ಬಾಲಿವುಡ್ ಅಂಗಳದಲ್ಲಿ ಈಗ ಆಲ್ಫಾ ವರ್ಸಸ್ ಧುರಂಧರ್ ಜಟಾಪಟಿ ಜೋರಾಗಿದೆ. ನಟಿ ಕರೀನಾ ಕಪೂರ್ ಖಾನ್ ನೀಡಿರುವ ಒಂದು ಹೇಳಿಕೆ ಸಿನಿಮಾ ಪ್ರಿಯರ ವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಎರಡೂ ಸಿನಿಮಾಗಳ ನಡುವೆ ಕರೀನಾ ಯಾರ ಪರ ನಿಂತಿದ್ದಾರೆ? ರಿಯಾಲಿಟಿಗೂ ಸಿನಿಮಾಗೂ ಇರುವ ಸಂಬಂಧವೇನು..? ಇದಕ್ಕೆ ಬಿಟೌನ್ ಬೆಬೋ ಹೇಳಿದ್ದೇನು?
- ಆಲ್ಫಾ Vs ಧುರಂಧರ್ ಯಾರು ಬೆಸ್ಟ್? ಬೆಬೋ ಉತ್ತರ..!
- ಆಲ್ಫಾಗೆ ಕರೀನಾ ಸಪೋರ್ಟ್ ಧುರಂಧರ್ ಫ್ಯಾನ್ಸ್ ಗರಂ
- ಆಲ್ಫಾ ರಿಯಲ್… ಧುರಂಧರ್ ಅಲ್ಲ ಕರೀನಾ ಹೇಳಿಕೆ ವೈರಲ್
- ಆಲ್ಫಾ ಪರ ಕರೀನಾ..ಧುರಂಧರ್ ಪರ ನೆಟ್ಟಿಗರ ಸಮರ..!
ಈಗ ಬಾಲಿವುಡ್‌ನಲ್ಲಿ ಆಲ್ಫಾ ಮತ್ತು ಧುರಂಧರ್ ಸಿನಿಮಾಗಳದ್ದೇ ಹವಾ. ಎರಡೂ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿರೋದ್ರಿಂದ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಇದೆ. ಈ ಸಿನಿಮಾಗಳ ಕಥೆ ಮತ್ತು ಮೇಕಿಂಗ್ ಬಗ್ಗೆ ಜನ ಸೋಶಿಯಲ್ ಮೀಡಿಯಾದಲ್ಲಿ ದಿನಾ ಜಗಳ ಮಾಡ್ಕೊಳ್ತಿದ್ದಾರೆ. ಒಂದು ಕಡೆ ಆಲಿಯಾ ಭಟ್ ‘ಆಲ್ಫಾ’ ಅಂದ್ರೆ, ಇನ್ನೊಂದು ಕಡೆ ರಣವೀರ್ ಸಿಂಗ್ ‘ಧುರಂಧರ್’ ಅನ್ನೋ ಆಡಿಯನ್ಸ್ ಗ್ರೂಪ್‌ಗಳು ರೆಡಿಯಾಗಿವೆ. ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡ್ತಿರೋ ಹಾಗೆ, ಇಂಟರ್‌ನೆಟ್‌ನಲ್ಲೂ ಟ್ರೆಂಡಿಂಗ್‌ನಲ್ಲೇ ಇವೆ. ಇವೆರಡರಲ್ಲಿ ಯಾವುದು ಬೆಸ್ಟ್ ಅನ್ನೋದು ಈಗ ಎಲ್ಲರ ಪ್ರಶ್ನೆ. ಸ್ಟಾರ್‌ಗಳು ಕೂಡ ಈ ಬಗ್ಗೆ ಮಾತಾಡ್ತಿದ್ದಾರೆ ಅಂದ್ರೆ, ವಿಷಯ ಎಷ್ಟು ಸೀರಿಯಸ್ ಅಂತ ನೀವೇ ಅರ್ಥ ಮಾಡ್ಕೊಳ್ಳಿ.
ಸಿನಿಮಾ ಅಂದ್ರೆ ಬರೀ ಮಜಾ ಅಲ್ಲ, ಅದರಲ್ಲಿ ನಮ್ಮ ಜೀವನದ ಕಥೆ ಕಾಣಿಸಬೇಕು ಅಂತ ಎಲ್ಲರೂ ಬಯಸ್ತಾರೆ. ನಾವು ನೋಡ್ತಾ ಇರೋ ಪಾತ್ರಗಳು ರಿಯಲ್ ಆಗಿದ್ರೆ, ನಮಗೂ ಕಥೆ ಜೊತೆ ಕನೆಕ್ಟ್ ಆಗೋಕೆ ಸುಲಭವಾಗುತ್ತೆ. ಸುಮ್ಮನೆ ಅದ್ದೂರಿ ಸೆಟ್ ಹಾಕೋದಕ್ಕಿಂತ, ಜನ ನೋಡ್ತಾ ಇರೋವಾಗ ಇದು ನಮ್ಮ ಪಕ್ಕದ ಮನೆಯ ಕಥೆ ಅನ್ಸಬೇಕು. ಅವಾಗ ಮಾತ್ರ ಸಿನಿಮಾ ಮನಸ್ಸಲ್ಲಿ ಉಳಿಯೋದು. ಇತ್ತೀಚಿನ ದಿನಗಳಲ್ಲಿ ಜನ ತುಂಬಾ ಚೇಂಜ್ ಆಗಿದ್ದಾರೆ, ಅವರಿಗೆ ಕಥೆಯಲ್ಲಿ ಸತ್ಯಾಂಶ ಬೇಕು. ಕಥೆ ಎಷ್ಟು ಪವರ್‌ಫುಲ್ ಆಗಿದೆಯೋ, ಅಷ್ಟು ಚೆನ್ನಾಗಿ ಪ್ರೇಕ್ಷಕರು ಅದನ್ನ ಸ್ವೀಕರಿಸ್ತಾರೆ. ರಿಯಲಿಸಂ ಇರೋ ಸಿನಿಮಾಗಳಿಗೆ ಈಗ ಡಿಮ್ಯಾಂಡ್ ಹೆಚ್ಚಾಗಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕರೀನಾ ಕಪೂರ್‌ಗೆ ಆಲ್ಫಾನಾ ಅಥವಾ ಧುರಂಧರ್ ನಾ ಅಂತ ಕೇಳಿದಾಗ, ಅವರು ಯೋಚನೆ ಮಾಡದೆಯೇ ಆಲ್ಫಾಗೆ ಓಟ್ ಹಾಕಿದ್ದಾರೆ. ಅವರಿಗೆ ಆಲ್ಫಾ ತುಂಬಾ ರಿಯಲ್ ಆಗಿ ಅನಿಸಿದೆ ಅಂತೆ. ‘ಧುರಂಧರ್’ ಚಿತ್ರದಲ್ಲಿ ಅಂತಹ ಫೀಲ್ ಸಿಗಲಿಲ್ಲ ಅಂತ ಕರೀನಾ ನೇರವಾಗಿಯೇ ಹೇಳಿದ್ದಾರೆ. ಕರೀನಾ ಕಪೂರ್ ತಮ್ಮ ಇಷ್ಟ-ಕಷ್ಟಗಳನ್ನು ನೇರವಾಗಿ ಹೇಳಿದ್ದೇ ತಡ, ನೆಟ್ಟಿಗರು ಈಗ ಅವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ನೀವು ಸ್ಟಾರ್ ಆಗಿದ್ದೀರ ಅಂದ ಮಾತ್ರಕ್ಕೆ ಎಲ್ಲದಕ್ಕೂ ನಿಮ್ಮ ಅಭಿಪ್ರಾಯವೇ ಫೈನಲ್ ಅಲ್ಲ ಅಂತ ಕೆಲವರು ಕರೀನಾಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಚಿತ್ರರಂಗದ ಬಗ್ಗೆ ಆಳವಾದ ತಿಳುವಳಿಕೆ ಇಲ್ಲದೆ ಇಂತಹ ಹೇಳಿಕೆ ನೀಡಬಾರದಿತ್ತು ಎಂದು ಕೆಲವರು ಟ್ರೋಲ್ ಮಾಡ್ತಿದ್ದಾರೆ.
ಸದ್ಯ ಇಂಟರ್ನೆಟ್‌ನಲ್ಲಿ ಫ್ಯಾನ್ಸ್ ಫೈಟ್ ಶುರುವಾಗಿದೆ. ಆಲ್ಫಾ ಇಷ್ಟ ಪಡುವವರು ಕರೀನಾಗೆ ಥ್ಯಾಂಕ್ಸ್ ಹೇಳ್ತಿದ್ರೆ, ಧುರಂಧರ್ ಫ್ಯಾನ್ಸ್ ಕರೀನಾ ವಿರುದ್ಧ ಕಮೆಂಟ್ ಮಾಡ್ತಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಚಾಯ್ಸ್ ಇರುತ್ತೆ, ಆದ್ರೆ ಕರೀನಾ ಅವರ ಪರ್ಸನಲ್ ಅಭಿಪ್ರಾಯಕ್ಕೆ ಇಷ್ಟು ವ್ಯಾಲ್ಯೂ ಸಿಕ್ಕಿದೆ. ಸಿನಿಮಾ ಅಂದ್ರೆ ಹೀಗೆ ಇರಬೇಕು ಅಂತ ಒಬ್ಬೊಬ್ಬರು ಒಂದೊಂದು ತರ ವಾದ ಮಾಡ್ತಿದ್ದಾರೆ. ಈ ಜಗಳದಿಂದ ಸಿನಿಮಾಗೆ ಇನ್ನಷ್ಟು ಪಬ್ಲಿಸಿಟಿ ಸಿಗ್ತಿದೆ ಅನ್ನೋದು ಸತ್ಯ. ಒಟ್ಟಿನಲ್ಲಿ ಈ ಸಣ್ಣ ಮಾತು ದೊಡ್ಡ ಕಾಂಟ್ರವರ್ಸಿಗೆ ದಾರಿ ಮಾಡಿಕೊಟ್ಟಿದೆ
ಕರೀನಾ ಏನೋ ಅಂದ್ರು, ಬೇರೆಯವರು ಏನೋ ಅಂದ್ರು, ಆದ್ರೆ ಅಂತಿಮವಾಗಿ ಸಿನಿಮಾ ಹೇಗಿದೆ ಅಂತ ಹೇಳೋರು ಪ್ರೇಕ್ಷಕರೇ. ಕರೀನಾ ಮಾತು ಅವರ ಅಭಿಪ್ರಾಯ ಮಾತ್ರ, ಅದು ಎಲ್ಲರಿಗೂ ಅನ್ವಯ ಆಗಲ್ಲ. ಕೆಲವರಿಗೆ ಧುರಂಧರ್ ಮಸ್ತ್ ಅನಿಸಬಹುದು, ಇನ್ನು ಕೆಲವರಿಗೆ ಆಲ್ಫಾ ಇಷ್ಟ ಆಗಬಹುದು. ಕೊನೆಗೆ ಸಿನಿಮಾ ಹಿಟ್ ಮಾಡೋದು ಆಡಿಯನ್ಸ್ ಕೈಯಲ್ಲೇ ಇರೋದು. ಸಿನಿಮಾ ಚೆನ್ನಾಗಿದ್ರೆ ಜನ ನೋಡೇ ನೋಡ್ತಾರೆ. ಈಗ ಈ ಫೈಟ್ ನೋಡ್ತಿದ್ರೆ ಪ್ರೇಕ್ಷಕರಿಗೆ ಎರಡೂ ಸಿನಿಮಾಗಳ ಮೇಲೆ ಫುಲ್ ಫೋಕಸ್ ಇದೆ ಅಂತಾನೇ ಅನ್ಸುತ್ತೆ. ಮುಂದೆ ಈ ಸಿನಿಮಾಗಳ ಬಾಕ್ಸ್ ಆಫೀಸ್ ಕಥೆ ಏನು ಅನ್ನೋದೇ ಈಗ ಕುತೂಹಲ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





