• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಚಳಿಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರಗಳನ್ನು ಸೇವಿಸಿ, ಆರೋಗ್ಯಕ್ಕೆ ಒಳ್ಳೆಯದು!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 3, 2025 - 9:31 am
in ಆರೋಗ್ಯ-ಸೌಂದರ್ಯ
0 0
0
Untitled design 2025 11 03t092949.982

ಚಳಿಗಾಲ ಬಂತು ಅಂದರೆ ತಂಪು, ಜ್ವರ, ಚರ್ಮದ ಒಣಗುವಿಕೆ ಮುಂತಾದವು ಸಹಜ. ಆದರೆ ಸರಿಯಾದ ಆಹಾರ ಸೇವನೆಯಿಂದ ಈ ಋತುಮಾನವನ್ನು ಸುಲಭವಾಗಿ ಎದುರಿಸಬಹುದು. ಪ್ರತ್ಯೇಕ ಆಹಾರ ಪಟ್ಟಿ ಬೇಡ, ನಿತ್ಯದ ಊಟದಲ್ಲೇ ಕೆಲವು ಪದಾರ್ಥಗಳಿಗೆ ಆದ್ಯತೆ ನೀಡಿದರೆ ಸಾಕು. ಇವು ದೇಹದ ಉಷ್ಣತೆ ಕಾಯ್ದುಕೊಳ್ಳಿ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ, ಚಳಿಯಿಂದ ರಕ್ಷಣೆ ನೀಡುತ್ತವೆ.

ಊಟದ ತಟ್ಟೆಯಲ್ಲಿ ಹಸಿರು ಬಣ್ಣ ಹೆಚ್ಚಿರಲಿ

ಮೆಂತೆ, ಪಾಲಕ್, ಹೊನಗನ್ನೆ, ದಂಟು ಮುಂತಾದ ಹಸಿರು ಸೊಪ್ಪುಗಳು ಚಳಿಗಾಲದ ಸೂಪರ್ ಫುಡ್‌ಗಳು. ಕ್ಯಾಪ್ಸಿಕಂ, ಬೆಂಡೆಕಾಯಿ, ಎಲೆಕೋಸು, ಬ್ರೊಕೊಲಿ ಮುಂತಾದ ತರಕಾರಿಗಳು ದೇಹಕ್ಕೆ ಪೌಷ್ಟಿಕಾಂಶ ನೀಡುವುದರ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿ.

RelatedPosts

ಕಣ್ಣು ಕೆಂಪಾಗುತ್ತಿದೆಯೇ? ನಿರ್ಲಕ್ಷಿಸಬೇಡಿ..ಕಣ್ಣಿನ ಆರೋಗ್ಯ ಕಾಪಾಡಲು ಈ ಸಲಹೆಗಳನ್ನು ಪಾಲಿಸಿ

ನಿಮ್ಮ ಆರೋಗ್ಯದ ಅಸಲಿ ಗುಟ್ಟು ಅಡಗಿರುವುದೇ ನಿಮ್ಮ ಹೊಟ್ಟೆಯಲ್ಲಿ!: ‘ಗಟ್ ಹೆಲ್ತ್’ ಸೀಕ್ರೆಟ್ ಬಿಚ್ಚಿಟ್ಟ ತಜ್ಞರು

ಚಹಾ ಕುಡಿಯುತ್ತಾ ‘ಸಿಗರೇಟ್’ ಸೇದುವ ಅಭ್ಯಾಸ ಇದೆಯೇ?: ಈ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ!

ರಾತ್ರಿ ನಿದ್ರೆ ಬರ್ತಿಲ್ಲವೇ? ಮಲಗುವ ಮುನ್ನ ಈ ಅಭ್ಯಾಸಗಳನ್ನು ತಪ್ಪಿಸಿ.!

ADVERTISEMENT
ADVERTISEMENT

ಲಾಭ: ಹಸಿರು ತರಕಾರಿಗಳಲ್ಲಿ ಬೀಟಾ ಕ್ಯಾರೊಟಿನ್‌, ಕಬ್ಬಿಣ, ಫೋಲೇಟ್‌ ಮುಂತಾದ ಅಂಶಗಳು ಸಮೃದ್ಧ. ಇವು ಕೆಂಪು ರಕ್ತಕಣಗಳ ಉತ್ಪಾದನೆಗೆ ಅಗತ್ಯವಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ನಾರಿನಂಶವೂ ಹೆಚ್ಚು ಇರುವುದರಿಂದ ಜೀರ್ಣಾಂಗದ ಆರೋಗ್ಯ ಸುಧಾರಿಸುತ್ತದೆ.

ಗಡ್ಡೆ-ಗೆಣಸುಗಳ ಮಹತ್ವ

ಚಳಿಗಾಲವೆಂದರೆ ಗೆಣಸು, ಬೀಟ್‌ರೂಟ್‌, ಕ್ಯಾರೆಟ್‌, ಶುಂಠಿ, ಸುವರ್ಣಗಡ್ಡೆ ಮುಂತಾದ ಬೇರು ತರಕಾರಿಗಳ ಕಾಲ. ಇವು ಪೌಷ್ಟಿಕಾಂಶದ ಖಜಾನೆಗಳು.

ಲಾಭ: ಗೆಣಸು ಸಿಪ್ಪೆ ಸಮೇತ ತಿಂದರೆ ವಿಟಮಿನ್‌ ಎ ಅಂಶ ಹೆಚ್ಚಾಗುತ್ತದೆ. ಬೀಟ್‌ರೂಟ್‌ ಮತ್ತು ಕ್ಯಾರೆಟ್‌ನಲ್ಲಿ ಬೀಟಾ ಕ್ಯಾರೊಟಿನ್‌ ದೊರೆಯುತ್ತದೆ. ಇವು ಶರೀರದ ಉಷ್ಣತೆ ಕಾಯ್ದುಕೊಳ್ಳಲು ಸಹಕಾರಿ. ಗಡ್ಡೆ ತರಕಾರಿಗಳಲ್ಲಿರುವ ಸ್ವಲ್ಪ ಹೆಚ್ಚಾದ ಕ್ಯಾಲರಿ ಚಳಿಗಾಲದಲ್ಲಿ ದೇಹಕ್ಕೆ ಬೇಕಾದ ಶಕ್ತಿಯನ್ನು ಪೂರೈಸುತ್ತದೆ.

ಇಡೀ ಧಾನ್ಯಗಳು–ಶಕ್ತಿ ತುಂಬಿದ ಆಹಾರ

ಜೋಳ, ರಾಗಿ, ಸಜ್ಜೆ ಮುಂತಾದ ಸಿರಿ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಸಂಸ್ಕರಿಸದ ಇಡೀ ಧಾನ್ಯಗಳಲ್ಲಿ ನಾರಿನಂಶ, ಕಬ್ಬಿಣ, ಜಿಂಕ್‌, ತಾಮ್ರ ಮುಂತಾದ ಖನಿಜಗಳು ಅಧಿಕ.

ಲಾಭ: ಇವು ನಿಧಾನವಾಗಿ ಜೀರ್ಣವಾಗುವುದರಿಂದ ಶರೀರಕ್ಕೆ ದೀರ್ಘಕಾಲದ ಶಕ್ತಿ ದೊರೆಯುತ್ತದೆ. ರಕ್ತದ ಸಕ್ಕರೆ ನಿಯಂತ್ರಣ, ಹೃದಯ ಆರೋಗ್ಯ ಮತ್ತು ಮಧುಮೇಹ ತಡೆಗೆ ಸಹಕಾರಿ. ಇವು ಜೀರ್ಣಾಂಗದಲ್ಲಿ ಉತ್ತಮ ಬ್ಯಾಕ್ಟೀರಿಯ ವೃದ್ಧಿಗೆ ಸಹಾಯಮಾಡುತ್ತವೆ.

ಬೀಜಗಳು ಮತ್ತು ಕಾಯಿಗಳು–ಸಣ್ಣದಲ್ಲೇ ಸತ್ವ

ಬಾದಾಮಿ, ಅಕ್ಕರಕಾಯಿ, ಸೂರ್ಯಕಾಂತಿ ಬೀಜ, ಆಲಸಿ ಬೀಜ, ಸೀಮೆ ಬದನೆ ಬೀಜ ಮುಂತಾದವು ಚಳಿಗಾಲದ ಶ್ರೇಷ್ಠ ಸ್ನ್ಯಾಕ್‌ಗಳು.

ಲಾಭ: ಇವುಗಳಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಕಡಿಮೆ, ಆದರೆ ಒಳ್ಳೆಯ ಕೊಬ್ಬುಗಳು ಅಧಿಕ. ವಿಟಮಿನ್‌ ಇ, ಬಿ6, ಮೆಗ್ನೀಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಮುಂತಾದ ಅಂಶಗಳಿಂದ ಸಮೃದ್ಧ. ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಸಹಕಾರಿ.

ಸಾಂಬಾರ ಪದಾರ್ಥಗಳು–ರುಚಿಯಲ್ಲೇ ಆರೋಗ್ಯ

ಬೆಳ್ಳುಳ್ಳಿ, ಶುಂಠಿ, ಅರಿಶಿನ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಕಾಳುಮೆಣಸು ಮುಂತಾದ ಮಸಾಲೆ ಪದಾರ್ಥಗಳು ಚಳಿಗಾಲದಲ್ಲಿ ದೇಹವನ್ನು ಉಷ್ಣವಾಗಿರಿಸಲು ಸಹಾಯಕ.

ಲಾಭ: ಅರಿಶಿನವು ಶಕ್ತಿಶಾಲಿ ಉತ್ಕರ್ಷಣ ನಿರೋಧಕ; ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಬೆಳ್ಳುಳ್ಳಿ ಸೋಂಕು ನಿವಾರಕ, ಶುಂಠಿ ಜೀರ್ಣಾಂಗ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ರಕ್ತದ ಸಕ್ಕರೆಯ ನಿಯಂತ್ರಣದಲ್ಲಿಡುತ್ತದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 07 01T073833.973

ಇಂದಿನಿಂದ ರಾಜ್ಯಾದ್ಯಂತ ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆ

by ಶಾಲಿನಿ ಕೆ. ಡಿ
July 1, 2026 - 7:39 am
0

Untitled design 2026 07 01T070637.392

ಕಣ್ಣು ಕೆಂಪಾಗುತ್ತಿದೆಯೇ? ನಿರ್ಲಕ್ಷಿಸಬೇಡಿ..ಕಣ್ಣಿನ ಆರೋಗ್ಯ ಕಾಪಾಡಲು ಈ ಸಲಹೆಗಳನ್ನು ಪಾಲಿಸಿ

by ಶಾಲಿನಿ ಕೆ. ಡಿ
July 1, 2026 - 7:07 am
0

Untitled design 2026 07 01T063847.227

ದಿನ ಭವಿಷ್ಯ: ಈ ರಾಶಿಯವರಿಗೆ ಆಸ್ತಿಯಲ್ಲಿ ಲಾಭ, ಕೆಲವರಿಗೆ ಉದ್ಯೋಗದಲ್ಲಿ ಹೊಸ ಅವಕಾಶ

by ಶಾಲಿನಿ ಕೆ. ಡಿ
July 1, 2026 - 6:39 am
0

Untitled design 2026 06 30T232427.981

ಟಾಕ್ಸಿಕ್ ಲೇಡಿ ಗ್ಯಾಂಗ್ ಗೆ ರಾಕಿಂಗ್ ಸ್ಟಾರ್ ಮುಹೂರ್ತ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 30, 2026 - 11:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 01T070637.392
    ಕಣ್ಣು ಕೆಂಪಾಗುತ್ತಿದೆಯೇ? ನಿರ್ಲಕ್ಷಿಸಬೇಡಿ..ಕಣ್ಣಿನ ಆರೋಗ್ಯ ಕಾಪಾಡಲು ಈ ಸಲಹೆಗಳನ್ನು ಪಾಲಿಸಿ
    July 1, 2026 | 0
  • ಸಿ (9)
    ನಿಮ್ಮ ಆರೋಗ್ಯದ ಅಸಲಿ ಗುಟ್ಟು ಅಡಗಿರುವುದೇ ನಿಮ್ಮ ಹೊಟ್ಟೆಯಲ್ಲಿ!: ‘ಗಟ್ ಹೆಲ್ತ್’ ಸೀಕ್ರೆಟ್ ಬಿಚ್ಚಿಟ್ಟ ತಜ್ಞರು
    June 30, 2026 | 0
  • Untitled design 2026 06 30T071420.862
    ಚಹಾ ಕುಡಿಯುತ್ತಾ ‘ಸಿಗರೇಟ್’ ಸೇದುವ ಅಭ್ಯಾಸ ಇದೆಯೇ?: ಈ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ!
    June 30, 2026 | 0
  • Untitled design 2026 06 29T070313.194
    ರಾತ್ರಿ ನಿದ್ರೆ ಬರ್ತಿಲ್ಲವೇ? ಮಲಗುವ ಮುನ್ನ ಈ ಅಭ್ಯಾಸಗಳನ್ನು ತಪ್ಪಿಸಿ.!
    June 29, 2026 | 0
  • Web Photo Editor (26)
    ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ ‘ಟೀ’ ರಾಜಧಾನಿ!
    June 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version