• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಹೊಂಬಾಳೆ ತೆಕ್ಕೆಗೆ RCB ಟೀಂ..? ‘ವಿಜಯ’ಕ್ಕೆ ಇನ್ನೊಂದೇ ಮೆಟ್ಟಿಲು..!

ಕೊಹ್ಲಿ RCB ಟೀಂ ಬಿಡಲ್ಲ..ಕನ್ನಡಿಗರಿಂದ್ಲೇ ಕಿಂಗ್ ಕೊಹ್ಲಿ ಬಯೋಪಿಕ್..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 12, 2025 - 2:24 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 11 12T142323.241

ಕೆಜಿಎಫ್, ಕಾಂತಾರ ಚಿತ್ರಗಳ ಗ್ಲೋಬಲ್ ಹಿಟ್ ಬಳಿಕ ಕನ್ನಡದ ಹೆಮ್ಮೆಯ ಹೊಂಬಾಳೆ ಸಂಸ್ಥೆ ಮತ್ತೊಂದು ಮಹತ್ವದ ಸಾಹಸಕ್ಕೆ ಕೈ ಹಾಕ್ತಿದೆ ಎನ್ನಲಾಗಿದೆ. IPL ಇತಿಹಾಸದಲ್ಲೇ ಕ್ರೇಜಿಯೆಸ್ಟ್ ಹಾಗೂ ಹೈಯೆಸ್ಟ್ ಫ್ಯಾನ್ ಫಾಲೋಯಿಂಗ್ ಇರೋ RCB ಫ್ರಾಂಚೈಸ್‌‌ನ ಖರೀದಿಸೋಕೆ ಮುಂದಾಗಿದೆಯಂತೆ. ಹೊಂಬಾಳೆ ಗ್ರೂಪ್ ಆರ್‌ಸಿಬಿ ಓನರ್ ಆದ್ರೆ ಕನ್ನಡಿಗರಿಗೆ ಡಬಲ್ ಧಮಾಕ. ಅದೇನು ಅನ್ನೋದ್ರ ಎಕ್ಸ್‌‌ಕ್ಲೂಸಿವ್ ಖಬರ್ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.

  • ಹೊಂಬಾಳೆ ತೆಕ್ಕೆಗೆ RCB..? ‘ವಿಜಯ’ಕ್ಕೆ ಇನ್ನೊಂದೇ ಮೆಟ್ಟಿಲು
  • RCB ಫ್ರಾಂಚೈಸ್ ಓನರ್ ರೇಸ್‌‌ನಲ್ಲಿ ವಿಜಯ್ ಕಿರಗಂದೂರು
  • ಆರ್‌‌ಸಿಬಿ ಜೊತೆ ಅಫಿಶಿಯಲಿ ಟೈಯಪ್ ಆಗಿದ್ದ ಹೊಂಬಾಳೆ
  • ಪ್ಲೇಯರ್ಸ್‌ಗೆ KGF, ಕಾಂತಾರ ತೋರಿಸಿದ್ದ ನಿರ್ಮಾಣ ಸಂಸ್ಥೆ
  • ಇದು ಹೊಸ ಅಧ್ಯಾಯ.. ಸ್ಟೇಡಿಯಂನಲ್ಲಿ ಹೊಂಬಾಳೆ ಟೀಂ
  • ವಿಜಯ್ ಜೊತೆ RCB ಜೆರ್ಸಿ ಧರಿಸಿದ್ದ ಸಂಜು, ರವೀನಾ..!!

ಆರ್‌ಸಿಬಿ.. ರಾಯಲ್ ಚಾಲೆಂಜರ್ಸ್‌ ಬೆಂಗಳೂರು. ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋ ಹಾಗೂ ಒನ್ ಅಂಡ್ ಓನ್ಲಿ ಕ್ರೇಜಿಯೆಸ್ಟ್ ಫ್ರಾಂಚೈಸ್ ಆರ್‌ಸಿಬಿ. 17 ವರ್ಷಗಳಿಂದ ಕಪ್ ಗೆಲ್ಲದಿದ್ರೂ ಸಹ, ನಮ್ಮ ಆರ್‌ಸಿಬಿ ಟೀಂಗೆ ತುಂಬಾ ಲಾಯಲ್ ಹಾಗೂ ರಾಯಲ್ ಆಗಿ ಫ್ಯಾನ್ಸ್ ಸಪೋರ್ಟ್ ಮಾಡಿದ್ರು. ಅದೇ ಕಾರಣದಿಂದ ಕಿಂಗ್ ಕೊಹ್ಲಿ ಟೀಂನ ಆರ್‌ಸಿಬಿ ಪ್ಲೇಯರ್ಸ್‌ ಕಳೆದ ಸೀಸನ್‌‌ನಲ್ಲಿ IPL ಕಪ್‌ಗೆ ಮೊದಲ ಬಾರಿ ಮುತ್ತಿಕ್ಕಿದರು. ಕೋಟ್ಯಂತರ ಕನ್ನಡಿಗರ ಕಣ್ಮನ ತಣಿಸಿದ್ರು. ಈ ‘ಸಲ ಕಪ್ ನಮ್ದೇ’ ಅನ್ನೋ ಶ್ಲೋಗನ್‌‌ನ ‘ಈ ಸಲ ಕಪ್ ನಮ್ದು’ ಅಂತ ಬದಲಿಸಿದ್ರು.

RelatedPosts

ವಂಚನೆ ಕೇಸ್: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ಹಿಂಪಡೆದ ಜಾಕ್ವೆಲಿನ್ ಫರ್ನಾಂಡಿಸ್

ಸಲ್ಮಾನ್ ಖಾನ್ ಹೊಸ ಅಸ್ತ್ರ..‘ಕರ್ಣ’ನಾಗ್ತಾರಾ ಭಾಯಿ‌ಜಾನ್?

ಜಕ್ಕಣ್ಣನ ಪರ್ಫೆಕ್ಷನ್‌ಗೆ ಪೃಥ್ವಿರಾಜ್ ಶಾಕ್!

ನರ್ತಕಿ ಥಿಯೇಟರ್‌ನಲ್ಲಿ ‘ಬಲರಾಮನ ದಿನಗಳು’ ಮಾಸ್ ಹಬ್ಬ

ADVERTISEMENT
ADVERTISEMENT

ಆದ್ರೀಗ 2026ರ ಮಾರ್ಚ್‌ 31ರ ಒಳಗೆ ಆರ್‌ಸಿಬಿ ತಂಡದ ಮಾಲೀಕತ್ವ ಬದಲಾಗಬೇಕಿದೆ. ವಿಜಯ್ ಮಲ್ಯ ಬಳಿಕ ಆರ್‌ಸಿಬಿ ಟೀಂ ಯುಎಸ್‌ಎಲ್ ಪಾಲಾಗಿತ್ತು. ಯುಬಿ ಗ್ರೂಪ್ಸ್‌‌‌ ಸಹ-ಮಾಲೀಕತ್ವದಿಂದ ಇದೀಗ ಹೊರಬರ್ತಿದ್ದು, ಅದನ್ನ ಖರೀದಿಸಲು ಸಾಕಷ್ಟು ಮಂದಿ ಸರತಿ ಸಾಲಿನಲ್ಲಿ ಕ್ಯೂ ನಿಂತಿದ್ದಾರೆ. ಶಿವಮೊಗ್ಗ ಮೂಲದ ಯುವ ಉದ್ಯಮಿ ನಿಖಿಲ್ ಕಾಮತ್ ಹಾಗೂ ಮಣಿಪಾಲ್ ಗ್ರೂಪ್ಸ್‌‌ನ ರಂಜನ್ ರೈ ಹೆಸರುಗಳು ದಟ್ಟವಾಗಿ ಕೇಳಿಬರ್ತಿವೆ. ಇಂಟರೆಸ್ಟಿಂಗ್ ಅಂದ್ರೆ ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಹೆಸರು ಕೂಡ ಕೇಳಿಬರ್ತಿದೆ.

ಹೌದು.. ಕೆಜಿಎಫ್ ಹಾಗೂ ಕಾಂತಾರ ಚಿತ್ರಗಳಿಂದ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿ, ಗ್ಲೋಬಲ್ ಮಾರ್ಕೆಟ್‌‌‌ಗೆ ರೀಚ್ ಆಗಿದೆ ಹೊಂಬಾಳೆ ಫಿಲಂಸ್. ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌‌ನಲ್ಲಿ ಕನ್ನಡದತ್ತ ವಿಶ್ವ ಸಿನಿದುನಿಯಾನ ತಿರುಗಿ ನೋಡುವಂತೆ ಮಾಡಿದೆ. ಕನ್ನಡದ ಜೊತೆ ಭಾರತದ ಪ್ರಮುಖ ಐದು ಭಾಷೆಗಳಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಬಹುಭಾಷಾ ಸಿನಿಮಾಗಳನ್ನ ಮಾಡ್ತಿದೆ. ಸದ್ಯ ಹೃತಿಕ್ ರೋಷನ್ ಜೊತೆ ಬಾಲಿವುಡ್‌ ಅಂಗಳದಲ್ಲಿ ಸಾವಿರಾರು ಕೋಟಿ ಬಜೆಟ್‌‌ನಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ ಹೊಂಬಾಳೆ. ಅಂತಹ ಹೊಂಬಾಳೆ ನಮ್ಮ ಹೆಮ್ಮೆಯ ಆರ್‌ಸಿಬಿ ಟೀಂನ ಖರೀದಿಸುತ್ತೆ ಅಂದ್ರೆ ಅದಕ್ಕಿಂತ ಖುಷಿ ಮತ್ತೇನಿದೆ ಅಲ್ಲವೇ..?

ಅಂದಹಾಗೆ ಹೊಂಬಾಳೆ ಫಿಲಂಸ್ ಹೊಂಬಾಳೆ ಗ್ರೂಪ್‌ನ ಒಂದು ಭಾಗವಷ್ಟೇ. ವಿಜಯ್ ಕಿರಗಂದೂರು ಹಾಗೂ ಚೆಲುವೆ ಗೌಡರು ಕಟ್ಟಿದ ಹೊಂಬಾಳೆ ಸಂಸ್ಥೆ ಸಿನಿಮಾ ಹಾಗೂ ಕನ್‌‌ಸ್ಟ್ರಕ್ಷನ್ ಫೀಲ್ಡ್‌‌ನಲ್ಲಿ ಬಹುದೊಡ್ಡ ಹೆಸರು ಮಾಡಿದೆ. ಜೊತೆಗೆ ಆ ಹೆಸರಿಗೆ ತಕ್ಕನಾಗಿ ಸಾವಿರಾರು ಕೋಟಿ ಹಣ ಕೂಡ ಮಾಡಿದೆ. ಹಾಗಾಗಿ ಹೊಂಬಾಳೆ ಬರೀ ಹೆಸರಲ್ಲ. ಅದೊಂದು ಬ್ರ್ಯಾಂಡ್. ಹೀಗಾಗಿ ಆರ್‌ಸಿಬಿ ಫ್ರಾಂಚೈಸ್‌ ಹೊಂಬಾಳೆ ಪಾಲಾಗುತ್ತೆ ಅನ್ನೋ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ದಟ್ಟವಾಗಿ ಹರಿದಾಡ್ತಿವೆ.

ಯೆಸ್.. ಹೊಂಬಾಳೆಗೆ ಆರ್‌‌ಸಿಬಿ ಟೀಂ ಹೊಸತೇನಲ್ಲ. ಈಗಾಗ್ಲೇ ಕೆಜಿಎಫ್, ಕಾಂತಾರ ಚಿತ್ರಗಳ ಸಮಯದಲ್ಲಿ ಅಫಿಶಿಯಲ್ ಆಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಟೀಂ ಜೊತೆ ಹೊಂಬಾಳೆ ಟೈಯಪ್ ಆಗಿತ್ತು. ಇಡೀ ಆರ್‌ಸಿಬಿ ಟೀಂಗೆ ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳನ್ನ ತೋರಿಸಿದ್ರು ವಿಜಯ್ ಕಿರಗಂದೂರು.

ಅಷ್ಟೇ ಅಲ್ಲ, ಆರ್‌ಸಿಬಿ ಮ್ಯಾಚ್‌‌ಗಳು ಇದ್ದಾಗ ನಿರ್ಮಾಪಕ ವಿಜಯ್ ಕಿರಗಂದೂರು, ಚೆಲುವೆ ಗೌಡ, ಕೆಜಿಎಫ್ ವಿಲನ್ ಸಂಜಯ್ ದತ್, ರವೀನಾ ಟಂಡನ್ ಎಲ್ಲಾ ಆರ್‌ಸಿಬಿ ಜೆರ್ಸಿ ಧರಿಸಿ, ಸ್ಟೇಡಿಯಂಗೆ ತೆರಳಿದ್ರು. ನಮ್ಮ ಆರ್‌ಸಿಬಿ ತಂಡಕ್ಕೆ ಸಪೋರ್ಟ್‌ ಮಾಡಿದ್ರು.

ಆರ್‌ಸಿಬಿಗಾಗಿ ಇದು ಹೊಸ ಅಧ್ಯಾಯ ಅಂತ ರಿಷಬ್ ಶೆಟ್ಟಿ ಜೊತೆ ಕಾಂತಾರ ವೇಳೆ ವಿಶೇಷವಾದ ಪ್ರೋಮೋ ಶೂಟ್ ಕೂಡ ಮಾಡಿಸಿತ್ತು ಹೊಂಬಾಳೆ ಫಿಲಂಸ್. ಇದೆಲ್ಲವನ್ನ ನೋಡ್ತಿದ್ರೆ ಹೊಂಬಾಳೆ ಗ್ರೂಪ್ ಆರ್‌ಸಿಬಿಯನ್ನ ಖರೀದಿ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇನ್ ಕೇಸ್ ಆರ್‌‌ಸಿಬಿಯನ್ನ ಹೊಂಬಾಳೆ ವಿಜಯ್ ಅವರು ಖರೀದಿಸಿದ್ರೆ ರಾಯಲ್ ಚಾಲೆಂಜರ್ಸ್‌ ಫ್ಯಾನ್ಸ್‌ಗೆ ಡಬಲ್ ಧಮಾಕ ಗ್ಯಾರಂಟಿ.

ಹೌದು.. ಹೊಂಬಾಳೆ ಫಿಲಂಸ್ ಆರ್‌ಸಿಬಿ ಫ್ರಾಂಚೈಸ್‌ನ ಖರೀದಿ ಮಾಡೋದ್ರಿಂದ ಒಂದಲ್ಲ ಎರಡೆರಡು ಬಿಗ್ ಬ್ರೇಕಿಂಗ್ ನ್ಯೂಸ್‌‌ಗಳು ಕೊಡೋ ಸಾಧ್ಯತೆಯಿದೆ. ಇತ್ತೀಚೆಗೆ ಆರ್‌‌ಸಿಬಿ ಕಪ್ ಗೆದ್ದು, ಫ್ಯಾನ್ಸ್ ಮೀಟ್ ಮಾಡುವಾಗ ಆದಂತಹ ದುರಂತದಿಂದ ಕಿಂಗ್ ಕೊಹ್ಲಿ ಬೇಜಾರಾಗಿದ್ದಾರೆ. ಹಾಗಾಗಿ ಕೊಹ್ಲಿ ಟೀಂ ತೊರೆಯುತ್ತಾರೆ ಅನ್ನೋ ಮಾತುಗಳು ಕೇಳಿಬವರ್ತಿವೆ. ಆದ್ರೆ ಹೊಂಬಾಳೆ ಫಿಲಂಸ್ ರನ್ ಮಷಿನ್ ಕೊಹ್ಲಿಯನ್ನ  ಟೀಂನಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಜೊತೆಗೆ ಕಿಂಗ್ ಕೊಹ್ಲಿ ಬಯೋಪಿಕ್ ಸಿನಿಮಾನ ಹೊಂಬಾಳೆ ಫಿಲಂಸ್ ಅವರೇ ನಿರ್ಮಾಣ ಮಾಡುವ ಸಾಧ್ಯತೆಯೂ ಜಾಸ್ತಿ ಇದೆ. ಹೃತಿಕ್ ರೋಷನ್, ಪ್ರಭಾಸ್, ಫಹದ್ ಫಾಸಿಲ್, ಪೃಥ್ವಿರಾಜ್ ಸುಕುಮಾರನ್, ಮಹಾನಟಿ ಕೀರ್ತಿ ಸುರೇಶ್, ಪುನೀತ್ ರಾಜ್‌ಕುಮಾರ್, ಯಶ್, ರಿಷಬ್ ಶೆಟ್ಟಿ, ಸಂಜಯ್ ದತ್ ಅಂತಹ ಸ್ಟಾರ್ಸ್‌ಗೆ ವರ್ಲ್ಡ್‌ ಕ್ಲಾಸ್ ಸಿನಿಮಾಗಳನ್ನ ಮಾಡಿರೋ ಹೊಂಬಾಳೆ ಫಿಲಂಸ್, ಕೊಹ್ಲಿ ಬಯೋಪಿಕ್‌‌ನ ಧೋನಿ ಬಯೋಪಿಕ್‌ಗಿಂತ ಅದ್ಭುತವಾಗಿ ತೆರೆಗೆ ತರೋ ಭರವಸೆಯಿದೆ. ಸೋ.. ಆರ್‌ಸಿಬಿ ಮಾಲೀಕತ್ವ ಹೊಂಬಾಳೆ ಪಾಲಾಗುತ್ತಾ ಅಥ್ವಾ ಇಲ್ಲವಾ ಅನ್ನೋದನ್ನ ಇನ್ನಷ್ಟೇ ಕಾದುನೋಡಬೇಕಿದೆ.

ಕನ್ನಡ ಟೀಂಗೆ ಕನ್ನಡಿಗರೇ ಮಾಲೀಕರಾಗಿಲ್ಲ ಅಂತ ಗೊಣಗಿಕೊಳ್ತಿದ್ದ ಹಾಗೂ ಆರ್‌‌ಸಿಬಿ ಮ್ಯಾನೇಜ್ಮೆಂಟ್ ಕನ್ನಡ ಪ್ಲೇಯರ್ಸ್‌ನ ಆಯ್ಕೆ ಮಾಡ್ತಿಲ್ಲ ಅಂತ ಬೇಸರಗೊಂಡಿದ್ದ ರಾಯಲ್ ಲಾಯಲ್ ಫ್ಯಾನ್ಸ್‌ಗೆ ಹೊಂಬಾಳೆ ಫಿಲಂಸ್ ತಕ್ಕ ಉತ್ತರ ಕೊಡುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor (63)

ಎಸ್ ಎಂ ಕೃಷ್ಣ ದಶಪಥ ರಸ್ತೆ ಇಂದು ಲೋಕಾರ್ಪಣೆ

by ದಿಶಾ ಕೆ. ಎಸ್.
June 27, 2026 - 10:19 am
0

Web Photo Editor (63)

ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಬೆಂಗಳೂರಿನಲ್ಲಿ ಇಂದು 15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ

by ದಿಶಾ ಕೆ. ಎಸ್.
June 27, 2026 - 9:45 am
0

Web Photo Editor (63)

ಅವಳಿ ಭೂಕಂಪಕ್ಕೆ ತತ್ತರಿಸಿದ ವೆನೆಜುವೆಲಾ: ಸಾವಿನ ಸಂಖ್ಯೆ 920ಕ್ಕೆ ಏರಿಕೆ

by ದಿಶಾ ಕೆ. ಎಸ್.
June 27, 2026 - 9:26 am
0

Web Photo Editor (64)

ಇಂದು ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ

by ದಿಶಾ ಕೆ. ಎಸ್.
June 27, 2026 - 9:09 am
0

ಸಂಬಂಧಿಸಿದ ಪೋಸ್ಟ್‌ಗಳು

  • 4
    ವೆನೆಜುವೆಲಾದಲ್ಲಿ ಜೋಡಿ ಭೂಕಂಪ: ಸಾವಿನ ಸಂಖ್ಯೆ 200 ಮುಂದುವರೆದ ರಕ್ಷಣಾ ಕಾರ್ಯಾಚರಣೆ
    June 26, 2026 | 0
  • 3
    BMTC, KSRTC ಬಸ್ ಟಿಕೆಟ್ ದರ ಮತ್ತೆ ಏರಿಕೆ? ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಸಾರಿಗೆ ನಿಗಮಗಳು
    June 26, 2026 | 0
  • 2
    ಹೋರ್ಮುಜ್ ಜಲಸಂಧಿಯಲ್ಲಿ ಮತ್ತೆ ಕೆರಳಿದ  ಉದ್ವಿಗ್ನತೆ: ಒಮಾನ್ ಸಮೀಪ ಸರಕು ಹಡಗು ಮೇಲೆ ದಾಳಿ..!
    June 26, 2026 | 0
  • Untitled design 2026 06 25T231424.370
    ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ: ಸ್ಪಷ್ಟನೆ ನೀಡಿದ ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ
    June 25, 2026 | 0
  • Untitled design 2026 06 25T225232.048
    ಹೋಟೆಲ್ ಉದ್ಯಮಿಗಳಿಗೆ ಕೇಂದ್ರದಿಂದ ಗುಡ್‌ನ್ಯೂಸ್: ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವು
    June 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version