ಸ್ಟೇಟ್ ಫಿಲ್ಮ್ ಅವಾರ್ಡ್ಸ್ ಫಂಕ್ಷನ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ನೇರವಾಗಿಯೇ ಚಾಟಿ ಬೀಸಿದ್ದಾರೆ. ಅಂದು ಡಿಸಿಎಂ ಡಿಕೆಶಿ ಚಿತ್ರರಂಗದವರಿಗೆ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಅಂದಿದ್ರು. ಈಗ ಖುದ್ದು ಸಿಎಂ, ಡೈರೆಕ್ಟ್ ಆಗಿ ಹೀರೋಗಳ ಹೀರೋಯಿಸಂ ಹಿಂದಿನ ನಗ್ನ ಸತ್ಯವನ್ನು ತೆರೆದಿಟ್ಟಿದ್ದಾರೆ.
ಅರಮನೆ ನಗರಿ ಮೈಸೂರಿನಲ್ಲಿ ಇತ್ತೀಚೆಗೆ 2018-19ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭ ನಡೆಯಿತು. ಸಿಎಂ ಸಿದ್ದರಾಮಯ್ಯ ನಟ ರಿಷಬ್ ಶೆಟ್ಟಿ ದಂಪತಿ ಸೇರಿದಂತೆ ಸಾಕಷ್ಟು ಮಂದಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು. ಸರ್ಕಾರಿ ಪ್ರಾಥಮಿಕ ಶಾಲೆ ಚಿತ್ರಕ್ಕೆ ಅವಾರ್ಡ್ ಪಡೆದ ರಿಷಬ್ ಶೆಟ್ಟಿ, ಅದನ್ನ ಸರ್ಕಾರಿ ಶಾಲೆ ಮಕ್ಕಳಿಗೆ ಅರ್ಪಿಸುತ್ತೇನೆ ಎಂದರು.
ಸ್ಟಾರ್ಸ್‌ಗೆ CM ಚಾಟಿ.. ಸಿನಿಮಾದಿಂದ ಜನ ಬದಲಾಗಲ್ಲ
DCM ನಟ್ಟು-ಬೋಲ್ಟ್ ಸ್ಟೇಟ್ಮೆಂಟ್.. ಸಿಎಂ ಟ್ರೀಟ್ಮೆಂಟ್..!
ಇನ್ನು ಕಾಂತಾರ ಚಿತ್ರದ ಬಗ್ಗೆ ಬರ್ತಿರೋ ಮೆಚ್ಚುಗೆಯ ಮಹಾಪೂರಗಳನ್ನ ಆಲಿಸಿರೋ ಸಿಎಂ ಸಿದ್ದರಾಮಯ್ಯ, ಇನ್ನೂ ಸಿನಿಮಾ ನೋಡಲು ಆಗಲಿಲ್ಲ. ಆದಷ್ಟು ಬೇಗ ಕಾಂತಾರ-1 ನೋಡಿಯೇ ನೋಡುತ್ತೇನೆ ಎಂದರು. ಅಲ್ಲದೆ, ಆಗ ದಿನವೂ ಸಿನಿಮಾ ನೋಡ್ತಿದ್ದೆವು. ಸಿನಿಮಾ ಮಾಡೋರ ಸಂಖ್ಯೆ ಕಮ್ಮಿ ಇತ್ತು. ಈಗ ಸಿನಿಮಾ ಮಾಡೋರ ಸಂಖ್ಯೆ ಜಾಸ್ತಿ ಆಗಿದೆ. ಸಾಮಾಜಿಕ ಮೌಲ್ಯಗಳು ಕೂಡ ಇಲ್ಲದಂತಾಗಿವೆ ಎಂದರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೇರವಾಗಿಯೇ ಚಿತ್ರರಂಗದ ಸ್ಟಾರ್ ಹೀರೋಗಳಿಗೆ ಚಾಟಿ ಬೀಸಿದರು. ಈಗ ಸಿನಿಮಾ ಹೀರೋಗಳನ್ನ ನೋಡಿ ಜನ ಬದಲಾವಣೆ ಆಗೋದು ಕಡಿಮೆ ಆಗಿದೆ. ಅಣ್ಣಾವ್ರ ಕಾಲದ ರೀತಿ ಈಗ ಇಲ್ಲ. ಪರದೆ ಮೇಲೆ ಒಂದು ರೀತಿ, ನಿಜ ಜೀವನದಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಇರಬಾರದು ಎಂದರು. ಡಾ ರಾಜ್‌ಕುಮಾರ್ ಸಿನಿಮಾ ಹಾಗೂ ರಿಯಲ್ ಲೈಫ್‌ನಲ್ಲಿ ಒಂದೇ ರೀತಿ ಇದ್ದರು. ಹಾಗಾಗಿಯೇ ಅವ್ರನ್ನ ಇಂದಿಗೂ ನಾವು ಸ್ಮರಿಸಿಕೊಳ್ಳುತ್ತೇವೆ ಎಂದರು.
ತೆರೆ ಮೇಲೆ ಒಂದು ರೀತಿ.. ನಿಜ ಜೀವನದಲ್ಲಿ ಒಂದು ರೀತಿ
ಡಾ. ರಾಜ್‌ಕುಮಾರ್‌ನ ಸ್ಮರಿಸಿ, ಸಿದ್ದು ನೀಡಿದ್ರು ಎಚ್ಚರಿಕೆ..!
ಅಂದಹಾಗೆ ಸಿಎಂ ಈ ಮಾತನ್ನ ನಟ ದರ್ಶನ್‌ರನ್ನ ಗಮನದಲ್ಲಿಟ್ಟುಕೊಂಡು ಹೇಳಿದ್ರೂ ಅಚ್ಚರಿಯಿಲ್ಲ. ಯಾಕಂದ್ರೆ ತೆರೆ ಮೇಲೆ ಹೀರೋಯಿಸಂ ತೋರಿಸೋ ಸ್ಟಾರ್, ನಿಜ ಜೀವನದಲ್ಲಿ ಕೊಲೆ ಆರೋಪ ಹೊತ್ತು ಜೈಲು ಸೇರಿದ್ದಾರೆ. ನಟ ದರ್ಶನ್ ಅಷ್ಟೇ ಅಲ್ಲ, ಯಾವುದೇ ಸ್ಟಾರ್ ಆಗಲಿ, ತನ್ನನ್ನ ಆರಾಧಿಸೋ ಅಥ್ವಾ ಅಭಿಮಾನಿಸೋ ದೊಡ್ಡ ಅಭಿಮಾನಿ ಬಳಗಕ್ಕೆ ಮಾದರಿ ಆಗಿರಬೇಕು. ಅದು ಬಿಟ್ಟು ಅವ್ರ ಹೀರೋಯಿಸಂ ತೆರೆಗೆ ಮಾತ್ರ ಸೀಮಿತ ಆದ್ರೆ ಬರೀ ಸಿಎಂ ಅಷ್ಟೇ ಅಲ್ಲ, ಶ್ರೀಸಾಮಾನ್ಯ ಕೂಡ ಈ ಬಗ್ಗೆ ಮಾತಾಡ್ತಾನೆ.
ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಚಿತ್ರರಂಗದ ಮಂದಿಗೆ ನಟ್ಟು ಬೋಲ್ಡ್ ಟೈಟ್ ಮಾಡೋ ವಿಚಾರ ಸ್ಟೇಟ್ಮೆಂಟ್ ನೀಡಿದ್ರು. ಈಗ ಸಿಎಂ ನೇರವಾಗಿಯೇ ಟ್ರೀಟ್ಮೆಂಟ್ ವಿಚಾರ ಮಾತನಾಡಿದ್ದಾರೆ. ಸಿಎಂ ಮಾತು ಅಕ್ಷರಶಃ ನಿಜ ಅಣ್ಣಾವ್ರ ಸಾಮಾಜಿಕ ಚಿತ್ರಗಳನ್ನ ಕಂಡು ಜನ ಪ್ರೇರಿತರಾಗುತ್ತಿದ್ದರು. ಬಂಗಾರದ ಮನುಷ್ಯ ಸಿನಿಮಾ ಬಳಿಕ ಅದೆಷ್ಟೋ ಮಂದಿ ಯುವಕರು ಸಿಟಿ ಬಿಟ್ಟು ಹಳ್ಳಿಗಳಿಗೆ ವಾಪಸ್ ಆಗಿ ಕೃಷಿ ಆರಂಭಿಸಿದ್ದರು. ಅಂತಹ ಕ್ರಾಂತಿಗಳು ಈಗ ಆಗೋಕೆ ಸಾಧ್ಯವೇ..? ಸ್ಟಾರ್‌ಗಳೇ ಇದಕ್ಕೆ ಉತ್ತರಿಸಬೇಕು.





