ದಿ ವೆಯ್ಟ್ ಈಸ್ ಓವರ್.. ನ್ಯಾಷನಲ್ ಕ್ರಶ್ ರಶ್ಮಿಕಾ ರಾಯಲ್ ವೆಡ್ಡಿಂಗ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ, ಡಿಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಿರೋ ಕೂರ್ಗ್ ಬ್ಯೂಟಿ ಎಲ್ಲಿ ಮದ್ವೆ ಆಗ್ತಿದ್ದಾರೆ..? ಯಾವಾಗ ಮದ್ವೆ..? ಯಾರೆಲ್ಲಾ ಸಾಕ್ಷಿ ಆಗ್ತಾರೆ ಅನ್ನೋದನ್ನ ಹೇಳ್ತೀವಿ ಈ ಸ್ಟೋರಿ ನೋಡಿ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಸೋಲಿಲ್ಲದಂತೆ ಆಕೆ ಪ್ಯಾನ್ ಇಂಡಿಯಾ ನಟಿಯಾಗಿ ಮುನ್ನುಗ್ಗುತ್ತಿರೋ ಪರಿ ಹಾಗೂ ವೈಯಕ್ತಿಕ ಜೀವನ. ಯೆಸ್.. ಸಹ ನಟ ಕಮ್ ಬಹುಕಾಲದ ಗೆಳೆಯ ವಿಜಯ್ ದೇವರಕೊಂಡ ಜೊತೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ರಶ್ಮಿಕಾ ಎನ್ನಲಾಗಿತ್ತು. ಅದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮದ್ವೆ ಡೇಟ್ ಕೂಡ ಫಿಕ್ಸ್ ಆಗಿದೆ ಎನ್ನಲಾಗ್ತಿದೆ.
ಬಹುಕಾಲದ ಗೆಳೆಯ ದೇವರಕೊಂಡ ಜೊತೆ ರಶ್ಮಿಕಾ ಮದ್ವೆ
2026 ಫೆ-26ರಂದು RV ಡೆಸ್ಟಿನೇಷನ್ ರಾಯಲ್ ವೆಡ್ಡಿಂಗ್
ಹೌದು.. 2026ರ ಫೆಬ್ರವರಿ 26ರಂದು ಅರ್ಜುನ್ ರೆಡ್ಡಿ, ಗೀತ ಗೋವಿಂದಂ ಹಾಗೂ ಲೈಗರ್ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯಲಿದ್ದಾರಂತೆ ರಶ್ಮಿಕಾ ಮಂದಣ್ಣ. ಸ್ಯಾಂಡಲ್‌ವುಡ್‌ನಿಂದ ಜರ್ನಿ ಶುರುವಿಟ್ಟು ಬಾಲಿವುಡ್‌ನ ಮೋಸ್ಟ್ ಡಿಮ್ಯಾಂಡಿಂಗ್ ಚೆಲುವೆ ಅನಿಸಿಕೊಂಡಿರೋ ರಶ್ಮಿಕಾ, ನೂರಾರು ಕೋಟಿ ದುಡಿದಿದ್ದಾರೆ. ಹಾಗಾಗಿ ತಮ್ಮ ಮದ್ವೆಯನ್ನ ಉದಯಪುರದ ಪ್ಯಾಲೆಸ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮೂಲಕ ಗ್ರ್ಯಾಂಡ್ ಆಗಿ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆಗ್ತಿರೋದು ಎಲ್ಲರ ಹುಬ್ಬೇರಿಸಿದೆ.
400 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರೋ ರಾಜಸ್ತಾನದ ಉದಯಪುರದ ಸಿಟಿ ಪ್ಯಾಲೇಸ್, ಪಿಚೋಲಾ ಸರೋವರದ ತಟದಲ್ಲಿದೆ. ಈಗಾಗ್ಲೇ ಅಲ್ಲಿ ಬಾಲಿವುಡ್‌ನ ತಾಪಸಿ, ಶ್ರಿಯಾ ಸರಣ್, ಪರಿಣಿತಿ ಚೋಪ್ರಾ, ಕ್ರಿಕೆಟರ್ ಹಾರ್ದಿಕ್ ಪಾಂಡ್ಯ, ರವೀನಾ ಟಂಡನ್, ಅಥ್ಲೀಟ್ PV ಸಿಂಧು ಅದೇ ಪ್ಯಾಲೆಸ್‌ನಲ್ಲಿ ರಾಯಲ್ ವೆಡ್ಡಿಂಗ್ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಅವರ ಸಾಲಿಗೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕೂಡ ಸೇರಿಕೊಳ್ತಿರೋದು ವಿಶೇಷ.
ಉದಯಪುರ ಪ್ಯಾಲೆಸ್‌ನಲ್ಲಿ ರಶ್ಮಿಕಾ- ವಿಜಯ್ ಕಲ್ಯಾಣ..!
ಮದುವೆಗಾಗಿ ರಶ್ಮಿಕಾ ಖರ್ಚು ಮಾಡ್ತಿರೋದೆಷ್ಟು ಕೋಟಿ..?
ರಶ್ಮಿಕಾ ಸದ್ಯ ಸೆನ್ಸೇಷನಲ್ ನಟಿ. ಹಾಗಾಗಿ ಬಿಗ್ ಬಿ ಅಮಿತಾಬ್, ಸಲ್ಮಾನ್ ಖಾನ್, ರಣ್‌ಬೀರ್ ಕಪೂರ್‌ರಿಂದ ಹಿಡಿದು ದಳಪತಿ ವಿಜಯ್, ಚಿರಂಜೀವಿ, ನಾಗಾರ್ಜುನ್, ಧನುಷ್, ಶಿವಣ್ಣ, ಯಶ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ರಶ್ಮಿಕಾ-ವಿಜಯ್ ರಾಯಲ್ ವೆಡ್ಡಿಂಗ್‌ಗೆ ಸಾಕ್ಷಿಯಾಗಲಿದ್ದಾರಂತೆ. ಇನ್ನು ಎಂಗೇಜ್ಮೆಂಟ್ ಬಗ್ಗೆ ಆಗಲಿ ಅಥ್ವಾ ಮದುವೆ ಬಗ್ಗೆ ಆಗಲಿ ಇಲ್ಲಿಯವರೆಗೂ ರಶ್ಮಿಕಾ-ವಿಜಯ್ ಮೌನ ಮುರಿದಿಲ್ಲ. ಅಧಿಕೃತವಾಗಿ ಈ ಬಗ್ಗೆ ಅನೌನ್ಸ್ ಮಾಡೋದೊಂದೇ ಬಾಕಿ.





