• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಚೀನಾಗೆ ಭಾರತದಿಂದ ಶಾಕ್; ಅರುಣಾಚಲದ 27 ಸ್ಥಳಗಳಿಗೆ ಅಧಿಕೃತ ಹೆಸರು

ಕವಿತಾ by ಕವಿತಾ
August 8, 2026 - 8:44 am
in ದೇಶ
0 0
0
Untitled design (8)

ನವದೆಹಲಿ, (ಆಗಸ್ಟ್ 8): ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಅರುಣಾಚಲ ಪ್ರದೇಶದ 27 ಪ್ರಮುಖ ಸ್ಥಳಗಳು ಹಾಗೂ ಭೌಗೋಳಿಕ ವೈಶಿಷ್ಟ್ಯಗಳನ್ನು ಸರ್ವೇ ಆಫ್ ಇಂಡಿಯಾದ ಅಧಿಕೃತ ನಕ್ಷೆಯಲ್ಲಿ ಗುರುತಿಸಿ ಹೆಸರುಗಳನ್ನು ದಾಖಲಿಸಲಾಗಿದೆ. ಈ ಮೂಲಕ ಈ ಪ್ರದೇಶಗಳ ಕುರಿತು ದೇಶ-ವಿದೇಶಗಳಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಹಾಗೂ ಅಧಿಕೃತವಾಗಿ ನಿಖರ ಗುರುತನ್ನು ದಾಖಲಿಸುವುದು ಸರ್ಕಾರದ ಉದ್ದೇಶವಾಗಿದೆ.

ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಚೀನಾ ಪದೇಪದೆ ಪರ್ಯಾಯ ಹೆಸರುಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಚೀನಾ ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್’ ಎಂದು ಉಲ್ಲೇಖಿಸುತ್ತಿದ್ದು, ಅಲ್ಲಿನ ಹಲವು ಪ್ರದೇಶಗಳಿಗೆ ಚೀನೀ ಹೆಸರುಗಳನ್ನು ನೀಡುವ ಪ್ರಯತ್ನ ನಡೆಸಿದೆ. ಆದರೆ ಇಂತಹ ಏಕಪಕ್ಷೀಯ ಹೆಸರಿನ ಬದಲಾವಣೆಗಳು ನೆಲದ ವಾಸ್ತವತೆ ಅಥವಾ ಭಾರತದ ಸಾರ್ವಭೌಮತ್ವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಭಾರತ ಹಲವು ಬಾರಿ ಸ್ಪಷ್ಟಪಡಿಸಿದೆ.

RelatedPosts

ಉತ್ತರ ಪ್ರದೇಶದಲ್ಲಿ ಮಳೆ ಆರ್ಭಟ: 15 ಮಂದಿ ಸಾ*ವು, 100ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಚಿನ್ನ-ಹಣ ತೋರಿಸಿ ರೀಲ್ಸ್ ಮಾಡಿದ್ದ ಯೂಟ್ಯೂಬರ್: ಮನೆಯಲ್ಲಿದ್ದ ಚಿನ್ನಾಭರಣ ದೋಚಿದ ಕಳ್ಳರು!

ಭಯೋತ್ಪಾದನೆಗೆ ತಕ್ಕ ಬೆಲೆ ತೆರಲೇಬೇಕು: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಪತಿ-ಪತ್ನಿ ಆತ್ಮಹತ್ಯೆಗೆ ಶರಣು: ಪೊಲೀಸರ ಕಿರುಕುಳ ಶಂಕೆ

ADVERTISEMENT
ADVERTISEMENT

LAC ಸಮೀಪದ ಪ್ರಮುಖ ಪ್ರದೇಶಗಳೂ ಪಟ್ಟಿಯಲ್ಲಿ

ಸರ್ವೇ ಆಫ್ ಇಂಡಿಯಾದ ನಕ್ಷೆಯಲ್ಲಿ ಗುರುತಿಸಲಾದ ಸ್ಥಳಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (LAC) ಸಮೀಪದಲ್ಲಿರುವ ಲಾಂಗ್ ಜು ಕೂಡ ಸೇರಿದೆ. 1959ರಲ್ಲಿ ಭಾರತ-ಚೀನಾ ನಡುವಿನ ಆರಂಭಿಕ ಗಡಿ ಘರ್ಷಣೆ ನಡೆದ ಪ್ರದೇಶಗಳಲ್ಲಿ ಲಾಂಗ್ ಜು ಪ್ರಮುಖವಾಗಿದೆ.

ಮೇಲಿನ ಸುಬನ್ಸಿರಿ ಜಿಲ್ಲೆಯ ಮಜಾ ಗ್ರಾಮ, ಬಿಸಾ ಹಾಗೂ ಆಯಕಟ್ಟಿನ ಪರ್ವತ ಮಾರ್ಗಗಳಾದ ಡಿಜೋ ಲಾ, ರಿಜಾ ಲಾ ಮತ್ತು ಪುಕುರ್ ಲಾಗಳನ್ನು ಸಹ ಅಧಿಕೃತ ನಕ್ಷೆಯಲ್ಲಿ ಗುರುತಿಸಲಾಗಿದೆ. 1962ರ ಭಾರತ-ಚೀನಾ ಯುದ್ಧದ ಆರಂಭಿಕ ಸಂಘರ್ಷಗಳಿಗೆ ಸಂಬಂಧಿಸಿದ ಥಾಗ್ ಲಾ ಪ್ರದೇಶಕ್ಕೂ ಅಧಿಕೃತ ನಕ್ಷೆಯಲ್ಲಿ ಸ್ಥಾನ ನೀಡಲಾಗಿದೆ.

ಇದೇ ವೇಳೆ ಪೂರ್ವ ಅರುಣಾಚಲ ಪ್ರದೇಶದ ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರವಾಗಿರುವ ಜೈರಾಂಪುರವನ್ನೂ ಪಟ್ಟಿಗೆ ಸೇರಿಸಲಾಗಿದೆ. ಮ್ಯಾನ್ಮಾರ್ ಗಡಿಯತ್ತ ಭದ್ರತಾ ಪಡೆಗಳ ಚಲನವಲನ ಹಾಗೂ ಸಂಪರ್ಕದ ದೃಷ್ಟಿಯಿಂದ ಈ ಪ್ರದೇಶ ಮಹತ್ವದ್ದಾಗಿದೆ.

ಹಲವು ಪ್ರಮುಖ ಸ್ಥಳಗಳಿಗೆ ನಕ್ಷೆಯಲ್ಲಿ ಸ್ಥಾನ

ಶಂಭು ಸರೋವರ್, ಬಾರಾ ಕುಂಡುನ್ ಮತ್ತು ಚೋಟಾ ಕುಂಡುನ್ ಸೇರಿದಂತೆ ಹಲವು ಭೌಗೋಳಿಕ ಪ್ರದೇಶಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ತವಾಂಗ್ ಮಾರ್ಗದಲ್ಲಿರುವ ಧನ್ಬರಿ, ಪ್ರೀತ್‌ನಗರ, ತೇರಿಟ್‌ನಗರ, ರಾಮನಗರ ಜಸ್ವಂತ್‌ಗಢ, ಸಾಗರ್, ಪದ್ಮಾ, ಜ್ಯೋತಿನಗರ ಮತ್ತು ಬೈಸಾಖಿ ಗ್ರಾಮಗಳಿಗೂ ಅಧಿಕೃತ ನಕ್ಷೆಯಲ್ಲಿ ಸ್ಥಾನ ನೀಡಲಾಗಿದೆ.

1962ರ ಯುದ್ಧದ ವೀರರಿಗೆ ಸಂಬಂಧಿಸಿದ ಕೆಲವು ಸ್ಥಳಗಳನ್ನೂ ಗುರುತಿಸಲಾಗಿದೆ. ತ್ರಿಲೋಕ್ ಸಿಂಗ್ ಥಾಪಾ ಸ್ಮರಣಾರ್ಥ ಸ್ಥಳ, ಚೋಟಾ ರೋಪುಕ್, ಬಾರಾ ರೋಪುಕ್, ಶಿವಾಜಿ ನಗರ, ಸುನ್‌ಪುರ, ಕಮ್ಲಾಂಗ್ ನಗರ ಹಾಗೂ ಶೇರ್-ಎ-ಥಾಪಾ ಸ್ಮಾರಕ ಈ ಪಟ್ಟಿಯಲ್ಲಿವೆ.

ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಸರ್ವೇ ಆಫ್ ಇಂಡಿಯಾ ನಕ್ಷೆಯಲ್ಲಿ ಈ ಸ್ಥಳಗಳನ್ನು ಗುರುತಿಸುವ ಮುಖ್ಯ ಉದ್ದೇಶ ಅವುಗಳ ನಿಖರ ಗುರುತನ್ನು ದಾಖಲಿಸುವುದು ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದಾಗಿದೆ.

ಚೀನಾ 2017ರಲ್ಲಿ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಪರ್ಯಾಯ ಹೆಸರುಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಬಳಿಕ 2021ರಲ್ಲಿ 15 ಮತ್ತು 2023ರಲ್ಲಿ 11 ಸ್ಥಳಗಳ ಹೆಸರುಗಳನ್ನು ಒಳಗೊಂಡ ಪಟ್ಟಿಗಳನ್ನು ಪ್ರಕಟಿಸಿತ್ತು. ಅರುಣಾಚಲ ಪ್ರದೇಶವನ್ನು ಚೀನಾ ‘ಜಂಗ್ನಾನ್’ ಎಂದು ಕರೆಯುತ್ತದೆ. ಭಾರತ ಮಾತ್ರ ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಏಕಪಕ್ಷೀಯವಾಗಿ ಹೆಸರು ಬದಲಾಯಿಸುವುದರಿಂದ ಈ ವಾಸ್ತವತೆ ಬದಲಾಗುವುದಿಲ್ಲ ಎಂದು ನಿರಂತರವಾಗಿ ಹೇಳುತ್ತಾ ಬಂದಿದೆ.

ಹೊಸದಾಗಿ ಗುರುತಿಸಲಾದ 27 ಸ್ಥಳಗಳು

ಲಾಂಗ್ಜು, ಮಜಾ, ಬಿಸಾ, ಬಾರಾ ಕುಂದುನ್, ಛೋಟಾ ಕುಂದುನ್, ಧನ್ ಬಾರಿ, ಪ್ರಿತ್‌ನಗರ, ಬುದ್ಧಮಂದಿರ, ಜೈರಾಮ್‌ಪುರ, ಟೆರಿತ್‌ನಗರ, ರಾಮನಗರ, ಜಸ್ವಂತ್ ಗಢ, ಸಾಗರ್, ಪದ್ಮ, ಜ್ಯೋತಿನಗರ, ಬೈಸಾಖಿ, ಛೋಟಾ ರೋಪುಕ್, ಬಾರಾ ರೋಪುಕ್, ಶಿವಾಜಿ ನಗರ, ಸುನ್‌ಪುರಾ, ಮತ್ತು ಕಮ್ಲ್ ನಗರ, ಸನ್‌ಪುರಾ ನಗರಗಳು ಭೂ ಪ್ರದೇಶ.

ಡಿಜೋ ಲಾ, ರಿಜಾ ಲಾ, ಪುಕುರ್ ಲಾ ಮತ್ತು ಥಾಗ್ ಲಾ ಪರ್ವತ ದಾಟು.

ಸಂಭೋ ಸರೋವರ ಸರೋವರ

 ಶೇರ್-ಎ-ಥಾಪಾ ಸ್ಮಾರಕ ಸೇರಿದೆ.

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (83)

ರೈತರ ಸಾಲ ಮನ್ನಾ ವಿಚಾರ: ಸಿಎಂ ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

by ಶಾಲಿನಿ ಕೆ. ಡಿ
September 27, 2026 - 6:37 pm
0

Your paragraph text (82)

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ..ನಾನ್‌‌ಸ್ಟಾಪ್ ಕಾರ್ಯಕ್ರಮ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 27, 2026 - 6:23 pm
0

Your paragraph text (80)

ಗ್ರಾಹಕರಿಗೆ ಬಿಗ್ ಶಾಕ್..ಅ.1ರಿಂದ ಟಿವಿ, ಎಸಿ, ವಾಷಿಂಗ್ ಮೆಷಿನ್‌ಗಳ ಬೆಲೆ ಏರಿಕೆ

by ಶಾಲಿನಿ ಕೆ. ಡಿ
September 27, 2026 - 6:01 pm
0

Your paragraph text (77)

27 ಸೆಂಟರ್ಸ್‌‌..ಅಯೋಗ್ಯ ಗ್ರ್ಯಾಂಡ್ 50 ಡೇಸ್ ಸೆಲೆಬ್ರೇಷನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 27, 2026 - 5:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 27T113603.387
    ಉತ್ತರ ಪ್ರದೇಶದಲ್ಲಿ ಮಳೆ ಆರ್ಭಟ: 15 ಮಂದಿ ಸಾ*ವು, 100ಕ್ಕೂ ಹೆಚ್ಚು ಮನೆಗಳಿಗೆ ಹಾನಿ
    September 27, 2026 | 0
  • Your paragraph text (32)
    ಚಿನ್ನ-ಹಣ ತೋರಿಸಿ ರೀಲ್ಸ್ ಮಾಡಿದ್ದ ಯೂಟ್ಯೂಬರ್: ಮನೆಯಲ್ಲಿದ್ದ ಚಿನ್ನಾಭರಣ ದೋಚಿದ ಕಳ್ಳರು!
    September 26, 2026 | 0
  • ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತಿರುಗೇಟು
    ಭಯೋತ್ಪಾದನೆಗೆ ತಕ್ಕ ಬೆಲೆ ತೆರಲೇಬೇಕು: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತಿರುಗೇಟು
    September 26, 2026 | 0
  • ಜ್ಞಾನೇಶ್ (1)
    ಪತಿ-ಪತ್ನಿ ಆತ್ಮಹತ್ಯೆಗೆ ಶರಣು: ಪೊಲೀಸರ ಕಿರುಕುಳ ಶಂಕೆ
    September 25, 2026 | 0
  • ಜ್ಞಾನೇಶ್
    CEC ಜ್ಞಾನೇಶ್ ಕುಮಾರ್‌ಗೆ ರಾಜೀನಾಮೆ ಕೊಡದಿದ್ರೆ ಹೋರಾಟ: CJP ಆಗ್ರಹ
    September 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version