ಹೆಡ್ ಬುಷ್ ಮತ್ತು ರೋಸಿ ಸಿನಿಮಾಗಳ ಸೂತ್ರಧಾರ ಶೂನ್ಯ ಈಗ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.ಸದ್ಯ ಲೂಸ್ ಮಾದ ಯೋಗಿ 50ನೇ ಚಿತ್ರ ರೋಸಿ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರು,ಈ ಮಧ್ಯೆ ‘ಲಾರ್ಡ್ ಗಾಗಾ’ ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.ಆದರೆ ನಿರ್ದೇಶನ ಪಕ್ಕಕ್ಕಿಟ್ಟು ಶೂನ್ಯ ಲಾರ್ಡ್ ಗಾಗಾ ಮೂಲಕ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ.
ಶೂನ್ಯ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ಲಾರ್ಡ್ ಗಾಗಾ ಎಂಬ ವಿಭಿನ್ನ ಶೀರ್ಷಿಕೆ ಇಡಲಾಗಿದೆ.ಪ್ರೇಮಿಗಳ ದಿನದಂದು ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ.ಈ ಹಿಂದೆ ಗಿಲ್ಕಿ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ವೈಕೆ ಲಾರ್ಡ್ ಗಾಗಾ ಸಿನಿಮಾ ಮೂಲಕ ಹೊಸಬಗೆಯ ಚಿತ್ರಗಳನ್ನು ಹರಡುವುದಕ್ಕೆ ಹೊರಟ್ಟಿದ್ದಾರೆ.
ಲಾರ್ಡ್ ಗಂಗಾ ಸಿನಿಮಾ ಶೂನ್ಯ ಬರೀ ಪಾತ್ರಧಾರಿ ಅಷ್ಟೇ ಅಲ್ಲ,ನಿರ್ಮಾಪಕರು ಕೂಡ.ತಮ್ಮ ಗೆಳೆಯ ಜೊತೆಗೂಡಿ ತಮ್ಮದೇ ಝೀರೋ ಗ್ರಾವಿಟಿ ಫಿಲ್ಮಂ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ.ಈ ನಿರ್ಮಾಣ ಸಂಸ್ಥೆಯಡಿ ಲಾರ್ಡ್ ಗಾಗಾ ಚಿತ್ರವನ್ನು ಮುಖಿ ಮತ್ತು ಶೂನ್ಯ ಜೊತೆಗೂಡಿ ನಿರ್ಮಾಣ ಮಾಡುತ್ತಿದ್ದಾರೆ.
ಒಂದಷ್ಟು ಸಿನಿಮೋತ್ಸಾಹಿಗಳು ಸೇರಿ ತಯಾರಿಸುತ್ತಿರುವ ಲಾರ್ಡ್ ಗಾಗಾ ಸಿನಿಮಾಗೆ ಯುವ ಪ್ರತಿಭೆ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ ಮಾಡಲಿದ್ದು, ಜೀವನ್ ಕ್ಯಾಮೆರಾ ಹಿಡಿಯಲಿದ್ದಾರೆ.ಈ ತಿಂಗಳಾಂತ್ಯಕ್ಕೆ ಚಿತ್ರೀಕರಣ ಶುರುವಾಗ್ತಿದ್ದು, ಉಡುಪಿ, ಮಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.