್ಷನ್ ಅಲ್ಲ, ಸಿನಿಮಾ ಇತಿಹಾಸದಲ್ಲಿ ಬೀರಿರುವ ಪ್ರಭಾವಕ್ಕೆ ಸಿಕ್ಕಿರೋ ಈ ಗೌರವ ಈಗ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದೆ. ಅಷ್ಟಕ್ಕೂ ಕಿಂಗ್ ಖಾನ್ ಬರೆದಿರೋ ಆ ಗ್ಲೋಬಲ್ ಹಿಸ್ಟರಿ ಏನು? ಹಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳನ್ನೇ ಹಿಂದಿಕ್ಕಿ ಅವರು ಮಾಡಿರೋ ಮ್ಯಾಜಿಕ್ ಏನು? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

  • ಶಾರೂಖ್ ನ್ಯೂ ರೆಕಾರ್ಡ್.. ವಿಶ್ವದ ಸಾರ್ವಕಾಲಿಕ ಶ್ರೇಷ್ಠ ನಟ
  • ವಿಶ್ವದ 100 ಶ್ರೇಷ್ಠ ಸಿನಿಮಾ ತಾರೆಯರ ಪಟ್ಟಿಯಲ್ಲಿ SRK
  • ಎಮ್ಮಾ ಸ್ಟೋನ್, ಸ್ಟಲ್ಲೋನ್‌ಗೂ ಸವಾಲಾದ ಕಿಂಗ್ ಖಾನ್
  • ಬಾಜಿಗರ್‌ನಿಂದ ಗ್ಲೋಬಲ್ ಸ್ಟಾರ್‌ವರೆಗೆ ಶಾರುಖ್ ಜರ್ನಿ

ವಿಶ್ವದ ಸಿನಿಮಾ ಇತಿಹಾಸದಲ್ಲೇ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತೊಮ್ಮೆ ಹೊಸ ಇತಿಹಾಸ ಬರೆದಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ‘ವೆರೈಟಿ’ ನಿಯತಕಾಲಿಕೆ ಬಿಡುಗಡೆ ಮಾಡಿರುವ ‘ದಿ 100 ಗ್ರೇಟೆಸ್ಟ್ ಮೂವಿ ಸ್ಟಾರ್ಸ್ ಆಫ್ ಆಲ್ ಟೈಮ್’ ಪಟ್ಟಿಯಲ್ಲಿ ಕಿಂಗ್ ಖಾನ್ 92ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ದಿಗ್ಗಜರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಎಂಬ ಹೆಗ್ಗಳಿಕೆ ಶಾರುಖ್ ಖಾನ್ ಪಾಲಾಗಿದ್ದು, ಭಾರತೀಯ ಚಿತ್ರರಂಗಕ್ಕೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.

RelatedPosts

29 ದಿನ 22 ಕೋಟಿ ಮಿನಿಟ್ಸ್..ಅಯ್ಯನ ಮನೆ-2 ರೆಕಾರ್ಡ್

ಮಹಾನಟಿ ತೊಡೆ ಸವರಿದ ನಿರ್ಮಾಪಕ..ಸ್ಪಷ್ಟನೆ ಕೊಟ್ಟ ನಟಿ ಕೀರ್ತಿ ಸುರೇಶ್

ಟೈಸನ್ ವಿನೋದ್ ಪ್ರಭಾಕರ್-ಕೋಮಲ್ ಜೊತೆ ರಿಲ್ಯಾಕ್ಸ್ ಆಗಿ ಎಂದ ಸೋನಲ್

ಸಮಂತಾಗೆ ಗಂಡು ಮಗು..6 ಮಿಲಿಯನ್ ಮಂದಿ ವಿಶಸ್

ADVERTISEMENT
ADVERTISEMENT

ವೆರೈಟಿಯ ಐವರು ಸಿನಿಮಾ ವಿಮರ್ಶಕರು ಸಿದ್ಧಪಡಿಸಿರುವ ಈ ಪಟ್ಟಿಯಲ್ಲಿ ಕೇವಲ ಬಾಕ್ಸ್ ಆಫೀಸ್ ಕಲೆಕ್ಷನ್ ಅಥವಾ ಫ್ಯಾನ್ ಫಾಲೋಯಿಂಗ್ ಮಾತ್ರ ಮಾನದಂಡವಲ್ಲ, ನಟನಾ ಪ್ರತಿಭೆ, ವಿಭಿನ್ನ ಪಾತ್ರಗಳ ಆಯ್ಕೆ, ತೆರೆಯ ಮೇಲಿನ ವರ್ಚಸ್ಸು ಹಾಗೂ ಜಾಗತಿಕ ಸಾಂಸ್ಕೃತಿಕ ಪ್ರಭಾವವನ್ನು ಪರಿಗಣಿಸಲಾಗಿದೆ. ಇದೇ ಮಾನದಂಡದಲ್ಲಿ ಹಾಲಿವುಡ್‌ನ ಘಟಾನುಘಟಿ ತಾರೆಯರನ್ನೇ ಶಾರುಖ್ ಹಿಂದಿಕ್ಕಿದ್ದಾರೆ. ಆಸ್ಕರ್ ವಿಜೇತರಾದ ಜೋಕ್ವಿನ್ ಫೀನಿಕ್ಸ್ , ಎಮ್ಮಾ ಸ್ಟೋನ್, ಫಿಲಿಪ್ ಸೆಮೌರ್ ಹಾಫ್‌ಮನ್  ಹಾಗೂ ಸಿಲ್ವೆಸ್ಟರ್ ಸ್ಟಲ್ಲೋನ್ , ಎಡ್ಡಿ ಮರ್ಫಿ ಅವರಂತಹ ದಿಗ್ಗಜರಿಗಿಂತ ಮೇಲಿನ ಸ್ಥಾನದಲ್ಲಿ ಕಿಂಗ್ ಖಾನ್ ಮಿಂಚಿದ್ದಾರೆ.

ಶಾರುಖ್ ಖಾನ್ ಅವರ ಈ ಜಾಗತಿಕ ಮನ್ನಣೆಯ ಹಿಂದೆ ಮೂರು ದಶಕಗಳ ಸುದೀರ್ಘ ಪರಿಶ್ರಮ ಹಾಗೂ ವೈವಿಧ್ಯಮಯ ಪಾತ್ರಗಳ ಪಯಣವಿದೆ. ಆರಂಭದಲ್ಲಿ ಬಾಜಿಗರ್ ಮತ್ತು ಡರ್ ಚಿತ್ರಗಳ ಮೂಲಕ ನೆಗೆಟಿವ್ ಶೇಡ್ ಪಾತ್ರಗಳಲ್ಲೂ ಬೆಚ್ಚಿಬೀಳಿಸುವಂತೆ ನಟಿಸಿದ್ದ ಅವರು, ಮುಂದೆ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೇ’ ಹಾಗೂ ‘ದೇವದಾಸ್’ ಮೂಲಕ ಲವರ್ ಬಾಯ್ ಮತ್ತು ಭಾವನಾತ್ಮಕ ನಾಯಕನಾಗಿ ವಿಶ್ವದಾದ್ಯಂತ ಕೋಟ್ಯಂತರ ಹೃದಯ ಗೆದ್ದರು. ವಿಶೇಷವೆಂದರೆ, ಶಾರುಖ್ ಅವರ ವೃತ್ತಿಜೀವನವನ್ನು ಪ್ರತಿನಿಧಿಸುವ ಚಿತ್ರವಾಗಿ ‘ದೇವದಾಸ್’ ಅನ್ನು ವೆರೈಟಿ ಆಯ್ಕೆ ಮಾಡಿದೆ.

ಹಾಲಿವುಡ್‌ನಿಂದ ಹಿಡಿದು ಜಾಗತಿಕ ಸಿನಿಮಾ ಲೋಕದ ಶ್ರೇಷ್ಠ ಕಲಾವಿದರನ್ನು ಒಳಗೊಂಡ ಈ ಪಟ್ಟಿಯಲ್ಲಿ, 1950ರ ದಶಕದ ಐಕಾನಿಕ್ ನಟಿ ಮರ್ಲಿನ್ ಮನ್ರೋ ಮೊದಲ ಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಹಾಲಿವುಡ್ ದಂತಕಥೆ ಹಂಫ್ರಿ ಬೊಗಾರ್ಟ್ ಇದ್ದರೆ, ವಿಶ್ವವಿಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್ ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂತಹ ಶ್ರೇಷ್ಠ ಕಲಾವಿದರ ಸಾಲಿನಲ್ಲಿ ಒಬ್ಬ ಭಾರತೀಯ ನಟನ ಹೆಸರು ರಾರಾಜಿಸುತ್ತಿರುವುದು ಸಿನಿಪ್ರಿಯರಿಗೆ ರೋಮಾಂಚನ ತಂದಿದೆ.

ಒಟ್ಟಿನಲ್ಲಿ ಶಾರುಖ್ ಖಾನ್ ಕೇವಲ ಬಾಲಿವುಡ್‌ನ ಸ್ಟಾರ್ ಆಗಿ ಉಳಿಯದೆ, ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾದ ಮುಖವಾಗಿ ಬೆಳೆದು ನಿಂತಿದ್ದಾರೆ. ಪಾತ್ರಗಳ ಮೇಲಿನ ಹಿಡಿತ, ಮಾತುಗಾರಿಕೆಯ ಚತುರತೆ ಮತ್ತು ಪ್ರೇಕ್ಷಕರನ್ನು ಸೆಳೆಯುವ ವಿಶಿಷ್ಟ ಶೈಲಿಯಿಂದ ಅವರು ಪಡೆದಿರುವ 92ನೇ ಸ್ಥಾನ, ಮುಂದಿನ ತಲೆಮಾರಿನ ಕಲಾವಿದರಿಗೆ ದೊಡ್ಡ ಸ್ಫೂರ್ತಿಯಾಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text (39)

29 ದಿನ 22 ಕೋಟಿ ಮಿನಿಟ್ಸ್..ಅಯ್ಯನ ಮನೆ-2 ರೆಕಾರ್ಡ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 5:33 pm
0

Your paragraph text (36)

ಬೈಕ್ ಟ್ಯಾಕ್ಸಿಗೆ ಸುಪ್ರೀಂ ಗ್ರೀನ್ ಸಿಗ್ನಲ್ ಬೆನ್ನಲ್ಲೇ ಸರ್ಕಾರದಿಂದ ಕಠಿಣ ರೂಲ್ಸ್

by ಶಾಲಿನಿ ಕೆ. ಡಿ
November 21, 2026 - 5:22 pm
0

Your paragraph text (35)

ಮಹಾನಟಿ ತೊಡೆ ಸವರಿದ ನಿರ್ಮಾಪಕ..ಸ್ಪಷ್ಟನೆ ಕೊಟ್ಟ ನಟಿ ಕೀರ್ತಿ ಸುರೇಶ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 5:00 pm
0

Your paragraph text (31)

ಪ್ರಯಾಣಿಕರೇ ಎಚ್ಚರ: ಇನ್ಮುಂದೆ ರೈಲಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿದ್ರೆ ದಂಡ, ಜೈಲು ಶಿಕ್ಷೆ ಫಿಕ್ಸ್!

by ಶಾಲಿನಿ ಕೆ. ಡಿ
November 21, 2026 - 4:37 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (39)
    29 ದಿನ 22 ಕೋಟಿ ಮಿನಿಟ್ಸ್..ಅಯ್ಯನ ಮನೆ-2 ರೆಕಾರ್ಡ್
    November 21, 2026 | 0
  • Your paragraph text (35)
    ಮಹಾನಟಿ ತೊಡೆ ಸವರಿದ ನಿರ್ಮಾಪಕ..ಸ್ಪಷ್ಟನೆ ಕೊಟ್ಟ ನಟಿ ಕೀರ್ತಿ ಸುರೇಶ್
    November 21, 2026 | 0
  • Untitled design (47)
    ಟೈಸನ್ ವಿನೋದ್ ಪ್ರಭಾಕರ್-ಕೋಮಲ್ ಜೊತೆ ರಿಲ್ಯಾಕ್ಸ್ ಆಗಿ ಎಂದ ಸೋನಲ್
    November 21, 2026 | 0
  • Untitled Design (43)
    ಸಮಂತಾಗೆ ಗಂಡು ಮಗು..6 ಮಿಲಿಯನ್ ಮಂದಿ ವಿಶಸ್
    November 21, 2026 | 0
  • Untitled Design (40)
    ನಟ ಧನ್ವೀರ್‌ಗೆ ಬಿಗ್ ಶಾಕ್: FIR ರದ್ಧತಿಗೆ ಹೈಕೋರ್ಟ್ ನಕಾರ
    November 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version