ಅಂದು MGR-ಜಯಲಲಿತಾ.. ಇಂದು ವಿಜಯ್-ತ್ರಿಶಾ.. ಸೇಮ್ ಟು ಸೇಮ್ ಸಿಚ್ಯುಯೇಷನ್. ವಿಜಯ್ ಕೈ ಹಿಡಿದು ಡಿಸಿಎಂ ಆಗ್ತಾರಾ ತ್ರಿಶಾ ಅನ್ನೋದ್ರ ಜೊತೆ ಸ್ವಂತ ಮಗನಂತೆ ಸಾಕಿದ ಶಬರಿನಾಥನ್‌ನ ಎಂಎಲ್‌ಎ ಮಾಡಿದ್ಹೇಗೆ ದಳಪತಿ..? ನಿಜವಾಗ್ಲೂ ತಮಿಳಿಯನ್ಸ್‌ಗೆ ಸೆಲೆಬ್ರಿಟಿ ಸಿಂಡ್ರೋಮ್ ಇದೆಯಾ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ ನೋಡಿ..
- ಮಗನಂತೆ ಸಾಕಿದ ಹುಡ್ಗನನ್ನ MLA ಮಾಡಿದ್ದೇಗೆ ವಿಜಯ್?
- ತನ್ನ ಕಾರ್ ಡ್ರೈವರ್ ಮಗನ ಬಿ.ಟೆಕ್ ಮಾಡಿಸಿದ್ದ ದಳಪತಿ..!
ರಾಜೇಂದ್ರನ್.. ವಿರುಂಗಂಬಾಕಂ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಮತಗಳ ಅಂತರದಿಂದ ಗೆದ್ದಿರೋ ಟಿವಿಕೆ ಪಕ್ಷದ ಅಭ್ಯರ್ಥಿ ಶಬರಿನಾಥನ್ ತಂದೆ. ಅಂದಹಾಗೆ ರಾಜೇಂದ್ರನ್ ನಟ ವಿಜಯ್ 1992ರಲ್ಲಿ ಹೀರೋ ಆಗಿ ಲಾಂಚ್ ಆದ ಮೊದಲ ಸಿನಿಮಾದಿಂದ ಅವರಿಗೆ ಕಾರ್ ಡ್ರೈವರ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಸದ್ಯ ದಳಪತಿ ವಿಜಯ್‌ಗೆ ಪಿಎ ಆಗಿ ಪ್ರಮೋಷನ್ ಕೂಡ ಪಡೆದಿರೋ ವ್ಯಕ್ತಿ. ತನ್ನ ಟಿವಿಕೆ ಪಕ್ಷದಿಂದ ರಾಜೇಂದ್ರನ್ ಮಗನಿಗೆ ಟಿಕೆಟ್ ನೀಡಿದ್ದ ವಿಜಯ್, ಆತನನ್ನ ಎಂಎಲ್‌ಎ ಮಾಡಿರೋದು ಖುಷಿಯ ವಿಚಾರ.
ಟಿವಿಕೆ ಎಂಎಲ್‌ಎ ಶಬರಿನಾಥನ್ ಪ್ರೀ-ಕೆಜಿಯಿಂದ ಹಿಡಿದು ಬಿ.ಟೆಕ್ ತನಕ ಕಂಪ್ಲೀಟ್ ಆಗು ಹೋಗುಗಳನ್ನ ಖುದ್ದು ದಳಪತಿ ವಿಜಯ್ ನೋಡಿಕೊಂಡಿದ್ರು. ಆತನ ಸ್ಕೂಲ್, ಕಾಲೇಜು ಫೀಸ್‌ನಿಂದ ಹಿಡಿದು, ಬುಕ್ಸ್, ಬಟ್ಟೆ ಎಲ್ಲಾ ಜವಾಬ್ದಾರತಿ ವಿಜಯ್ ಹೊತ್ತಿದ್ರು. ಅಕ್ಷರಶಃ ವಿಜಯ್ ತನ್ನ ಮಗನಂತೆ ಶಬರಿನಾಥನ್‌ನ ಬೆಳೆಸಿದ್ರು. ಹಾಗಾಗಿಯೇ ಆತನಲ್ಲಿದ್ದ ಸಾಮರ್ಥ್ಯ ಹಾಗೂ ಪ್ರಾಮಾಣಿಕತೆ ಕಂಡು ವಿಜಯ್ ಅವರನ್ನ ಶಾಸಕರನ್ನಾಗಿಸಿದ್ದಾರೆ.
- ಆಟೋ ಡ್ರೈವರ್‌ಗೆ 15 ಸಾವಿರ ಲೀಡ್.. ದಳಪತಿ ದಾಖಲೆ
- ಕಾಮನ್ ಮ್ಯಾನ್ MLA ಆಗಬಹುದು ಅನ್ನೋದಕ್ಕೆ ಸಾಕ್ಷಿ
ತಮಿಳು ಮತದಾರರು ನಟ ವಿಜಯ್ ಮೇಲೆ ಹೇಗೆ ನಂಬಿಕೆ ಇಟ್ಟರೋ.. ಅದೇ ರೀತಿ ಅವರ ಪಕ್ಷದಿಂದ ನಿಂತಿದ್ದ ಕ್ಯಾಂಡಿಡೇಟ್ಸ್ ಮೇಲೆಯೂ ಭರವಸೆ ಇಟ್ಟರು. ಅದೇ ಕಾರಣದಿಂದ ಕಾಮನ್ ಮ್ಯಾನ್ ಕೂಡ ಎಂಎಲ್‌ಎ ಆಗಿ ದೊಡ್ಡ ಅಂತರದಿಂದ ಗೆಲ್ಲುವಂತಾಯ್ತು. ಅದ್ರಲ್ಲೂ ಆಟೋ ಡ್ರೈವರ್ ವಿಜಯ್ ದಾಮು ಸುಮಾರು 15 ಸಾವಿರ ವೋಟ್ಸ್ ಲೀಡ್‌ನಿಂದ ಎಐಎಡಿಎಂಕೆ ಕ್ಯಾಂಡಿಡೇಟ್ ಮೇಲೆ ರೋಯಪುರಂನಲ್ಲಿ ಗೆದ್ದು, ದಾಖಲೆ ನಿರ್ಮಿಸಿದ್ದಾರೆ.
ಟಿವಿಕೆ ಅಧ್ಯಕ್ಷ ವಿಜಯ್‌ಗೆ ಬಹುಶಃ ಶಬರಿನಾಥನ್ ಹಾಗೂ ದಾಮು ಗೆಲುವು ಬಹುದೊಡ್ಡ ಖುಷಿ ಕೊಟ್ಟಿರಲಿದೆ. ಯಾಕಂದ್ರೆ ತಾವು ನಂಬಿದ ಅಭ್ಯರ್ಥಿಗಳು ಯಾರೂ ಸೋತಿಲ್ಲ. ಅಷ್ಟೇ ಯಾಕೆ ನಂಬಿದಂತಹ ಜನ ಕೈ ಕೊಡದೆ ಯಾವುಏ ನಿರೀಕ್ಷೆಗಳಿಲ್ಲದೆ ಬದಲಾವಣೆ ಬಯಸಿ ವೋಟ್ ಹಾಕಿದ್ದಾರೆ. ಅದಕ್ಕೆ ರಿಟರ್ನ್ ಗಿಫ್ಟ್ ಆಗಿ ಒಳ್ಳೆಯ ಆಡಳಿತ ಕೊಡೋ ಜವಾಬ್ದಾರಿ ಸಹ ಟಿವಿಕೆ ಪಕ್ಷದ ಮೇಲಿದೆ.
- ಪಾಲಿಟಿಕ್ಸ್‌ಗೆ ತ್ರಿಶಾ.. MGR-ಜಯಲಲಿತಾ ಡೇಸ್ ರಿಪೀಟ್?
- ವಿಜಯ್ ಒಂದು ಕಡೆ ರಾಜೀನಾಮೆ.. ತ್ರಿಶಾ ಪಾಲಿಗೆ ಟಿಕೆಟ್
ಒಂದು ಕಾಲದಲ್ಲಿ ಸೂಪರ್ ಸ್ಟಾರ್ ಎಂಜಿಆರ್ ಅಂದ್ರೆ ಜನಕ್ಕೆ ಎಲ್ಲಿಲ್ಲದ ಕ್ರೇಜ್. ಅವರು ರಾಜಕಾರಣಕ್ಕೆ ಎಂಟ್ರಿ ಕೊಟ್ಟು, ನಂತ್ರ ಭಿನ್ನಾಭಿಪ್ರಾಯ ಮೂಡಿದ ಬಳಿಕ ಸ್ವತಃ ತಾವೇ AIADMK ಅನ್ನೋ ಹೊಸ ಪಕ್ಷ ಕಟ್ಟಿದ್ರು. ಆಗಲೂ ಅವರ ಅಲೆ ಕಿಂಚಿತ್ತೂ ಕಮ್ಮಿ ಆಗಿಲ್ಲ. ಬಹುಬೇಗ ಸಿಎಂ ಆಗಿ ರಾರಾಜಿಸಿದ್ರು. ಹೂವಿನ ಜೊತೆ ನಾರು ಕೂಡ ಸ್ವರ್ಗ ಸೇರಿದ ಹಾಗೆ ಅವರೊಟ್ಟಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ನಟಿ ಜಯಲಲಿತಾ ಕೂಡ ರಾಜಕಾರಣಕ್ಕೆ ಧುಮುಕಿದರು. ಎಂಜಿಆರ್‌ಗೆ ಬಹುದೊಡ್ಡ ಸಾಥ್ ನೀಡಿದ್ರು.
ಎಂಜಿಆರ್ ಬಳಿಕ ಜಯಲಲಿತಾ ಕೂಡ ತಮಿಳುನಾಡಿನ ಜನರ ಪಾಲಿನ ಅಮ್ಮನಾಗಿ ಅಬ್ಬರಿಸಿ, ಆರ್ಭಟಿಸಿದ್ರು. ತಮ್ಮ ಮಾತಿಗೆ ಎದುರೇ ಇಲ್ಲದಂತೆ ಆಡಳಿತ ನಡೆಸಿ, ದಿಟ್ಟ ಹೆಣ್ಣು ಅನ್ನೋದನ್ನ ಪ್ರೂವ್ ಮಾಡಿ ತೋರಿಸಿದ್ರು. ಇದೀಗ ಅದೇ ಎಂಜಿಆರ್-ಜಯಲಲಿತಾ ಡೇಟ್ ರಿಪೀಟ್ ಆಗುವ ಸೂಚನೆ ಸಿಕ್ಕಿದೆ. ಯಾಕಂದ್ರೆ ವಿಜಯ್ ಸದ್ಯ ಎಂಜಿಆರ್ ಸ್ಥಾನದಲ್ಲಿ ಜನರ ದಿಲ್ ದೋಚಿದ್ದಾರೆ.
ದಳಪತಿ ಜೊತೆ ಸ್ಕ್ರೀನ್ ಶೇರ್ ಮಾಡಿ, ಆಪ್ತತೆ ಬೆಳೆಸಿಕೊಂಡಿರೋ ತ್ರಿಶಾ ಕೂಡ ಜಯಲಲಿತಾ ರೀತಿ ಜನಕ್ಕೆ ಕಾಣಸಿಗುತ್ತಿದ್ದಾರೆ. ಅದಕ್ಕೆ ಪೂರಕವಾಗಿ ತ್ರಿಶಾ ಕೂಡ ವಿಜಯ್ ಜೊತೆ ಸಾರ್ವಜನಿಕವಾಗಿಯೇ ಓಡಾಡ್ತಿದ್ದಾರೆ. ಫಲಿತಾಂಶದ ದಿನ ಕೂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನೇರವಾಗಿ ವಿಜಯ್ ಮನೆಗೆ ಬಂದಿದ್ದು ಗೊತ್ತೇಯಿದೆ. ಇಂಟರೆಸ್ಟಿಂಗ್ ಅಂದ್ರೆ ವಿಜಯ್ ಎರಡೆರಡು ಕ್ಷೇತ್ರಗಳಲ್ಲಿ ಸ್ಫರ್ಧಿಸಿ ಗೆದ್ದಾಗಿದೆ. ಸೋ ಒಂದು ಕಡೆ ಅವರು ರಾಜೀನಾಮೆ ನೀಡಬೇಕಿದೆ. ಹಾಗೆ ಆದಲ್ಲಿ ಟಿವಿಕೆಯಿಂದ ತ್ರಿಶಾನ ಆ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕೆ ಇಳಿಸೋ ಸಾಧ್ಯತೆಯಿದೆ.
ಇನ್ ಕೇಸ್ ಕುಂದವೈ ತ್ರಿಶಾ ಪಾಲಿಟಿಕ್ಸ್‌ಗೆ ಪಾದಾರ್ಪಣೆ ಮಾಡಿ, ಎಂಎಲ್‌ಎ ಆದ್ರೆ ಡಿಸಿಎಂ ಪೋಸ್ಟ್ ಕೊಟ್ರೂ ಅಚ್ಚರಿಯಿಲ್ಲ ದಳಪತಿ ವಿಜಯ್ ಅಂತಿವೆ ಮೂಲಗಳು. ಆದ್ರೆ ವಿಜಯ್ ಈಗಷ್ಟೇ ಮೊದಲ ಹೆಜ್ಜೆಯನ್ನ ಗಟ್ಟಿಯಾಗಿ ಪಾಲಿಟಿಕ್ಸ್‌ನಲ್ಲಿ ಇಟ್ಟಿದ್ದಾರೆ. ತ್ರಿಶಾ ರಾಜಕಾರಣಕ್ಕೆ ಬರೋದ್ರಿಂದ ವಿಜಯ್ ರಾಜಕೀಯ ಕರಿಯರ್‌ಗೆ ಕಪ್ಪು ಚುಕ್ಕೆ ಬಂದ್ರೂ ಅಚ್ಚರಿಯಿಲ್ಲ. ಹಾಗಾಗಿ ಸದ್ಯ ತ್ರಿಶಾ ವಿಚಾರದಲ್ಲಿ ವಿಜಯ್ ನಡೆ ಏನಾಗಲಿದೆ ಅನ್ನೋದೇ ಯಕ್ಷ ಪ್ರಶ್ನೆ.
- ತಮಿಳಿಯನ್ಸ್‌ಗೆ ನಿಜಕ್ಕೂ ಸೆಲೆಬ್ರಿಟಿ ಸಿಂಡ್ರೋಮ್ ಇದೆಯಾ?
- MGR, ಜಯಲಲಿತಾ, ಕ್ಯಾಪ್ಟನ್ ವಿಜಯ್ ನಂತ್ರ ದಳಪತಿ..!!
ದಳಪತಿ ವಿಜಯ್ ಐತಿಹಾಸಿಕ ಗೆಲುವಿನ ಬಳಿಕ ತಮಿಳುನಾಡಿನ ಮತದಾರರ ಕುರಿತು ಇಡೀ ದೇಶವೇ ಮಾತಾಡ್ತಿದೆ. ಅದ್ರಲ್ಲೂ ಮಾಧ್ಯಮಗಳು, ಸೋಶಿಯಲ್ ಮೀಡಿಯಾ, ಬುದ್ಧಿಜೀವಿಗಳು ನಿಜಕ್ಕೂ ತಮಿಳಿಯನ್ಸ್‌ಗೆ ಸೆಲೆಬ್ರಿಟಿ ಸಿಂಡ್ರೋಮ್ ಇದೆ. ಅವರು ಎಮೋಷನಲ್ ಫೂಲ್ಸ್.. ಹಾಗಾಗಿಯೇ ಸೂಪರ್ ಸ್ಟಾರ್ಸ್ ನಿಂತಾಗ ಅವ್ರನ್ನ ದೇವರಂತೆ ಕಂಡು ಮತ ಹಾಕ್ತಾರೆ ಅನ್ನೋ ಚರ್ಚೆಗಳು ಶುರುವಾಗಿವೆ.
ತಮಿಳಿಯನ್ಸ್‌ಗೆ ಸೆಲೆಬ್ರಿಟಿ ಸಿಂಡ್ರೋಮ್ ಇದೆ ಅನ್ನೋದನ್ನ ಜನರಲೈಸ್ ಮಾಡಿ ಮಾತಾಡೋಕೆ ಆಗಲ್ಲ. ಯಾಕಂದ್ರೆ ಅದು ಎಂಜಿಆರ್, ಜಯಲಲಿಯಾ ಹಾಗೂ ಕ್ಯಾಪ್ಟನ್ ವಿಜಯ್ ವಿಚಾರದಲ್ಲಿ ನಿಜವೇ ಆಗಿದ್ದಲ್ಲಿ ಕಮಲ್ ಹಾಸನ್ ಹಾಗೂ ರಜನಿಕಾಂತ್ ವಿಚಾರದಲ್ಲಿ ಸುಳ್ಳು ಯಾಕಾಯ್ತು ಅನ್ನೋ ಪ್ರಶ್ನೆ ಮೂಡಲಿದೆ.
ಜನ ನಾವು ನೀವು ಅಂದುಕೊಂಡಷ್ಟು ದಡ್ಡರಲ್ಲ. ಸಿನಿಮಾ ಹೀರೋಗಳು ತಮ್ಮ ರಿಯಲ್ ಲೈಫ್ ಹೀರೋಗಳು ಆಗ್ತಾರೆ ಅನ್ನೋದಕ್ಕೆ ಅದು ಈ ಹಿಂದೆ ಸಾಕಷ್ಟು ಬಾರಿ ತಪ್ಪು ಅನ್ನೋದು ಸಾಬೀತಾಗಿದೆ. ಹೀಗಾಗಿ ಸೆಲೆಬ್ರಿಟಿ ಅನ್ನೋದನ್ನ ಹೊರತು ಪಡಿಸಿ, ಅವ್ರಲ್ಲಿ ಮತ್ತೇನನ್ನೋ ನಿರೀಕ್ಷಿಸಿ, ಒಳ್ಳೆಯ ಆಡಳಿತಕ್ಕಾಗಿ, ಬದಲಾವಣೆ ತರೋ ನಿಟ್ಟಿನಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸ್ತಾರೆ. ಈಗಲೂ ಅದೇ ಆಗಿದೆ.
- ಗೋಟ್ ಚಿತ್ರದಲ್ಲೇ ವಿಜಯ್ ಕಾರ್ ನಂಬರ್ CM2026
- ಮ್ಯಾಜಿಕ್ ನಂಬರ್‌ಗೆ 10 ಸೀಟ್ ಕಮ್ಮಿ..ಸದ್ಯದಲ್ಲೇ ಬಹುಮತ ಸಾಬೀತು
ಯೆಸ್.. ವಿಜಯ್ ನಟನೆಯ ಗೋಟ್ ಚಿತ್ರ 2024ರ ಸೆಪ್ಟೆಂಬರ್‌ನಲ್ಲಿ ತೆರೆಕಂಡಿತ್ತು. ಆದ್ರೆ ಟಿವಿಕೆ ಪಕ್ಷ ಫಾರ್ಮ್ ಆಗಿದ್ದೇ 2024ರ ಫೆಬ್ರವರಿಯಲ್ಲಿ. ಆ ಚಿತ್ರದಲ್ಲಿ ವಿಜಯ್ ಬಳಿಸಿದ್ದ ಕಾರ್ ನಂಬರ್ TN07 CM2026 ಆಗಿತ್ತು. ಅಂದ್ರೆ ಎರಡು ವರ್ಷಗಳ ಹಿಂದೆಯೇ ವಿಜಯ್ 2026ರ ಸಿಎಂ ಆನ್ನೋದು ನಿರ್ಧಾರ ಆಗಿತ್ತು. ಇದು ನಿಜಕ್ಕೂ ದೂರಾಲೋಚನೆಯೇ ಸರಿ. ಇದೀಗ ಆ ವಿಡಿಯೋ ವೈರಲ್ ಆಗ್ತಿದ್ದು, ಭೇಷ್ ವಿಜಯ್ ಭೇಷ್ ಅಂತಿದ್ದಾರೆ ಜನ.
234 ಕ್ಷೇತ್ರಗಳ ಪೈಕಿ ಟಿವಿಕೆ ಪಕ್ಷ 108 ಸೀಟ್‌ಗಳನ್ನ ಗೆದ್ದಿದ್ದು, ಸರ್ಕಾರ ಸ್ಥಾಪಿಸೋಕೆ ಇನ್ನೂ 10 ಸೀಟ್‌ಗಳ ಕೊರತೆಯಿದೆ. ಯಾರೊಟ್ಟಿಗೆ ಮೈತ್ರಿ ಮಾಡ್ಕೊಳ್ತಾರೆ..? ಯಾವಾಗ ಗೌವರ್ನಮೆಂಟ್ ಫಾರ್ಮ್ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಸದ್ಯ ದಳಪತಿ ಸರ್ಕಾರ್‌ಗಾಗಿ ವಿಜಯ್ ಕಳೆದ ರಾತ್ರಿಯಿಂದಲೇ ನಿರಂತರವಾಗಿ ನೂತನ ಶಾಸಕರ ಜೊತೆ ಸಭೆ ನಡೆಸುತ್ತಿದ್ದಾರೆ. ಅಲ್ಲದೆ ಶಾಸಕಾಂಗ ಸಭೆಯ ಅಧ್ಯಕ್ಷ ಸ್ಥಾನ ಕೂಡ ವಹಿಸಿದ್ದಾರೆ. ಸೋ.. ಎಲ್ಲರ ಚಿತ್ತ ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವತ್ತ ನೆಟ್ಟಿರೋದ್ರಲ್ಲಿ ಯಾವುದೇ ಸಂದೇಹವಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





