• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 18, 2026 - 8:25 pm
in ಸಿನಿಮಾ
0 0
0
Your paragraph text 2026 09 18T202423.824

ಬೆಂಗಳೂರು: ದೇಶದ ಪ್ರಮುಖ ಆರೋಗ್ಯ ಮತ್ತು ಸೌಂದರ್ಯವರ್ಧಕ ಸಂಸ್ಥೆಗಳಲ್ಲಿ ಒಂದಾದ ಕಲರ್ಸ್ ಹೆಲ್ತ್ ಕೇರ್ ಇಂಡಿಯಾ (Kolors Health Care India) ಸಂಸ್ಥೆಯ ನೂತನ ವೆಲ್‌ನೆಸ್‌ ಮತ್ತು ಫಿಟ್‌ನೆಸ್‌ ಕೇಂದ್ರವು ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್‌ನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಶುಭಾರಂಭಗೊಂಡಿತು. ಸ್ಯಾಂಡಲ್‌ವುಡ್‌ನ ಜನಪ್ರಿಯ ತಾರಾ ದಂಪತಿ ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್ ಅವರು ನೂತನ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಮೆರುಗು ತಂದರು. ಇದೇ ವೇಳೆ ದಂಪತಿ ತಮ್ಮ ವೈಯಕ್ತಿಕ ಫಿಟ್‌ನೆಸ್ ಜರ್ನಿ ಹಾಗೂ ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳುವ ಮಹತ್ವದ ಕುರಿತು ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ, ಚಿತ್ರರಂಗಕ್ಕೆ ಬಂದ ಮೇಲೆ ನಟರಿಗೆ ಫಿಟ್‌ನೆಸ್ ಕಾಪಾಡಿಕೊಳ್ಳುವುದು ವೃತ್ತಿಜೀವನದ ಅನಿವಾರ್ಯ ಅಂಗವಾಗುತ್ತದೆ ಎಂದರು. ತಮ್ಮ ಹೈಸ್ಕೂಲ್ ದಿನಗಳ ಅನುಭವ ಮೆಲುಕು ಹಾಕಿದ ಅವರು, ಅಂದಿನ ದಿನಗಳಲ್ಲಿ ತಾವು ತುಂಬಾ ತೆಳ್ಳಗಿದ್ದ ಕಾರಣ ಹುಡುಗಿಯರ ಗಮನ ಸೆಳೆಯಲು ಮತ್ತು ಧರಿಸುವ ಉಡುಪುಗಳು ಮೈಕಟ್ಟಿಗೆ ಸರಿಯಾಗಿ ಹೊಂದಿಕೊಳ್ಳಬೇಕೆಂಬ ಆಸೆಯಿಂದ ವರ್ಕೌಟ್ ಆರಂಭಿಸಿದ್ದಾಗಿ ತಮಾಷೆಯಾಗಿ ನೆನಪಿಸಿಕೊಂಡರು. ಆರಂಭದ ದಿನಗಳಲ್ಲಿ ಎಷ್ಟೇ ಕಸರತ್ತು ನಡೆಸಿದರೂ ತೂಕ ಹೆಚ್ಚಿಸಿಕೊಳ್ಳಲು ಪಡುತ್ತಿದ್ದ ಕಷ್ಟಗಳನ್ನು ಅವರು ಸ್ಮರಿಸಿದರು.

RelatedPosts

ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್

ದರ್ಶನ್‌ಗೆ ರಿಲೀಫ್: ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ

ಸಿಲಿಕಾನ್ ಸಿಟಿಯಲ್ಲಿ ಜಡೆಗಳ ರಾಜ ನ್ಯಾಚುರಲ್ ಸ್ಟಾರ್ ನಾನಿ

ಬುದ್ಧಿವಂತ ಉಪೇಂದ್ರಗೆ 58ನೇ ಬರ್ತ್ ಡೇ ಸಂಭ್ರಮ..!

ADVERTISEMENT
ADVERTISEMENT

ನಟಿ ಮಿಲನಾ ನಾಗರಾಜ್ ತಮ್ಮ ಸೌಂದರ್ಯ ಹಾಗೂ ಆರೋಗ್ಯದ ಗುಟ್ಟನ್ನು ಬಿಚ್ಚಿಡುತ್ತಾ, ತಾವು ಕಳೆದ ಎರಡೂವರೆ ದಶಕಗಳಿಂದ ಕ್ರೀಡಾಪಟು ಮತ್ತು ಈಜುಗಾರ್ತಿಯಾಗಿದ್ದ ಕಾರಣ ನಿರಂತರವಾಗಿ ಕ್ರಿಯಾಶೀಲವಾಗಿರುವುದೇ ತಮ್ಮ ಫಿಟ್‌ನೆಸ್‌ಗೆ ಕಾರಣ ಎಂದರು. ನಿಯಮಿತ ಜಿಮ್, ಯೋಗ ಮತ್ತು ಈಜಿನ ಜೊತೆಗೆ ಪ್ರಸ್ತುತ ನಿತ್ಯ 10 ಸಾವಿರ ಹೆಜ್ಜೆ ನಡೆಯುವ ಗುರಿಯನ್ನು ಅನುಸರಿಸುತ್ತಿರುವುದಾಗಿ ತಿಳಿಸಿದ ಅವರು, ಯಾವುದೇ ಕಠಿಣ ಆಹಾರ ಪದ್ಧತಿಗೆ ಒಳಗಾಗದೆ ಹಿತಮಿತವಾದ ಊಟ ಸೇವಿಸುವುದಾಗಿ ಹೇಳಿದರು. ಜೊತೆಗೆ ತಾವು ಮತ್ತು ಕೃಷ್ಣ ಇಬ್ಬರೂ ಆಹಾರದಲ್ಲಿ ಸಕ್ಕರೆ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದು, ಇದರಿಂದ ಚರ್ಮ, ಕೂದಲು ಮತ್ತು ಸಂಪೂರ್ಣ ದೈಹಿಕ ಆರೋಗ್ಯದಲ್ಲಿ ಗಮನಾರ್ಹ ಸಕಾರಾತ್ಮಕ ಬದಲಾವಣೆ ಕಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ವಿಜಯ್ ಕೃಷ್ಣ ಅವರು ಮಾತನಾಡಿ, ಇಂದಿನ ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಅಗತ್ಯತೆಗಳು ಹೆಚ್ಚುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಮುದಾಯಕ್ಕೆ ಉತ್ಕೃಷ್ಟ ಮಟ್ಟದ ವೆಲ್‌ನೆಸ್ ಸೇವೆಗಳನ್ನು ನೀಡುವ ಸಲುವಾಗಿ ವೈಟ್‌ಫೀಲ್ಡ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ನೂತನ ಕೇಂದ್ರವನ್ನು ತೆರೆಯಲಾಗಿದೆ ಎಂದು ವಿವರಿಸಿದರು.

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ಶಿವಾಜಿ ಕೂನಾ ಅವರು ಮಾತನಾಡಿ, ಬೆಂಗಳೂರಿನಲ್ಲಿ ಸಂಸ್ಥೆಯು ಕಳೆದ 14 ವರ್ಷಗಳಿಂದ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದರೂ, ಐಟಿ ಕಾರಿಡಾರ್ ವೈಟ್‌ಫೀಲ್ಡ್ ಭಾಗದಲ್ಲಿ ಇದು ನಮ್ಮ ಮೊದಲ ಹೆಜ್ಜೆಯಾಗಿದೆ ಎಂದರು. ಸಂಸ್ಥೆಯನ್ನು ಕೇವಲ ವಾಣಿಜ್ಯ ಲಾಭದ ಉದ್ದೇಶದಿಂದ ನೋಡದೆ ಸಾಮಾಜಿಕ ಹೊಣೆಗಾರಿಕೆಯಾಗಿ ಮುನ್ನಡೆಸಲಾಗುತ್ತಿದ್ದು, ಪ್ರತಿಯೊಬ್ಬ ನಾಗರಿಕನೂ ಸದೃಢವಾಗಿರುವುದು ದೇಶದ ಆರ್ಥಿಕ ಪ್ರಗತಿಯ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಕೋವಿಡ್ ಸಮಯದಲ್ಲಿ ಕೇವಲ ಶೇ. 1.5 ರಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳು ಎದುರಾದಾಗಲೇ ಇಡೀ ಆರೋಗ್ಯ ವ್ಯವಸ್ಥೆ ಹಾಗೂ ಆರ್ಥಿಕತೆ ತತ್ತರಿಸಿತ್ತು; ಹೀಗಿರುವಾಗ ಸ್ಥೂಲಕಾಯ (ಬೊಜ್ಜು) ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗದಂತೆ ಎಚ್ಚರ ವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದ ಅವರು, ಈಗಾಗಲೇ 4-5 ರಾಜ್ಯಗಳಲ್ಲಿ ಸಕ್ರಿಯವಾಗಿರುವ ಕಲರ್ಸ್ ಸಂಸ್ಥೆಯು ಮುಂದಿನ 5 ವರ್ಷಗಳಲ್ಲಿ ಗರಿಷ್ಠ ಜನರನ್ನು ತಲುಪಿ ಆರೋಗ್ಯವಂತರನ್ನಾಗಿ ಮಾಡುವ ಬೃಹತ್ ಯೋಜನೆಯನ್ನು ಹೊಂದಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಆಪರೇಷನ್‌ ಡೈರೆಕ್ಟರ್‌ ಕೃಷ್ಣರಾಜ್ ತುಮ್ಮಾಲ ಅವರು, ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ವೈಟ್‌ಫೀಲ್ಡ್‌ನಲ್ಲಿ ಈ ನೂತನ ಶಾಖೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. ವೆಲ್‌ನೆಸ್ ಉದ್ಯಮದಲ್ಲಿನ ನವೀನ ಬದಲಾವಣೆಗಳಿಗೆ ಅನುಗುಣವಾಗಿ ಸಂಸ್ಥೆಯು ಕಳೆದ 23 ವರ್ಷಗಳಿಂದ ತನ್ನ ತಂತ್ರಜ್ಞಾನ ಹಾಗೂ ಸೇವೆಗಳನ್ನು ನಿರಂತರವಾಗಿ ಉನ್ನತೀಕರಿಸುತ್ತಾ ಮುನ್ನಡೆದಿದೆ. ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವುದೇ ಸಂಸ್ಥೆಯ ಪ್ರಮುಖ ಯಶಸ್ಸಿನ ಮೂಲ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಕಲರ್ಸ್ ಹೆಲ್ತ್‌ಕೇರ್ ಸಂಸ್ಥೆಯು ದೇಶಾದ್ಯಂತ ಅತ್ಯುತ್ತಮ ಚರ್ಮರೋಗ ಹಾಗೂ ವೆಲ್‌ನೆಸ್‌ ಸೇವೆಗಳನ್ನು ಒದಗಿಸುವ ಮೂಲಕ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ ಎಂದು ಅವರು ತಿಳಿಸಿದರು. ಅರ್ಹ ಹಾಗೂ ನುರಿತ ಚರ್ಮರೋಗ ತಜ್ಞರು, ಸುಧಾರಿತ ತಂತ್ರಜ್ಞಾನ ಮತ್ತು ಅನುಭವಿ ಸಿಬ್ಬಂದಿಯೊಂದಿಗೆ, ಗ್ರಾಹಕರಿಗೆ ಅತ್ಯುನ್ನತ ಗುಣಮಟ್ಟದ ಸೇವೆ ನೀಡುವುದೇ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದರು. ಜೊತೆಗೆ, ತನ್ನ ಸೇವೆಗಳನ್ನು ಮತ್ತಷ್ಟು ಉತ್ತಮಪಡಿಸಲು ಸಂಸ್ಥೆಯು ಕಾಲಕಾಲಕ್ಕೆ ಅತ್ಯಾಧುನಿಕ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುತ್ತಲೇ ಮುನ್ನಡೆಯುತ್ತಿದೆ ಎಂದು ಅವರು ಸೇರಿಸಿದರು.

ಈ ನೂತನ ಕೇಂದ್ರದಲ್ಲಿ ಅತ್ಯಾಧುನಿಕ ದೇಹತೂಕ ನಿರ್ವಹಣೆ, ಚರ್ಮ ಮತ್ತು ಸೌಂದರ್ಯವರ್ಧಕ ಚಿಕಿತ್ಸೆಗಳು ಹಾಗೂ ಕೂದಲ ಆರೈಕೆ ಸೇರಿದಂತೆ ಸಮಗ್ರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಆಧುನಿಕ ಆರೋಗ್ಯ, ಕ್ಷೇಮ ಮತ್ತು ಸೌಂದರ್ಯ ಸೇವೆಗಳನ್ನು ತಲುಪಿಸುವುದೇ ತಮ್ಮ ಪ್ರಾಥಮಿಕ ಉದ್ದೇಶ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಗ್ರಾಹಕರು ಕಲರ್ಸ್ ಹೆಲ್ತ್‌ಕೇರ್‌ನಲ್ಲಿ ಪಡೆದ ತಮ್ಮ ಚಿಕಿತ್ಸೆಯ ಅನುಭವಗಳನ್ನು ಹಂಚಿಕೊಂಡರು. ಸಂಸ್ಥೆಯ ಸೇವೆಗಳು ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಅಪಾರ ತೃಪ್ತಿ ವ್ಯಕ್ತಪಡಿಸಿದ ಅವರು, ಇಲ್ಲಿನ ಚಿಕಿತ್ಸೆಯ ನಂತರ ಅತ್ಯುತ್ತಮ ತೂಕ ಇಳಿಕೆ ಫಲಿತಾಂಶಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು. ತೂಕ ನಿರ್ವಹಣೆ ಹಾಗೂ ಸಂಬಂಧಿತ ಕ್ಷೇಮ ಸೇವೆಗಳನ್ನು ಬಯಸುವ ಪ್ರತಿಯೊಬ್ಬರೂ ಕಲರ್ಸ್ ಹೆಲ್ತ್‌ಕೇರ್‌ನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಈ ಉದ್ಘಾಟನಾ ಸಮಾರಂಭವನ್ನು ‘ಫಿಫ್ತ್ ಮೀಡಿಯಾ’ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದು, ಜಯದೀಪ್ ಅವರ ಮೇಲ್ವಿಚಾರಣೆಯಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕರು, ಗಣ್ಯ ವ್ಯಕ್ತಿಗಳು, ಕ್ಷೇಮ ಕ್ಷೇತ್ರದ ತಜ್ಞರು, ಕಂಪನಿಯ ಪ್ರತಿನಿಧಿಗಳು, ಸಿಬ್ಬಂದಿ ವರ್ಗ ಹಾಗೂ ಆಹ್ವಾನಿತ ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text 2026 09 18T202423.824

ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ

by ಶಾಲಿನಿ ಕೆ. ಡಿ
September 18, 2026 - 8:25 pm
0

Your paragraph text 2026 09 18T201648.521

ಜಪಾನ್‌ ಸಂಸ್ಥೆಯೊಂದಿಗೆ ಒಪ್ಪಂದ: ಸದ್ಯದಲ್ಲೇ ಭಾರತಕ್ಕೆ ಡೆಂಗ್ಯೂ ಲಸಿಕೆ

by ಶಾಲಿನಿ ಕೆ. ಡಿ
September 18, 2026 - 8:18 pm
0

Your paragraph text 2026 09 18T195115.523

ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್

by ಶಾಲಿನಿ ಕೆ. ಡಿ
September 18, 2026 - 7:55 pm
0

Your paragraph text 2026 09 18T194234.597

ಪಾಕ್‌‌ನಲ್ಲಿ ಶುರುವಾಯ್ತು ಮಿನಿ ಲಾಕ್‌ಡೌನ್: ಭಾರತಕ್ಕೂ ಕಾದಿದ್ಯಾ ಕಂಟಕ!

by Hemanth Kumar S
September 18, 2026 - 7:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 09 18T195115.523
    ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್
    September 18, 2026 | 0
  • Your paragraph text 2026 09 18T193219.659
    ದರ್ಶನ್‌ಗೆ ರಿಲೀಫ್: ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ
    September 18, 2026 | 0
  • Your paragraph text 2026 09 18T190957.501
    ಸಿಲಿಕಾನ್ ಸಿಟಿಯಲ್ಲಿ ಜಡೆಗಳ ರಾಜ ನ್ಯಾಚುರಲ್ ಸ್ಟಾರ್ ನಾನಿ
    September 18, 2026 | 0
  • Your paragraph text 2026 09 18T175122.674
    ಬುದ್ಧಿವಂತ ಉಪೇಂದ್ರಗೆ 58ನೇ ಬರ್ತ್ ಡೇ ಸಂಭ್ರಮ..!
    September 18, 2026 | 0
  • Your paragraph text 2026 09 18T154636.719
    ಹ್ಯಾಟ್ರಿಕ್ ಹಿಟ್ ಡೈರೆಕ್ಟರ್ ಪಟ್ಟಕ್ಕೇರಿದ ದುನಿಯಾ ವಿಜಯ್
    September 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version