• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಶ್ಮಿಕಾ ವೈಯಕ್ತಿಕ ಜೀವನದ ಕಥೆ ದಿ ಗರ್ಲ್‌‌ಫ್ರೆಂಡ್..?

ರಕ್ಷಿತ್ ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ರಾ ದೀಕ್ಷಿತ್ ಶೆಟ್ಟಿ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2025 - 3:02 pm
in ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design (17)

ನ್ಯಾಷನಲ್ ಕ್ರಶ್ ರಶ್ಮಿಕಾ ಸದಾ ಸುದ್ದಿಯಲ್ಲಿರೋ ಸೆನ್ಸೇಷನಲ್ ನಟಿಮಣಿ. ಒಂದ್ಕಡೆ ಆಕೆಯ ಸಿನಿಮಾಗಳ ಸಕ್ಸಸ್‌.. ಮತ್ತೊಂದ್ಕಡೆ ವೈಯಕ್ತಿಕ ಜೀವನದ ತಲ್ಲಣಗಳು. ಪ್ರೀತಿ, ಪ್ರೇಮ, ಪ್ರಣಯದ ಜೊತೆ ಕರಿಯರ್, ಬಾಯ್‌‌ಫ್ರೆಂಡ್‌‌‌ಗಳ ಕುರಿತು ದಿ ಗರ್ಲ್‌ಫ್ರೆಂಡ್ ಮೌನ ಮುರಿದಿದ್ದಾರೆ. ಭಾವಿ ಪತಿ ವಿಜಯ್ ಜೊತೆಗೇ ಬಂದು ಹಳೇ ಬಾಯ್‌ಫ್ರೆಂಡ್ ರಕ್ಷಿತ್‌ ಶೆಟ್ಟಿಗೆ ಕೌಂಟರ್ ಕೊಟ್ಟಿದ್ದಾರೆ ಕಿರಿಕ್ ಬ್ಯೂಟಿ. ಈ ಕುರಿತ ಪಿನ್ ಟು ಪಿನ್ ಡಿಟೈಲ್ಸ್ ನಿಮ್ಮ ಮುಂದೆ.

RelatedPosts

ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್

ಸಿನಿಮಾ ರಿಲೀಸ್‌ಗೂ ಮೊದ್ಲೇ ‘ಸೆಲೆಬ್ರಿಟಿ’ ಅಪ್ಪು-ಸುದೀಪ್ ಶಿಷ್ಯ

ಗೆದ್ದ ದಚ್ಚು ಭಂಟ ಧನ್ವೀರ್.. ಹಯಗ್ರೀವಗೆ ಸ್ಟಾರ್ಸ್ ಬಹುಪರಾಕ್

ರಜನಿಕಾಂತ್‌ ಮಿತ್ರ, ಪತ್ರಕರ್ತ ಕೆ.ಜೆ. ಕುಮಾರ್ ಇನ್ನಿಲ್ಲ: ಕನ್ನಡದಲ್ಲಿಯೇ ಕಂಬನಿ ಮಿಡಿದ ತಲೈವಾ

ADVERTISEMENT
ADVERTISEMENT

ರಶ್ಮಿಕಾ ವೈಯಕ್ತಿಕ ಜೀವನದ ಕಥೆ ದಿ ಗರ್ಲ್‌‌ಫ್ರೆಂಡ್..?

ರಕ್ಷಿತ್ ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ರಾ ದೀಕ್ಷಿತ್ ಶೆಟ್ಟಿ..?

ದಿ ಗರ್ಲ್‌ಫ್ರೆಂಡ್.. ಕಳೆದ ವಾರ ತೆರೆಕಂಡ ತೆಲುಗಿನ ಸಿನಿಮಾ. ಪ್ಯಾನ್ ವರ್ಲ್ಡ್‌ ತೆರೆಕಂಡಂತಹ ಈ ಸಿನಿಮಾಗೆ ಎಲ್ಲೆಡೆ ಒಳ್ಳೊಳ್ಳೆ ಪ್ರಶಂಸೆ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರ್ತಿದೆ. ಅದಕ್ಕೆ ಕಾರಣ ಹದಿಹರೆಯದ ಮನಸುಗಳ ತೊಳಲಾಟಗಳ ಯೂತ್‌ಫುಲ್ ಕಥೆ. ಅದಕ್ಕಿಂತ ಹೆಚ್ಚಾಗಿ ಟೈಟಲ್‌ ರೋಲ್‌‌‌ಗೆ ಜೀವ ತುಂಬಿರೋ ನ್ಯಾಷನಲ್ ಕ್ರಶ್ ರಶ್ಮಿಕಾ. ಯೆಸ್.. ರಶ್ಮಿಕಾ ಸದ್ಯ ಸಕ್ಸಸ್‌‌ಗೆ ಕೇರ್ ಆಫ್ ಅಡ್ರೆಸ್. ಅದೇ ಕಾರಣಕ್ಕೆ ದಿ ಗರ್ಲ್‌ಫ್ರೆಂಡ್ ಚಿತ್ರತಂಡ ಕೂಡ ಇತ್ತೀಚೆಗೆ ಅದ್ಧೂರಿ ಸಕ್ಸಸ್‌‌ಮೀಟ್ ಸೆಲೆಬ್ರೇಟ್ ಮಾಡಿದೆ.

ರಾಹುಲ್ ರವೀಂದ್ರನ್ ನಿರ್ದೇಶನದ ದಿ ಗರ್ಲ್‌ಫ್ರೆಂಡ್ ಚಿತ್ರದ ಕಥೆ ನಟಿ ರಶ್ಮಿಕಾ ಮಂದಣ್ಣ ಜೀವನದಲ್ಲಾದ ಸಾಕಷ್ಟು ವಿಷಯಗಳಿಗೆ ಸಂಬಂಧಿಸಿದ ಕಥೆ ಎನ್ನಲಾಗ್ತಿದೆ. ಹಾಗಂತ ಸೋಶಿಯಲ್ ಮೀಡಿಯಾದಲ್ಲಿ ಒಂದು ಅಲೆಯೇ ಎದ್ದಿತ್ತು. ಆದ್ರೀಗ ಸ್ವತಃ ರಶ್ಮಿಕಾನೇ ಭಾವಿ ಪತಿ ವಿಜಯ್ ದೇವರಕೊಂಡ ಜೊತೆ ಸಕ್ಸಸ್‌‌ಮೀಟ್‌‌ಗೆ ಬಂದು, ಹಳೆಯ ಬಾಯ್‌‌ಫ್ರೆಂಡ್‌‌ಗೆ ಕೌಂಟರ್ ಕೊಟ್ಟಿರೋದು ಟಾಕ್ ಆಫ್ ದಿ ಟೌನ್ ಆಗಿದೆ.

ಭಾವಿ ಪತಿ ವಿಜ್ಜು ಜೊತೆ ಕೌಂಟರ್ ಕೊಟ್ಟೇಬಿಟ್ರು ರಶಿ

ಸಂಗಾತಿಯನ್ನ ಕಂಟ್ರೋಲ್ ಮಾಡಬಾರದೆಂದ ರೌಡಿ

ಹೌದು.. ಖುದ್ದು ನ್ಯಾಷನಲ್ ಕ್ರಶ್ ರಶ್ಮಿಕಾ ಹೇಳಿದಂತೆ ಇದು ಆಕೆಯ ಲೈಫ್‌‌ಗೆ ತುಂಬಾ ಕನೆಕ್ಟ್ ಆಗಲಿದೆಯಂತೆ. ಆಲೆಯ ಜೀವನದಲ್ಲಾದ ಒಂದಷ್ಟು ಅಂಶಗಳು ಈ ಚಿತ್ರದಲ್ಲಿವೆಯಂತೆ. ಹಾಗಾಗಿಯೇ ಈ ಪಾತ್ರ ನನಗೆ ಬಹಳ ಇಷ್ಟವಾಯ್ತು ಅಂದಿದ್ದಾರೆ. ಅಲ್ಲಿಗೆ ದಿ ಗರ್ಲ್‌ಫ್ರೆಂಡ್ ಚಿತ್ರದ ನಾಯಕನಟ ದೀಕ್ಷಿತ್ ಶೆಟ್ಟಿ ಅವ್ರು ರಕ್ಷಿತ್ ಶೆಟ್ಟಿ ಪಾತ್ರ ಪೋಷಿಸಿದ್ದಾರಾ ಅನ್ನೋದು ಪ್ರಶ್ನೆಯಾಗಿ ಕಾಡಲಿದೆ. ಇನ್‌ಫ್ಯಾಕ್ಟ್ ದೀಕ್ಷಿತ್ ಈಗಾಗ್ಲೇ ದಸರಾ ಸೇರಿದಂತೆ ಸಾಕಷ್ಟು ಚಿತ್ರಗಳ ಮೂಲಕ ತಮ್ಮ ನಟನಾ ಗಮ್ಮತ್ತು ತೋರಿದ್ದಾರೆ. ಸದ್ಯ ದೀಕ್ಷಿತ್ ನಿರ್ವಹಿಸಿರೋದು ನಾಯಕನಟನ ಪಾತ್ರನಾ ಅಥ್ವಾ ರಕ್ಷಿತ್ ಶೆಟ್ಟಿಯ ರೋಲಾ ಅನ್ನೋದು ಚರ್ಚೆಗೆ ಗ್ರಾಸವಾಗಿದೆ.

ಅಲ್ಲದೆ, ಸಕ್ಸಸ್ ವೇದಿಕೆಯಲ್ಲಿ ರಶ್ಮಿಕಾ ತಮ್ಮ ಭಾವಿ ಪತಿ ವಿಜಯ್‌‌ನ ಸಿಕ್ಕಾಪಟ್ಟೆ ಹಾಡಿ ಹೊಗಳಿದ್ದಾರೆ ರಶ್ಮಿಕಾ. ವಿಜ್ಜು ಮೊದಲಿನಿಂದಲೂ ಈ ಸಿನಿಮಾಗೆ ಜೊತೆಗಿದ್ದೀಯಾ. ವಿಜಯ್ ಅಂತಹ ಹುಡ್ಗ ಎಲ್ಲರ ಲೈಫ್‌‌ನಲ್ಲಿ ಇರಬೇಕು ಎಂದಿದ್ದಾರೆ ರಶ್ಮಿಕಾ. ಆತ ನನ್ನ ಬಾಳಲ್ಲಿ ಬಂದಿರೋದು ಒಂದು ವರವೇ ಸರಿ ಅಂತಲೂ ಮಾತನಾಡಿದ್ದಾರೆ ರಶ್ಮಿಕಾ. ಅಲ್ಲದೆ, ನೀವು ಕೊಡುವ ಪ್ರೀತಿ ಮುಂದೆ ನ್ಯಾಷನಲ್ ಅವಾರ್ಡ್‌ ಏನೂ ಇಲ್ಲ. ಫಿಲ್ಮ್ ನೋಡಿ ಫಿಲ್ ಆಗ್ತಿದ್ದೀರಾ ಅದೇ ನನಗೆ ಬಿಗ್ ಅವಾರ್ಡ್‌ ಎಂದಿದ್ದಾರೆ ರಶ್ಮಿಕಾ.

ರಶ್ಮಿಕಾ ಲೈಫ್‌ಲಿ ವಿಜಯ್ ಇರೋದು ಒಂದು ‘ವರ’

ವಿಜ್ಜು-ರಶಿ ಪ್ಯಾನ್ ಇಂಡಿಯಾ ಪ್ರೇಮ್ ಕಹಾನಿ ಮಸ್ತ್

ಅಂದಹಾಗೆ ಸೀಕ್ರೆಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿರೋ ಭಾವಿ ಪತ್ನಿ ರಶ್ಮಿಕಾಗಾಗಿಯೇ ದಿ ಗರ್ಲ್‌ಫ್ರೆಂಡ್ ಚಿತ್ರದ ಸಕ್ಸಸ್‌‌ಮೀಟ್‌ಗೆ ಆಗಮಿಸಿದ್ರು ವಿಜಯ್ ದೇವರಕೊಂಡ. ಅಲ್ಲದೆ, ರಶ್ಮಿಕಾಗೆ ಪ್ರೀತಿಯಿಂದ ರಶಿ ಎಂದ ರೌಡಿ ವಿಜಯ್, ಆಕೆಯ ಬಗ್ಗೆ ಸಿಕ್ಕಾಪಟ್ಟೆ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಅಲ್ಲದೆ, ಜೀವನ ತುಂಬಾ ಸರಳವಾಗಿ, ಖುಷಿಯಾಗಿರಬೇಕು. ಗೀತ ಗೋವಿಂದಂನಿಂದ ರಶಿ ಜರ್ನಿ ನೋಡ್ತಿದ್ದೀನಿ. ತುಂಬಾ ಹೆಮ್ಮೆ ಇದೆ. ಈ ಚಿತ್ರ ನೋಡಿದಾಗ ಸಿಕ್ಕಾಪಟ್ಟೆ ಬೇಜಾರಾಯ್ತು. ನಮ್ಮ ಸಂಗಾತಿಯನ್ನ ನಾವುಗಳು ಕಂಟ್ರೋಲ್ ಮಾಡಬಾರದು. ಅವರ ಕನಸುಗಳಿಗೆ ರಕ್ಷಣೆ ಆಗಬೇಕು ಎಂದರು.

ದೇವರಕೊಂಡ ಮಾತುಗಳು ಸಿನಿಮಾಗೆ ಪೂರಕವಾಗಿದ್ರೂ ಸಹ, ನಟ ರಕ್ಷಿತ್ ಶೆಟ್ಟಿಗೆ ಟಾಂಟ್ ಕೊಟ್ಟಂತಿದೆ. ಒಂದ್ಕಡೆ ತಾನು ಮದ್ವೆ ಆಗ್ತಿರೋ ರಶ್ಮಿಕಾ ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದ ಸಮಯದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಆಗಿದ್ರು. ಪ್ರೀತಿಸಿಯೇ ಸತಿ ಪತಿ ಆಗೋ ಕನಸು ಕಂಡಿದ್ದ ರಕ್ಷಿತ್-ರಶ್ಮಿಕಾ ನಡುವೆ ಒಂದಷ್ಟು ವೈಮನಸ್ಸುಗಳು ಬಂದು ಸಂಬಂಧ ಕಡಿದುಕೊಂಡಿದ್ರು. ಅದೀಗ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗ್ತಿದೆ. ವಿಜಯ್ ಮಾತಾಡಿದ್ರು ಸಿನಿಮಾ ಬಗ್ಗೆನಾ ಅಥ್ವಾ ರಕ್ಷಿತ್ ಬಗ್ಗೆನಾ ಅನ್ನೋ ಪ್ರಶ್ನೆ ಹುಟ್ಟಿಹಾಕಿದೆ.

 

ರಕ್ಷಿತ್ ಶೆಟ್ಟಿಯನ್ನ ಪ್ರೀತಿಸಿ, ಎಂಗೇಜ್ ಆಗಿದ್ದ ರಶ್ಮಿಕಾ..!!

ವೈಮನಸ್ಸಿನಿಂದ ಸಂಬಂಧ ಕಡಿದುಕೊಂಡ ಕಿರಿಕ್ ಜೋಡಿ

ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಕಿರಿಕ್ ಪಾರ್ಟಿ ಚಿತ್ರದ ಕಥೆ ಕಾಲೇಜ್ ಲವ್ ಸ್ಟೋರಿ. ಸದ್ಯ ದಿ ಗರ್ಲ್‌ಫ್ರೆಂಡ್ ಚಿತ್ರದ ಕಥೆಯೂ ಕಾಲೇಜ್ ಲವ್ ಸ್ಟೋರಿ. ಕಿರಿಕ್ ಪಾರ್ಟಿ ಚಿತ್ರದಲ್ಲಿ ರಶ್ಮಿಕಾ ಕಾಸ್ಟ್ಯೂಮ್ಸ್ ಸಿಂಪಲ್ ಕುರ್ತಾ & ದುಪ್ಪಟಗಳಿಂದ ಕೂಡಿತ್ತು. ಇಲ್ಲಿಯೂ ಅದೇ ಹೈಲೈಟ್. ಅದ್ರಲ್ಲೂ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ದಿ ಗರ್ಲ್‌ಫ್ರೆಂಡ್ ವೀಕ್ಷಿಸಿದ ಯುವತಿಯೋರ್ವಳು ತನ್ನ ದುಪ್ಪಟ ತೆಗೆದು ಸಂಭ್ರಮಿಸಿದ ಪರಿ ಈ ಚಿತ್ರದ ಸಕ್ಸಸ್‌ಗೆ ಕಾರಣವಾಗಿದೆ. ಅಲ್ಲಿಗೆ ದಿ ಗರ್ಲ್‌ಫ್ರೆಂಡ್ ಸಿನಿಮಾ ರಶ್ಮಿಕಾ ಪರ್ಸನಲ್ ಲೈಫ್‌ಗೆ ತುಂಬಾ ಹತ್ತಿರವಾದ ಕಥೆ, ಪಾತ್ರಗಳಿಂದ ಕೂಡಿದೆ ಅನ್ನೋದು ಪಕ್ಕಾ ಆಗಿದೆ.

ಇವೆಲ್ಲವುಗಳ ನಡುವೆ ರಶ್ಮಿಕಾ-ವಿಜಯ್ ನಡುವೆ ಗಾಢವಾದ ಸ್ನೇಹ, ಪ್ರೀತಿ, ಆಪ್ಯಾಯತೆಗಳು ಏರ್ಪಟ್ಟಿವೆ. ಅದೀಗ ಅವರುಗಳನ್ನ ಸಪ್ತಪದಿ ತುಳಿಯುವ ಹಾಗೆ ಮಾಡಿದೆ. ಹಾಗಾಗಿಯೇ ಇತ್ತೀಚೆಗೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಜ್ಜು-ರಶಿ ಜೋಡಿ, 2026ರ ಫೆಬ್ರವರಿ 26ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದ್ವೆ ವಿಷಯ ಸ್ವತಃ ರಶ್ಮಿಕಾ ಇತ್ತೀಚೆಗೆ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸೋ ಮೂಲಕ ಖಚಿತಪಡಿಸಿದ್ದರು. ಅಲ್ಲದೆ, ದಿ ಗರ್ಲ್‌ ಫ್ರೆಂಡ್ ಸಕ್ಸಸ್ ಮೀಟ್‌‌ನಲ್ಲಿ ರಶಿ ಕೈಗೆ ವಿಜ್ಜು ಕೊಟ್ಟ ಆ ಸಿಹಿ ಮುತ್ತು ಕೂಡ ಸಾಕ್ಷಿಯಾಗಿದೆ.

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 12T193441.959

ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್

by ಯಶಸ್ವಿನಿ ಎಂ
March 12, 2026 - 7:48 pm
0

Untitled design 2026 03 12T183135.938

ಚಾರ್‌ಧಾಮ್ ಯಾತ್ರೆ 2026: ಬದರಿನಾಥ, ಕೇದಾರನಾಥ ಸೇರಿ 47 ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧ

by ಯಶಸ್ವಿನಿ ಎಂ
March 12, 2026 - 6:35 pm
0

Untitled design 2026 03 12T182136.169

ಗ್ಯಾಸ್ ಟ್ರಬಲ್‌ನಿಂದ ಮರಗಳಿಗೆ ಕೊಡಲಿ ಭೀತಿ-ಕಟ್ಟೆಚ್ಚರಕ್ಕೆ ಈಶ್ವರ ಖಂಡ್ರೆ ಸೂಚನೆ

by ಯಶಸ್ವಿನಿ ಎಂ
March 12, 2026 - 6:24 pm
0

Untitled design 2026 03 12T180416.100

ಬಿಕ್ಲು ಶಿವ ಕೇಸ್‌ನಲ್ಲಿ ಅರೆಸ್ಟ್‌ ಆಗಿದ್ದ ಬೈರತಿಗೆ ಷರತ್ತು ಬದ್ಧ ಜಾಮೀನು

by ಯಶಸ್ವಿನಿ ಎಂ
March 12, 2026 - 6:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 12T193441.959
    ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್
    March 12, 2026 | 0
  • Untitled design 2026 03 12T174637.676
    ಸಿನಿಮಾ ರಿಲೀಸ್‌ಗೂ ಮೊದ್ಲೇ ‘ಸೆಲೆಬ್ರಿಟಿ’ ಅಪ್ಪು-ಸುದೀಪ್ ಶಿಷ್ಯ
    March 12, 2026 | 0
  • Untitled design 2026 03 12T155908.984
    ಗೆದ್ದ ದಚ್ಚು ಭಂಟ ಧನ್ವೀರ್.. ಹಯಗ್ರೀವಗೆ ಸ್ಟಾರ್ಸ್ ಬಹುಪರಾಕ್
    March 12, 2026 | 0
  • Untitled design 2026 03 12T154517.391
    ರಜನಿಕಾಂತ್‌ ಮಿತ್ರ, ಪತ್ರಕರ್ತ ಕೆ.ಜೆ. ಕುಮಾರ್ ಇನ್ನಿಲ್ಲ: ಕನ್ನಡದಲ್ಲಿಯೇ ಕಂಬನಿ ಮಿಡಿದ ತಲೈವಾ
    March 12, 2026 | 0
  • Untitled design 2026 03 12T145017.516
    ಕನ್ನಡಕ್ಕೆ ಬಿಟೌನ್ ಬಾಂಬ್ ಶೆಲ್ ನೋರಾ ಫತೇಹಿ..KD ಜೊತೆ ಕಿಲ್ಲೇಡಿ
    March 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version