ರಾಜ್ಯದ ಜನರಿಗೆ ಬೆಲೆ ಏರಿಕೆ ಶಾಕ್ ಬಿಟ್ಟು ಬಿಡದೇ ಹೊಡಿತಾ ಇದೆ. ಬೆಳಗಾದ್ರೆ ಸಾಕು ಪ್ರತಿಯೊಂದರ ಬೆಲೆ ದಿನೇ ದಿನೇ ಜಾಸ್ತಿ ಆಗುತ್ತಲೇ ಇದೆ. ಈ ಹಿಂದೆ ಮೆಟ್ರೋ ಟಿಕೆಟ್ ದರ, ಸರ್ಕಾರಿ ಬಸ್ ಟಿಕೆಟ್ ದರ, ಪೆಟ್ರೋಲ್, ಡೀಸೆಲ್,ಗ್ಯಾಸ್ ಹತ್ತು ಹಲವರ ಬೆಲೆ ಏರಿಕೆಯಾಗಿದೆ, ಈಗ ಮತ್ತೆ ಜಲ ಮಂಡಳಿ ಸಿಲಿಕಾನ್ ಸಿಟಿ ಮಂದಿಗೆ ಶಾಕ್ ನೀಡಲು ಮುಂದಾಗಿದೆ.
ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡುವ ಬಗ್ಗೆ ಕಳೆದ ಒಂದು ವರ್ಷದಿಂದ ಆಗಾಗ ಚರ್ಚೆ ನಡೆಯುತ್ತಿತ್ತು. ನೀರಿನ ದರ ಹೆಚ್ಚಳ ಅನಿವಾರ್ಯ ಎಂಬುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಕೆಲವು ಬಾರಿ ಹೇಳಿದ್ದರು. ಇದೀಗ ಜಲಮಂಡಳಿ ಅಧ್ಯಕ್ಷರು ನೀರಿನ ದರ ಏರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಳೆಯಿಂದ ಅಧಿಕೃತವಾಗಿಯೇ ನೀರಿನ ದರ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇನ್ನು ನೀರಿನ ದರ ಏರಿಕೆ ವಿವರ
* ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ.
* 0-8 ಸಾವಿರದೊಳಗೆ ಸ್ಲ್ಯಾಬ್ಗೆ ಲೀಟರ್ಗೆ 0.15 ಪೈಸೆ ಹೆಚ್ಚಳವಾಗಲಿದೆ.
* 8-25 ಸಾವಿರದೊಳಗಿನ ಸ್ಲ್ಯಾಬ್ಗೆ ಲೀಟರ್ಗೆ 0.40 ಪೈಸೆ ಹೆಚ್ಚಳವಾಗಲಿದೆ.
* 25 ಸಾವಿರ ಲೀಟರ್ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ ಏರಿಕೆಯಾಗಲಿದೆ.
* 50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳವಾಗಲಿದೆ.
ಸರ್ಕಾರದ ನಿಯಮಗಳು ದರ ಏರಿಕೆಯ ಬರೆಗಳು ಖಾಸಗಿ ವಾಹನಗಳಿಗೂ ತಟ್ಟಿದ್ದು ಖಾಸಗಿ ಬಸ್ ಮಾಲೀಕರು ದರ ಏರಿಕೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಡಿಸೇಲ್ ದರ ಎರಡು ರೂಪಾಯಿ ಹೆಚ್ಚಳವಾಗಿದ್ದು ಇದನ್ನು ಬರಿಸಲು ದರ ಏರಿಕೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಲಾರಿ ಅಸೋಸಿಯೇಷನ್ ಡಿಸೇಲ್ ದರ ಕಡಿಮೆ ಮಾಡುವಂತೆ ಒತ್ತಾಯಿಸಿ ಎಪ್ರಿಲ್ 14 ರವರೆಗೆ ಗಡುವು ನೀಡಿದ್ದು. ಇದೀಗಾ ಲಾರಿ ಮಾಲೀಕರ ಜೊತೆ ಖಾಸಗಿ ಬಸ್ ಸಂಘಟನೆಗಳು ಕೂಡ ಮುಷ್ಕರಕ್ಕೆ ಸಾಥ್ ನೀಡಿದೆ. ಸರ್ಕಾರದ ಏನಾದ್ರೂ ದರ ಡಿಸೇಲ್ ದರ ಕಡಿಮೆ ಮಾಡದೇ ಹೋದ್ರೆ 15 ರಂದು ಮುಷ್ಕರ ನಡೆಸಿ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಮಾಡಲು ಸಜ್ಜಾಗಿದೆ.
ಒಂದೆಡೆ ಖಾಸಗಿ ಬಸ್ ದರ ಏರಿಕೆಗೆ ಸಿದ್ದ ಆಗಿದ್ರೆ. ಇತ್ತ ಪೋಷಕರಿಗೆ ದರ ಏರಿಕೆ ಬರೆ ಎಳೆಯಲು ಖಾಸಗಿ ಸ್ಕೂಲ್ ಬಸ್ ಮಾಲೀಕರು ಸಜ್ಜಾಗಿದ್ದಾರೆ. ಕಾಲೇಜು ಶುಲ್ಕ ಸರ್ಕಾರ ಏರಿಕೆ ಮಾಡಿದ್ರೆ ಇತ್ತ ಸ್ಕೂಲ್ ವಾಹನಗಳ ಪೀಸ್ ಹೆಚ್ಚಳ ಮಾಡಲು ಸಿದ್ದತೆ ನಡೆಸಿಕೊಂಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಾ ತಿಂಗಳಿಗೆ 500 ರೂಪಾಯಿ ನಷ್ಟು ಏರಿಕೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.
ಈಗಾಗಲೇ ಹಾಲು, ಮೊಸರು, ಕಾಫಿ ಇನ್ನಿತರ ಅಗತ್ಯ ವಸ್ತುಗಳ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಸಾರ್ವಜನಿಕರಿಗೆ ಇನ್ನಷ್ಟು ಹೊರೆ ಬೀಳಲಿದೆ. ರಾಜ್ಯದ ಜನತೆ ತ್ರಿಬಲ್ ಶಾಕ್ ಎದುರಾಗಿದ್ದು ಅದರಲ್ಲೂ ನಾಳೆಯಿಂದ ಅಧಿಕೃತವಾಗಿಯೇ ನೀರಿನ ದರ ಏರಿಕೆ ಆಗಲಿದೆ.





