ಕೊನೆಗೂ ಥಾಯ್ಲೆಂಡ್ ಫ್ಲೈಟ್ ಹತ್ತಿಯೇ ಬಿಟ್ರು ಡಿಬಾಸ್ ದರ್ಶನ್. ಡೆವಿಲ್ ಸಿನಿಮಾದ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಷ್ಟಕ್ಕೂ ಅಲ್ಲಿ ಚಿತ್ರೀಕರಣ ಹೇಗೆ ನಡೀತಿದೆ..? ಯಾವ್ಯಾವ ಕಾಸ್ಟ್ಯೂಮ್ಸ್‌ನಲ್ಲಿ ದಚ್ಚು ಮಿಂಚ್ತಿದ್ದಾರೆ..? ದಾಸನಿಗೆ ಸುಪ್ರೀಂ ಕೋರ್ಟ್ ಮತ್ತೆ ಶಾಕ್ ಕೊಡ್ತಿದೆಯಾ ಅನ್ನೋ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
- ಲಾಬ್‌ಸ್ಟರ್ ತಿಂದು ಫಾರಿನರ್ಸ್ ಜೊತೆ ದಚ್ಚು ಡ್ಯಾನ್ಸ್..!!
- ಕಲರ್‌ಫುಲ್ ಕಾಸ್ಟ್ಯೂಮ್.. ಬ್ಯೂಟಿಫುಲ್ ಸಾಂಗ್ ಶೂಟ್
- ಜುಲೈ 22ರಂದು ದಚ್ಚುಗೆ ಸುಪ್ರೀಂ ಜಾಮೀನು ತೀರ್ಪು
- ದರ್ಶನ್ ಹಾಗೂ ಗ್ಯಾಂಗ್‌ಗೆ ಸುಪ್ರೀಂ ಕೊಡುತ್ತಾ ಶಾಕ್?
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಆಗಿರೋ ನಟ ದರ್ಶನ್, ಕೊನೆಗೂ ಹರ ಸಾಹಸ ಮಾಡಿ ಥಾಯ್ಲೆಂಡ್ ಸೇರಿಕೊಂಡಿದ್ದಾರೆ. ಕೋರ್ಟ್ ನಲ್ಲಿ ಕಾಡಿ ಬೇಡಿ 11 ದಿನಗಳ ಕಾಲ ಶೂಟಿಂಗ್‌ಗೆ ಅಂತ ಅನುಪತಿ ಪಡೆದು ಹೋಗಿದ್ದಾರೆ. ಡೆವಿಲ್ ಸಿನಿಮಾದ ಸಾಂಗ್ಸ್ ಹಾಗೂ ಒಂದು ಫೈಟ್ ಸೀಕ್ವೆನ್ಸ್‌ಗಾಗಿ ಥಾಯ್ಲೆಂಡ್‌ಗೆ ತೆರಳಿದ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಕೂಡ ಸಾಥ್ ನೀಡಿದ್ದಾರೆ.
ಏರ್ ಪೋರ್ಟ್‌ನಲ್ಲಿ ಡೈರೆಕ್ಟರ್ ಪ್ರಕಾಶ್ ವೀರ್ ಜೊತೆ ದರ್ಶನ್ ಇದ್ದ ಸ್ಟಿಲ್ ಫೋಟೋಸ್ ಹಾಗೂ ವಿಡಿಯೋಸ್ ರಿವೀಲ್ ಆಗಿತ್ತು. ಇಂದಿನಿಂದ ಶೂಟಿಂಗ್ ಕಿಕ್‌ಸ್ಟಾರ್ಟ್ ಆಗಿದ್ದು, ಅದಕ್ಕೂ ಮುನ್ನ ಥಾಯ್ಲೆಂಡ್‌ನಲ್ಲಿ ದಾಸನಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಗೆಳೆಯರೊಬ್ಬರ ಜೊತೆ ದೊಡ್ಡದೊಂದು ಲಾಬ್‌ಸ್ಟರ್ ಹಿಡಿದು, ಶಾರ್ಟ್ಸ್‌ನಲ್ಲಿ ಪೋಸ್ ನೀಡಿದ್ರು ದರ್ಶನ್.
ಇಂದು ಹಾಡಿನ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಫಾರಿನ್ ಬೇಬೀಸ್ ಜೊತೆ ದಾಸ ಲಕ ಲಕ ಮಿಂಚುತ್ತಿದ್ದಾರೆ. ಅಲ್ಲದೆ ವೈಟ್ ಅಂಡ್ ವೈಟ್ ಕಾಸ್ಟ್ಯೂಮ್‌ನಲ್ಲೂ ನೋಡುಗರ ಕಣ್ಣು ಕುಕ್ಕುವಂತೆ ಕಾಣ್ತಿದ್ದಾರೆ. ಅಂದಹಾಗೆ ಕೋರ್ಟ್ ಇವರಿಗೆ ಅನುಮತಿ ನೀಡಿರೋದು ಕೇವಲ 11 ದಿನ. ಆದ್ರೆ ಅದರಲ್ಲಿ ನಾಲ್ಕೈದು ದಿನ ಶೂಟಿಂಗ್ ಅಷ್ಟೇ ಎನ್ನಲಾಗಿದೆ. ಈ ಮಧ್ಯೆ ಸುಪ್ರೀಂ ಕೋರ್ಟ್ ಶಾಕ್ ನೀಡುವ ಮುನ್ಸೂಚನೆ ನೀಡಿದ್ದು, ಬೇಲ್ ಕ್ಯಾನ್ಸಲ್ ಆದ್ರೆ ಕೂಡಲೇ ಭಾರತಕ್ಕೆ ವಾಪಸ್ ಆಗಬೇಕಿದೆ ದಾಸ.
ಬೇಲ್ ಕ್ಯಾನ್ಸಲ್‌ಗಾಗಿ ಸುಪ್ರೀಂ ಮೊರೆ ಹೋಗಿರೋ ಕರ್ನಾಟಕ ಪೊಲೀಸರೇ ಮೇಲುಗೈ ಸಾಧಿಸೋ ಸೂಚನೆ ಸಿಕ್ಕಿದೆ. ಹೌದು.. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ ಇತ್ತು. ಅಲ್ಲಿ ದರ್ಶನ್ ಪರ ಮನು ಸಿಂಘ್ವಿ ಬದಲಿಗೆ ಕಪಿಲ್ ಸಿಬಲ್ ವಾದ ಮಂಡಿಸಿದ್ರು. ಪೊಲೀಸರ ಪರ ಅನಿಲ್ ನಿಶಾನಿ ವಾದ ಮಂಡಿಸಿದ್ರು. ಆಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹೈ ಕೋರ್ಟ್ ಜಾಮೀನು ನೀಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ಹೈಕೋರ್ಟ್ ವಿವೇಚನೆಯನ್ನು ಬಳಸಿಲ್ಲ. ಆರೋಪಿಗಳಿಗೆ ಜಾಮೀನು ನೀಡುವಾಗ ನಿಯಮಾವಳಿಗಳನ್ನು ಅನುಸರಿಸಿಲ್ಲ ಎಂದಿದೆ.
11 ದಿನಗಳ ಥಾಯ್ಲೆಂಡ್ ವೀಸಾ ಪಡೆದು ಶೂಟಿಂಗ್‌ಗೆ ತೆರಳಿರೋ ದರ್ಶನ್‌ಗೆ ಸುಪ್ರೀಂ ಇದೇ ಜುಲೈ 22ರಂದು ಶಾಕ್ ನೀಡೋ ಲಕ್ಷಣವಿದೆ. ಒಂದು ವೇಳೆ ಜುಲೈ 22ಕ್ಕೆ ಬೇಲ್ ಕ್ಯಾನ್ಸಲ್ ಅದ್ರೆ ಕೂಡಲೇ ದರ್ಶನ್ ಭಾರತಕ್ಕೆ ವಾಪಸ್ ಆಗಬೇಕಿದೆ. ಮತ್ತೊಮ್ಮೆ ಜೈಲು ಹಕ್ಕಿ ಕೂಡ ಆಗಬೇಕಾಗುತ್ತೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





