ರಾಜಮೌಳಿಯನ್ನ ಇಂಡಿಯನ್ ಸ್ಪೀಲ್ಬರ್ಗ್ ಅಂತೆಲ್ಲಾ ನಾವುಗಳು ಹಾಡಿ, ಹೊಗಳಿ, ಅಟ್ಟಕ್ಕೇರಿಸಿದ್ದೀವಿ. ಆದ್ರೆ ಆತ ಕಲೆಯನ್ನ ಅಕ್ಷರಶಃ ವ್ಯಾಪಾರ ಮಾಡಿಕೊಂಡುಬಿಟ್ಟಿದ್ದಾರೆ. ದುಡ್ಡಿನ ದಾಹಕ್ಕೆ ದಾಸನಾಗಿಬಿಟ್ಟಿದ್ದಾರೆ. ತನ್ನ ಸಿನಿಮಾದ ಇವೆಂಟ್ಗಳನ್ನೆಲ್ಲಾ ಓಟಿಟಿಗಳಿಗೆ ಮಾರಿಕೊಳ್ಳುವ ಹಂತಕ್ಕೆ ಇಳಿದುಬಿಟ್ಟಿದ್ದಾರೆ. ಬೆಳೆಯುವವರೆಗೆ ಜನ ಬೇಕು. ಬೆಳೆದ ಮೇಲೆ ದುಡ್ಡೇ ದೊಡ್ಡಪ್ಪ ಅನ್ನೋರ ಈ ಕಥೆ ಒಮ್ಮೆ ನೋಡಿ.
ರಾಜಮೌಳಿ..ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಸೆನ್ಸೇಷನಲ್ ಡೈರೆಕ್ಟರ್. ತನ್ನ ಸಿನಿಮಾ ಮೇಕಿಂಗ್ನಿಂದ ಪ್ರೇಕ್ಷಕರನ್ನ ಬೇರೆ ಲೋಕಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯವಿರೋ ಮಹಾನ್ ಮಾಂತ್ರಿಕ. ಪಾತ್ರಗಳನ್ನ ಕಟ್ಟುವಲ್ಲಿ ಈತ ಅದ್ಭುತ ಚತುರ. ಅದ್ರಲ್ಲೂ ಹಾಲಿವುಡ್ ಮಂದಿಯೇ ನಿಬ್ಬೆರಗಾಗುವಂತೆ ಮಾಡಿದ ಗರಿಮೆ ಮೌಳಿಗಿದೆ.

ದುಡ್ಡಿನ ಹಿಂದೆ ರಾಜಮೌಳಿ.. ಫಿಲ್ಮ್ ಇವೆಂಟ್ OTTಗೆ
ನ-15ಕ್ಕೆ SSMB29 ಇವೆಂಟ್.. ಅಂದೇ ಫಸ್ಟ್ ಲುಕ್..!

ನೇಮು, ಫೇಮು, ಹಣ, ಆಸ್ತಿ, ಅಂತಸ್ತು ಎಲ್ಲವೂ ಮೌಳಿಗೆ ದಕ್ಕಿವೆ. ರಾಜಮೌಳಿ ಸಕ್ಸಸ್ ರೇಟ್ ನೋಡಿದ್ರೆ ಹಂಡ್ರೆಡ್ ಪರ್ಸೆಂಟ್ ಇದೆ. ಬೇಡ ಬೇಡ ಅಂದ್ರೂ ರಾಜಮೌಳಿಯ ಕಲೆಗೆ ಹಣದ ಹೊಳೆಯೇ ಮೌಳಿ ಹಿಂದೆ ಬರ್ತಿತ್ತು. ಆದ್ರೀಗ ಟ್ರೆಂಡ್ ಕೊಂಚ ಬದಲಾಗಿದೆ. ಸ್ವತಃ ರಾಜಮೌಳಿಯೇ ಹಣದ ಹಿಂದೆ ಬಿದ್ದಿದ್ದಾರೆ. ದುಡ್ಡಿನ ದಾಹ ಅವರಿಗೆಷ್ಟಿದೆ ಅನ್ನೋದಕ್ಕೆ ಅವ್ರ ಇತ್ತೀಚಿನ ನಡೆಯೇ ಕಾರಣ ಅನ್ನಬಹುದು. ಮೊದಲಿಗೆ ಮಹೇಶ್ ಬಾಬು ಜೊತೆ ತಯಾರಾಗ್ತಿರೋ SSMB29 ಗ್ಲೋಬ್ ಟ್ರಾಟರ್ ಚಿತ್ರದ ಬಗ್ಗೆ ಹೇಳಿಬಿಡ್ತೀವಿ ಕೇಳಿ.

ರಾಜಮೌಳಿ ತನ್ನ ತ್ರಿಬಲ್ ಆರ್ ಚಿತ್ರದ ನಂತ್ರ ಪ್ರಿನ್ಸ್ ಜೊತೆಗಿನ ಚಿತ್ರದ ಯಾವುದೇ ಡಿಟೈಲ್ಸ್ ಬಿಟ್ಟುಕೊಟ್ಟಿಲ್ಲ. ಆದ್ರೆ ಇದೇ ನವೆಂಬರ್ 15ಕ್ಕೆ ಆ ಚಿತ್ರದ ಫಸ್ಟ್ಲುಕ್ ಲಾಂಚ್ ಇವೆಂಟ್ ಇಟ್ಟುಕೊಂಡಿದ್ದಾರೆ. ಇದನ್ನ ಕಣ್ತುಂಬಿಕೊಳ್ಳೋಕೆ ಕಾಯ್ತಿದ್ದ ಪ್ರೇಕ್ಷಕರು ಭ್ರಮನಿರಸರಾಗುವಂತಾಗಿದೆ. ಆ ಇವೆಂಟ್ನ ರಾಜಮೌಳಿ ಜಿಯೋ ಹಾಟ್ಸ್ಟಾರ್ ಓಟಿಟಿ ಪ್ಲಾಟ್ಫಾರ್ಮ್ಗೆ ಮಾರಿಕೊಂಡಿದ್ದಾರೆ. ಹಾಗಾಗಿ ಗ್ಲೋಬ್ ಟ್ರಾಟರ್ ಚಿತ್ರದ ಫಸ್ಟ್ ಲುಕ್ ಲಾಂಚ್ ಫಸ್ಟ್ ಇವೆಂಟ್ ಎಕ್ಸ್ಕ್ಲೂಸಿವ್ ಆಗಿ ಜಿಯೋ ಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಬಾಹುಬಲಿ, RRR ಆಯ್ತು.. ಈಗ ಪ್ರಿನ್ಸ್ ಸಿನಿಮಾ ಸರದಿ
ಕಲೆಯ ವ್ಯಾಪಾರ.. ಮೌಳಿಗೆ ಅದೆಷ್ಟು ದುಡ್ಡಿನ ದಾಹ..?!

ಈತನಿಗೇನಪ್ಪಾ ಇಷ್ಟೊಂದು ಧನದಾಹ ಹುಟ್ಟಿದೆ ಅಂತ ನೀವು ಅಂದುಕೊಳ್ಳಬಹುದು. ಯಾಕಂದ್ರೆ ತನ್ನ ಎರಡೂ ಬಾಹುಬಲಿ ಚಿತ್ರಗಳನ್ನ ಒಂದೇ ಚಿತ್ರವಾಗಿಸಿ, ತೆರೆಗೆ ತಂದಿದ್ದಾರೆ. ಅದರಿಂದಲೂ ಕೋಟಿ ಕೋಟಿ ಲೂಟಿ ಮಾಡ್ತಿದ್ದಾರೆ. ಅಲ್ಲದೆ, ತ್ರಿಬಲ್ ಆರ್ ಸಿನಿಮಾದ ಮೇಕಿಂಗ್ ವಿಡಿಯೋನ ಡಾಕ್ಯುಮೆಂಟರಿ ಮಾಡಿ, ನೆಟ್ಫ್ಲಿಕ್ಸ್ಗೆ ಮಾಡಿಕೊಂಡಿದ್ರು ಮೌಳಿ. ಇದೆಲ್ಲಾ ನೋಡ್ತಿದ್ರೆ ಇವರು ಕಲೆಯನ್ನ ವ್ಯಾಪಾರ ಮಾಡಿಕೊಂಡಂತಿದೆ. ಬೆಳೆಯುವವರೆಗೆ ಚಿತ್ರ ಪ್ರೇಮಿಗಳು, ತೆಲುಗು ಮಂದಿ ಬೇಕಿತ್ತು. ಆದ್ರೀಗ ಹಣವೇ ಇವರಿಗೆ ಎಲ್ಲಾ ಆಗಿಬಿಟ್ಟಿದೆ.

ರಾಜಮೌಳಿಯ ಈ ನಡೆ ನಿಜಕ್ಕೂ ಸಾಕಷ್ಟು ಮಂದಿಗೆ ಬೇಸರ ತಂದಿದೆ. ತನ್ನ ಸಿನಿಮಾದ ಹಾಗೂ ವೈಯಕ್ತಿಕ ಲಾಭಕ್ಕಾಗಿ ಅವ್ರ ನಿರ್ಧಾರ ಸರಿ ಇರಬಹುದು. ಆದ್ರೆ ಆ ಇವೆಂಟ್ನ ನೋಡಬಯಸೋ ಜನಕ್ಕೆ, ಅದನ್ನ ಕವರ್ ಮಾಡಿ ಮಾಧ್ಯಮಗಳ ಮೂಲಕ ತೋರಿಸೋಕೆ ಉತ್ಸುಕರಾಗಿದ್ದ ತೆಲುಗು ಮಾಧ್ಯಮಗಳ ಗತಿ ಏನಾಗಬೇಡ ನೀವೇ ಹೇಳಿ. ಹಣಕ್ಕಾಗಿ ಹೆಣ ಕೂಡ ಬಾಯಿ ತೆಗೆಯುತ್ತೆ ಅಂತ ಕೇಳಿದ್ವಿ. ಆದ್ರೀಗ ರಾಜಮೌಳಿ ಕೂಡ ಬಾಯಿ ತೆರೆಯುವಂತಾಗಿದೆ.





