• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಾರ್ಕ್ ಗ್ಯಾಂಗ್‌ಸ್ಟರ್ ವರ್ಲ್ಡ್‌‌ಗೆ ಯಶ್ ರಾ ‘ಕಿಂಗ್’..!

ತ್ರಿಬಲ್ ರೋಲ್‌‌.. ಟಾಕ್ಸಿಕ್‌‌‌ ಕಲ್ಟ್ ಟ್ರೈಲರ್ ಸೆನ್ಸೇಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 9, 2026 - 3:40 pm
in ಸಿನಿಮಾ
0 0
0
Untitled design 2026 08 09T154003.888

ಭೂಮ್.. ಮೋಸ್ಟ್ ಎಕ್ಸ್‌ಪೆಕ್ಟೆಡ್ ಟಾಕ್ಸಿಕ್ ಪ್ರಪಂಚ ಅನಾವರಣಗೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಒಂದಲ್ಲ, ಎರಡಲ್ಲ ಮೂರು ಮೂರು ಪಾತ್ರಗಳಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಮೋಹ, ವ್ಯಾಮೋಹಗಳ ಉನ್ಮಾದ, ಡೆಡ್ಲಿ & ಡೇರಿಂಗ್ ಗ್ಯಾಂಗ್‌ಸ್ಟರ್‌‌ಗಳ ರಾ & ರಗಡ್ ಆ್ಯಕ್ಷನ್ ಆಟ ಕಣ್ಣಿಗೆ ಹಬ್ಬವೋ ಹಬ್ಬ. ಹಾಗಾದ್ರೆ ಹೇಗಿದೆ ಆ ಡಾರ್ಕ್ ಗ್ಯಾಂಗ್‌ಸ್ಟರ್ ಲೋಕ..? ಕಥೆ ಎಷ್ಟು ವೈಲ್ಡ್ ಆಗಿದೆ..? ಪಾತ್ರಗಳು ಎಷ್ಟು ಬೋಲ್ಡ್ ಆಗಿವೆ..? ಟ್ರೈಲರ್ ನೋಡಿ ನಿಬ್ಬೆರಗಾಗಿರೋ ವರ್ಲ್ಡ್ ಸಿನಿದುನಿಯಾ ಏನು ಹೇಳ್ತಿದೆ ಅಂತೀರಾ..? ಇಲ್ಲಿದೆ ನೋಡಿ ಫುಲ್‌ ಡಿಟೇಲ್ಸ್‌‌..

  • ಡಾರ್ಕ್ ಗ್ಯಾಂಗ್‌ಸ್ಟರ್ ವರ್ಲ್ಡ್‌‌ಗೆ ಯಶ್ ರಾ ‘ಕಿಂಗ್’..!
  • ವೈಲ್ಡ್ ಕಥೆ ಬೋಲ್ಡ್ ರೋಲ್ಸ್.. ಮೈಂಡ್ ಬ್ಲೋಯಿಂಗ್
  • ತ್ರಿಬಲ್ ರೋಲ್‌‌.. ಟಾಕ್ಸಿಕ್‌‌‌ ಕಲ್ಟ್ ಟ್ರೈಲರ್ ಸೆನ್ಸೇಷನ್
  • ರಾಯ-ಟಿಕೆಟ್-ರೂಮಿ.. ಯಶ್ ಒನ್ ಮ್ಯಾನ್ ಶೋ

ಟೀಸರ್‌ಗಳು ಹಾಗೂ ಸಾಂಗ್ಸ್‌‌ನಿಂದ ಭಾರತೀಯ ಚಿತ್ರರಂಗದಲ್ಲಿ ಸುನಾಮಿ, ಸುಂಟರಗಾಳಿ ಎಬ್ಬಿಸೋ ಮುನ್ಸೂಚನೆ ನೀಡಿದ್ದ ಟಾಕ್ಸಿಕ್ ಸಿನಿಮಾ, ಇದೀಗ ಟ್ರೈಲರ್‌‌ನಿಂದ ವರ್ಲ್ಡ್ ಸಿನಿದುನಿಯಾಗೆ ಸ್ಟ್ರಾಂಗ್ ಮೆಸೇಜ್ ಪಾಸ್ ಮಾಡಿದೆ. ಅಟೆನ್ಷನ್ ಪ್ಲೀಸ್.. ಬಂದ ಗ್ಯಾಂಗ್‌ಸ್ಟರ್ ರಾಕಿಂಗ್ ಸ್ಟಾರ್ ಯಶ್ ಅನ್ನೋದನ್ನ ಗೊತ್ತು ಮಾಡಿಸಿದೆ. ಯೆಸ್.. ಟಾಕ್ಸಿಕ್ ಟ್ರೈಲರ್ ಜಸ್ಟ್ ಅಮೇಜಿಂಗ್. ಅದನ್ನ ಪದಗಳಲ್ಲಿ ಬಣ್ಣಿಸೋಕೆ ಆಗದಷ್ಟು ಅದ್ಭುತ, ಅಮೋಘ, ಅದ್ವಿತೀಯವಾಗಿದೆ.

RelatedPosts

ಶಿವಣ್ಣ ಅಭಿನಯದ ‘ಒರಿಜಿನಲ್ ಮಾನ್ ಸ್ಟರ್’ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್

ಮೊದಲ ದಿನ 60 ಶೋ, 7ನೇ ದಿನ 486; ‘ಪ್ರೇಮದ ಊರಲಿ’ಗೆ ಪ್ರೇಕ್ಷಕರ ಭರ್ಜರಿ ಬೆಂಬಲ

ನಟಿ ರಮ್ಯಾಗೆ ಓಪನ್ ಚಾಲೆಂಜ್..ಏನು ಪ್ರಸಾದ್ ಇದೆಲ್ಲಾ..?

ಪ್ರೇಮದ ಊರಲಿ ಗೆಲುವಿಗೆ ಡಾಲಿ ಧನಂಜಯ ಜೈಕಾರ

ADVERTISEMENT
ADVERTISEMENT

ಇದೊಂದು ಔಟ್ ಅಂಡ್ ಔಟ್ ಡಾರ್ಕ್ ಗ್ಯಾಂಗ್‌ಸ್ಟರ್ ಕಥಾನಕ ಆಗಿದ್ದು, ಆ ಟಾಕ್ಸಿಕ್ ಲೋಕಕ್ಕೆ ರಾ ಕಿಂಗ್ ಮಾತ್ರ ನಮ್ಮ ಹೆಮ್ಮೆಯ ಕನ್ನಡಿಗ ಯಶ್. ಇಲ್ಲಿಯ ತನಕ ಯಶ್ ಡಬಲ್ ರೋಲ್ ಅಂದುಕೊಂಡಿದ್ದವ್ರಿಗೆ ಟ್ರೈಲರ್‌‌ ಸಖತ್ ಸರ್‌‌ಪ್ರೈಸ್ ನೀಡಿದೆ. ಯಾಕಂದ್ರೆ ಯಶ್ ತ್ರಿಬಲ್ ರೋಲ್‌‌‌ನಲ್ಲಿ ಮಲ್ಟಿ ಶೇಡ್ಸ್‌‌ ಅವತಾರ ಎತ್ತಿದ್ದಾರೆ. ರಾಯ, ಟಿಕೆಟ್ ಹಾಗೂ ರೂಮಿ ರೋಲ್‌‌ಗಳಲ್ಲಿ ಅವತಾರ ಪುರುಷ ರಾಕಿಭಾಯ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ.

ವೈಲ್ಡ್ ಕಥೆ.. ಬೋಲ್ಡ್ ಪಾತ್ರಗಳಿಂದ ಬ್ಯಾಂಗ್ ಮಾಡ್ತಿದೆ ಟಾಕ್ಸಿಕ್. ಮೈಂಡ್ ಬ್ಲೋಯಿಂಗ್ ಮೇಕಿಂಗ್‌, ರಾ & ರಗಡ್ ಸೀಕ್ವೆನ್ಸ್‌‌ಗಳಿಂದ ಸಿಕ್ಕಾಪಟ್ಟೆ ಗುಂಗು ಹಿಡಿಸ್ತಿದೆ. ಔಟ್ & ಔಟ್ ಕಲ್ಟ್ ಸಿನಿಮಾ ಆಗಿರೋ ಈ ಚಿತ್ರ ಸ್ವತಂತ್ರ ನಂತರದ ದಿನಗಳಲ್ಲಿ ನಡೆಯೋ ಸ್ಟೈಲಿಶ್ ರೆಟ್ರೋ ಗ್ಯಾಂಗ್‌ಸ್ಟರ್ ಸಾಗಾ ಆಗಿ ಹೊರಹೊಮ್ಮಿದೆ. ಒಂದೊಂದು ಫ್ರೇಮ್ ಕೂಡ ಹಿಂದೆಂದೂ ಕಂಡು, ಕೇಳರಿಯದ ರೇಂಜ್‌ಗಿದೆ. ಭಾರತೀಯ ಚಿತ್ರರಂಗ ಇಲ್ಲಿಯ ತನಕ ನೋಡಿರದಷ್ಟು ಸ್ಪೈಸಿ ಆ್ಯಂಡ್ ಸ್ಪೆಷಲ್ ಅನಿಸಿದೆ.

  • 2 ವರ್ಷ.. 200 ದಿನ.. ತ್ಯಾಗ, ಪ್ರಾಮಾಣಿಕ ಪ್ರಯತ್ನಗಳ ಫಲ
  • ರಾಯ ನುಡಿದಂತೆ ಯಶ್ ಚಿತ್ರವಲ್ಲ.. ಇದು ಭಾರತೀಯ ಚಿತ್ರ

2024 ಆಗಸ್ಟ್ 8.. ಅಂದ್ರೆ ಎರಡು ವರ್ಷಗಳ ಹಿಂದೆ ಶೂಟಿಂಗ್ ಶುಭಾರಂಭ ಮಾಡಿದ ಟಾಕ್ಸಿಕ್ ಸಿನಿಮಾ, ಸತತ ಎರಡು ವರ್ಷಗಳ ನಿರಂತರ ಶೂಟಿಂಗ್, ಡಬ್ಬಿಂಗ್, ಎಡಿಟಿಂಗ್, ಸ್ಪೆಷಲ್ ಎಫೆಕ್ಸ್ಟ್, ವಿಎಫ್‌‌ಎಕ್ಸ್, ರೀ ರೆಕಾರ್ಡಿಂಗ್‌‌ನಿಂದ ಚಿತ್ರೀಕರಣ ಆರಂಭವಾದ ದಿನವೇ ಟ್ರೈಲರ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ಸ್ವತಃ ಯಶ್ ಅವ್ರೇ ಹೇಳಿದಂತೆ ಇದು ಬರೋಬ್ಬರಿ 200 ದಿನಗಳ ಕಾಲ ಸೆರೆಹಿಡಿಯಲಾದ ಬಿಗ್ & ಲ್ಯಾವಿಶ್ ಮಾಸ್, ಮಸಾಲ ಎಂಟರ್‌ಟೈನರ್. ಸಾವಿರಾರು ಮಂದಿ ಕಲಾವಿದರು, ತಂತ್ರಜ್ಞರ ಸಾಕಷ್ಟು ತ್ಯಾಗ, ಪ್ರಾಮಾಣಿಕ ಪ್ರಯತ್ನಗಳ ಪ್ರತಿಫಲ ಈ ಟಾಕ್ಸಿಕ್.

ಮೋಹ, ವ್ಯಾಮೋಹಗಳ ಹೂರಣವಿದು. ಇಲ್ಲಿ ಹಸಿಬಿಸಿ ದೃಶ್ಯಗಳ ಚಿತ್ರಣವಿದೆ. ಅದು ಬಿಟ್ಟು ಬೇರೇನೂ ಇಲ್ಲ ಅಂದುಕೊಂಡಿದ್ದವ್ರಿಗೆ ಅದರ ಹೊರತಾಗಿ ಒಂದು ಪ್ರಪಂಚವಿದೆ. ಇಂಟೆನ್ಸ್ ಎಮೋಷನ್ಸ್, ಸರಿ ತಪ್ಪುಗಳ ಆಚೆಗಿರೋ ಪ್ರಪಂಚದ ಅನಾವರಣಗೊಂಡಿದೆ. ಭಾವನೆಗಳು, ಬಂಧಗಳ ಭಾವನಾತ್ಮಕ ಲೋಕದ ಪರಿಚಯ ಆಗಿದೆ. ದಿಸ್ ಈಸ್ ಜಸ್ಟ್ ಟ್ರೈಲರ್. ಪಿಕ್ಚರ್ ಅಭಿ ಬಾಕಿ ಹೈ.

ಅಂದಹಾಗೆ ಖುದ್ದು ಯಶ್ ಅವ್ರೇ ಹೇಳಿದಂತೆ ಇದು ರಾಕಿಂಗ್ ಸ್ಟಾರ್ ಯಶ್ ಮೂವಿ ಅಲ್ಲ. ಇಂಡಿಯನ್ ಮೂವಿ. ಗ್ಲೋಬಲ್ ಮಾರ್ಕೆಟ್‌‌ನಲ್ಲಿ ಅದಕ್ಕೊಂದು ನೆಲೆ, ಬೆಲೆ ಕಟ್ಟಿಕೊಡ್ತಿರೋ ಸಿನಿಮಾ. ನಿರ್ಮಾಪಕರು ಹಾಕಿರೋ ಒಂದೊಂದು ರೂಪಾಯಿ ಕೂಡ ವ್ಯರ್ಥ ಆಗಿಲ್ಲ. ಸ್ಕ್ರೀನ್ ಮೇಲೆ ಕಾಣ್ತಿದೆ. ಅದಕ್ಕೆ ಯಶ್ ಅವ್ರೇ ಗ್ಯಾರಂಟಿ.. ವ್ಯಾರಂಟಿ ಎಲ್ಲವೂ ಕೂಡ.

  • ನಿರ್ಮಾಪಕರ ಹಣ ಸ್ಕ್ರೀನ್ ಮೇಲೆ ಕಾಣ್ತಿದೆ ಎಂದ ಯಶ್
  • ಕನ್ನಡಿಗರು ಕೊಟ್ಟ ಶಕ್ತಿ, ಪ್ರೀತಿಗೆ ರಾಕಿಂಗ್ ಸ್ಟಾರ್ ಧನ್ಯವಾದ
  • ಕಾಲಕ್ಕೆ ತಕ್ಕಂತೆ ನಡೀಬೇಕು.. ತಾಳಕ್ಕೆ ತಕ್ಕಂತೆ ಕುಣೀಬೇಕು
  • ಕನ್ನಡಿಗರು ತಲೆ ತಗ್ಗಿಸೋಕೆ ಬಿಡಲ್ಲ.. ಯಶ್ ಮೇಲೆ ನಂಬಿಕೆ ಇರ್ಲಿ

ಕರ್ನಾಟಕದ ಜನತೆ ಕೊಟ್ಟ ಶಕ್ತಿ ಹಾಗೂ ಗೆಲುವಿನಿಂದ ನಾವೆಲ್ಲರೂ ಇವತ್ತು ಇಲ್ಲಿ ಸೇರಿದ್ದೀವಿ ಎಂದ ಯಶ್, ಟಾಕ್ಸಿಕ್ ಹಳೆಯ ಗೆಲುವಿನ ಪ್ರತೀಕ ಎಂದರು. ಪ್ರತಿ ಗೆಲುವೂ ಸಹ ಅವ್ರು ಕೊಟ್ಟ ಜವಾಬ್ದಾರಿ. ದಾರಿ ಯಾವುದಾದ್ರೂ ಗುರಿ ಮುಟ್ಟಬೇಕು ಅಷ್ಟೇ. ಹೋರಾಟ ಇದ್ದೇ ಇರುತ್ತೆ. ಮುಂದೆ ಸಾಗ್ತಾ ಇರ್ಬೇಕು ಅನ್ನೋ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ರು. ಕೆಲವೊಮ್ಮೆ ಕಾಲಕ್ಕೆ ತಕ್ಕಂತೆ ನಡೆಯಬೇಕು.. ತಾಳಕ್ಕೆ ತಕ್ಕಂತೆ ಕುಣಿಯಬೇಕು. ಇದು ಈಗಿನ ಜನರೇಷನ್‌ಗೆ ತಕ್ಕಂತೆ ಮಾಡಿರೋ ಸಿನಿಮಾ. ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ನಿಮ್ಮನ್ನ ಎಂದೂ ಸಹ ನಾನು ತಲೆ ತಗ್ಗಿಸೋಕೆ ಬಿಡಲ್ಲ. ಯಶ್ ಮೇಲೆ ನಂಬಿಕೆ ಇರಲಿ ಎಂದ್ರು ಅಣ್ತಮ್ಮ ಯಶ್.

ಕನ್ನಡ ಹಾಗೂ ಇಂಗ್ಲಿಷ್‌‌ನಲ್ಲಿ ಏಕಕಾಲದಲ್ಲಿ ಚಿತ್ರಿಸಿರೋ ಈ ಸಿನಿಮಾ ಬಗ್ಗೆ ಮಾತಾಡ್ತಾ, ನಂದು ಮೈಸೂರು ಪಡವಾರಹಳ್ಳಿ. ನನ್ನ ಇಂಗ್ಲಿಷ್ ಮುಂಚೆ ಹೆಂಗಿತ್ತು ಅಂತ ಗೊತ್ತಲ್ವಾ..? ಅಂತ ಆಶಾದಾಯಕ ಮಾತುಗಳು, ತಮ್ಮ ಗುರಿ, ಪ್ರಯತ್ನ, ನಿಷ್ಟೆ, ನಿಷ್ಟುರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ರು ರಾಕಿಂಗ್ ರಾಯ.

  • ಸಂಬಂಧಗಳ ನಿಜಾಯ್ತಿ.. ರಾಧಿಕಾ ಫುಲ್ ಸಪೋರ್ಟ್
  • ಗೀತು ಮೋಹನ್‌ದಾಸ್‌ನ ಕೊಂಡಾಡಿದ ರಾಕಿಭಾಯ್

ಡೈರೆಕ್ಟರ್ ಗೀತು ಮೋಹನ್‌ದಾಸ್ ಹಾಗೂ ಎರಡ್ಮೂರು ಡಿಫ್ರೆಂಟ್ ಲುಕ್ಸ್‌‌ಗಾಗಿ ಸಿಕ್ಕಾಪಟ್ಟೆ ಸಮಯ ತೆಗೆದುಕೊಂಡಾದ ಅದಕ್ಕೆಲ್ಲಾ ಸಾಥ್ ನೀಡಿದ ಪತ್ನಿ, ಸ್ಯಾಂಡಲ್‌‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಬಗ್ಗೆ ಯಶ್ ಹೆಮ್ಮೆಯ ಮಾತುಗಳನ್ನಾಡಿದ್ರು. ಸಂಬಂಧಗಳಲ್ಲಿ ನಿಜಾಯ್ತಿ ಇರಬೇಕು ಎಂದರು.

  • ಸೇಮ್ ನನ್ನ ಹಾಗೆನೇ ನಯನತಾರಾ ಬ್ಯಾಡ್ ಸಿಸ್ಟರ್- ಯಶ್
  • ಹುಮಾ ಬ್ರ್ಯಾಂಡ್ ಅಂಬಾಸಿಡರ್.. ಡೋಂಟ್‌ಕೇರ್ ಕಿಯಾರಾ

ಲೇಡಿ ಸೂಪರ್ ಸ್ಟಾರ್ ನಯನತಾರಾ ಕುರಿತು ಹೆಮ್ಮೆಯ ಮಾತುಗಳಾಡಿದ ಯಶ್, ನನ್ನ ಹಾಗೆಯೇ ನಯನ ಕೂಡ ಬ್ಯಾಡ್ ಸಿಸ್ಟರ್ ಎಂದರು. ಅಲ್ಲಿಗೆ ಟಾಕ್ಸಿಕ್‌‌ನಲ್ಲಿ ಅಕ್ಕ-ತಮ್ಮನಾಗಿ ನಯನತಾರಾ-ಯಶ್ ಕಾಣಸಿಗೋದು ಪಕ್ಕಾ ಆದಂತೆ. ಇನ್ನೂ ಕಾನ್ಸ್ ಫಿಲ್ಮ್ ಫೆಸ್ಟ್‌‌ನಲ್ಲಿ ಎಲ್ಲಾ ಟಾಕ್ಸಿಕ್ ಪ್ರಮೋಷನ್ಸ್ ಮಾಡಿದ್ದ ಹುಮಾ ಖುರೇಷಿಯನ್ನ ನೀವು ಒಂಥರಾ ಬ್ರ್ಯಾಂಡ್ ಅಂಬಾಸಿಡರ್ ಎಂದ್ರು ಯಶ್. ಕಿಯಾರಾ ಪಾತ್ರ, ನಟನೆ ಬಗ್ಗೆ ಯಾರು ಏನೇ ಅಂದ್ರೋ ಟೋಂಟ್ ಕೇರ್ ಅಂತ ಅವ್ರ ಡೆಡಿಕೇಷನ್‌ನ ಕೊಂಡಾಡಿದ್ರು ಯಶ್. ಅಲ್ಲದೆ, ಕನ್ನಡತಿ ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ರು.

  • ಶಿವಣ್ಣನಿಂದ ಟ್ರೈಲರ್ ಲಾಂಚ್.. ತಮ್ಮನ ಪ್ರಯೋಗ ಹೆಮ್ಮೆ
  • ಟಿಕೆಟ್ ಡೈಲಾಗ್ ಹೊಡೆದು.. I m Waiting ಎಂದ ಶಿವಣ್ಣ

ಕೆಜಿಎಫ್-2 ಟ್ರೈಲರ್ ಲಾಂಚ್ ಮಾಡಿ ಶುಭ ಕೋರಿದ್ದ ದೊಡ್ಮನೆಯ ದೊರೆ ಡಾ. ಶಿವರಾಜ್‌‌ಕುಮಾರ್ ಕೈಯಿಂದಲೇ ಟಾಕ್ಸಿಕ್ ಟ್ರೈಲರ್ ಲಾಂಚ್ ಮಾಡಿಸಿದ್ರು ಯಶ್. ನಾನು ನಟಿಸಿದಷ್ಟೇ ಖುಷಿ ಆಯ್ತು ಎಂದ ಶಿವಣ್ಣ, ಡೈರೆಕ್ಷನ್, ಕ್ಯಾಮೆರಾ ವರ್ಕ್ ಮೈಂಡ್ ಬ್ಲೋಯಿಂಗ್ ಎಂದರು. ಯಶ್ ನನ್ನ ತಮ್ಮ ಇದ್ದಂತೆ. ಟ್ರೈಲರ್‌‌ನಲ್ಲಿ ಐ ಆ್ಯಮ್ ಕಮಿಂಗ್ ಅನ್ನೋ ಡೈಲಾಗ್ ಇದೆ.. ಇನ್‌ಫ್ಯಾಕ್ಟ್ ಐ ಆ್ಯಮ್ ವೆಯ್ಟಿಂಗ್. ನಾನು ಆಗಸ್ಟ್ 26ಕ್ಕೆ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ ಅಂದ್ರು ಕರುನಾಡ ಚಕ್ರವರ್ತಿ ಶಿವರಾಜ್‌‌ಕುಮಾರ್.

ಒಟ್ಟಾರೆ ಟಾಕ್ಸಿಕ್ ಟ್ರೈಲರ್ ಬಾಲಿವುಡ್‌ನ ಖಾನ್, ಕಪೂರ್‌‌ಗಳ ನಿದ್ದೆ ಕೆಡಿಸಿದೆ. ಹಾಲಿವುಡ್ ಮಂದಿಯನ್ನೂ ಹುಬ್ಬೇರಿಸಿದೆ. ಭಾರತೀಯರು ಈ ರೇಂಜ್‌ಗೆ ಸಿನಿಮಾ ಮಾಡಬಲ್ಲರಾ ಅನ್ನೋ ಆಲೋಚನೆ ಮೂಡುವಂತೆ ಮಾಡಿದೆ. ಅಸಲಿ ಆದ ಆಗಸ್ಟ್ 26ಕ್ಕೆ ಬಾಕ್ಸ್ ಆಫೀಸ್‌‌ನಲ್ಲಿ ಶುರುವಾಗಲಿದೆ. ದಿಸ್ ಈಸ್ ಜಸ್ಟ್ ಬಿಗಿನಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಜ್ಞಾನೇಶ್ (15)

ನಾಡಹಬ್ಬ ದಸರಾಗೆ ಚಿತ್ರರಂಗದ ಮೆರುಗು; ಮೈಸೂರಿನಲ್ಲಿ ಒಂದಾಗಲಿದ್ದಾರೆ ಸ್ಯಾಂಡಲ್‌ವುಡ್ ತಾರೆಯರು

by ದಿಶಾ ಕೆ. ಎಸ್.
October 2, 2026 - 2:48 pm
0

ಜ್ಞಾನೇಶ್ (14)

ನವರಾತ್ರಿ ಹಬ್ಬಕ್ಕೆ ಗುಡ್‌ನ್ಯೂಸ್: ತಿರುಪತಿ-ವಿಜಯಪುರ ನಡುವೆ ವಿಶೇಷ ರೈಲು ಸಂಚಾರ

by ದಿಶಾ ಕೆ. ಎಸ್.
October 2, 2026 - 1:37 pm
0

ಜ್ಞಾನೇಶ್ (13)

ಶಿವಣ್ಣ ಅಭಿನಯದ ‘ಒರಿಜಿನಲ್ ಮಾನ್ ಸ್ಟರ್’ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್

by ದಿಶಾ ಕೆ. ಎಸ್.
October 2, 2026 - 1:12 pm
0

ಜ್ಞಾನೇಶ್ (12)

ಭಾರತೀಯ ಪೈಲಟ್ ಜೊತೆ ಪ್ರಧಾನಿ ಮೋದಿ ಮಾತುಕತೆ: ಪ್ರಯಾಣಿಕರ ಜೀವ ಉಳಿಸಿದ ಪೈಲಟ್‌ ಧೈರ್ಯಕ್ಕೆ ಪ್ರಧಾನಿ ಮೆಚ್ಚುಗೆ

by ದಿಶಾ ಕೆ. ಎಸ್.
October 2, 2026 - 12:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಜ್ಞಾನೇಶ್ (13)
    ಶಿವಣ್ಣ ಅಭಿನಯದ ‘ಒರಿಜಿನಲ್ ಮಾನ್ ಸ್ಟರ್’ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್
    October 2, 2026 | 0
  • ಜ್ಞಾನೇಶ್ (5)
    ಮೊದಲ ದಿನ 60 ಶೋ, 7ನೇ ದಿನ 486; ‘ಪ್ರೇಮದ ಊರಲಿ’ಗೆ ಪ್ರೇಕ್ಷಕರ ಭರ್ಜರಿ ಬೆಂಬಲ
    October 2, 2026 | 0
  • Your paragraph text 2026 10 01T183726.268
    ನಟಿ ರಮ್ಯಾಗೆ ಓಪನ್ ಚಾಲೆಂಜ್..ಏನು ಪ್ರಸಾದ್ ಇದೆಲ್ಲಾ..?
    October 1, 2026 | 0
  • Your paragraph text 2026 10 01T174902.283
    ಪ್ರೇಮದ ಊರಲಿ ಗೆಲುವಿಗೆ ಡಾಲಿ ಧನಂಜಯ ಜೈಕಾರ
    October 1, 2026 | 0
  • Your paragraph text 2026 10 01T170219.270
    ಪರಪ್ಪನ ಅಗ್ರಹಾರಕ್ಕೆ ರಚಿತಾ ರಾಮ್..ಗುರುಗಳನ್ನ ನೋಡೋಕೆ ಗುರು.!
    October 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version