ದಾದಾ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ ಲಿಸ್ಟ್ ಹೊರಬಿದ್ದಿದ್ದು.. ಒಂದಲ್ಲ ಎರಡಲ್ಲ ಮೂರು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದೆ ಕಾಂತಾರ ಚಾಪ್ಟರ್-1. ಬಾಲಿವುಡ್ನ ಧುರಂಧರ್ ಜೊತೆ ಅತಿಹೆಚ್ಚು ಪ್ರಶಸ್ತಿಗಳನ್ನ ಪಡೆದ ಸಿನಿಮಾ ಆಗಿ ರಾರಾಜಿಸ್ತಿರೋ ರಿಷಬ್ ಶೆಟ್ರ ಕಾಂತಾರ-1 ಕನ್ನಡಿಗರಿಗೆ ಮತ್ತಷ್ಟು ಹೆಮ್ಮೆ ತರಿಸಿದೆ. ಹಾಗಾದ್ರೆ ಯಾವ್ಯಾವ ಕೆಟಗರಿಯಲ್ಲಿ ಅವಾರ್ಡ್ಗಳು ಬಂದಿವೆ ಅಂತೀರಾ..? ಈ ಸ್ಟೋರಿ ಒಮ್ಮೆ ನೋಡಿ.
- ಕಾಂತಾರಗೆ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್
- ಕ್ರಿಟಿಕ್ಸ್ ಬೆಸ್ಟ್ ಫಿಲ್ಮ್, ಕ್ರಿಟಿಕ್ಸ್ ಬೆಸ್ಟ್ ಆ್ಯಕ್ಟರ್ ಜೊತೆ ಬೆಸ್ಟ್ DOP
- ಧುರಂಧರ್ ಜೊತೆ ಪ್ರಶಸ್ತಿಗಳಿಗೆ ಪೈಪೋಟಿ.. ಹೊಸ ದಾಖಲೆ..!
- 2023ರ ಕಾಂತಾರ ಚಿತ್ರಕ್ಕೆ ಮೋಸ್ಟ್ ಪ್ರಾಮಿಸಿಂಗ್ ಆ್ಯಕ್ಟರ್ ಗರಿ
ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿದ ಹಾಗೂ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಚಾಪ್ಟರ್-1 ಸಿನಿಮಾ.. ಕಳೆದ ವರ್ಷ ಬಾಕ್ಸ್ ಆಫೀಸ್ನಲ್ಲಿ 850 ಕೋಟಿಗೂ ಅಧಿಕ ರೂಪಾಯಿ ಗಳಿಸಿತ್ತು. ಇದು ನಮ್ಮ ನೆಲದ ಸಂಸ್ಕೃತಿ, ಆಚಾರ, ವಿಚಾರಗಳನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿತ್ತು. ಪ್ರೇಕ್ಷಕರು, ವಿಮರ್ಶಕರಿಂದ ಹಿಡಿದು ವಿಶ್ವದ ಮೂಲೆ ಮೂಲೆಯಲ್ಲಿರೋ ವಿದೇಶಿಗರ ಹೃದಯ ಕೂಡ ಗೆದ್ದಿತ್ತು ಈ ಸಿನಿಮಾ. ಇಲ್ಲಿಯ ತನಕ ಸಾಲು ಸಾಲು ಪ್ರಶಸ್ತಿಗಳು ಕಾಂತಾರ ಚಾಪ್ಟರ್-1ಗೆ ಬಂದಿವೆ. ಅವುಗಳ ಸಾಲಿಗೆ ಈಗ ಹೊಸ ಸೇರ್ಪಡೆ ದಾದಾ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್.
ಯೆಸ್.. ಕಳೆದ ವರ್ಷದ ಸಿನಿಮಾಗಳಿಗೆ DPIFF ಪ್ರಶಸ್ತಿಗಳ ಪಟ್ಟಿಯನ್ನ ಪ್ರಕಟಿಸಿದ್ದು.. ಅಲ್ಲಿ ಧುರಂಧರ್ ಹಾಗೂ ಕಾಂತಾರ ಚಾಪ್ಟರ್-1 ಸಿನಿಮಾಗಳ ನಡುವೆ ಪ್ರಶಸ್ತಿಗಳಿಗೆ ಬಹುದೊಡ್ಡ ಪೈಪೋಟಿಯೇ ನಡೆದಿದೆ. ಎರಡೂ ಸಹ ಜನಮನ್ನಣೆ ಪಡೆದ ಸಿನಿಮಾಗಳೇ. ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿದ ಚಿತ್ರಗಳೇ. ಹಾಗಾಗಿ ಜ್ಯೂರಿ ಕಮಿಟಿಗೂ ಇವರಲ್ಲಿ ಯಾರಿಗೆ ಪ್ರಶಸ್ತಿ ಕೊಡ್ಬೇಕು, ಬಿಡ್ಬೇಕು ಅನ್ನೋ ಕನ್ಫ್ಯೂಷನ್. ಆದ್ರೆ ಕಾಂತಾರ-1ಗೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್ ಸಂದಿರೋದು ಖುಷಿಯ ವಿಚಾರ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಮನೋಜ್ಞ ಅಭಿನಯಕ್ಕೆ ಕ್ರಿಟಿಕ್ಸ್ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಲಭಿಸಿದ್ದು, ಬೆಸ್ಟ್ ಸಿನಿಮಾಟೋಗ್ರಾಫರ್ ಗರಿಗೆ ಅರವಿಂದ್ ಎಸ್ ಕಶ್ಯಪ್ ಭಾಜನರಾಗಿದ್ದಾರೆ. ಅಲ್ಲದೆ ಕ್ರಿಟಿಕ್ಸ್ ಬೆಸ್ಟ್ ಫಿಲ್ಮ್ ಆಗಿಯೂ ಸಹ ಕಾಂತಾರ ಚಾಪ್ಟರ್-1 ರಾರಾಜಿಸಿದೆ. ಅಲ್ಲಿಗೆ ಒಟ್ಟು ಮೂರು ಪ್ರಶಸ್ತಿಗಳನ್ನ ಬಾಚಿಕೊಳ್ಳೋ ಮೂಲಕ ಬಾಲಿವುಡ್ ಮಂದಿಯ ಹುಬ್ಬೇರಿಸಿದೆ. ಅಂದಹಾಗೆ ಈ ಹಿಂದೆ 2023ರಲ್ಲಿ ಇದೇ ದಾದಾ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಕಾಂತಾರ ಚಿತ್ರದ ನಟನೆಗಾಗಿ ಮೋಸ್ಟ್ ಪ್ರಾಮಿಸಿಂಗ್ ಆ್ಯಕ್ಟರ್ ಪಟ್ಟ ಗಿಟ್ಟಿಸಿಕೊಂಡಿದ್ದರು.
ಅಂದಹಾಗೆ ರಿಷಬ್ ಶೆಟ್ರ ಫೇವರಿಟ್ ಸಿನಿಮಾಟೋಗ್ರಾಫರ್ ಆಗಿರೋ ಅರವಿಂದ್ ಎಸ್ ಕಶ್ಯಪ್.. ಈ ಹಿಂದೆ ಬೆಲ್ಬಾಟಂ ಚಿತ್ರಕ್ಕೆ ಪಡೆದ ಸಂಭಾವನೆ ಕೇವಲ 4 ಲಕ್ಷ. ಆದ್ರೆ ಇಂದು ನಂದಮೂರಿ ಬಾಲಕೃಷ್ಣ ನಟನೆಯ ದಾದಾ ಸಿನಿಮಾ ಇವರದ್ದೇ ಕೈಚಳಕದಲ್ಲಿ ತಯಾರಾಗ್ತಿದ್ದು.. ಅದಕ್ಕಾಗಿ ಬರೋಬ್ಬರಿ 1 ಕೋಟಿ 40 ಲಕ್ಷ ರೆಮ್ಯುನರೇಷನ್ ಪಡೆಯುತ್ತಿದ್ದಾರೆ ಅನ್ನೋದು ಹೆಮ್ಮೆಯ ವಿಷಯ. ಒಟ್ಟಾರೆ ಕನ್ನಡದ ಪ್ರತಿಭೆಳು ಹೀಗೆ ಎಲ್ಲೆಡೆ ಸದ್ದು ಮಾಡ್ತಿರೋದು ಚಿತ್ರರಂಗದ ಹುರುಪು, ಹುಮ್ಮಸ್ಸನ್ನು ಇಮ್ಮಡಿಗೊಳಿಸಿದಂತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





