ಸಿನಿಮಾ ಹಾಗೂ ವೆಬ್ ಸೀರೀಸ್ಗಳ ಮೂಲಕ ಸೌತ್ನಿಂದ ಬಾಲಿವುಡ್ ತನಕ ಸದ್ದು ಮಾಡಿದ ಮೋಸ್ಟ್ ಪಾಪ್ಯುಲರ್ ನಟಿಮಣಿ ಸಮಂತಾ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಿದೆ. ಯೆಸ್.. ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿ ಪ್ರಮೋಷನ್ ಪಡೆದಿದ್ದಾರೆ ಚೆಂದುಳ್ಳಿ ಚೆಲುವೆ ಸ್ಯಾಮ್. ಮಗು ಹೇಗಿದೆ..? ಏನಂತ ನಾಮಕರಣ ಮಾಡಿದ್ರು..? ಫ್ಯಾನ್ಸ್ ಹೇಗೆಲ್ಲಾ ವಿಶ್ ಮಾಡ್ತಿದ್ದಾರೆ ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.
- ಸಮಂತಾಗೆ ಗಂಡು ಮಗು.. 6 ಮಿಲಿಯನ್ ಮಂದಿ ವಿಶಸ್
- ದೇವ್ ಅಂತ ನಾಮಕರಣ.. ಸ್ಯಾಮ್-ರಾಜ್ ದಿಲ್ಖುಷ್..!
- ಡಿವೋರ್ಸ್, ಅನಾರೋಗ್ಯ, 2ನೇ ಮದ್ವೆ.. ಎಲ್ಲಾ ಮೆಟ್ಟಿ ನಿಂತ್ರು
- ಸಕ್ಸಸ್ನ ಉತ್ತುಂಗದಲ್ಲಿ ಇರುವಾಗ್ಲೇ ಮನೆಗೆ ಹೊಸ ಸದಸ್ಯ..!
ಸಮಂತಾ ರುತ್ ಪ್ರಭು.. ಅಪ್ಪಟ ಮದ್ರಾಸ್ ಬೆಡಗಿ. ಆದ್ರೆ ತಮಿಳಿಗಿಂತ ಜಾಸ್ತಿ ನೇಮು, ಫೇಮು ಮಾಡಿದ್ದು ಪಕ್ಕದ ಟಾಲಿವುಡ್ನಲ್ಲಿ. ಸೌತ್ ದುನಿಯಾದಲ್ಲಷ್ಟೇ ಅಲ್ಲದೆ.. ಬಾಲಿವುಡ್ ಅಂಗಳದಲ್ಲೂ ದೊಡ್ಡ ಮಟ್ಟದ ಛಾಪು ಮೂಡಿಸಿದ ಈ ಬಹುಭಾಷಾ ನಟಿ.. ಸಿನಿಮಾಗಳ ಜೊತೆಗೆ ವೆಬ್ ಸೀರೀಸ್ಗಳಿಂದಲೂ ಗುರ್ತಿಸಿಕೊಂಡರು. ಮಾ ಇಂಟಿ ಬಂಗಾರಂ 100 ಕೋಟಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆದ ಬೆನ್ನಲ್ಲೇ ಗರ್ಭ ಧರಿಸಿದ ಸಮಂತಾ.. ಇದೀಗ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿ ಬಡ್ತಿ ಪಡೆದಿದ್ದಾರೆ.
ಯೆಸ್.. ಸಹನಟ ಅಕ್ಕಿನೇನಿ ನಾಗಚೈತನ್ಯರನ್ನ ಪ್ರೀತಿಸಿ, ಮದ್ವೆ ಆಗೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಮಂತಾ, ಅದಾದ ಬಳಿಕ ನಾಲ್ಕೇ ವರ್ಷದಲ್ಲಿ ದಾಂಪತ್ಯ ಜೀವನ ಮುರಿದುಕೊಂಡರು. ಡಿವೋರ್ಸ್ ಕೂಡ ನೀಡಿ.. ದಿ ಫ್ಯಾಮಿಲಿಮ್ಯಾನ್ ವೆಬ್ ಸೀರೀಸ್ನ ಡೈರೆಕ್ಟರ್ ಆದಂತಹ ರಾಜ್ ನಿಡಿಮೋರು ಕೈ ಹಿಡಿದರು. ಒನ್ಸ್ ಅಗೈನ್ ರಾಜ್ರನ್ನ ಕೂಡ ಪ್ರೀತಿಸಿಯೇ ಸರಳ ವಿವಾಹಕ್ಕೆ ಅಣಿಯಾಗಿದ್ರು ಸಮಂತಾ.
ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ, ಟಿಪ್ಪಣಿಗಳು, ಅವಮಾನ, ಅಪಮಾನಗಳನ್ನ ಮೆಟ್ಟಿ ನಿಂತಂತಹ ಈಕೆಗೆ ಆರೋಗ್ಯ ಕೂಡ ಕೈ ಕೊಟ್ಟಿತ್ತು. ಅದಕ್ಕಾಗಿ ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸದ್ಯ ಎಲ್ಲಾ ಅಡೆ-ತಡೆಗಳನ್ನ ಮೆಟ್ಟಿ ನಿಂತು ಸಕ್ಸಸ್ಗೆ ಮರಳಿದ ಬೆನ್ನಲ್ಲೇ ತಾಯಿಯಾಗಿ ಸಾರ್ಥಕ ಹಾಗೂ ಅರ್ಥಪೂರ್ಣ ಜೀವನಕ್ಕೆ ನಾಂದಿ ಹಾಡಿದ್ದಾರೆ. ಒಬ್ಬ ಹೆಣ್ಣು ಡಿವೋರ್ಸ್, ಅನಾರೋಗ್ಯ, ಮರು ಮದುವೆ.. ಹೀಗೆ ಜೀವನದ ಟಫೆಸ್ಟ್ ಘಟ್ಟಗಳನ್ನ ದಾಟಿ ಗಟ್ಟಿಯಾಗಿ ನೆಲೆ ನಿಲ್ಲುವುದು ತಮಾಷೆಯ ಮಾತಲ್ಲ. ಹಾಗಾಗಿಯೇ ಸಮಂತಾಗೆ ಇಂದು ಇಡೀ ಭಾರತೀಯ ಚಿತ್ರರಂಗ, ಅವ್ರ ಅಸಂಖ್ಯಾತ ಅಭಿಮಾನಿ ಬಳಗ ಶುಭಾಶಯ ಕೋರುತ್ತಿದೆ.
ಸಮಂತಾ ಹಾಗೂ ರಾಜ್ ನಿಡಿಮೋರು ದಂಪತಿ ತಮ್ಮ ಮಗುವಿಗೆ ದೇವ್ ನಿಡಿಮೋರು ಅಂತ ನಾಮಕರಣ ಕೂಡ ಮಾಡಿದ್ದು.. ಫೋಟೋ ಸಮೇತ ಹೆಸರು ಹಾಗೂ ಖುಷಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಸುಂದರವಾದ ಗಂಡು ಮಗು ದೇವ್ ನಿಡಿಮೋರು ಅಂದಿರೋ ಸಮಂತಾ ದಂಪತಿ.. ಇದು ನಮ್ಮ ಹೃದಯಕ್ಕೆ ಹಿಂದೆಂದೂ ಸಿಗದಷ್ಟು ಆನಂದ, ಸಂತಸ ಎಂದಿದ್ದಾರೆ. ಅದಕ್ಕೆ ಒಂದೇ ದಿನದಲ್ಲಿ ಶುಭಾಶಯಗಳನ್ನ ಕೋರಿದವ್ರು.. ಹರಸಿದವ್ರ ಸಂಖ್ಯೆ ಬರೋಬ್ಬರಿ 6 ಮಿಲಿಯನ್ಗೂ ಅಧಿಕ ಅಂದ್ರೆ ನೀವು ನಂಬಲೇಬೇಕು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





