ಕೂಸನ್ನೇ ಕೊಂದ ಕಟುಕ ತಂದೆ

345

ವಿಜಯಪುರ: ಭೀಮಾತೀರದಲ್ಲಿ ನಡೆಯಿತು ಮತ್ತೊಂದು ಅಮಾನವೀಯ ಘಟನೆ. ಹೆತ್ತ ಮಗ ತನ್ನಂತೆ ರೂಪ ಹೊಂದಿಲ್ಲವೆಂದು ನದಿಗೆ ತಳ್ಳಿ ಕೊಂದ ತಾನು ಹೆತ್ತ ಮಗನನ್ನೇ ಸಾಯಿಸಿದ್ದಾನೆ.
ಸ್ವಂತ ಮಗನನ್ನೇ ಕೊಲ್ಲುವಷ್ಟು ಕ್ರೂರತೆ ತೋರಿರುವ ಘಟನೆ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ನಡೆದಿದೆ. ತನ್ನ ಮಗ ಸಿದ್ದಾರ್ಥ ನೋಡಲು ತನ್ನಂತೆ ಇಲ್ಲ ಎಂದು ಗ್ರಾಮಸ್ಥರು ಛೇಡಿಸುತ್ತಿದ್ದಕ್ಕೆ ರೋಸಿ ಹೋದ ತಂದೆ ಮಲ್ಲಿಕಾರ್ಜುನ ಅರಕೇರಿ ಮಗನನ್ನು ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಅಮಾನವೀಯ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. https://youtu.be/gXZWp9M5q-I

ತಂದೆ ಮಲ್ಲಿಕಾರ್ಜುನ ಅರಕೇರಿ ಮಗನನ್ನು “ಶಾಲೆಗೆ ಸೇರಿಸುವುದಾಗಿ” ಹೇಳಿ ಹೊಸ ಬಟ್ಟೆ ಹಾಕಿಸಿ ಕರೆದೊಯ್ದು, ಮಹಾರಾಷ್ಟ್ರದ ಕರಾಡ್ ತಾಲೂಕಿನ ವಡೋಲಿ ಭೀಕೇಶ್ವರ ಬಳಿ ಕೃಷ್ಣಾ ನದಿ ದಂಡೆಗೆ ಕರೆದುಕೊಂಡು ಹೋಗಿ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.

ಅಪ್ಪನೇ ಮಗನನ್ನು ಫಿನಿಶ್‌ ಮಾಡಲು ಕಾರಣಗಳು:

ಪೊಲೀಸರು ಆರೋಪಿ ಮಲ್ಲಿಕಾರ್ಜುನ ಅರಕೇರಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವು ಮಾರ್ಚ್ 18ರಂದು ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶದ ಕೃಷ್ಣಾ ನದಿ ದಂಡೆಯಲ್ಲಿ ಪತ್ತೆಯಾಗಿತ್ತು.

ಗ್ರಾಮಸ್ಥರ ಛೇಡಿ ಮತ್ತು ಅಪಪ್ರಚಾರಗಳು ಒಂದು ಕುಟುಂಬವನ್ನು ಎಷ್ಟು ದುರಂತಕ್ಕೆ ತಳ್ಳಬಲ್ಲವು ಎಂಬುದನ್ನು ಈ ಘಟನೆ ತೋರಿಸುತ್ತಿದೆ. ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

Exit mobile version