ದಿ ವೆಯ್ಟ್ ಈಸ್ ಓವರ್.. ಜೈಲರ್-2 ಗಾನ ಬಜಾನ ಶುರುವಾಗಿದ್ದು, ಫಸ್ಟ್ ಸಾಂಗ್ ಹುಕ್ ಸ್ಟೆಪ್ಸ್‌ನಿಂದ ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ. ಆದ್ರೆ ಈ ಬಾರಿ ನೆಲ್ಸನ್ ಹಾಗೂ ಅನಿರುದ್ದ್ ಫಾರ್ಮುಲಾ ಅದ್ಯಾಕೋ ಅಷ್ಟರ ಮಟ್ಟಿಗೆ ವರ್ಕೌಟ್ ಆದಂತಿಲ್ಲ. ಯಾಕಂದ್ರೆ ಜೈಲರ್ ಚಿತ್ರದ ತಮನ್ನಾ ಸಾಂಗ್‌ನಂತೆ ಬಿಗ್ ಓಪನಿಂಗ್ ಪಡೆದಿಲ್ಲ ಜೈಲರ್-2 ಗ್ಲಾಮರ್ ಸಾಂಗ್. ಈ ಕುರಿತ ಒಂದು ಕಲರ್‌ಫುಲ್ ಸ್ಟೋರಿ ಇಲ್ಲಿದೆ ನೋಡಿ…
- ಜೈಲರ್-2 ಫಸ್ಟ್ ಸಾಂಗ್ ಔಟ್.. ಗ್ಲಾಮರ್‌ದೇ ಕೊರತೆ
- 3 ವರ್ಷದ ಹಿಂದೆ ಧೂಳೆಬ್ಬಿಸಿದ್ರು ಮಿಲ್ಕಿ ಬ್ಯೂಟಿ ತಮನ್ನಾ
- ವರ್ಕೌಟ್ ಆಗದ ನೆಲ್ಸನ್-ಅನಿರುದ್ದ್ ಆ ಫಾರ್ಮುಲಾ..!
- ತಲೈವಾ ನೋ ಸ್ಟೆಪ್ಸ್.. ಸೊಂಟ ಬಳುಕಿಸಿದ ಶಾಮ್ನಾ ಕಾಸಿಂ
ಯೆಸ್.. ಇದು ಇದೇ ಅಕ್ಟೋಬರ್-15ಕ್ಕೆ ಬಿಡುಗಡೆಗೆ ಸಜ್ಜಾಗ್ತಿರೋ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್-2 ಚಿತ್ರದ ಫಸ್ಟ್ ಸಾಂಗ್ ಝಲಕ್. ಅಲಾ ಬೋಲೆಲೋ ಅನ್ನೋ ಈ ಹಾಡು ಔಟ್ & ಔಟ್ ಡ್ಯಾನ್ಸಿಂಗ್ ನಂಬರ್ ಆಗಿದ್ದು, ಮಲಯಾಳಂನ ನಟಿ ಕಮ್ ಡ್ಯಾನ್ಸರ್ ಶಾಮ್ನಾ ಕಾಸಿಂ ಸೊಂಟ ಬಳುಕಿಸಿದ್ದಾರೆ. ಓಣಂ ಹಾಗೂ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಇತ್ತೀಚೆಗೆ ರಿಲೀಸ್ ಆಗಿರೋ ಜೈಲರ್-2 ಸಾಂಗ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆದ್ರೆ ಮೂರು ವರ್ಷಗಳ ಹಿಂದೆ ಮಿಲ್ಕಿ ಬ್ಯೂಟಿ ತಮನ್ನಾ ಸೊಂಟ ಬಳುಕಿಸಿದ್ದ ಜೈಲರ್ ಚಿತ್ರದ ಐಟಂ ನಂಬರ್ ಬಹುದೊಡ್ಡ ಓಪನಿಂಗ್ ಪಡೆದಿತ್ತು. ಯೂಟ್ಯೂಬ್‌ನಲ್ಲಿ ಬರೋಬ್ಬರಿ 422 ಮಿಲಿಯನ್ ವೀವ್ಸ್‌ನಿಂದ ದಾಖಲೆ ಕೂಡ ಬರೆದಿತ್ತು ಆ ಕಾವಾಲ ಸಾಂಗ್. ಅಲ್ಲಿ ತಮನ್ನಾ ಅಂದ ಚೆಂದದ ಜೊತೆ ಹಸಿಬಿಸಿ ದೃಶ್ಯಗಳು ಕೂಡ ನೋಡುಗರನ್ನ ಅಟ್ರ್ಯಾಕ್ಟ್ ಮಾಡಿತ್ತು.
ಇದೀಗ ರಿಲೀಸ್ ಆಗಿರೋ ಜೈಲರ್-2 ಸಾಂಗ್‌ನಲ್ಲಿ ಡ್ಯಾನ್ಸ್ ಇದೆ, ಬೀಟ್ಸ್ ಇದೆ. ಆದ್ರೆ ಗ್ಲಾಮರ್ ಕೊರತೆ ಎದ್ದು ಕಾಣ್ತಿದೆ. ಹಾಗಾಗಿಯೇ ಇದು ರಿಲೀಸ್ ಆದ ವಾರಕ್ಕೆ ಕೋಟಿ ವೀವ್ಸ್ ಕಂಡಿದೆ. ಟಿಪಿಕಲ್ ಕ್ಲಾಸಿಕಲ್ ಡ್ಯಾನ್ಸ್‌ನಂತಿರೋ ಈ ಹಾಡಿನ ವಿಶ್ಯುವಲ್ಸ್ ಯೂತ್‌ಗೆ ಅಷ್ಟಾಗಿ ಕನೆಕ್ಟ್ ಆಗಿಲ್ಲ. ಮಿಗಿಲಾಗಿ ರಜನಿಕಾಂತ್ ಕೂಡ ಸ್ಟೆಪ್ ಹಾಕಿ ಗಮನ ಸೆಳೆದಿಲ್ಲ. ಅಲ್ಲಲ್ಲಿ ಗಂಭೀರವಾಗಿ ಕಾಣಿಸಿಕೊಂಡಿದ್ದಾರಷ್ಟೇ ತಲೈವಾ. ಒಟ್ಟಾರೆ ಇದ್ರಿಂದ ಡೈರೆಕ್ಟರ್ ನೆಲ್ಸನ್ ಹಾಗೂ ಕಂಪೋಸರ್ ಅನಿರುದ್ದ್ ರವಿಚಂದರ್ ಫಾರ್ಮುಲಾ ಈ ಸಲ ನಿರೀಕ್ಷಿತ ಮಟ್ಟಕ್ಕೆ ವರ್ಕ್ ಆಗಿಲ್ಲ ಅನ್ನೋದು ಸ್ಪಷ್ಟವಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





