ರಿಲೀಸ್ಗೂ ಮೊದಲೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿರೋ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ರಾಕಾ ಸಿನಿಮಾ.. ಅದ್ಯಾಕೋ ರಿಲೀಸ್ ದಿನದಿಂದ ದಿನಕ್ಕೆ ತಡವಾಗ್ತಿದೆ. ಫ್ಯಾನ್ಸ್ ಕೂಡ ಆಘಾತಕ್ಕೆ ಒಳಗಾಗಿದ್ದು.. ಈ ಬಗ್ಗೆ ಖುದ್ದು ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಅವ್ರೇ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಪುಷ್ಪ ದಿಢೀರ್ ಎಂಟ್ರಿ ಕೊಟ್ಟಿದ್ಯಾಕೆ..? ಎಲ್ಲಿ..? ಯಾರಿಗಾಗಿ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.
- ರಾಕಾ ಸಿಕ್ಕಾಪಟ್ಟೆ ಡಿಲೇ.. ಅಲ್ಲು ಅರ್ಜುನ್ ದಿಢೀರ್ ಎಂಟ್ರಿ..!
- ಸ್ವಲ್ಪ ತಾಳ್ಮೆ ಇರ್ಲಿ.. ಬೆಸ್ಟ್ ಸಿನ್ಮಾ ಕೊಡ್ತೀವಿ: ಅಲ್ಲು ಪ್ರಾಮಿಸ್
- ದುಲ್ಕರ್ ಆಕಾಶಂಲೋ ಒಕ ತಾರಗಾಗಿ ಬಂದ ಪುಷ್ಪರಾಜ್..!
- ಗಿನ್ನೆಸ್ ದಾಖಲೆ ಬರೆದ ರಾಕಾ ತೆರೆಗೆ ಬರೋದು ಯಾವಾಗ?
ಪುಷ್ಪ-2 ಬಂದು ಎರಡು ವರ್ಷಗಳಾಯ್ತು. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ರಾಕಾ ಸಿನಿಮಾ ಬರೋದು ಇನ್ನೂ ಒಂದು ವರ್ಷ ಡೌಟ್ ಇದೆ. ಹೌದು.. 2027ರ ಡಿಸೆಂಬರ್ಗೆ ರಾಕಾ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಆದ್ರೆ ಅಲ್ಲು ಅರ್ಜುನ್ ಫ್ಯಾನ್ಸ್ ಮಾತ್ರ ಅರೇ.. ಇನ್ನೂ ಎಷ್ಟು ದಿನ ಕಾಯ್ಬೇಕು ಅಂತ ಬೇಸರದಲ್ಲಿದ್ದಾರೆ. ಅಟ್ಲೀ-ಅಲ್ಲು ಕಾಂಬೋನ ಸೈನ್ಸ್ ಫಿಕ್ಷನ್ ಚಿತ್ರ ಇದಾಗಿದ್ದು, ಸನ್ ಪಿಕ್ಚರ್ಸ್ ಬ್ಯಾನರ್ನಡಿ ಬಹಳ ಅದ್ಧೂರಿಯಾಗಿ ನಿರ್ಮಾಣ ಆಗ್ತಿದೆ.
ಮೂರು ಜನರೇಷನ್ನ ನಾಲ್ಕು ಪಾತ್ರಗಳಿಗೆ ಅಲ್ಲು ಅರ್ಜುನ್ ಜೀವ ತುಂಬುತ್ತಿದ್ದು, ತಂತ್ರಜ್ಞಾನವನ್ನ ಬಳಸಿ ಹಾಲಿವುಡ್ ರೇಂಜ್ಗೆ ಈ ಸಿನಿಮಾನ ಕಟ್ಟುತ್ತಿರೋದು ವಿಶೇಷ. ಇತ್ತೀಚೆಗೆ ಇದನ್ನ ಚಿತ್ರಿಸುತ್ತಿರೋ ಪರಿ ವಿಶಿಷ್ಠ ಹಾಗೂ ವಿನೂತನ ಅನ್ನೋ ಕಾರಣಕ್ಕೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪತ್ರ ಕೂಡ ನೀಡಿ ಗೌರವಿಸಲಾಯಿತು. ಅದನ್ನ ಹೀರೋ & ಡೈರೆಕ್ಟರ್ ಇವೆಂಟ್ ಮೂಲಕ ತಮ್ಮ ಮುಡಿಗೇರಿಸಿಕೊಂಡರು.
ಆದ್ರೆ ಅಲ್ಲು ಅರ್ಜುನ್ ಆಫ್ಟರ್ ಎ ಲಾಂಗ್ ಟೈಮ್ ಸಿನಿಮಾವೊಂದರ ಪ್ರೀ ರಿಲೀಸ್ ಇವೆಂಟ್ಗಾಗಿ ವೇದಿಕೆ ಹಂಚಿಕೊಂಡಿದ್ದಾರೆ. ಆಗ ಅಭಿಮಾನಿಗಳಿಗಾಗಿ ಅವರೇ ರಾಕಾ ಅಪ್ಡೇಟ್ ನೀಡಿದ್ದಾರೆ. ಸ್ವಲ್ಪ ತಾಳ್ಮೆ ಇರಲಿ.. ಯಾಕಂದ್ರೆ ನಾವು ನಿಮಗೆ ಬೆಸ್ಟ್ ಸಿನಿಮಾ ಕೊಡೋಕೆ ಪ್ರಯತ್ನ ಪಡ್ತಿದ್ದೀವಿ ಅಂತ ಪ್ರಾಮಿಸ್ ಮಾಡೋ ಮೂಲಕ ಅವರಲ್ಲಿದ್ದ ಆತಂಕ ದೂರ ಮಾಡಿದ್ದಾರೆ. ಖುದ್ದು ನೆಚ್ಚಿನ ನಟನೇ ಮಾತಾಡಿ ಸಮಾಧಾನಪಡಿಸಿದ ಹಿನ್ನೆಲೆ ಅಸಂಖ್ಯಾತ ಅಭಿಮಾನಿಗಳು ಕೂಡ ರಿಲ್ಯಾಕ್ಸ್ ಆಗುವಂತಾಗಿದೆ.
ಅಂದಹಾಗೆ ಪುಷ್ಪ ಸ್ಟಾರ್.. ಇತ್ತೀಚೆಗೆ ತಮ್ಮ ತಂದೆ ಅಲ್ಲು ಅರವಿಂದ್ ನಿರ್ಮಾಣದ ಹೋಮ್ ಬ್ಯಾನರ್ ಗೀತಾ ಆರ್ಟ್ಸ್ ಸಿನಿಮಾ ಆಕಾಂಶಲೋ ಒಕ ತಾರ ಪ್ರೀ-ರಿಲೀಸ್ ಇವೆಂಟ್ಗೆ ತೆರಳಿದ್ದರು. ಸಿನಿಮಾದ ಶೂಟಿಂಗ್, ಡಬ್ಬಿಂಗ್, ಪ್ರೊಡಕ್ಷನ್ ಅಂತ ಸಿಕ್ಕಾಪಟ್ಟೆ ಬ್ಯುಸಿ ಇರೋ ಅಲ್ಲು.. ದುಲ್ಕರ್ ಸಲ್ಮಾನ್ ಹಾಗೂ ತಂದೆಗಾಗಿ ಇವೆಂಟ್ ಅಟೆಂಡ್ ಮಾಡಿದ್ರು. ಅಲ್ಲದೆ.. ಹೆಣ್ಣು ಮಕ್ಕಳು ಕನಸು ಕಾಣುವ.. ಅದನ್ನ ನನಸಾಗಿಸಿಕೊಳ್ಳಲು ಅವರು ಏನು ಬೇಕಾದ್ರೂ ಮಾಡ್ತಾರೆ ಅನ್ನುವುದಕ್ಕೆ ಈ ಚಿತ್ರ ಸಾಕ್ಷಿ ಆಗಲಿದ್ದು, ಟ್ರೈಲರ್ ಕೂಡ ಇಂಪ್ರೆಸ್ಸೀವ್ ಆಗಿದೆ.
ಮಮ್ಮುಟ್ಟಿ ಮಗನಾದ್ರೂ ಸಹ ಸ್ಟಾರ್ ಕಿಡ್ ಅನ್ನೋ ಕಿಂಚಿತ್ತೂ ಅಹಂ ಇಲ್ಲದ ವ್ಯಕ್ತಿ. ಒಳ್ಳೆಯ ಸಿನಿಮಾಗಳನ್ನ ಮಾಡ್ತಾರೆ ದುಲ್ಕರ್ ಅಂತ ಹಾಡಿ ಹೊಗಳಿದ ಅಲ್ಲು ಅರ್ಜುನ್, ತಮ್ಮ ತಂದೆ ಈ ಸಿನಿಮಾದ ಬಗ್ಗೆ ಹೊಂದಿರೋ ಪಾಸಿಟಿವ್ ವೈಬ್ ಬಗ್ಗೆಯೂ ಮಾತನಾಡಿದ್ರು.
ಒಟ್ಟಾರೆ ಆಕಾಂಶಲೋ ಒಕ ತಾರ ಸಿನಿಮಾದ ಸಲುವಾಗಿ ಪುಷ್ಪರಾಜ್ ತಮ್ಮ ಫ್ಯಾನ್ಸ್ಗೆ ದರ್ಶನ ನೀಡುವಂತಾಯ್ತು. ಇಂಡಿಯನ್ ಸಿನಿಮಾನ ಯಶ್ ರೀತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮನಸ್ಸು ಮಾಡಿರೋ ಮೆಗಾಸ್ಟಾರ್ ಕುಟುಂಬದ ಕುಡಿಯ ಕನಸು ರಾಕಾ ಮೂಲಕ ನನಸಾಗ್ತಿರೋದು ಮತ್ತೊಂದು ಖುಷಿಯ ವಿಚಾರ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





