ರಕ್ಷಿತ್ ಶೆಟ್ಟಿ, ಧನ್ವೀರ್ ಗೌಡ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್‌ಗಳು ಸಿಂಪಲ್ ಸ್ಟಾರ್ ಗರಡಿಯಿಂದ ಬೆಳಕಿಗೆ ಬಂದಿದ್ದಾರೆ. ಅವರ ಸಾಲಿಗೆ ಈಗ ಹೊಚ್ಚ ಹೊಸ ಸೇರ್ಪಡೆ ಶೀಲಂ. ಯೆಸ್.. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಮಾಧವನ್ ಮೆಥೆಡ್ ಆ್ಯಕ್ಟಿಂಗ್ ಆಧರಿಸಿ ನಟಿಸಿರೋ ಶೀಲಂ ಚೊಚ್ಚಲ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಅದ್ರ ಫಸ್ಟ್ ಲುಕ್ ಟೀಸರ್ ಹೇಗಿದೆ..? ವಿಶೇಷತೆಗಳೇನು ಅನ್ನೋದ್ರ ರಿಪೋರ್ಟ್ ಇಲ್ಲಿದೆ ನೋಡಿ.
- ಗಣಿ, ಮಾಧವನ್ ಮೆಥೆಡ್ ಆ್ಯಕ್ಟಿಂಗ್.. ಶೀಲಂ ಮಾಡಿದ್ದೇನು?
- ಮತ್ತೊಂದು ಫ್ರೆಶ್ ಪ್ರೇಮಕಥೆ.. ತಮ್ಮ ಫ್ರಮ್ ಅನದರ್ ಅಮ್ಮ
- ಸುನಿ ಗರಡಿಯಿಂದ ರಕ್ಷಿತ್, ಧನ್ವೀರ್, ದುಷ್ಯಂತ್ ಬಳಿಕ ಶೀಲಂ
- ಕನ್ನಡ ಜೊತೆ ಮಲಯಾಳಂ.. KVN & ದುಲ್ಕರ್ ಡಿಸ್ಟ್ರಿಬ್ಯೂಷನ್
ಮೋಡ ಕವಿದ ವಾತಾವರಣ.. ಸಿಂಪಲ್ ಸುನಿ ಗರಡಿಯಲ್ಲಿ ಸುಮಾರು ಒಂದು ದಶಕದ ಕಾಲ ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ನಲ್ಲಿ ಪಳಗಿರೋ ಪ್ರತಿಭೆ ಶೀಲಂ ನಟಿಸಿರೋ ಚೊಚ್ಚಲ ಸಿನಿಮಾ. ನೋಡೋಕೆ ಸ್ಫುರದ್ರೂಪಿ ನಟನಾಗಿರೋ ಶೀಲಂ.. ಪಾತ್ರಕ್ಕಾಗಿ ಸಾಕಷ್ಟು ಕಸರತ್ತು ಮಾಡಿಕೊಂಡೇ ಬಣ್ಣ ಹಚ್ಚಿದ್ದಾರೆ. ಸುಮಾರು ಶೇಡ್‌ಗಳಿರೋ ಈ ಸಿನಿಮಾದ ಪಾತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಂಡು, ನಂತ್ರ ಜಿಮ್‌ನಲ್ಲಿ ಬೆವರು ಹರಿಸಿ, ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡು ತಯಾರಾಗಿರೋದು ವಿಶೇಷ.
ಮತ್ತೊಂದು ವಿಭಿನ್ನ ಹಾಗೂ ವಿಶಿಷ್ಟ ಪ್ರೇಮಕಥೆಯೊಂದಿಗೆ ಸುನಿ ತಮ್ಮ ಹುಡ್ಗ ಶೀಲಂರನ್ನ ಲಾಂಚ್ ಮಾಡ್ತಿರೋದು ಇಂಟರೆಸ್ಟಿಂಗ್. ಇದು ಹೀರೋ ಇಂಟ್ರಡಕ್ಷನ್ ಟೀಸರ್ ಆಗಿದ್ದು, ಸುನಿ ಬರವಣಿಗೆ, ಸಂತೋಷ್ ರೈ ಪತಾಜೆ ಸಿನಿಮಾಟೋಗ್ರಫಿ ಹಾಗೂ ಜೂಡಾ ಸ್ಯಾಂಡಿ ಅವ್ರ ಸಂಗೀತ, ಹಿನ್ನೆಲೆ ಸಂಗೀತ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತೆ. ಟೈಟಲ್‌ನಿಂದಲೇ ಗಮನ ಸೆಳೆದಿದ್ದ ಈ ಸಿನಿಮಾ ಇದೇ ಜೂನ್ 26ಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ತೆರೆಗೆ ಬರ್ತಿದೆ.
ಎಲ್ರೂ ಹೀರೋ ಆಗೋಕೆ ಆಗಲ್ಲ. ಎಷ್ಟೇ ದುಡ್ಡಿದ್ದರು, ಎಷ್ಟೇ ಆಕ್ಟಿಂಗ್ ಸ್ಕಿಲ್ ಇದ್ರೂ ಆಗಲ್ಲ. ಡ್ಯಾನ್ಸ್, ಫೈಟ್ ಬರುತ್ತೆ. ನೋಡಲು ಚೆನ್ನಾಗಿದ್ದರೂ ಆಗಲ್ಲ. ಆದ್ರೆ ಎಲ್ಲವನ್ನೂ ದಾಟಿ ಪವಾಡ ಆಗಬೇಕು. ನನ್ನ ಜೀವನದಲ್ಲಿ ಅದು ಆಗಿದೆ. ಇದಕ್ಕೆ ಕಾರಣ ಸುನಿ ಸರ್. ನನ್ನ ಸಿನಿ ಜರ್ನಿಯಲ್ಲಿ ಏನೇ ಸಾಧಿಸಿದ್ರೂ ಆ ಕ್ರೆಡಿಟ್ ಅವರಿಗೆ ಕೊಡುತ್ತೇನೆ. ನಿರ್ಮಾಪಕ ರಮೇಶ್ ಸರ್ ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ಸ್ಟಾರ್ಸ್ ಸಿನಿಮಾ ಗೆಲ್ಲಬೇಕು. ಈ ಟೀಮ್ ಸೂಪರ್ ಸ್ಟಾರ್ಸ್ ಗೆ ಸಿನಿಮಾ ಮಾಡುವ ತಂಡ. ಆದರೆ ನನ್ನನ್ನು ಹಾಕಿಕೊಂಡು ಚಿತ್ರ ಮಾಡಿದ್ದಾರೆ. ಅದು ನನ್ನ ಪುಣ್ಯ. ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದ ಹೀರೋ ಶೀಲಂ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಾಧವನ್ ಅವ್ರ ಮೆಥೆಡ್ ಆ್ಯಕ್ಟಿಂಗ್‌ನಿಂದ ಸ್ಫೂರ್ತಿಗೊಂಡು ನಟನೆ ಮಾಡಿರೋದನ್ನ ಬಹಿರಂಗಪಡಿಸಿದ್ರು.
ಮೋಡ ಕವಿದ ವಾತಾವರಣ ನನ್ನ ಜೀವನದ ಸ್ಪೆಷಲ್ ಸಿನಿಮಾ ಎಂದ ಸುನಿ, ನಾನು ಟ್ರೈಲರ್ ಚೆನ್ನಾಗಿ ಕಟ್ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದ್ರೆ ಈ ಚಿತ್ರದ ಚಾಲೆಂಜ್ ಏನಂದ್ರೆ ಈ ಬಾರಿ ಟ್ರೈಲರ್ ಇರಲ್ಲ. ಅದನ್ನ ಕಟ್ ಮಾಡೋಕೆ ಕಥೆ ರಿವೀಲ್ ಆಗುತ್ತೆ ಅನ್ನೋ ಸಮಸ್ಯೆ. ಚಿತ್ರದ ಅರ್ಧ ಪಾರ್ಟ್ ನಾನು ಥಿಯೇಟರ್ ನಲ್ಲೇ ರಿವೀಲ್ ಮಾಡುವುದು. ಸಿನಿಮಾದಲ್ಲಿ ಏನೋ ಒಂದು ಅಂಶವಿದೆ. ಅದನ್ನು ಥಿಯೇಟರ್ ನಲ್ಲಿಯೇ ನೋಡಬೇಕು. ನಾಯಕ ಶೀಲಮ್ ಚೆನ್ನಾಗಿ ನಟಿಸಿದ್ದಾರೆ. ಒಂದು ಸರಳ ಪ್ರೇಮ ಕಥೆ ಆದ್ಮೇಲೆ ನಿರ್ಮಾಪಕ ರಮೇಶ್ ಸರ್ ನಮ್ಮ ಟೀಂ ಜೊತೆ ಕೈ ಜೋಡಿಸಿರುವುದಕ್ಕೆ ಪಾಸಿಟಿವ್ ವೈಬ್ಸ್ ಇದೆ ಎಂದರು.
ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ ಹೊಂದಿರೋ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಂಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದು, ಸಾತ್ವಿಕಾ ಮೂಳೆ ಮುರಿದುಕೊಂಡು ನಟಿಸಿರೋದು ಹೈಲೈಟ್. ಇನ್ನೂ ಕೋಟಿ ಹೀರೋಯಿನ್ ಮೋಕ್ಷಾ ಕುಶಾಲ್, ಸುನಿ ಅವರ ನಿರ್ದೇಶನದಲ್ಲಿ ನಟಿಸೋ ತಮ್ಮ ಬಹುದಿನದ ಕನಸನ್ನು ಮುಕ್ತವಾಗಿ ಹಂಚಿಕೊಂಡರು.
ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಮೋಡ ಕವಿದ ವಾತಾವರಣ ಚಿತ್ರವನ್ನ ಡಿಸ್ಟ್ರಿಬ್ಯೂಟ್ ಮಾಡ್ತಿದ್ದು, ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಆಗ್ತಿರೋದು ವಿಶೇಷ. ಅಲ್ಲಿ ನಟ ದುಲ್ಕರ್ ಸಲ್ಮಾನ್ ಟೀಂ ಸಿನಿಮಾನ ನೋಡಿ ತಾವೇ ವಿತರಣೆ ಮಾಡೋಕೆ ಮುಂದಾಗಿದೆ. ಸಿನಿಮಾದ ಕಂಟೆಂಟ್ ಮಲಯಾಳಂ ಶೈಲಿಯ ಕಥಾನಕ ಹಾಗೂ ವಾತಾವರಣದಲ್ಲಿ ತಯಾರಾಗಿದ್ದು, ಅಲ್ಲಿನ ಆಡಿಯೆನ್ಸ್‌ಗೆ ತಪ್ಪದೇ ಕನೆಕ್ಟ್ ಆಗಲಿದೆಯಂತೆ. ಇನ್ನೂ ಸುನಿ ಮೇಲಿನ ನಂಬಿಕೆಯಿಂದ ಚಿತ್ರ ನೋಡುವ ಮೊದಲೇ ವಿತರಣೆ ಮಾಡೋಕೆ ಸೈ ಅಂದಿದ್ದಾರೆ ಕೆವಿಎನ್‌ನ ಸುಪ್ರೀತ್.
ಈ ಹಿಂದೆ ಒಂದು ಸರಳ ಪ್ರೇಮಕಥೆ ಸಿನಿಮಾನ ನಿರ್ಮಾಣ ಮಾಡಿದ್ದ ರಾಮ್ ಮೂವೀಸ್‌ನ ಮೈಸೂರು ರಮೇಶ್ ಅವ್ರೇ ಈ ಸಿನಿಮಾ ಕೂಡ ನಿರ್ಮಿಸಿದ್ದಾರೆ. ಅವರಿಗೆ ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಸಾಥ್ ನೀಡಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





