ಚಳಿಗಾಲ ಬಂದರೆ ಅನೇಕರು ಇಷ್ಟಪಡುವುದಕ್ಕಿಂತ ಹೆಚ್ಚು ಬರುವ ಚಳಿಗಾಳಿ, ಶೀತ ಮತ್ತು ಅದರೊಂದಿಗೆ ಬರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಯೋಚಿಸುತ್ತಾರೆ. ಬೆಳಗ್ಗಿನ ಹೊತ್ತಿಗೆ ಬೆಡ್‌ನಲ್ಲೇ ಹೊದಿಕೆ ಹೊದ್ದುಕೊಂಡು ಬಿಸಿಯಾಗಿ ಮಲಗಿ ಬಿಟ್ಟರೆ ಎಷ್ಟು ಚೆನ್ನಾಗಿರುತ್ತೆ ಎಂಬ ಆಲೋಚನೆ ಎಲ್ಲರಲ್ಲೂ ಬರುತ್ತಲೇ ಇರುತ್ತದೆ. ಆದರೆ ಚಳಿಗಾಲದಲ್ಲಿ ಆರಾಮದಿಂದ ಹಾಗೂ ಆರೋಗ್ಯಕರವಾಗಿ ಬದುಕಲು ಸರಿಯಾದ ಉಡುಪುಗಳನ್ನು ಧರಿಸುವುದು ಅತ್ಯಂತ ಮುಖ್ಯ.
ಬೇಸಿಗೆಯಲ್ಲೋ ಮಳೆಗಾಲದಲ್ಲೋ ಹಾಕುತ್ತಿದ್ದ ಉಡುಗೆಗಳು ಈ ಸಮಯದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಚಳಿಗೆ ತಕ್ಕ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಿಕೊಂಡರೆ ದೇಹಕ್ಕೆ ಬಿಸಿ, ಚರ್ಮಕ್ಕೆ ರಕ್ಷಣೆ, ಜೊತೆಗೆ ಸ್ಟೈಲ್‌ಗೂ ಧಕ್ಕೆ ಬಾರದಂತೆ ನೋಡಿಕೊಳ್ಳಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ ಫ್ಯಾಷನ್ ಮತ್ತು ಆರಾಮ ಎರಡನ್ನೂ ಒಟ್ಟಿಗೆ ನೀಡುವ ಚಳಿಗಾಲದ ಉಡುಗೆಗಳು ಲಭ್ಯವಿವೆ. ನಿಮಗೆ ಅನುಕೂಲಕರ ಹಾಗೂ ಸೌಕರ್ಯಭರಿತ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಮುಖ್ಯ.
ಚಳಿಗಾಲದಲ್ಲಿ ಆಯ್ಕೆ ಮಾಡಬೇಕಾದ ಮುಖ್ಯ ಉಡುಪುಗಳು
1. ಸ್ವೆಟರ್‌ಗಳು – ಚಳಿಗಾಲದ ಮೊದಲ ಆಯ್ಕೆ
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸಲು ಸ್ವೆಟರ್ ಅತ್ಯುತ್ತಮ. ಒಳಗೆ ಟೀ ಶರ್ಟ್ ಅಥವಾ ಟಾಪ್ ಹಾಕಿ ಅದರ ಮೇಲೆ ಸ್ವೆಟರ್ ಹಾಕಿಕೊಳ್ಳುವುದು ಕ್ಲಾಸಿಕ್ ಮತ್ತು ಕಂಫರ್ಟೇಬಲ್ ಕಾಂಬಿನೇಷನ್. ಮಾರುಕಟ್ಟೆಯಲ್ಲಿ ತೆಳುವಾದ ಸ್ವೆಟರ್, ವೂಲ್ ಸ್ವೆಟರ್, ಬಟನ್ ಸ್ವೆಟರ್, ಚೆಕ್ಸ್ ಹಾಗೂ ಜಿಯೋಮೆಟ್ರಿಕ್ ಪ್ಯಾಟರ್ನ್‌ಗಳ ಸ್ವೆಟರ್‌ಗಳು ಲಭ್ಯವಿವೆ. ನಿಮ್ಮ ಸ್ಟೈಲ್‌ಗೇ ತಕ್ಕಂತೆ ಆಯ್ದುಕೊಂಡರೆ ಚಳಿಗಾಲದಲ್ಲೂ ನಿಮ್ಮ ಲುಕ್ ಸೂಪರ್ ಆಗಿರುತ್ತದೆ.
2. ಟ್ರಿಂಚ್ ಕೋಟ್ಸ್
ಡಾರ್ಕ್ ಕಲರ್ ಟ್ರಿಂಚ್ ಕೋಟ್ಸ್‌ಗಳು ಚಳಿಗಾಲಕ್ಕೆ ಪರ್ಫೆಕ್ಟ್. ಜೀನ್ಸ್, ಸ್ಕರ್ಟ್ ಅಥವಾ ಫಾರ್ಮಲ್ ಪ್ಯಾಂಟ್‌ಗಳ ಮೇಲೆ ಹಾಕಿಕೊಂಡರೆ ನಿಮ್ಮ ವ್ಯಕ್ತಿತ್ವಕ್ಕೆ ಕ್ಲಾಸಿ ಲುಕ್ ನೀಡುತ್ತವೆ. ಇದು ಕೇವಲ ಬಿಸಿಯನ್ನೇ ನೀಡುವುದಲ್ಲದೆ, ನಿಮ್ಮ ಒಟ್ಟಾರೆ ಲುಕ್ ಅನ್ನು ಮತ್ತಷ್ಟು ಹೈಲೈಟ್ ಮಾಡುತ್ತದೆ.
3. ಪೆನ್ಸಿಲ್ ಸ್ಕರ್ಟ್ – ಸ್ಟೈಲ್‌ಗಾಗಿ ಬೇಸ್ಟ್ ಆಯ್ಕೆ
ಉಣ್ಣೆದಾರದಿಂದ ತಯಾರಾಗುವ ಪೆನ್ಸಿಲ್ ಸ್ಕರ್ಟ್‌ಗಳು ಚಳಿಗಾಲಕ್ಕೆ ಸೂಕ್ತವಾಗಿವೆ. ವಿವಿಧ ಬಣ್ಣಗಳಲ್ಲಿ ದೊರೆಯುವ ಈ ಸ್ಕರ್ಟ್‌ಗಳು ತೆಳ್ಳಗೆ ಇರುವವರಿಗೆ ಸಖತ್ ಲುಕ್ ನೀಡುತ್ತವೆ. ಲಾಂಗ್ ಬೂಟ್ಸ್ ಅಥವಾ ಜಾಕೆಟ್‌ಗಳೊಂದಿಗೆ ಈ ಕಾಂಬಿನೇಷನ್ ಚಳಿಗಾಲದ ಅತ್ಯುತ್ತಮ ಫ್ಯಾಷನ್ ಸ್ಟೇಟ್ಮೆಂಟ್ ಆಗುತ್ತದೆ.
4. ಪ್ರಿಂಟೆಡ್ ಉಡುಗೆಗಳು – ಕಲರ್ & ಕಂಫರ್ಟ್ ಎರಡೂ ಒಂದೇಿಗೆ
ಚಳಿಗಾಲದಲ್ಲಿ ಹೊಳೆಯದ ಮಿಡಿ ಡ್ರೆಸ್ಸುಗಳು, ಲಾಂಗ್‌ಟಾಪ್ಸ್ ಹಾಗೂ ಪ್ರಿಂಟೆಡ್ ಜಾಕೆಟ್‌ಗಳು ಬಹಳ ಟ್ರೆಂಡ್. ಆದರೆ ಬಣ್ಣಗಳ ಆಯ್ಕೆ ಮುಖ್ಯ. ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತೆ ಮಂದ ಹಳದಿ, ಕಾಫಿ ಬ್ರೌನ್, ಮರೂನ್, ಆಲಿವ್ ಗ್ರೀನ್ ಶೇಡ್‌ಗಳನ್ನು ಆಯ್ಕೆ ಮಾಡಿದರೆ ಚಳಿಗಾಲದ ಹವಾಮಾನದಲ್ಲಿ ಇನ್ನಷ್ಟು ಉತ್ತಮ.
5. ಜಾಕೆಟ್ಸ್ – ಹೆಚ್ಚು ಬಿಸಿ, ಹೆಚ್ಚು ಫ್ಯಾಷನ್
ಚಳಿಗಾಲ ಎಂದರೆ ಜಾಕೆಟ್‌ಗಳ ಸೀಸನ್. ಪಾರ್ಕಸ್, ಏನಾರಕ್ಸ್, ಮಿಲಿಟರಿ ಸ್ಟೈಲ್ ಜಾಕೆಟ್ಸ್, ಪಫರ್ ಜಾಕೆಟ್ಸ್, ಬಾಂಬರ್ ಜಾಕೆಟ್ಸ್ ಇವೆಲ್ಲವೂ ಈಗ ಟ್ರೆಂಡಿಂಗ್. ನೀವು ಧರಿಸುವ ಉಡುಪಿಗೆ ಮ್ಯಾಚ್ ಆಗುವ ಜಾಕೆಟ್ ತೆಗೆದುಕೊಂಡರೆ ನಿಮ್ಮ ಫ್ಯಾಷನ್ ಗೇಮ್ ಇನ್ನೂ ಅಪ್ ಆಗುತ್ತದೆ.
6. ಸಾಕ್ಸ್, ಬೂಟ್ಸ್ ಮತ್ತು ಕ್ಯೂಟ್ ಟೋಪಿ
ಚಳಿಗಾಲದಲ್ಲಿ ಪಾದಗಳು ಮತ್ತು ತಲೆಗೆ ಬಿಸಿಯಾಗಿರೋದು ಕೂಡ ಬಹಳ ಮುಖ್ಯ. ನಿಮ್ಮ ಜಾಕೆಟ್ ಮತ್ತು ಉಡುಪಿಗೆ ಸೂಟಾಗುವ ಬೂಟ್ಸ್, ಸಾಕ್ಸ್ ಹಾಗೂ ಟೋಪಿ ಆಯ್ಕೆ ಮಾಡಿಕೊಂಡರೆ ನಿಮ್ಮ ಒಟ್ಟು ಲುಕ್ ಸ್ಟೈಲಿಷ್ ಆಗಿದ್ದು, ದೇಹ ಬಿಸಿಯಾಗಿರಲು ಸಹ ಸಹಾಯ ಮಾಡುತ್ತದೆ.





