ಗ್ಯಾರಂಟಿ ನ್ಯೂಸ್ ಸೆಟಲೈಟ್ ಚಾನೆಲ್ ಲೊಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯದ ಹಲವಾರು ಗಣ್ಯಾತಿಗಣ್ಯರು ಆಗಮಿಸಿ ನಮ್ಮ ಹೆಮ್ಮೆಯ ಚಾನೆಲ್‌ಗೆ ಶುಭಕೋರಿ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡು, ಆಶಿರ್ವಾದ ಮಾಡಿದರು.
https://x.com/BSBommai/status/1889977211987615744
ರಾಜ್ಯದ ಮಾಜಿ ಮುಖ್ಯಮಂತ್ರಿ, ಸಂಸದರಾಗಿರುವ ಬಸವರಾಜ್ ಬೊಮ್ಮಾಯಿ ಅವರು ಅತ್ಯಂತ ಪ್ರೀತಿಯಿಂದ ನಮ್ಮ ಆಮಂತ್ರಣವನ್ನ ಸ್ವೀಕರಿಸಿ, ನಮ್ಮ ಚಾನೆಲ್ ಗೆ ಬಂದು ಶುಭ ಕೋರಿದರು. ಇದೇ ವೇಳೆ ನಮ್ಮ ಚಾನೆಲ್ ನ ಎಂಡಿ. ಆಗಿರುವ ಶ್ರೀ. ಟಿ ಶಿವಸ್ವಾಮಿ ಅವರೊಂದಿಗೆ ಮಾತನಾಡಿ ಚಾನೆಲ್ ಬಗ್ಗೆ ಅತ್ಯಂತ ಆಶಾಭಾವ ಹಾಗೂ ರಾಜ್ಯದ ಹಿತಾಸಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಗ್ಯಾರಂಟಿ ನ್ಯೂಸ್ ಮುಖ್ಯ ಸಂಪಾದಕರಾದ ರಾಧಾ ಹಿರೇಗೌಡರ್ ಬಗ್ಗೆ ಅತ್ಯಂತ ಮೆಚ್ಚುಗೆಯ ಮಾತುಗಳನ್ನಾಡಿದರು ಸಂಸದ ಬಸವರಾಜ್ ಬೊಮ್ಮಾಯಿ .