ಚೆನ್ನೈ: ತಮಿಳು ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ಜನನಾಯಗನ್’ (Jananayagan) ಗುರುವಾರ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಟ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ಎಂಬ ಕಾರಣದಿಂದ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದ್ದ ಈ ಚಿತ್ರಕ್ಕೆ, ಜನಪ್ರಿಯ ನಟಿ ತ್ರಿಶಾ ಕೃಷ್ಣನ್ ಅವರ ಸರ್ಪ್ರೈಸ್ ಭೇಟಿ ಸಂಚಲನ ಸೃಷ್ಟಿಸಿದೆ.
ಚಿತ್ರ ಬಿಡುಗಡೆಯಾದ ದಿನವೇ ಚೆನ್ನೈನ ಪ್ರಸಿದ್ಧ ರೋಹಿಣಿ ಥಿಯೇಟರ್‌ಗೆ ಆಗಮಿಸಿದ ತ್ರಿಶಾ, ಅಭಿಮಾನಿಗಳ ಗಮನವನ್ನು ತನ್ನತ್ತ ಸೆಳೆದರು. ಯಾವುದೇ ಆಡಂಬರವಿಲ್ಲದೆ ಬಿಳಿ ಬಣ್ಣದ ಟೀ-ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಧರಿಸಿ ಸರಳ ಉಡುಪಿನಲ್ಲಿ ಬಂದಿದ್ದ ನಟಿಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತ್ರಿಶಾ ಥಿಯೇಟರ್‌ಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದ ವಿಜಯ್ ಅಭಿಮಾನಿಗಳು ಭಾರೀ ಕೇಕೆ, ಶಿಳ್ಳೆ ಹಾಗೂ ಚಪ್ಪಾಳೆಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಕೆಲವರು ಮೊಬೈಲ್‌ನಲ್ಲಿ ಈ ದೈಶ್ಯವನ್ನು ಸೆರೆಹಿಡಿದರೆ, ಇನ್ನೂ ಕೆಲವರು “ವಿಜಯ್-ತ್ರಿಶಾ” ಜೋಡಿಗೆ ಜೈಕಾರ ಕೂಗಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಟ್ರೆಂಡಿಂಗ್ ಆಗ್ತಿದೆ.
Actor Trisha Krishnan leaves from theatre after watching actor and Tamil Nadu Chief Minister C Joseph Vijay’s movie ‘Jana Nayagan’
.
.
.
.
Video: ANI pic.twitter.com/A0iSGbCHSD— WION Showbiz (@WIONShowbiz) July 23, 2026
ವಿಜಯ್ ಮತ್ತು ತ್ರಿಶಾ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ‘ಗಿಲ್ಲಿ’, ‘ತಿರುಪಾಚಿ’, ‘ಆಧಿ’, ‘ಕುರುವಿ’ ಹಾಗೂ ಇತ್ತೀಚಿನ ‘ಲಿಯೋ’ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಇದರ ಜೊತೆಗೆ ವಿಜಯ್ ಅಭಿನಯದ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT)’ ಸಿನಿಮಾದ ವಿಶೇಷ ಹಾಡೊಂದರಲ್ಲಿ ತ್ರಿಶಾ ಕಾಣಿಸಿಕೊಂಡಿದ್ದರು. ಆ ಹಾಡಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ‘ಜನನಾಯಗನ್’ ಚಿತ್ರದ ಮೊದಲ ಪ್ರದರ್ಶನಕ್ಕೆ ತ್ರಿಶಾ ಸ್ವತಃ ಆಗಮಿಸಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸ ಮೂಡಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ತ್ರಿಶಾ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದರಿಂದ ಇವರ ಸ್ನೇಹ ಹಾಗೂ ಬಾಂಧವ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಹರಿದಾಡಿದ್ದವು. ಆದರೆ ಈ ಕುರಿತು ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ವಿಜಯ್ ಅವರ ಕೊನೆಯ ಚಿತ್ರದ ಮೊದಲ ದಿನವೇ ತ್ರಿಶಾ ಥಿಯೇಟರ್‌ಗೆ ಭೇಟಿ ನೀಡಿದ್ದಾರೆ. ಈ ಘಟನೆ ಮತ್ತೆ ಇದೇ ವಿಚಾರವನ್ನು ಚರ್ಚೆಗೆ ತಂದಿದೆ.
ಇನ್ನು ‘ಜನನಾಯಗನ್’ ಚಿತ್ರವನ್ನು ನಿರ್ದೇಶಕ ಎಚ್. ವಿನೋತ್ ನಿರ್ದೇಶಿಸಿದ್ದಾರೆ. ರಾಜಕೀಯ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್ ಹಾಗೂ ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.





