ಗೋಲ್ಡನ್ ಸ್ಟಾರ್ ಗೋಲ್ಡನ್ ಅಲ್ಬಮ್‌ಗೆ ಮತ್ತೊಂದು ಬ್ಯೂಟಿಫುಲ್ ಸಾಂಗ್ ಸೇರಿಕೊಂಡಿದೆ. ಬೃಂದಾವಿಹಾರಿಯ ಹೊಚ್ಚ ಹೊಸ ಗೀತೆ ನಾದಸುನಾದ ಅದಾಗಿದ್ದು, ಕಣ್ಮನ ತಣಿಸುತ್ತಿದೆ. ಕೃಷ್ಣನ ಭಕ್ತಿ ಹಾಗೂ ಪ್ರೇಮದ ಭಾವಗಳ ಮಿಶ್ರಣದ ಪ್ಯೂರ್ ಕ್ಲಾಸಿಕ್ ಭರತನಾಟ್ಯ ಸಾಂಗ್ ಝಲಕ್ ಜೊತೆ ಅದ್ರ ವಿಶೇಷತೆಗಳ ವಿಶ್ಲೇಷಣೆ ನಿಮ್ಮ ಮುಂದೆ.
- ಪ್ಯೂರ್ ಕ್ಲಾಸಿಕ್ ನಾದಸುನಾದ.. ಬೃಂದಾವಿಹಾರಿ ರಾಗ ವಿನೋದ
- ಮೆಲೋಡಿ ಪ್ರಿಯರ ಮನಗೆದ್ದ ಮತ್ತೊಂದು ಹೊಚ್ಚ ಹೊಸ ಸಾಂಗ್
- ಕೃಷ್ಣ ಭಕ್ತಿ.. ಪ್ರೇಮದ ಭಾವಕ್ಕೆ ದೇವಿಕಾ ಭಟ್ ಭರತನಾಟ್ಯ ಜೀವ
- ಕವಿರತ್ನ ನಾಗೇಂದ್ರ ಪ್ರಸಾದ್ ಸಾಹಿತ್ಯ ಸ್ಪರ್ಶಕ್ಕೆ ಶ್ರೇಯಸ್ಸಿನ ಕಂಠ..!
ಸ್ಯಾಂಡಲ್‌ವುಡ್‌ನಲ್ಲಿ ಮಾಸ್-ಫಾಸ್ಟ್ ಬೀಟ್‌ಗಳ ಅಬ್ಬರದ ನಡುವೆ, ಇಯರ್‌ಫೋನ್ ಹಾಕಿ ಕಣ್ಣು ಮುಚ್ಚಿ ಆಲಿಸುವಂತಹ ಅದ್ಭುತ ಕ್ಲಾಸಿಕಲ್ ಟ್ರ್ಯಾಕ್ ಬಂದು ಬಹಳ ದಿನಗಳಾಗಿತ್ತು. ಆದರೆ ಗೋಲ್ಡನ್ ಸ್ಟಾರ್ ಗಣೇಶ್, ದೇವಿಕಾ ಭಟ್ ಹಾಗು ಮಾಳವಿಕಾ ಶರ್ಮಾ ಅಭಿನಯಿಸಿರುವ ಬೃಂದಾವಿಹಾರಿಯ ನಾದಸುನಾದ ಹಾಡು ಆ ಗ್ಯಾಪ್ ಅನ್ನು ಕಂಪ್ಲೀಟ್ ಆಗಿ ಫಿಲ್ ಮಾಡಿದೆ. ಕೃಷ್ಣಾ ನೀ ಬೇಗನೇ ಬಾರೋ ಅನ್ನೋ ಸಾಂಪ್ರದಾಯಿಕ ಸ್ವರಾವಳಿಯ ಸ್ಪರ್ಶದೊಂದಿಗೆ ಶುರುವಾಗೋ ಈ ಟ್ರ್ಯಾಕ್, ಕೇಳುಗರನ್ನು ಕ್ಷಣಾರ್ಧದಲ್ಲೇ ಯಾವುದೋ ದಿವ್ಯ ಲೋಕಕ್ಕೆ ಕರೆದೊಯ್ಯುತ್ತದೆ. ಹೆಶಾಮ್ ಅಬ್ದುಲ್ ವಹಾಬ್ ಅವರ ಮಾಂತ್ರಿಕ ಸಂಗೀತ ಸಂಯೋಜನೆಗೆ ಜೊಸೀ ಆಲಪ್ಪುಳ ಅವರ ಕೊಳಲು ಮತ್ತು ಹರಿತಾ ರಾಜ್ ಅವರ ವೀಣೆಯ ನಾದ ಜೀವ ತುಂಬಿದ್ದು, ಇಡೀ ಹಾಡಿನುದ್ದಕ್ಕೂ ಭಕ್ತಿಯ ತರಂಗಗಳು ಹರಿಯುವಂತೆ ಮಾಡಿದೆ.
ಈ ಹಾಡಿಗೆ ಅಸಲಿ ಶಕ್ತಿ ತಂದಿರುವುದು ಗಾನಕೋಕಿಲೆ ಶ್ರೇಯಾ ಘೋಷಾಲ್ ಅವರ ಧ್ವನಿ. ಪ್ರಣಯಮಯ ಯಮುನೆಯಲ್ಲಿ ಈಜಾಡಿಸು… ನಿತ್ಯೋತ್ಸವ ಪ್ರೇಮೋತ್ಸವ ಆನಂದಿಸು… ಎಂದು ಅವರು ಹಾಡುವಾಗ ಪ್ರತಿಯೊಬ್ಬರಿಗೂ ರೋಮಾಂಚನವಾಗುವುದು ಖಂಡಿತ. ಇನ್ನು ವಿಶುವಲ್ ವಿಚಾರಕ್ಕೆ ಬಂದರೆ, ಪರದೆಯ ಮೇಲೆ ನಾಯಕಿ ದೇವಿಕಾ ಭಟ್ ಅವರ ಕ್ಲಾಸಿಕಲ್ ಸ್ಟೆಪ್ಸ್ ಮತ್ತು ಅಭಿನಯ ಕಣ್ಣಿಗೆ ಹಬ್ಬ. ಮಾಸ್ಟರ್ ಬೃಂದಾ ಅವರ ಕೊರಿಯೋಗ್ರಫಿಯಲ್ಲಿ ಮೂಡಿಬಂದಿರೋ ಈ ಭರತನಾಟ್ಯದ ಪ್ರತಿಯೊಂದು ಕಣ್ಣಸಂಜ್ಞೆ ಮತ್ತು ಮುದ್ರೆಗಳು ಕೃಷ್ಣನ ಮೇಲಿರುವ ಅನನ್ಯ ಭಕ್ತಿ-ಪ್ರೇಮವನ್ನು ತೋರ್ಪಡಿಸುತ್ತವೆ.
ಮೀರಾ-ಮಾಧವರ ಜನುಮ ಜನುಮದ ಬೆಸೆದ ಜೀವಾತ್ಮ ಸಂಗಮ ಅನ್ನೋ ಕವಿರತ್ನ ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವೇ ಈ ಹಾಡಿನ ರಿಯಲ್ ಹೈಲೈಟ್. ಕೇವಲ ಸಿನಿಮಾ ಹಾಡಾಗಿ ಉಳಿಯದೆ, ಆತ್ಮ ಮತ್ತು ಪರಮಾತ್ಮನ ಪ್ರೇಮಕಾವ್ಯದಂತೆ ಮೂಡಿಬಂದಿರೋ ಈ ಸಾಂಗ್, ಸಿನಿಮಾದ ಮೇಲಿರೋ ಎಕ್ಸ್‌ಪೆಕ್ಟೇಷನ್ ಅನ್ನು ನೆಕ್ಸ್ಟ್ ಲೆವೆಲ್‌ಗೆ ತೆಗೆದುಕೊಂಡು ಹೋಗಿದೆ. ಶ್ರೀನಿವಾಸ್ ರಾಜು ಅವರ ಮೇಕಿಂಗ್ ಮತ್ತು ಸಮೃದ್ಧಿ ಮಂಜುನಾಥ್ ಅವರ ನಿರ್ಮಾಣ ಈ ಹಾಡಿನ ದೃಶ್ಯ ವೈಭವದಲ್ಲಿ ಎದ್ದು ಕಾಣುತ್ತಿದ್ದು, ಗಣೇಶ್ ಜೊತೆಗೆ ನಟಿ ದೇವಿಕಾ ಲೈನಪ್‌ನಲ್ಲಿ ಈ ಸಾಂಗ್ ಒನ್ ಆಫ್ ದಿ ಬೆಸ್ಟ್ ಕ್ಲಾಸಿಕ್ ಹಿಟ್ ಆಗಿ ಹೊರಹೊಮ್ಮಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





