• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಭಾರತದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಯ ‘X’ ಖಾತೆ ಸದ್ದಿಲ್ಲದೆ ಬ್ಯಾನ್!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 21, 2026 - 5:43 pm
in Flash News, ದೇಶ
0 0
0
Untitled design 2026 05 21T174229.653

ನವದೆಹಲಿ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದ ಡಿಜಿಟಲ್ ರಾಜಕೀಯ ಚಳವಳಿ “ಕಾಕ್ರೋಚ್ ಜನತಾ ಪಾರ್ಟಿ” (Cockroach Janata Party – CJP) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಯುವಜನರ ಅಸಮಾಧಾನ, ರಾಜಕೀಯ ವ್ಯಂಗ್ಯ ಹಾಗೂ ಮೀಮ್ ಸಂಸ್ಕೃತಿಗೆ ಹೊಸ ರೂಪ ನೀಡಿದ್ದ ಈ ಆನ್‌ಲೈನ್ ಅಭಿಯಾನದ ಅಧಿಕೃತ ‘X’ (ಹಳೆ ಟ್ವಿಟರ್) ಖಾತೆಯನ್ನು ಭಾರತದಲ್ಲಿ ಸದ್ದಿಲ್ಲದೆ ತಡೆಹಿಡಿಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ದೇಶದ ಮುಖ್ಯ ನ್ಯಾಯಮೂರ್ತಿಗಳು (CJI) ಯುವಜನರ ಸಮಸ್ಯೆಗಳ ಕುರಿತಾಗಿ ನೀಡಿದ್ದ ಇತ್ತೀಚಿನ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ತೀವ್ರ ಚರ್ಚೆಗಳು ಆರಂಭವಾಗಿದ್ದವು. ಇದೇ ಸಮಯದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಹೆಸರಿನ ಮೀಮ್ ಆಧಾರಿತ ಡಿಜಿಟಲ್ ಅಭಿಯಾನ ಯುವಕರಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿತ್ತು. ರಾಜಕೀಯ ವ್ಯಂಗ್ಯ, ಹಾಸ್ಯ, ಸಿಸ್ಟಮ್ ವಿರುದ್ಧದ ಕಟು ಟೀಕೆ ಹಾಗೂ ಕ್ರಿಯೇಟಿವ್ ರೀಲ್ಸ್ ಮೂಲಕ ಈ ಪೇಜ್ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು.

RelatedPosts

ಮಡಿ, ಮೈಲಿಗೆ ಮೀರಿದ ಮೌನ ಗುಡ್ಡೆಮನೆ..ಹಸಿಬಿಸಿ ಚರ್ಚೆ

ಚಿರಂಜೀವಿ ಮೆಗಾ-158 ಸಿನಿಮಾಗೆ ಕನ್ನಡಿಗ ಪ್ರೊಡ್ಯೂಸರ್.. DCM ಪವನ್ ಕಲ್ಯಾಣ್ ಕ್ಲಾಪ್..!!

ಧರ್ಮಸ್ಥಳ ‘ಬುರುಡೆ’ ರಹಸ್ಯ ಕೇಸ್‌: ಬಂಗ್ಲೆಗುಡೆ ಕಾಡಿಗೆ FSL ತಂಡ ಭೇಟಿ

ನೂರಾರು ಮಹಿಳೆಯರಿಗೆ ನಾಮ ಹಾಕಿದ ಮತ್ತೊಂದು ಬ್ಲೇಡ್‌ ಕಂಪನಿ

ADVERTISEMENT
ADVERTISEMENT

ಕೇವಲ ಮನರಂಜನೆಗಾಗಿ ಆರಂಭವಾದ ಈ ಪೇಜ್, ಕೆಲವೇ ದಿನಗಳಲ್ಲಿ ದೇಶದ ದೊಡ್ಡ ರಾಜಕೀಯ ಪಕ್ಷಗಳ ಸಾಮಾಜಿಕ ಜಾಲತಾಣವನ್ನೇ ಮೀರಿಸುವ ಮಟ್ಟಕ್ಕೆ ಬೆಳೆಯಿತು. ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ “@cockroachjantaparty” ಖಾತೆ ಆರಂಭವಾದ ಐದು ದಿನಗಳಲ್ಲೇ 1 ಕೋಟಿಗೂ ಹೆಚ್ಚು ಫಾಲೋವರ್ಸ್ ಪಡೆದು ದಾಖಲೆ ನಿರ್ಮಿಸಿತು. ಇದರೊಂದಿಗೆ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಸಂಖ್ಯೆಯನ್ನೂ ಇದು ಹಿಂದಿಕ್ಕಿದಂತಾಯಿತು.

ಪ್ರಸ್ತುತ ಲಭ್ಯ ಮಾಹಿತಿಯ ಪ್ರಕಾರ, ಕಾಂಗ್ರೆಸ್ ಪಕ್ಷದ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಗೆ ಸುಮಾರು 13.2 ಮಿಲಿಯನ್ ಫಾಲೋವರ್ಸ್ ಇದ್ದರೆ, ಕಾಕ್ರೋಚ್ ಜನತಾ ಪಾರ್ಟಿ 10 ಮಿಲಿಯನ್ ಗಡಿ ದಾಟಿತ್ತು. ಬಿಜೆಪಿ ಖಾತೆಗೆ ಸುಮಾರು 8.7 ಮಿಲಿಯನ್ ಹಾಗೂ ಆಮ್ ಆದ್ಮಿ ಪಾರ್ಟಿಗೆ ಸುಮಾರು 1.9 ಮಿಲಿಯನ್ ಫಾಲೋವರ್ಸ್ ಇದ್ದಾರೆ ಎನ್ನಲಾಗಿದೆ.

ಈ ಚಳವಳಿಯ ವಿಶೇಷತೆ ಎಂದರೆ, ಇದಕ್ಕೆ ಯಾವುದೇ ಸಾಂಪ್ರದಾಯಿಕ ರಾಜಕೀಯ ಸಂಘಟನೆ ಅಥವಾ ನೆಲಮಟ್ಟದ ಪ್ರಚಾರ ಇರಲಿಲ್ಲ. ಬದಲಾಗಿ, ಯುವಜನರ ಮನಸ್ಸಿನಲ್ಲಿದ್ದ ಅಸಮಾಧಾನವನ್ನು ಮೀಮ್ ಮತ್ತು ವ್ಯಂಗ್ಯದ ಮೂಲಕ ಹೊರಹಾಕುವ ವೇದಿಕೆಯಾಗಿ ಇದು ರೂಪುಗೊಂಡಿತ್ತು. ನಿರುದ್ಯೋಗ, ಬೆಲೆ ಏರಿಕೆ, ಸಾಮಾಜಿಕ ಅಸಮಾನತೆ, ರಾಜಕೀಯ ಪ್ರಚಾರ ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧದ ಅಸಮಾಧಾನವನ್ನು ಅನೇಕರು ಈ ಪೇಜ್ ಮೂಲಕ ವ್ಯಕ್ತಪಡಿಸುತ್ತಿದ್ದರು.

ಇದರ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಹಲವು ಸಾರ್ವಜನಿಕ ವ್ಯಕ್ತಿಗಳ ಗಮನವೂ ಇದರತ್ತ ಹರಿದಿತ್ತು. ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಠಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹಾಗೂ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಅನೇಕರು ಈ ಟ್ರೆಂಡ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದರು.

ಆದರೆ ಈಗ CJP ಯ ಅಧಿಕೃತ ‘X’ ಖಾತೆ ಭಾರತದಲ್ಲಿ “withheld” ಆಗಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಖಾತೆ ತಡೆಹಿಡಿಯಲು ನಿಖರ ಕಾರಣವೇನು ಎಂಬುದರ ಕುರಿತು ಇನ್ನೂ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ, ಡಿಜಿಟಲ್ ರಾಜಕೀಯ ಹಾಗೂ ಮೀಮ್ ಸಂಸ್ಕೃತಿಯ ಮೇಲಿನ ನಿಯಂತ್ರಣದ ಭಾಗವೆಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 05 21T175929.670

ಮಡಿ, ಮೈಲಿಗೆ ಮೀರಿದ ಮೌನ ಗುಡ್ಡೆಮನೆ..ಹಸಿಬಿಸಿ ಚರ್ಚೆ

by ಶಾಲಿನಿ ಕೆ. ಡಿ
May 21, 2026 - 6:01 pm
0

Untitled design 2026 05 21T174229.653

ಭಾರತದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಯ ‘X’ ಖಾತೆ ಸದ್ದಿಲ್ಲದೆ ಬ್ಯಾನ್!

by ಶಾಲಿನಿ ಕೆ. ಡಿ
May 21, 2026 - 5:43 pm
0

Untitled design 2026 05 21T172447.716

ಚಿರಂಜೀವಿ ಮೆಗಾ-158 ಸಿನಿಮಾಗೆ ಕನ್ನಡಿಗ ಪ್ರೊಡ್ಯೂಸರ್.. DCM ಪವನ್ ಕಲ್ಯಾಣ್ ಕ್ಲಾಪ್..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 21, 2026 - 5:25 pm
0

Untitled design 2026 05 21T170231.626

ಧರ್ಮಸ್ಥಳ ‘ಬುರುಡೆ’ ರಹಸ್ಯ ಕೇಸ್‌: ಬಂಗ್ಲೆಗುಡೆ ಕಾಡಿಗೆ FSL ತಂಡ ಭೇಟಿ

by ಶಾಲಿನಿ ಕೆ. ಡಿ
May 21, 2026 - 5:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 21T175929.670
    ಮಡಿ, ಮೈಲಿಗೆ ಮೀರಿದ ಮೌನ ಗುಡ್ಡೆಮನೆ..ಹಸಿಬಿಸಿ ಚರ್ಚೆ
    May 21, 2026 | 0
  • Untitled design 2026 05 21T172447.716
    ಚಿರಂಜೀವಿ ಮೆಗಾ-158 ಸಿನಿಮಾಗೆ ಕನ್ನಡಿಗ ಪ್ರೊಡ್ಯೂಸರ್.. DCM ಪವನ್ ಕಲ್ಯಾಣ್ ಕ್ಲಾಪ್..!!
    May 21, 2026 | 0
  • Untitled design 2026 05 21T170231.626
    ಧರ್ಮಸ್ಥಳ ‘ಬುರುಡೆ’ ರಹಸ್ಯ ಕೇಸ್‌: ಬಂಗ್ಲೆಗುಡೆ ಕಾಡಿಗೆ FSL ತಂಡ ಭೇಟಿ
    May 21, 2026 | 0
  • Untitled design 2026 05 21T164221.553
    ನೂರಾರು ಮಹಿಳೆಯರಿಗೆ ನಾಮ ಹಾಕಿದ ಮತ್ತೊಂದು ಬ್ಲೇಡ್‌ ಕಂಪನಿ
    May 21, 2026 | 0
  • Untitled design 2026 05 21T161408.898
    ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಚಾಲೆಂಜರ್ 2026’ ಭರ್ಜರಿ ತಾಲೀಮು
    May 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version