ಬೆಂಗಳೂರು: ನೀವು ಚೆಸ್ ಆಟದಲ್ಲಿ ಪರಿಣಿತರಾ? ವಿಶ್ವದ ದಿಗ್ಗಜ ಆಟಗಾರರೊಂದಿಗೆ ಒಮ್ಮೆಯಾದರೂ ಚೆಸ್ ಆಡಬೇಕು ಎಂಬ ಕನಸು ನಿಮಗಿದೆಯಾ? ಹಾಗಿದ್ದರೆ ನಿಮ್ಮ ಕನಸು ನನಸಾಗುವ ಸಮಯ ಬಂದಿದೆ.
ಖ್ಯಾತ ನ್ಯೂಡಲ್ಸ್ ಬ್ರ್ಯಾಂಡ್ ‘ಯಿಪ್ಪೀ’ ಬೆಂಗಳೂರು ಮತ್ತು ಚೆನ್ನೈನ 25 ಯುವ ಚೆಸ್ ಆಟಗಾರರಿಗೆ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಸೇರಿದಂತೆ ದಿಗ್ಗಜ ಗ್ರಾಂಡ್‌ಮಾಸ್ಟರ್‌ಗಳ ಜೊತೆ ಚೆಸ್ ಆಡುವ ಅಪರೂಪದ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ.
ಯಿಪ್ಪೀ ಸಂಸ್ಥೆಯು ಆಲ್ಫೈನ್ ಎಪಿಎಲ್ ಪೈಪರ್ಸ್ ಜೊತೆಗೂಡಿ ‘ಕುಕ್. ಶೇರ್. ಚೆಕ್‌ಮೇಟ್!’ ಎಂಬ ವಿನೂತನ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯ ಮೂಲಕ 25 ಅದೃಷ್ಟಶಾಲಿ ಯುವ ಆಟಗಾರರಿಗೆ 5 ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್, ಭಾರತದ ಚೆಸ್ ದಂತಕಥೆ ಕೊನೆರು ಹಂಪಿ ಮತ್ತು ಭರವಸೆಯ ಯುವ ಆಟಗಾರ್ತಿ ದಿವ್ಯಾ ದೇಶಮುಖ್ ಅವರ ಜೊತೆ ಮುಖಾಮುಖಿಯಾಗಿ ಆಡುವ ಹಾಗೂ ಅವರೊಂದಿಗೆ ಕಾಲಕಳೆಯುವ ಅವಕಾಶ ಸಿಗಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?
ಇದು 13 ರಿಂದ 19 ವರ್ಷ ವಯಸ್ಸಿನ ಬೆಂಗಳೂರು ಮತ್ತು ಚೆನ್ನೈ ಮೂಲದ ಯುವ ಆಟಗಾರರಿಗೆ ಮಾತ್ರ ಮೀಸಲಾಗಿದೆ.
ಭಾಗವಹಿಸುವವರು ಕಡ್ಡಾಯವಾಗಿ Chess.com ಅಥವಾ Lichess.org ನಲ್ಲಿ ರಿಜಿಸ್ಟರ್ ಆಗಿರಬೇಕು. ಸ್ಪರ್ಧಿಗಳು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ‘ಯಿಪ್ಪೀ’ ನ್ಯೂಡಲ್ಸ್ ತಯಾರಿಸಿ, ಅದರ ಫೋಟೋ ಅಥವಾ ವಿಡಿಯೋವನ್ನು ಕ್ಲಿಕ್ಕಿಸಬೇಕು.
ಜೊತೆಗೆ, ತಮ್ಮ ಚೆಸ್ ಆಟದ ಅತ್ಯಂತ ಸ್ಮರಣೀಯ, ರೋಮಾಂಚಕ ಅಥವಾ ಅನಿರೀಕ್ಷಿತ ಕ್ಷಣದ ಕಥೆಯನ್ನು ಬರೆದು ಅಧಿಕೃತ ಸ್ಪರ್ಧಾ ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಈ ಸ್ಪರ್ಧೆಯು ಈಗಾಗಲೇ ಆಗಸ್ಟ್ 26ರಂದು ಆರಂಭವಾಗಿದ್ದು, ಸೆಪ್ಟೆಂಬರ್ 2, 2026ರ ಮಧ್ಯಾಹ್ನ 12 ಗಂಟೆಗೆ ಮುಕ್ತಾಯಗೊಳ್ಳಲಿದೆ. ಸ್ಪರ್ಧೆಯಲ್ಲಿ ಗೆದ್ದ 25 ವಿಜೇತರ ಹೆಸರನ್ನು ಆಯೋಜಕರು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.
ವಿಜೇತರಿಗೆ ಸಿಗುವ ಬಂಪರ್ ಬಹುಮಾನವೇನು?
ಆಯ್ಕೆಯಾದ 25 ವಿಜೇತರಿಗೆ ಕೇವಲ ಚೆಸ್ ಆಡುವ ಅವಕಾಶ ಮಾತ್ರವಲ್ಲ, ತಮಗೆ ಇಷ್ಟವಾದ ಶೈಲಿಯಲ್ಲಿ ಯಿಪ್ಪೀ ನ್ಯೂಡಲ್ಸ್ ತಯಾರಿಸಿ, ಅದನ್ನು ತಮ್ಮ ನೆಚ್ಚಿನ ಚೆಸ್ ದಿಗ್ಗಜರ ಜೊತೆ ಕುಳಿತು ಸವಿಯುವ ಭಾಗ್ಯವೂ ಸಿಗಲಿದೆ. ಇದೇ ವೇಳೆ ಚೆಸ್ ಚಾಂಪಿಯನ್‌ಗಳ ಜೊತೆ ತಮ್ಮ ಕಥೆಗಳನ್ನು ಹಂಚಿಕೊಂಡು ಸಂಭ್ರಮಿಸಬಹುದು.
ಈ ಸ್ಪರ್ಧೆಯ ಬಗ್ಗೆ ವಿವರ ಹಂಚಿಕೊಂಡಿರುವ ಐಟಿಸಿ ಲಿಮಿಟೆಡ್‌ನ ಸ್ನ್ಯಾಕ್ಸ್ ಮತ್ತು ನ್ಯೂಡಲ್ಸ್ ವಿಭಾಗದ ಮಾರ್ಕೆಟಿಂಗ್ ಹೆಡ್ ಅತುಲ್ ಪೂಜಾರ್, “ಯಿಪ್ಪೀ ಬ್ರ್ಯಾಂಡ್ ಯಾವಾಗಲೂ ಕ್ರೀಡೆ ಮತ್ತು ಯುವ ಪ್ರತಿಭೆಗಳನ್ನು ಬೆಂಬಲಿಸುತ್ತಾ ಬಂದಿದೆ. ‘ಆಲ್ಫೈನ್ ಎಪಿಎಲ್ ಪೈಪರ್ಸ್’ ಜೊತೆಗಿನ ಈ ಒಪ್ಪಂದದ ಮೂಲಕ, ಭವಿಷ್ಯದ ಚೆಸ್ ಆಟಗಾರರಿಗೆ ಜಾಗತಿಕ ಚಾಂಪಿಯನ್‌ಗಳ ಜೊತೆ ಬೆರೆಯುವ ವಿಶಿಷ್ಟ ವೇದಿಕೆಯನ್ನು ನಾವು ಸೃಷ್ಟಿಸುತ್ತಿದ್ದೇವೆ,” ಎಂದಿದ್ದಾರೆ.
ಮುಂಬರುವ ‘ಟೆಕ್ ಮಹೀಂದ್ರಾ ಗ್ಲೋಬಲ್ ಚೆಸ್ ಲೀಗ್’ನಲ್ಲಿ ಯಿಪ್ಪೀ, ಆಲ್ಫೈನ್ ಎಪಿಎಲ್ ಪೈಪರ್ಸ್ ತಂಡದ ಪ್ರಧಾನ ಪಾಲುದಾರನಾಗಿದೆ. ಚೆಸ್ ಬೋರ್ಡ್‌ನದಾಚೆಗಿನ ಉತ್ಸಾಹ, ಕಥೆಗಳು ಮತ್ತು ಅನುಭವಗಳನ್ನು ಆಚರಿಸುವ ಉದ್ದೇಶದಿಂದ ಈ #BeyondTheMove ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.





