ಇರಾನ್-ಇಸ್ರೇಲ್ ವಾರ್‌ನಿಂದ ಜಸ್ಟ್ ಮಿಸ್ ಆಗಿದ್ದಾರೆ ನಮ್ಮ ಕೆಜಿಎಫ್ ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್. ಅಷ್ಟೇ ಅಲ್ಲ, ಅವರ ಜೊತೆ ಜೂನಿಯರ್ ಎನ್‌ಟಿಆರ್ ಹಾಗೂ ಕಂಪ್ಲೀಟ್ ಡ್ರ್ಯಾಗನ್ ಟೀಂ ಕೂಡ ಸೇಫ್ ಆಗಿ ಇಂಡಿಯಾಗೆ ವಾಪಸ್ ಆಗಿದೆ. ಮರುಭೂಮಿಯಲ್ಲಿ ಭರದಿಂದ ಸಾಗ್ತಿದ್ದ ಶೂಟಿಂಗ್‌ಗೆ ಬ್ರೇಕ್ ಬಿದ್ದಿದ್ಯಾಕೆ..? ಅಂಥದ್ದೇನಾಯ್ತು..? ಶೂಟಿಂಗ್ ಇನ್ನೂ ಎಷ್ಟು ದಿನ ಬಾಕಿ ಇತ್ತು ಅನ್ನೋ ಕ್ಯೂರಿಯಾಸಿಟಿಗೆ ಉತ್ತರ.
ನಮ್ಮ ಮಾನ್‌ಸ್ಟರ್ ಪ್ರಶಾಂತ್ ನೀಲ್ ಸದ್ಯ ಜೂನಿಯರ್ ಎನ್‌ಟಿಆರ್ ಜೊತೆ ಸಿನಿಮಾ ಮಾಡ್ತಿರೋದು ಎಲ್ಲರಿಗೂ ಗೊತ್ತೇಯಿದೆ. ಅದಕ್ಕೆ ಈಗಾಗ್ಲೇ ಡ್ರ್ಯಾಗನ್ ಅನ್ನೋ ಮಾಸ್ ಟೈಟಲ್ ಕೂಡ ಫಿಕ್ಸ್ ಆಗಿದೆ. ನಮ್ಮ ಕರ್ನಾಟಕ, ಹೈದ್ರಾಬಾದ್‌ನಲ್ಲಿ ಶೂಟಿಂಗ್ ಮುಗಿಸಿ, ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಅರಬ್ ಕಂಟ್ರಿ ಜೋರ್ಡಾನ್‌ಗೆ ಹಾರಿತ್ತು ಚಿತ್ರತಂಡ.
ಜೋರ್ಡಾನ್‌ನಲ್ಲಿ NTR-ನೀಲ್ ಸೇಫ್.. ವಾರ್‌ನಿಂದ ಎಸ್ಕೇಪ್
ವಾರ್ ಎಫೆಕ್ಟ್ ಡ್ರ್ಯಾಗನ್ ಶೂಟ್ ರದ್ದು.. ಇಂಡಿಯಾಗೆ ವಾಪಸ್!
ಫೆಬ್ರವರಿ ಮೊದಲ ವಾರದಿಂದಲೇ ಜೋರ್ಡಾನ್‌ನ ಮರುಭೂಮಿಯಲ್ಲಿ ಬೀಡು ಬಿಟ್ಟಿತ್ತು ಎನ್‌ಟಿಆರ್-ನೀಲ್ ಡ್ರ್ಯಾಗನ್ ಟೀಂ. ಫೆಬ್ರವರಿ 9ರಿಂದ ಶುರುವಾದ ಶೂಟಿಂಗ್, ನಾನ್‌ಸ್ಟಾಪ್ ಆಗಿ ನಿರಂತರವಾಗಿ ನಡೆಯುತ್ತಲೇ ಇತ್ತು. ಬಾಡಿಯನ್ನ ಸಿಕ್ಕಾಪಟ್ಟೆ ಹುರಿಗಟ್ಟಿಸಿ, ಫಿಟ್ ಅಂಡ್ ಫೈನ್ ಆಗಿದ್ದ ಯಂಗ್ ಟೈಗರ್, ಮೈಂಡ್ ಬ್ಲೋಯಿಂಗ್ ಆ್ಯಕ್ಷನ್ ಸೀಕ್ವೆನ್ಸ್‌ನ ಚಿತ್ರಿಸುತ್ತಿದ್ದರು.
ಸುಮಾರು ಒಂದು, ಒಂದೂವರೆ ತಿಂಗಳ ನಾನ್‌ಸ್ಟಾಪ್ ಶೂಟಿಂಗ್‌ಗೆ ಯೋಜನೆ ರೂಪಿಸಿದ್ದ ಪ್ರಶಾಂತ್ ನೀಲ್, ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಹೈ ವೋಲ್ಟೇಜ್ ಸಾಹಸ ದೃಶ್ಯಗಳನ್ನ ಜೋರ್ಡಾನ್ ಡೆಸರ್ಟ್‌ನಲ್ಲಿ ಶೂಟಿಂಗ್ ಮಾಡ್ತಿದ್ರು. ಯಾವಾಗ ಇರಾನ್-ಇಸ್ರೇಲ್ ನಡುವೆ ಯುದ್ಧ ಶುರುವಾಯ್ತೋ, ಅದ್ರ ಎಫೆಕ್ಟ್ ಡ್ರ್ಯಾಗನ್ ಚಿತ್ರತಂಡಕ್ಕೂ ತಾಕಿದೆ. ಹಾಗಾಗಿ ಶೂಟಿಂಗ್ ಸ್ಥಗಿತಗೊಳಿಸಿ, ಅಲ್ಲಿಂದ ಕೂಡಲೇ ಇಂಡಿಯಾದತ್ತ ಕಾಲ್ಕಿತ್ತಿದೆ ಎನ್‌ಟಿಆರ್-ನೀಲ್ ಟೀಂ.
ಜೋರ್ಡಾನ್ ಡೆಸರ್ಟ್..ಫೆ-9ರಿಂದ ಶೂಟಿಂಗ್ ಕಿಕ್‌ಸ್ಟಾರ್ಟ್
ಬ್ಯಾಕ್ ಟು ಬ್ಯಾಕ್ 3 ಆ್ಯಕ್ಷನ್ ಸೀಕ್ವೆನ್ಸ್ ಚಿತ್ರಿಸ್ತಿದ್ದ NTR-ನೀಲ್..!!
ಅಂದಹಾಗೆ ಜೋರ್ಡಾನ್ ಕೂಡ ಒನ್ ಆಫ್ ದಿ ಅರಬ್ ಕಂಟ್ರಿ ಆಗಿರೋದ್ರಿಂದ ಸಹಜವಾಗಿಯೇ ಯುದ್ಧದ ಪರಿಣಾಮ ಜೋರ್ಡಾನ್ ಕೂಡ ಎದುರಿಸುತ್ತಿದೆ. ಇಸ್ರೇಲ್ ಮಂದಿ ಜೋರ್ಡಾನ್ ಸೇರಿದಂತೆ ಇರಾನ್ ಬ್ಯಾಕ್ಡ್ ಟೆರರಿಸ್ಟ್ ಗ್ರೂಪ್‌ಗಳ ಮೇಲೆ ಅಟ್ಯಾಕ್ ಮಾಡ್ತಿದ್ದಾರೆ. ಹೀಗಾಗಿ ಜೋರ್ಡಾನ್‌ನಲ್ಲಿ ಮಿಸೈಲ್‌ಗಳ ಸುರಿಮಳೆ ಆಗ್ತಿದೆ. ಟೆರರಿಸ್ಟ್‌ಗಳನ್ನ ಸಂಪೂರ್ಣವಾಗಿ ನಿರ್ನಾಮ ಮಾಡಲು ಹಾಗೂ ಯಾರೆಲ್ಲಾ ಇರಾನ್‌ಗೆ ಸಪೋರ್ಟ್ ಮಾಡ್ತಿದ್ರೋ, ಅವರ ಮೇಲೆ ಎಲ್ಲಾ ಇಸ್ರೇಲ್ ದಾಳಿ ಮಾಡ್ತಿದೆ.
ಇನ್ನೂ ಜೋರ್ಡಾನ್‌ನ ಮರುಭೂಮಿಯಲ್ಲಿ ಡ್ರ್ಯಾಗನ್ ಚಿತ್ರೀಕರಣದ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ಹಂಚಿಕೊಂಡಿತ್ತು. ಇದೀಗ ಸೇಫ್ ಆಗಿ ಇಡೀ ಸಿನಿಮಾ ತಂಡ ಹೈದ್ರಾಬಾದ್ ಸೇರಿಕೊಂಡಿದೆಯಂತೆ. ಈ ಮೂಲಕ ಕರ್ನಾಟಕದ ಡೈರೆಕ್ಟರ್ ಪ್ರಶಾಂತ್ ನೀಲ್, ಆಂಧ್ರ ಸೂಪರ್ ಸ್ಟಾರ್ ಎನ್‌ಟಿಆರ್ ಹಾಗೂ ಅವ್ರ ಫ್ಯಾನ್ಸ್ ನಿರಾಳಗೊಂಡಿದ್ದಾರೆ. ಆದ್ರೆ ಶೂಟಿಂಗ್ ಇನ್ನೂ ಸ್ವಲ್ಪ ದಿನ ಬಾಕಿ ಉಳಿದಂತೆ ವಾಪಸ್ ಆಗಿರೋದು ಟೀಂಗೆ ಕೊಂಚ ಹಿನ್ನಡೆಯಾಗಿದೆ. ಸೋ.. ಯುದ್ಧ ಮುಗಿದ ನಂತ್ರ ಅಲ್ಲೇ ಹೋಗಿ ಚಿತ್ರೀಕರಣ ನಡೆಸ್ತಾರಾ ಅಥ್ವಾ ಇಲ್ಲೇ ಸೆಟ್ ಹಾಕಿ ಚಿತ್ರಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ. ಇಂಟರೆಸ್ಟಿಂಗ್ ಅಂದ್ರೆ ಈ ಡ್ರ್ಯಾಗನ್ ಚಿತ್ರಕ್ಕೆ ನಾಯಕಿ ನಮ್ಮ ಕಾಂತಾರ ಕ್ವೀನ್ ರುಕ್ಮಿಣಿ ವಸಂತ್.





