ಬೆಂಗಳೂರು: ಪೀಣ್ಯ ಫ್ಲೈಓವರ್‌ನ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ದುರಸ್ಥಿ ಕಾಮಗಾರಿಯ ಹಿನ್ನೆಲೆ ಫೆಬ್ರವರಿ 26, 2025ರಿಂದ ಪ್ರತಿ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಗುರುವಾರ ಬೆಳಿಗ್ಗೆ 6ರವರೆಗೆ ಭಾರೀ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ ಎಂದು ಪೀಣ್ಯ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಈ ಮುಂಚೆ, ಪ್ರತಿ ಶುಕ್ರವಾರ ಬೆಳಿಗ್ಗೆ 6 ರಿಂದ ಶನಿವಾರ ಬೆಳಿಗ್ಗೆ 6ರವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ವಾರಾಂತ್ಯದಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ, ಈ ನಿರ್ಬಂಧವನ್ನು ಬುಧವಾರದಿಂದ ಗುರುವಾರದವರೆಗೆ ವಿಸ್ತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.
ಪರ್ಯಾಯ ಮಾರ್ಗಗಳು
ಬೆಂಗಳೂರು ಹೊರ ಹೋಗುವ ಭಾರೀ ವಾಹನಗಳು: ಸಿಎಂಟಿಐ ಜಂಕ್ಷನ್ ಮೂಲಕ ಫ್ಲೈಓವರ್ ಕೆಳಗಿನ ತುಮಕೂರು ರಸ್ತೆಯನ್ನು ಬಳಸಬಹುದು.
ತುಮಕೂರು ರಸ್ತೆಯಿಂದ ನಗರಕ್ಕೆ ಬರುವ ಭಾರೀ ವಾಹನಗಳು: ಕೆನ್ನಮೆಟಲ್ ಸರ್ವೀಸ್ ರಸ್ತೆ ಮೂಲಕ ಗೊರಗುಂಟೆಪಾಳ್ಯ ಮಾರ್ಗದಲ್ಲಿ ಸಂಚರಿಸಬಹುದು.
ಲಘು ವಾಹನಗಳ ಸಂಚಾರ: ಎಂದಿನಂತೆ ಮೇಲ್ಸೇತುವೆಯಲ್ಲಿ ಅನುಮತಿಸಲಾಗಿದೆ.