ಮಹಾನಟಿ ಕೀರ್ತಿ ಸುರೇಶ್ಗೆ ಸಿನಿಮಾದ ಸುದ್ದಿಗೋಷ್ಠಿಯಲ್ಲೇ ತೊಡೆ ಸವರಿದ ನಿರ್ಮಾಪಕನನ್ನ ಕಂಡು ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ ಆಗ್ತಿತ್ತು. ಆದ್ರೆ ಸತ್ಯವಾನ್ ಸಾವಿತ್ರಿ ವೇದಿಕೆಯಲ್ಲಿ ಆಗಿದ್ದೇ ಬೇರೆ. ಪ್ರತ್ಯಕ್ಷವಾದ್ರೂ ಪರೀಕ್ಷಿಸಿ ನೋಡು ಅನ್ನೋ ಮಾತಿನಂತೆ.. ಸತ್ಯ ಏನು ಅನ್ನೋದನ್ನ ಕೀರ್ತಿ ಸುರೇಶ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಹಾಗಂತ ಪ್ರಶ್ನಿಸಿದವರಿಗೇ ಮರುಪ್ರಶ್ನೆ ಕೇಳೋ ಮೂಲಕ ಬಾಯಿ ಮುಚ್ಚಿಸಿದ್ದಾರೆ.
- ಮಹಾನಟಿ ತೊಡೆ ಸವರಿದ ನಿರ್ಮಾಪಕ.. ಸ್ಪಷ್ಟನೆ ಕೊಟ್ಟ ನಟಿ
- ಸತ್ಯವಾನ್ ಸಾವಿತ್ರಿ ಗೋಷ್ಠಿ.. ಕೀರ್ತಿ ಕಾಲ್ಮೇಲೆ ಮೈಸ್ಕಿನ್ ಕೈ..!
- ತಂದೆ-ಮಗಳ ಬಾಂಧವ್ಯ.. ನನ್ನ ಮುಖದಲ್ಲಿ ಮುಜುಗರ ಇತ್ತಾ?
- ಫಿಲ್ಮ್ ಸ್ಪರ್ಶ-ಸಾರ್ವಜನಿಕ ಸ್ಪರ್ಶ & ಸಹನೆ.. ಕೀರ್ತಿ ಕೌಂಟರ್
ಮಹಾನಟಿ ಖ್ಯಾತಿಯ ನಟಿ ಕೀರ್ತಿ ಸುರೇಶ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅದಕ್ಕೆ ಕಾರಣ ಅವ್ರ ಸಿನಿಮಾಗಳು, ವೆಬ್ ಸೀರೀಸ್ಗಳು ಹಾಗೂ ಅವುಗಳ ಕಥಾವಸ್ತು. ಯೆಸ್.. ಸದ್ಯ ಅಕ್ಕ ಅನ್ನೋ ವೆಬ್ ಸೀರೀಸ್ನ ಜನ ಮುಗಿಬಿದ್ದು ನೋಡ್ತಿದ್ದಾರೆ. ಮತ್ತೊಂದ್ಕಡೆ ಲೀಗಲ್ ಡ್ರಾಮಾ ಕಥಾನಕದ ಸತ್ಯವಾನ್ ಸಾವಿತ್ರಿ ಸಿನಿಮಾ ಕೂಡ ಈ ವಾರ ತೆರೆಕಂಡಿದೆ. ಪ್ರವೀಣ್ ಎಸ್ ವಿಜಯ್ ನಿರ್ದೇಶನದಲ್ಲಿ ಕೀರ್ತಿ ಸುರೇಶ್-ಮೈಸ್ಕಿನ್ ನಟನೆಯ ಸಿನಿಮಾ ಸತ್ಯವಾನ್ ಸಾವಿತ್ರಿ.
ರಿಲೀಸ್ಗೂ ಮುನ್ನ ಚಿತ್ರತಂಡ ಪ್ರಮೋಷನ್ಸ್ಗಾಗಿ ಸುದ್ದಿಗೋಷ್ಠಿ ಏರ್ಪಡಿಸಿತ್ತು. ಆ ವೇಳೆ ಕೀರ್ತಿ ಸುರೇಶ್ ಜೊತೆ ಖಳನಾಯಕನಾಗಿ ಬಣ್ಣ ಹಚ್ಚಿರೋ ನಟ ಮೈಸ್ಕಿನ್ ಆಕೆಯ ಪಕ್ಕದಲ್ಲೇ ವೇದಿಕೆಯಲ್ಲಿ ಕೂತಿದ್ದರು. ಕೀರ್ತಿ ಸುರೇಶ್ ಪಾತ್ರ ಹಾಗೂ ಆಕೆಯ ಪರ್ಫಾಮೆನ್ಸ್ ಬಗ್ಗೆ ಮಾತಾಡುತ್ತಾ.. ಈಕೆ ನಿಜಕ್ಕೂ ಅದ್ಭುತ ಅನ್ನೋ ಅರ್ಥದಲ್ಲಿ ಆತನ ಕೈ ಕೀರ್ತಿ ಸುರೇಶ್ ತೊಡೆಯ ಮೇಲೆ ಹೋಗಿತ್ತು. ಆ ನಂತ್ರ ತಲೆ ಮೇಲೆ ಕೂಡ ಒಮ್ಮೆ ಹೋಗಿತ್ತು. ಅದನ್ನ ಕಂಡಂತಹ ನೆಟ್ಟಿಗರು ಇದೇನಿದು ಕೀರ್ತಿ ಸುರೇಶ್ಗೆ ಸಾರ್ವಜನಿಕವಾಗಿಯೇ ಸಹ ನಟ ಮೈಸ್ಕಿಲ್ ಹೀಗೆ ತೊಡೆ ಸವರುತ್ತಿದ್ದಾರೆ ಅಂತ ಟ್ರೋಲ್ ಮಾಡಿದ್ರು.
ಯಾವಾಗ ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋ ವಿವಾದ ಸೃಷ್ಟಿಸಿತೋ.. ಸಿಕ್ಕಾಪಟ್ಟೆ ಚರ್ಚೆಗೆ ಬಂತು. ಆಗ ಆ ಬಗ್ಗೆ ಕೊನೆಗೂ ಮೌನ ಮುರಿದಿರೋ ಕೀರ್ತಿ ಸುರೇಶ್.. ತಮ್ಮ ಎಕ್ಸ್ ಖಾತೆಯಲ್ಲಿ ಹೀಗಂತ ಸ್ಪಷ್ಟನೆ ನೀಡಿದ್ದಾರೆ. ‘ಮೊದಲನೆಯದಾಗಿ ನನ್ನ ಮುಖದಲ್ಲಿ ನಿಮಗೆ ಆ ತರಹದ ಮುಜುಗರ ಎಲ್ಲಿ ಕಾಣಿಸಿತು..? ನಮ್ಮಿಬ್ಬರ ನಡುವೆ ತಂದೆ-ಮಗಳ ಬಾಂಧವ್ಯವಿದೆ. ಹಾಗಂತ ನಾವಿಬ್ಬರೂ ಹೇಳಿದ್ದನ್ನ ನೀವು ಕೇಳಿಸಿಕೊಳ್ಳಲಿಲ್ಲವೇ ಬ್ರದರ್’ ಅಂತ ಟೀಕಾಕಾರರಿಗೆ ಖಾರವಾಗಿಯೇ ಉತ್ತರಿಸಿದ್ದಾರೆ. ಅಲ್ಲದೆ.. ‘ಒಂದು ವೇಳೆ ನನಗೆ ಮುಜುಗರವಾಗಿದ್ದರೂ.. ಸಿನಿಮಾಗಳಲ್ಲಿ ನಟಿಸುವಾಗ ಸ್ಪರ್ಶಿಸುತ್ತಾರೆ.. ಆದ್ದರಿಂದ ಸಾರ್ವಜನಿಕವಾಗಿಯೂ ಅದನ್ನು ಸಹಿಸಿಕೊಳ್ಳಬೇಕು. ಹೀಗಂತ ಕೆಲವರು ವಾದಿಸುತ್ತಿದ್ದೀರಿ. ಸಹೋದರರೇ.. ಮೊದಲು ನಿಮ್ಮ ಆಲೋಚನೆಯನ್ನ ಸರಿಪಡಿಸಿಕೊಳ್ಳಿ’ ಎಂದಿದ್ದಾರೆ. ಅದನ್ನೇ ಸಂದರ್ಶನವೊಂದಲ್ಲಿ ಕೂಡ ಹೊರಹಾಕಿದ್ದಾರೆ.
ಸೆಲೆಬ್ರಿಟಿಗಳ ಲೈಫೇ ಹೀಗೆ. ಸೋಶಿಯಲ್ ಮೀಡಿಯಾ ವ್ಯಾಪಕವಾಗಿ ಬೆಳೆದು ನಿಂತಿರೋ ಇತ್ತೀಚಿನ ದಿನಗಳಲ್ಲಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಬದುಕಬೇಕಾಗುತ್ತೆ. ಇಲ್ಲವಾದ್ರೆ ಮಾಡದೇ ಇರೋ ತಪ್ಪಿಗೂ ಶಿಕ್ಷೆ ಅನುಭವಿಸಬೇಕಾಗುತ್ತೆ. ಸದ್ಯ ಕೀರ್ತಿ ಸುರೇಶ್ ಇಂಥದ್ದೊಂದು ವಿವಾದಕ್ಕೆ ಖಡಕ್ ಆಗಿಯೇ ಕ್ಲ್ಯಾರಿಟಿ ಕೊಡೋ ಮೂಲಕ ಅದಕ್ಕೆ ಫುಲ್ಸ್ಟಾಪ್ ಇಟ್ಟಿದ್ದಾರೆ. ಮುಂದೆ ಇದು ಯಾವ ರೂಪ ಪಡೆಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





