• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, January 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

“ಪೈರಸಿ ಮಾಡೋರನ್ನ ಕರುಣೆ ಇಲ್ಲದೆ ಒಳಗೆ ಹಾಕಿಸ್ತೀನಿ”: ಕಿಚ್ಚ ಸುದೀಪ್ ವಾರ್ನ್‌

ವಿಜಯಲಕ್ಷ್ಮಿ ಅವರು ನನಗೆ ಹೇಳಿದ್ರೆ ಖಂಡಿತ ಉತ್ತರ ಕೊಡ್ತೀನಿ: ಹುಬ್ಬಳ್ಳಿ ವಿವಾದಕ್ಕೆ ಸುದೀಪ್ ಸ್ಪಷ್ಟನೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 22, 2025 - 10:25 pm
in Flash News, ಸಿನಿಮಾ
0 0
0
Untitled design 2025 12 22T222159.014

ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಅವರ ಹೊಸ ಚಿತ್ರ ‘ಮಾರ್ಕ್’ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಸುದೀಪ್ ಅವರು ನೀಡಿದ ಹೇಳಿಕೆಗಳು ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಈ ವಿವಾದಕ್ಕೆ ಇದೀಗ ಬೆಂಗಳೂರಿನಲ್ಲಿ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಪೈರಸಿ ವಿಚಾರ, ಫ್ಯಾನ್ಸ್ ವಾರ್, ಹಾಗೂ ಕೆಲವು ವ್ಯಕ್ತಿಗಳಿಂದ ಬಂದ ಪ್ರತಿಕ್ರಿಯೆಗಳ ಕುರಿತು ಕಿಚ್ಚ ತಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.

ಹುಬ್ಬಳಿಯಲ್ಲಿ ಹೇಳಿದ ಹೇಳಿಕೆ ಕುರಿತು ಮಾತನಾಡಿದ ಕಿಚ್ಚ ಸುದೀಪ್‌, “ನಾವು ತುಂಬಾ ಸ್ಟ್ರಾಂಗ್ ಆಗಿ ಬರ್ತಿದ್ದೀವಿ. ಜಿದ್ದಾಜಿದ್ದಿಗೆ ಏನೂ ಮಾಡ್ತಿಲ್ಲ. ನನ್ನ ಸಿನಿಮಾನ ನಾನು ಕಾಪಾಡಿಕೊಳ್ಳಬೇಕು ಅನ್ನೋ ಒಂದೇ ಉದ್ದೇಶ ಇದೆ” ಎಂದು ಸುದೀಪ್ ಹೇಳಿದ್ದಾರೆ. ಪೈರಸಿ ವಿಚಾರದಲ್ಲಿ ಯಾವುದೇ ರೀತಿಯ ಸಾಫ್ಟ್ ನಿಲುವಿಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದು, “ಪೈರಸಿ ಮಾಡೋರನ್ನ ಕರುಣೆ ಇಲ್ಲದೆ ಒಳಗೆ ಹಾಕಿಸ್ತೀನಿ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

RelatedPosts

ಮತ್ತಷ್ಟು ದುಬಾರಿಯಾಗ್ತಿದೆ ನಮ್ಮ ಮೆಟ್ರೋ ಪ್ರಯಾಣ..!

ಆಸ್ಪತ್ರೆ ಸೇರಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಾಂಬೋಲಿ, ಹೆಲ್ತ್ ಅಪ್‌ಡೇಟ್ ನೀಡಿದ ಬಾಯ್‌ಫ್ರೆಂಡ್

SBI ಎಟಿಎಂ ಬಳಕೆದಾರರೇ ಎಚ್ಚರ..! ATM ವಿತ್‌ ಡ್ರಾ ಮತ್ತು ಬ್ಯಾಲೆನ್ಸ್‌ ಚೆಕ್‌ ಶುಲ್ಕ ಹೆಚ್ಚಳ

ಡೆವಿಲ್ 25 ಡೇಸ್ ಕಲೆಕ್ಷನ್.. 2 ವಾರದಲ್ಲಿ ಮಾರ್ಕ್‌ ಧ್ವಂಸ

ADVERTISEMENT
ADVERTISEMENT

ತಾವು ಯಾರನ್ನೂ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿಲ್ಲ, “ಯಾರಿಗೋ ವಾರ್ನ್ ಮಾಡಬೇಕಾದರೆ ಚೆಸ್ ಆಡೋವಾಗ ಕದ್ದು ಮುಚ್ಚಿ ಚೆಕ್ ಅನ್ನಲ್ಲ, ಹೇಳಿಯೇ ಹೊಡಿಬೇಕು. ಇಲ್ಲೂ ನಾನು ಚೆಕ್ ಅಂತ ಹೇಳಿದ್ದೀನಿ” ಎಂದು ಉದಾಹರಣೆ ಕೊಟ್ಟು ತಮ್ಮ ಮಾತಿನ ಅರ್ಥವನ್ನು ವಿವರಿಸಿದರು. ಪೈರಸಿ ಅನ್ನೋ ಪದ ಬಳಸದೇ ಇದ್ದರೂ, ಸಂದೇಶ ಯಾರಿಗೆ ಹೋಗಬೇಕೋ ಅವರಿಗೆ ಸ್ಪಷ್ಟವಾಗಿ ತಲುಪುತ್ತದೆ ಎಂದು ಅವರು ಮಾತನಾಡಿದರು.

“ಈ ರೂಂನಲ್ಲಿ ಕೆಟ್ಟ ವಾಸನೆ ಬಂದ್ರೆ, ಯಾರು ಹೂಸು ಬಿಟ್ಟಿದ್ದಾರೆ ಅಂತ ಗೊತ್ತಾಗುತ್ತೆ. ಹಾಗೆ ಇದು” ಎನ್ನುವ ಮೂಲಕ ತಮ್ಮ ಹೇಳಿಕೆಯನ್ನು ಸುದೀಪ್ ಅವರು ಸಮರ್ಥಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಷಯ ಏಕೆ ಇವತ್ತು ಬೆಳಗ್ಗೆ ವೈರಲ್ ಆಯ್ತು ಎಂಬುದಕ್ಕೂ ಅವರು ಪ್ರಶ್ನೆ ಮಾಡಿದ್ದಾರೆ.

ವಿಜಯಲಕ್ಷ್ಮಿ ಅವರು ತಮ್ಮ ಬಳಿ ನೇರವಾಗಿ ಮಾತನಾಡಿದ್ದರೆ ಖಂಡಿತ ಉತ್ತರ ಕೊಡುತ್ತಿದ್ದೆ ಎಂದು ಸುದೀಪ್ ಹೇಳಿದ್ದಾರೆ. “ಅವರಿಗೆ ಏನು ನೋವು ಇದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಫ್ಯಾನ್ಸ್ ವಾರ್ ಶುರು ಆದ್ರೆ, ಅದೇ ದಿನ ನನ್ನನ್ನೇ ಪ್ರಶ್ನೆ ಮಾಡಬೇಕಿತ್ತು” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರತಿಕ್ರಿಯೆ ಮತ್ತೊಂದು ಕಡೆಯಿಂದ ಬಂದಿದ್ದರಿಂದ ವಿಷಯ ಇಷ್ಟು ದೊಡ್ಡದಾಗಿದೆ ಎಂದು ಕಿಚ್ಚ ಅಭಿಪ್ರಾಯಪಟ್ಟಿದ್ದಾರೆ.

ಶಿವರಾಜ್‌ಕುಮಾರ್ ಕುರಿತು ಮಾತನಾಡುತ್ತಾ, “ಶಿವಣ್ಣ ನಮ್ಮ ಆಸ್ತಿ. 45 ಸಿನಿಮಾ ವಿಚಾರದಲ್ಲಿ ನಾನು ಶಿವಣ್ಣನ ಪರವಾಗಿ ಮಾತಾಡಿದ್ದೀನಿ” ಎಂದಿದ್ದಾರೆ. ಅದೇ ವೇಳೆ, ಗಣೇಶ್, ಧ್ರುವ ಸರ್ಜಾ, ಯಶ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ಸ್ ಇದ್ದರೂ, ಯಾಕೆ ಯಾರೂ ಆ ವಿಚಾರಕ್ಕೆ ಪ್ರತಿಕ್ರಿಯಿಸಿಲ್ಲ ಎಂಬ ಪ್ರಶ್ನೆಯನ್ನೂ ಸುದೀಪ್ ಮುಂದಿಟ್ಟಿದ್ದಾರೆ.

ಕನ್ನಡ ಭಾಷೆ ಕುರಿತ ಕಮಲ್ ಹಾಸನ್ ವಿವಾದದ ವೇಳೆ ಮಾತನಾಡುವ ಅವಶ್ಯಕತೆ ಇಲ್ಲವಾದರೂ ತಾವು ಮುಂದೆ ಬಂದಿದ್ದನ್ನು ಸುದೀಪ್ ನೆನಪಿಸಿಕೊಂಡಿದ್ದಾರೆ. “ನಾನು ಯಾವತ್ತೂ ಇಂಡಸ್ಟ್ರಿಯ ಪರವಾಗಿ ನಿಂತಿದ್ದೇನೆ. ಪೈರಸಿ ಬಗ್ಗೆ ವಾರ್ನ್ ಮಾಡಿದ್ದು ತಪ್ಪಾ?” ಎಂದು ಪ್ರಶ್ನಿಸಿದ್ದಾರೆ.

“ಬಹಳಷ್ಟು ನಟರು ಇದ್ದಾರೆ. ಯಾಕೆ ನಾನೇ?” ಎನ್ನುವ ಪ್ರಶ್ನೆ ಮಾಡಿದರು. ವೇದಿಕೆ ಮೇಲೆ ಇಂಟರ್ವ್ಯೂ ಕೊಡುತ್ತಾರೆ ಅಂತಾರೆ, ಆದರೆ ಮಾತು ಯಾರಿಗೆ ತಲುಪಬೇಕೋ ಅವರಿಗೆ ಗೊತ್ತಿರುತ್ತೆ ಎಂದೂ ಅವರು ಹೇಳಿದರು.

ಹುಬ್ಬಳ್ಳಿಯಲ್ಲಿ ಶುರುವಾದ ವಿವಾದಕ್ಕೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡುವ ಮೂಲಕ, ತಾವು ಯಾವುದೇ ವೈಯಕ್ತಿಕ ದ್ವೇಷದಿಂದಲ್ಲ, ಸಿನಿಮಾರಂಗ ಮತ್ತು ತಮ್ಮ ಶ್ರಮವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದಲೇ ಮಾತನಾಡಿದ್ದೇನೆ ಎಂಬುದನ್ನು ಕಿಚ್ಚ ಸುದೀಪ್ ಸ್ಪಷ್ಟ ಪಡಿಸಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 01 17T180929.277

ಬಿಗ್ ಬಾಸ್ ಕನ್ನಡಕ್ಕೆ 37 ಕೋಟಿ ವೋಟ್ ಪಡೆದೋರು ಯಾರು? ಕಿಚ್ಚನಿಂದ ಅಚ್ಚರಿ ಸಂಗತಿ ರಿವೀಲ್

by ಶ್ರೀದೇವಿ ಬಿ. ವೈ
January 17, 2026 - 6:12 pm
0

BeFunky collage 2026 01 17T174955.529

ಅಫ್ಘಾನಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ ಹೀನಾಯ ಸೋಲು!

by ಶ್ರೀದೇವಿ ಬಿ. ವೈ
January 17, 2026 - 5:50 pm
0

BeFunky collage 2026 01 17T171705.985

ರಾಜ್ಯದಲ್ಲಿ ಮತ್ತೆ ವಿದ್ಯುತ್ ಬಿಲ್ ಏರಿಕೆ? ಬೆಸ್ಕಾಂ ಎಂಡಿ ಸ್ಪಷ್ಟನೆ..!

by ಶ್ರೀದೇವಿ ಬಿ. ವೈ
January 17, 2026 - 5:18 pm
0

BeFunky collage 2026 01 17T170344.989

ಮತ್ತಷ್ಟು ದುಬಾರಿಯಾಗ್ತಿದೆ ನಮ್ಮ ಮೆಟ್ರೋ ಪ್ರಯಾಣ..!

by ಶ್ರೀದೇವಿ ಬಿ. ವೈ
January 17, 2026 - 5:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 01 17T170344.989
    ಮತ್ತಷ್ಟು ದುಬಾರಿಯಾಗ್ತಿದೆ ನಮ್ಮ ಮೆಟ್ರೋ ಪ್ರಯಾಣ..!
    January 17, 2026 | 0
  • Untitled design 2026 01 17T144332.126
    SBI ಎಟಿಎಂ ಬಳಕೆದಾರರೇ ಎಚ್ಚರ..! ATM ವಿತ್‌ ಡ್ರಾ ಮತ್ತು ಬ್ಯಾಲೆನ್ಸ್‌ ಚೆಕ್‌ ಶುಲ್ಕ ಹೆಚ್ಚಳ
    January 17, 2026 | 0
  • Untitled design 2026 01 17T141850.265
    ಧರ್ಮದ ಕಾರಣಕ್ಕೆ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿಲ್ಲ: ಎ.ಆರ್‌ ರೆಹಮಾನ್ ಸ್ಪೋಟಕ ಹೇಳಿಕೆ
    January 17, 2026 | 0
  • Untitled design 2026 01 17T130946.375
    ಬಿಗ್‌ಬಾಸ್‌ ಗಿಲ್ಲಿ ನಟನ ಬಗ್ಗೆ ಮೋದಿ, ರಜನಿಕಾಂತ್ ಮಾತು..! ವೈರಲ್ ಪೋಸ್ಟ್‌ಗಳ ಅಸಲಿ ಸತ್ಯ ಇಲ್ಲಿದೆ
    January 17, 2026 | 0
  • Untitled design 2026 01 17T120059.249
    ಲಕ್ಕುಂಡಿಯಲ್ಲಿ ಭೂ ಉತ್ಖನನ ಕಾರ್ಯ ಆರಂಭ: ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ
    January 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version