ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಬಾಲಿವುಡ್ ಬ್ಯೂಟೀಸ್ ಕಂಡಂತೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಗತ್ತು, ಗೈರತ್ತು ಎಂಥದ್ದು..? ಕ್ಯಾಪ್ಟನ್ ಗೀತು ಮೋಹನ್‌ದಾಸ್ ಕನ್ನಡದಲ್ಲಿ ಮಾತಾಡ್ತಾ ಭಾವುಕರಾಗಿದ್ಯಾಕೆ..? ಅನ್ನದಾತ ವೆಂಕಟ್ ಕೆ ನಾರಾಯಣ್ ಹೇಳಿದ್ದೇನು..? ಇಲ್ಲಿದೆ ಟ್ರೈಲರ್ ಲಾಂಚ್ ಇವೆಂಟ್‌ನ ಹೈಲೈಟ್ಸ್.
- ಟಾಕ್ಸಿಕ್ ನಂಗೆ ಸ್ಪೆಷಲ್.. ಯಶ್‌ಗಾಗಿ ಬಂದೆ- ನಯನತಾರಾ
- ರಾಕಿಭಾಯ್ ಅಂತ ಕೂಗಿ.. ಕೆಲಸ, ತ್ಯಾಗ ಕೊಂಡಾಡಿದ ನಟಿ
- ಯಶ್ ಹಿಂದಿನ ಶಕ್ತಿ ರಾಧಿಕಾ.. ಹೆಣ್ಣಿನ ತ್ಯಾಗದ ಬಗ್ಗೆ ಮೆಚ್ಚುಗೆ
ಲೇಡಿ ಸೂಪರ್ ಸ್ಟಾರ್ ನಯನತಾರಾ ನಮ್ಮ ಕನ್ನಡಿಗ ಯಶ್‌ರನ್ನ ಇನ್ನಿಲ್ಲದೆ ಕೊಂಡಾಡಿದ್ದು ಟಾಕ್ಸಿಕ್ ಟ್ರೈಲರ್ ಲಂಚ್‌ನ ಹೈಲೈಟ್. ಹೌದು.. ಯಾವುದೇ ಸಿನಿಮಾದ ಪ್ರಮೋಷನ್ಸ್‌ಗೆ ಹೋಗದ ನಯನತಾರಾ, ಇದೇ ಮೊದಲ ಬಾರಿಗೆ ಟಾಕ್ಸಿಕ್ ಟ್ರೈಲರ್ ಲಾಂಚ್ ಇವೆಂಟ್‌ಗೆ ಚೆನ್ನೈನಿಂದ ನಮ್ಮ ಸಿಲಿಕಾನ್ ಸಿಟಿಗೆ ಆಗಮಿಸಿದ್ರು. ಅದೂ ಯಶ್‌ಗಾಗಿ ಮಾತ್ರ ಅನ್ನೋದು ಇಂಟರೆಸ್ಟಿಂಗ್. ಹೌದು.. ಟಾಕ್ಸಿಕ್ ನನಗೆ ತುಂಬಾ ಸ್ಪೆಷಲ್ ಸಿನಿಮಾ ಎಂದ ನಯನ, ರಾಕಿಭಾಯ್ ಅಂತ ಕೂಗಿ ಅವ್ರನ್ನ ಸಿಕ್ಕಾಪಟ್ಟೆ ಕೊಂಡಾಡಿದ್ದು ವಿಶೇಷ.
ಫಸ್ಟ್ ಟೈಂ ಯಶ್‌ನ ಮೀಟ್ ಮಾಡಿದಾಗ ರಾಕಿಭಾಯ್ ಕಿಂಗ್‌ಡಮ್‌ಗೆ ಎಂಟ್ರಿ ಆಗ್ತಿದ್ದೀನಿ ಅನಿಸಿತ್ತು. ಯಶ್‌ರಂತಹ ಹಾರ್ಡ್ ವರ್ಕಿಂಗ್ ನಟನನ್ನ ನನ್ನ ಕರಿಯರ್‌ನಲ್ಲೇ ನೋಡಿಲ್ಲ ಅಂದ್ರು ನಯನತಾರಾ. ಈ ಸಿನಿಮಾಗಾಗಿ ನಾಲ್ಕೂವರೆ ವರ್ಷ ಯಶ್ ತ್ಯಾಗ ಮಾಡಿದ್ದಾರೆ ಅನ್ನೋದು ನನಗೆ ಆಶ್ಚರ್ಯ. ಫ್ಯಾಮಿಲಿ, ಮಕ್ಕಳಿಗೆ ಸಮಯ ಕೊಡದೆ, ಎಲ್ಲಾ ತ್ಯಾಗ ಮಾಡಿ ಕೆಲಸ ಮಾಡಿದ್ದಾರೆ ಯಶ್. ಆತ ಪಕ್ಕಾ ಫ್ಯಾಮಿಲಿಮ್ಯಾನ್. ನಿಮ್ಮ ಮೇಲೆ ತುಂಬಾ ಗೌರವ ಹಾಗೂ ಪ್ರೀತಿ ಇದೆ ಎಂದರು.
ಹೆಣ್ಣು ಮಕ್ಕಳ ತ್ಯಾಗದ ಬಗ್ಗೆ ಯಾರೂ ಮಾತಾಡಲ್ಲ. ರಾಧಿಕಾ ಪಂಡಿತ್.. ನೀವೇ ಯಶ್ ಅವರ ದೊಡ್ಡ ಶಕ್ತಿ ಅಂತ ಸ್ಯಾಂಡಲ್‌ವುಡ್ ಸಿಂಡ್ರೆಲಾರನ್ನ ಹಾಡಿ ಹೊಗಳಿದ್ರು ಲೇಡಿ ಸೂಪರ್ ಸ್ಟಾರ್.
- ‘ಯಶ್-ಗೀತು ಮ್ಯಾನಿಫೆಸ್ಟ್ ಈ ಟಾಕ್ಸಿಕ್’ ಎಂದ ಕಿಯಾರಾ
- ‘ಇದೊಂದು ಮ್ಯಾಜಿಕ್.. ಪದಗಳಲ್ಲಿ ಬಣ್ಣಿಸೋಕೆ ಆಗಲ್ಲ’..!!
ಬಾಲಿವುಡ್ ಚೆಲುವೆ ಕಿಯಾರಾ ಅಡ್ವಾಣಿ ಮಾತಾಡ್ತಾ.. ಇದು ನಟ ಯಶ್ ಹಾಗೂ ಗೀತು ಮೋಹನ್‌ದಾಸ್ ಮ್ಯಾನಿಫೆಸ್ಟ್ ಮಾಡಿಕೊಂಡು ಮಾಡಿದ ಸಿನಿಮಾ ಎಂದರು. ಟಾಕ್ಸಿಕ್ ಒಂದು ಮ್ಯಾಜಿಕ್. ಅದನ್ನ ಪದಗಳಲ್ಲಿ ಬಣ್ಣಿಸೋಕೆ ಆಗಲ್ಲ ಎಂದರು. ಟೆಕ್ನಿಕಲಿ ಚಿತ್ರತಂಡ ಸಿಕ್ಕಾಪಟ್ಟೆ ಶ್ರಮ ಹಾಕಿದೆ ಅಂತ ಅಭಿಪ್ರಾಯ ಹಂಚಿಕೊಂಡರು. ಅಲ್ಲದೆ, ನಮ್ಮ ಹೆಮ್ಮೆಯ ಕನ್ನಡಿಗ ಯಶ್‌ರನ್ನ ಮುಕ್ತ ಮನಸ್ಸಿನಿಂದ ಬಣ್ಣಿಸಿದರು.
- ಕನ್ನಡದಲ್ಲಿ ಮಾತಾಡ್ತಾ ಭಾವುಕರಾದ ಕ್ಯಾಪ್ಟನ್ ಗೀತು..!
- ನಂಬಿಕೆ ಉಳಿಸಿಕೊಳ್ತೀನಿ.. ಅವಕಾಶಕ್ಕಾಗಿ ಯಶ್‌ಗೆ ಥ್ಯಾಂಕ್ಸ್
ತಾಯಿಗೆ ಧನ್ಯವಾದ ಹೇಳ್ತಾ ಮಾತು ಆರಂಭಿಸಿದ ಡೈರೆಕ್ಟರ್ ಗೀತು ಮೋಹನ್‌ದಾಸ್, ಯಶ್ ಪ್ರೊಡ್ಯೂಸರ್, ನಟ, ಬರಹಗಾರ ಮಾತ್ರವಲ್ಲ. ಅವ್ರೊಂದು ಎಮೋಷನ್ ಎಂದರು. ಈ ಸಿನಿಮಾದ ನಂತ್ರ ನನ್ನ ದಾರಿ ಏನು ಅಂತ ಗೊತ್ತಿಲ್ಲ. ಆದ್ರೆ ಯಶ್ ನನ್ನ ಕನಸನ್ನ ತನ್ನ ಹೆಗಲ ಮೇಲೆ ಹೊತ್ತಿದ್ದಾರೆ. ಎಲ್ರೂ ಅನುಮಾನದಿಂದ ನೋಡಿದಾಗ ಯಶ್ ಅವಕಾಶ ಕೊಟ್ರು. ಧೈರ್ಯ ತುಂಬಿದ್ರು. ನನ್ನ ಮೇಲೆ ಇಟ್ಟ ನಂಬಿಕೆ ಉಳಿಸಿಕೊಳ್ತೀನಿ ಅಂತ ಕನ್ನಡದಲ್ಲೇ ಬರೆದುಕೊಂಡು ಮಾತಾಡ್ತಾ ಸಿಕ್ಕಾಪಟ್ಟೆ ಭಾವುಕರಾದ್ರು.
‘ರಾಧಿಕಾ ನಿಮ್ಮ ಅಭಿಮಾನಿ ನಾನು.. Luv U’ ಎಂದ ರುಕ್ಕು
ಟಾಕ್ಸಿಕ್ ಪ್ರಮೋಷನ್‌ನ ಮೊದಲ ಹೆಜ್ಜೆಯನ್ನ ಇಂದು ಇಟ್ಟಿದ್ದೀವಿ ಎಂದ ನಟಿ ರುಕ್ಮಿಣಿ ವಸಂತ್.. ನನಗೆ ತುಂಬಾ ಸಂತೋಷ ಹಾಗೂ ಹೆಮ್ಮೆ ಇದೆ ಎಂದರು. ನೀವೆಲ್ಲಾ ಸಿಕ್ಕಾಪಟ್ಟೆ ಪ್ರೀತಿ, ಪ್ರೋತ್ಸಾಹ ಕೊಟ್ಟಿದ್ದೀರಿ. ಯಶ್ ಅವರ ಬಗ್ಗೆ ಹೇಳೋಕೆ ತುಂಬಾ ಇದೆ. ಆದ್ರೆ ರಾಧಿಕಾ ನಿಮ್ಮ ದೊಡ್ಡ ಅಭಿಮಾನಿ ನಾನು. ಐ ಲವ್ ಯೂ ಅಂತ ವೇದಿಕೆಯಲ್ಲಿ ಬಹಿರಂಗವಾಗಿ ತಮ್ಮ ಮನದಾಳದ ಮಾತುಗಳನ್ನ ಹೊರಹಾಕಿದ್ರು ಕನ್ನಡತಿ ರುಕ್ಕಮ್ಮ.
‘ಎಲಿಜಬೆತ್‌ಗೆ ಬೆಂಗಳೂರು ತುಂಬಾ ಇಷ್ಟ’- ಹುಮಾ
ನಮಸ್ಕಾರ ಬೆಂಗಳೂರು ಅಂತ ಕನ್ನಡದಲ್ಲೇ ಮಾತು ಆರಂಭಿಸಿದ ಬಾಲಿವುಡ್‌ನ ಹಾಟ್ ಬ್ಯೂಟಿ ಹುಮಾ ಖುರೇಷಿ.. ಎಲಿಜಬೆತ್‌ಗೆ ಬೆಂಗಳೂರು ತುಂಬಾ ಇಷ್ಟ ಎಂದರು. ಅಲ್ಲದೆ, ನಮ್ಮ ಯಶ್‌ನ ಗುಣಗಾನ ಮಾಡಿದ ಪರಿ ಅದ್ಭುತ.
ಟೀಂ ವರ್ಕ್.. ಡಿಸ್ನಿ ಕೋಟ್ ಹೇಳಿದ ತಾರಾ ಸುತಾರಿಯಾ
ಬಿಟೌನ್ ಹಾಟ್ ಬೆಡಗಿ ತಾರಾ ಸುತಾರಿಯಾ ಕೂಡ ಟಾಕ್ಸಿಕ್ ಟ್ರೈಲರ್ ಕಣ್ತುಂಬಿಕೊಂಡು ಸಖತ್ ಥ್ರಿಲ್ ಆಗಿದ್ರು. ಇದೊಂದು ಕಲೆಕ್ಟೀವ್ ವಿಷನ್ ಎಂದ ಆಕೆ, ಡಿಸ್ನಿ ಕೋಟ್‌ನ ಹೇಳೋ ಮೂಲಕ ಇಡೀ ಟೀಂ ಎಫರ್ಟ್‌ನ ಮೆಚ್ಚಿದ್ರು. ಯಶ್ ಕುರಿತು ಪ್ರತ್ಯೇಕವಾಗಿ ಹೊಗಳಿದ್ದು ವಿಶೇಷ.
- ಏನ್ ಟ್ರೈಲರ್ ಬಾಸ್..? ಎಂದ ಅಕ್ಷಯ್ ಒಬೇರಾಯ್
- ಟಾಕ್ಸಿಕ್ 2 ವರ್ಷದ ಕಲಿಕೆ ಎಂದ ಸುದೇವ್ ನಾಯರ್..!
ಬಾಲಿವುಡ್ ನಟ ಅಕ್ಷಯ್ ಒಬೇರಾಯ್ ಮಾತಾಡ್ತಾ.. ಬಾಸ್.. ಏನ್ ಟ್ರೈಲರ್ ಬಾಸ್ ಇದು ಎಂದು ಯಶ್‌ರನ್ನ ಕೊಂಡಾಡುತ್ತಾ.. ನಿಮ್ಮಿಂದ ತುಂಬಾ ಕಲಿತಿದ್ದೇನೆ ಎಂದರು. ಟಾಕ್ಸಿಕ್ ನನಗೆ ಸಿಕ್ಕ ಗಿಫ್ಟ್ ಎಂದರು.
ಮಲಯಾಳಂ ನಟ ಸುದೇವ್ ನಾಯರ್.. ಇದು ನನಗೆ ಎರಡು ವರ್ಷದ ಕಲಿಕೆ ಆಗಿತ್ತು. ಪ್ರಾಪರ್ ಕಮರ್ಷಿಯಲ್ ಮಾಡೋದನ್ನ ಕಲಿತೆ ಎಂದರು.
ಕನ್ನಡದ ನಟ ಬಾಲಾಜಿ ಮನೋಹರ್ ಕೂಡ ಟಾಕ್ಸಿಕ್ ಸಿನಿಮಾದ ಟ್ರೈಲರ್, ಮೇಕಿಂಗ್ ಹಂತದಲ್ಲಿನ ವಿಷಯಗಳು ಹಾಗೂ ಕಲಾವಿದರು, ತಂತ್ರಜ್ಞರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
- ಪಾರ್ಟ್ನರ್ ಯಶ್ ಸಪೋರ್ಟ್ ಕೊಂಡಾಡಿದ KVN..!
- ಸಿನಿಮಾಸಕ್ತರ ಕನಸು ಪೂರೈಸೋ ಅಷ್ಟು ದೊಡ್ಡ ಜೇಬಿದೆ
- ಟಾಕ್ಸಿಕ್ ಬಳಿಕ KVNನಿಂದ 3 ಪ್ರತ್ಯೇಕ ಟೀಮ್ಸ್ ವಿಂಗಡಣೆ
ನಿರೂಪಕ ಡ್ಯಾನಿಶ್ ಸೇಟ್ ಟಾಕ್ಸಿಕ್ ಪ್ರೊಡ್ಯೂಸರ್ ಕೆ ವೆಂಕಟ್ ನಾರಾಯಣ್ ಅವರಿಗೆ ನಿಮ್ಮ ಜೇಬು ಎಷ್ಟು ದೊಡ್ಡದಿದೆ ಸರ್ ಅಂತಾರೆ. ಅದಕ್ಕೆ ಸಿನಿಮಾಸಕ್ತರ ಕನಸುಗಳನ್ನ ನನಸು ಮಾಡುವಷ್ಟು ಅಂತ ಹೇಳುತ್ತಾ ಮಾತು ಶುರು ಮಾಡಿದ ಕೆವಿಎನ್, ತಮ್ಮ ಪಾರ್ಟ್ನರ್ ಯಶ್‌ರನ್ನ ಆಕಾಶ, ಭೂಮಿಯಷ್ಟು ಬಣ್ಣಿಸಿದ್ರು. ಯಶ್ ಅವ್ರ ಹಾರ್ಡ್‌ವರ್ಕ್, ಈ ಸಿನಿಮಾಗಾಗಿ ಅವ್ರ ಕಮಿಟ್ಮೆಂಟ್ ಎಂಥದ್ದು ಅಂತ ತೆರೆದಿಟ್ಟರು. ಅಲ್ಲದೆ.. ಈ ಚಿತ್ರದಲ್ಲಿ ಅವರೊಂಥರಾ ಅವತಾರ ಪುರುಷ ಅಂತ ಡಿಫರೆಂಟ್ ಶೇಡ್ಸ್ ಬಗ್ಗೆ ಮಾತಾಡಿದ್ರು.
ಬಾಲಿವುಡ್‌ನ ಅನಿಲ್ ತದಾನಿಯಿಂದ ಹಿಡಿದು ಸೌತ್ ಇಂಡಿಯನ್ ಡಿಸ್ಟ್ರಿಬ್ಯೂಟರ್‌ಗಳ ತನಕ ಮಾತನಾಡಿದ ಕೆವಿಎನ್, ಸದ್ಯದಲ್ಲೇ ಕೆವಿಎನ್ ಪ್ರೊಡಕ್ಷನ್ಸ್‌ನ 3 ಪ್ರಮುಖ ಟೀಮ್‌ಗಳಾಗಿ ವಿಂಗಡಿಸೋ ಬಿಗ್ ಸೀಕ್ರೆಟ್‌ನ ಕೂಡ ರಿವೀಲ್ ಮಾಡಿದ್ದು ಇಂಟರೆಸ್ಟಿಂಗ್.
ಒಟ್ಟಾರೆ ಟಾಕ್ಸಿಕ್ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆಯುವ ಸೂಚನೆ ನೀಡಿದೆ. ಟ್ರೈಲರ್ ಔಟ್‌ಸ್ಟ್ಯಾಂಡಿಂಗ್ ಆಗಿದ್ದು, ಆಗಸ್ಟ್ 26ಕ್ಕೆ ವರ್ಲ್ಡ್‌ವೈಡ್ ತೆರೆಗಪ್ಪಳಿಸುತ್ತಿದೆ. ನಮ್ಮ ಕನ್ನಡಿಗರ ತಾಕತ್ತು ಈ ಚಿತ್ರದಿಂದ ವಿಶ್ವ ಸಿನಿದುನಿಯಾಗೆ ಗೊತ್ತಾಗಲಿದ್ದು, ಯಶ್ ನೆಕ್ಸ್ಟ್ ಪ್ರಾಜೆಕ್ಟ್ ರಾಮಾಯಣಕ್ಕೂ ಇದು ಪ್ಲಸ್ ಆಗಲಿದೆ. ಸೋ.. ಆಗಸ್ಟ್ 26ಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ಅಂದು ಅಸಲಿ ಟಾಕ್ಸಿಕ್ ವರ್ಲ್ಡ್ ಬಟಾ ಬಯಲಾಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





