• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ನಿಮ್ಮ ಆರೋಗ್ಯದ ಅಸಲಿ ಗುಟ್ಟು ಅಡಗಿರುವುದೇ ನಿಮ್ಮ ಹೊಟ್ಟೆಯಲ್ಲಿ!: ‘ಗಟ್ ಹೆಲ್ತ್’ ಸೀಕ್ರೆಟ್ ಬಿಚ್ಚಿಟ್ಟ ತಜ್ಞರು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 30, 2026 - 2:22 pm
in ಆರೋಗ್ಯ-ಸೌಂದರ್ಯ
0 0
0
ಸಿ (9)

ಬೆಂಗಳೂರು: ಮನುಷ್ಯನ ಒಟ್ಟಾರೆ ಆರೋಗ್ಯದಲ್ಲಿ ಜೀರ್ಣಾಂಗವ್ಯೂಹದ ಪಾತ್ರ ಅತ್ಯಂತ ಪ್ರಮುಖವಾದದ್ದು. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಹ್ಯಾಪಿಯೆಸ್ಟ್ ಹೆಲ್ತ್’ ಸಂಸ್ಥೆಯು ಬೆಂಗಳೂರಿನ ಜಯನಗರದಲ್ಲಿರುವ ಹ್ಯಾಪಿಯೆಸ್ಟ್ ಆಯುರ್ವೇದ ಕ್ಲಿನಿಕ್‌ನಲ್ಲಿ ‘ಆಯುರ್ವೇದ ಮತ್ತು ಗಟ್’ ಎಂಬ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು.

ಪ್ರಾಚೀನ ಆಯುರ್ವೇದ ತತ್ವಗಳು ಹಾಗೂ ಆಧುನಿಕ ವಿಜ್ಞಾನವನ್ನು ಜೊತೆಯಾಗಿ ಬಳಸಿಕೊಂಡು ರೋಗಗಳನ್ನು ತಡೆಯುವುದು ಮತ್ತು ಆರೋಗ್ಯಕರವಾಗಿ ವಯಸ್ಸಾಗುವ ಪ್ರಕ್ರಿಯೆಯ ಬಗ್ಗೆ ಈ ಕಾರ್ಯಕ್ರಮದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಆಯುರ್ವೇದ ತಜ್ಞರು, ಮೈಕ್ರೋಬಯೋಮ್ ಸಂಶೋಧಕರು, ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಪರಿಣಿತರು ಭಾಗವಹಿಸಿದ್ದರು.

RelatedPosts

ಡಿಪ್ರೆಶನ್ ಅಂದ್ರೆ ಏನು? ಲಕ್ಷಣಗಳು, ಕಾರಣಗಳು, ಖಿನ್ನತೆಯಿಂದ ಹೊರಬರಲು ಇಲ್ಲಿವೆ ಸುಲಭ ಮಾರ್ಗಗಳು

ದಿನವಿಡೀ ಒಂದೇ ಕಡೆ ಕೂತೇ ಇರ್ತೀರಾ? ಬೆನ್ನು-ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಖಚಿತ!

ಕೆಲಸದ ಒತ್ತಡದಿಂದ ಸುಸ್ತಾಗಿದ್ದೀರಾ? ಆಯಾಸ ನಿವಾರಿಸಲು ಈ ಸಲಹೆಗಳನ್ನು ಪ್ರತಿದಿನ ಪಾಲಿಸಿ

ನಿರಂತರ ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸವನ್ನು ರೂಢಿಸಿಕೊಳ್ಳಿ!

ADVERTISEMENT
ADVERTISEMENT

ಈ ವಿಶೇಷ ಸಂವಾದದಲ್ಲಿ ಹ್ಯಾಪಿಯೆಸ್ಟ್ ಆಯುರ್ವೇದದ ವೈದ್ಯಕೀಯ ನಿರ್ದೇಶಕ ಡಾ. ಎಂ.ಎಸ್. ಮಹದೇವನ್, ಎಸ್‌ಕೆಎಎನ್‌ ರಿಸರ್ಚ್ ಟ್ರಸ್ಟ್‌ನ ನಿರ್ದೇಶಕ ಡಾ. ಯೋಗೇಶ್ ಶೌಚೆ ಹಾಗೂ ಟಿಡಿಯು ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಡಾ. ಸುಬ್ರಹ್ಮಣ್ಯ ಕುಮಾರ್ ಕೆ. ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವೆಲ್‌ನೆಸ್ ಪ್ರ್ಯಾಕ್ಟಿಸಸ್‌ನ ಚೀಫ್ ಸಕ್ಸಸ್ ಮ್ಯಾನೇಜರ್ ಶ್ಯಾರನ್ ಎಸ್. ರಾಜ್‌ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸಂವಾದದಲ್ಲಿ ಏನೇನು ಚರ್ಚೆ?

ಜೀರ್ಣಾಂಗದ ಆರೋಗ್ಯಕ್ಕೂ ಮನುಷ್ಯನ ರೋಗನಿರೋಧಕ ಶಕ್ತಿ, ಚಯಾಪಚಯ ಕ್ರಿಯೆ, ಮಾನಸಿಕ ಆರೋಗ್ಯ ಹಾಗೂ ದೀರ್ಘಕಾಲದ ಕಾಯಿಲೆಗಳಿಗೂ ಇರುವ ನೇರ ಸಂಬಂಧದ ಬಗ್ಗೆ ತಜ್ಞರು ವಿವರಿಸಿದರು.

ಆಯುರ್ವೇದದಲ್ಲಿ ಉಲ್ಲೇಖಿಸಿರುವ ಜೀರ್ಣಕ್ರಿಯೆಯ ವಿಚಾರಗಳೇ ಇಂದಿನ ಆಧುನಿಕ ‘ಗಟ್ ಮೈಕ್ರೋಬಯೋಮ್’ ವಿಜ್ಞಾನಕ್ಕೂ ಹೇಗೆ ಹೊಂದಿಕೆಯಾಗುತ್ತವೆ ಎಂಬುದನ್ನು ಉದಾಹರಣೆಗಳ ಸಮೇತ ತಿಳಿಸಿಕೊಟ್ಟರು. ಜೊತೆಗೆ, ಉತ್ತಮ ಜೀರ್ಣಕ್ರಿಯೆಗಾಗಿ ದೈನಂದಿನ ಆಹಾರ ಮತ್ತು ಜೀವನಶೈಲಿ ಹೇಗಿರಬೇಕು ಎಂಬ ಬಗ್ಗೆ ಪ್ರಾಯೋಗಿಕ ಸಲಹೆಗಳನ್ನು ನೀಡಿದರು.

ಇದೇ ವೇಳೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಹ್ಯಾಪಿಯೆಸ್ಟ್ ಆಯುರ್ವೇದ ಮತ್ತು ಫಿಸಿಯೋ ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸುವ ಅವಕಾಶ ನೀಡಲಾಗಿತ್ತು. ಕುಳಿತುಕೊಳ್ಳುವ ಭಂಗಿ, ದೈಹಿಕ ಚಲನೆ ಮತ್ತು ಜೀವನಶೈಲಿ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ತಜ್ಞರು ಮಾಹಿತಿ ನೀಡಿದರು.

“ಉತ್ತಮ ಆರೋಗ್ಯ ಉತ್ತಮ ಜೀರ್ಣಕ್ರಿಯೆಯಿಂದಲೇ ಶುರುವಾಗುತ್ತದೆ. ನಾರುಯುಕ್ತ (ಫೈಬರ್) ಆಹಾರ, ಹುದುಗಿಸಿದ (ಫರ್ಮೆಂಟೆಡ್) ಆಹಾರಗಳು ಹಾಗೂ ಸಾಂಬಾರ ಪದಾರ್ಥಗಳನ್ನು ಒಳಗೊಂಡ ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಯ ಮಹತ್ವವನ್ನು ಇಂದಿನ ವಿಜ್ಞಾನವೂ ಒಪ್ಪುತ್ತಿದೆ,” ಎಂದು ಡಾ. ಎಂ.ಎಸ್. ಮಹದೇವನ್ ಹೇಳಿದರು.

“ಹೊಟ್ಟೆಯ ಒಳಗಿನ ಸೂಕ್ಷ್ಮಾಣು ಜೀವಿಗಳ (ಮೈಕ್ರೋಬಯೋಮ್) ಮೇಲೆ ನಮ್ಮ ಆಹಾರ ಮತ್ತು ಜೀವನಶೈಲಿ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ಇದರಿಂದ ಪ್ರತಿಯೊಬ್ಬರಿಗೂ ಹೊಂದುವಂತಹ ‘ವೈಯಕ್ತಿಕ ಆರೋಗ್ಯ ರಕ್ಷಣಾ ಪದ್ಧತಿ’ಯನ್ನು ರೂಪಿಸಬಹುದು,” ಎಂದು ಡಾ. ಯೋಗೇಶ್ ಶೌಚೆ ಅಭಿಪ್ರಾಯಪಟ್ಟರು.

“ದೊಡ್ಡ ಬದಲಾವಣೆಗಳಿಗಿಂತ ಸಣ್ಣ ಹಾಗೂ ನಿರಂತರವಾದ ಜೀವನಶೈಲಿಯ ಬದಲಾವಣೆಗಳು ಉತ್ತಮ ಆರೋಗ್ಯವನ್ನು ನೀಡುತ್ತವೆ. ನಾವು ‘ಯಾವ ಸಮಯದಲ್ಲಿ’ ಆಹಾರ ಸೇವಿಸುತ್ತೇವೆ ಎಂಬ ಸಣ್ಣ ಅಭ್ಯಾಸವೂ ನಮ್ಮ ದೇಹದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ,” ಎಂಬುದಾಗಿ ಡಾ. ಸುಬ್ರಹ್ಮಣ್ಯ ಕುಮಾರ್ ಕಿವಿಮಾತು ಹೇಳಿದರು.

ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ದೈನಂದಿನ ಜೀವನಕ್ಕೆ ಸುಲಭವಾದ ಪರಿಹಾರಗಳನ್ನು ಒದಗಿಸುವ ಮೂಲಕ ಆರೋಗ್ಯ ಮತ್ತು ದೀರ್ಘಾಯುಷ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಉದ್ದೇಶ ಎಂದು ಆಯೋಜಕರು ತಿಳಿಸಿದರು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ವಾಂಗ್ಚುಕ್

ಸೋನಂ ವಾಂಗ್ಚುಕ್ ಆಸ್ಪತ್ರೆಗೆ ದಾಖಲು ಮಾಡಿ; ದೆಹಲಿ ಹೈಕೋರ್ಟ್‌ಗೆ PIL

by ಕವಿತಾ
July 15, 2026 - 4:06 pm
0

Untitled design 2026 07 15T154021.838

ಜುಲೈ 17ಕ್ಕೆ ಜಿಬಿಎ ಚುನಾವಣೆ ಭವಿಷ್ಯ ಫೈನಲ್!

by ಶಾಲಿನಿ ಕೆ. ಡಿ
July 15, 2026 - 3:42 pm
0

Untitled design (65)

ಬಿಡದಿ ಟೌನ್‌ಶಿಪ್‌ಗೆ 2 ತಿಂಗಳ ಬ್ರೇಕ್: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

by ಕವಿತಾ
July 15, 2026 - 3:27 pm
0

ಷ್ಯ (21)

ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 3:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಷ್ಯ (1)
    ಡಿಪ್ರೆಶನ್ ಅಂದ್ರೆ ಏನು? ಲಕ್ಷಣಗಳು, ಕಾರಣಗಳು, ಖಿನ್ನತೆಯಿಂದ ಹೊರಬರಲು ಇಲ್ಲಿವೆ ಸುಲಭ ಮಾರ್ಗಗಳು
    July 15, 2026 | 0
  • ಇರ್ತೀರಾ
    ದಿನವಿಡೀ ಒಂದೇ ಕಡೆ ಕೂತೇ ಇರ್ತೀರಾ? ಬೆನ್ನು-ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಖಚಿತ!
    July 14, 2026 | 0
  • Untitled design 2026 07 13T065303.959
    ಕೆಲಸದ ಒತ್ತಡದಿಂದ ಸುಸ್ತಾಗಿದ್ದೀರಾ? ಆಯಾಸ ನಿವಾರಿಸಲು ಈ ಸಲಹೆಗಳನ್ನು ಪ್ರತಿದಿನ ಪಾಲಿಸಿ
    July 13, 2026 | 0
  • ಕೊ
    ನಿರಂತರ ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸವನ್ನು ರೂಢಿಸಿಕೊಳ್ಳಿ!
    July 3, 2026 | 0
  • Untitled design 2026 07 02T071711.085
    ಕಿಡ್ನಿ ಫೇಲ್ ಆಗುವ ಮುನ್ನ ದೇಹ ನೀಡುವ 6 ಎಚ್ಚರಿಕೆಗಳು; ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ!
    July 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version