ಪೀಣ್ಯ ಮೇಲ್ಸೇತುವೆಯಲ್ಲಿ ಪ್ರತಿ ಬುಧವಾರ ಭಾರೀ ವಾಹನಗಳ ಸಂಚಾರ ಬಂದ್‌

ಪೀಣ್ಯ ಮೇಲ್ಸೇತುವೆಯಲ್ಲಿ ಪ್ರತಿ ಬುಧವಾರ ಭಾರೀ ವಾಹನ ಸಂಚಾರ ಬಂದ್‌

Untitled design 2025 02 21T102050.500

ಬೆಂಗಳೂರು: ಪೀಣ್ಯ ಫ್ಲೈಓವರ್‌ನ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ದುರಸ್ಥಿ ಕಾಮಗಾರಿಯ ಹಿನ್ನೆಲೆ ಫೆಬ್ರವರಿ 26, 2025ರಿಂದ ಪ್ರತಿ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಗುರುವಾರ ಬೆಳಿಗ್ಗೆ 6ರವರೆಗೆ ಭಾರೀ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ ಎಂದು ಪೀಣ್ಯ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಈ ಮುಂಚೆ, ಪ್ರತಿ ಶುಕ್ರವಾರ ಬೆಳಿಗ್ಗೆ 6 ರಿಂದ ಶನಿವಾರ ಬೆಳಿಗ್ಗೆ 6ರವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ವಾರಾಂತ್ಯದಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ, ಈ ನಿರ್ಬಂಧವನ್ನು ಬುಧವಾರದಿಂದ ಗುರುವಾರದವರೆಗೆ ವಿಸ್ತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

ಪರ್ಯಾಯ ಮಾರ್ಗಗಳು

ಬೆಂಗಳೂರು ಹೊರ ಹೋಗುವ ಭಾರೀ ವಾಹನಗಳು: ಸಿಎಂಟಿಐ ಜಂಕ್ಷನ್ ಮೂಲಕ ಫ್ಲೈಓವರ್ ಕೆಳಗಿನ ತುಮಕೂರು ರಸ್ತೆಯನ್ನು ಬಳಸಬಹುದು.
ತುಮಕೂರು ರಸ್ತೆಯಿಂದ ನಗರಕ್ಕೆ ಬರುವ ಭಾರೀ ವಾಹನಗಳು: ಕೆನ್ನಮೆಟಲ್ ಸರ್ವೀಸ್ ರಸ್ತೆ ಮೂಲಕ ಗೊರಗುಂಟೆಪಾಳ್ಯ ಮಾರ್ಗದಲ್ಲಿ ಸಂಚರಿಸಬಹುದು.
ಲಘು ವಾಹನಗಳ ಸಂಚಾರ: ಎಂದಿನಂತೆ ಮೇಲ್ಸೇತುವೆಯಲ್ಲಿ ಅನುಮತಿಸಲಾಗಿದೆ.

Exit mobile version