ಟ್ರೆಂಡ್ ಸೆಟ್ಟರ್.. ರಿಯಲ್ ಸ್ಟಾರ್ ಉಪೇಂದ್ರಗೆ 58ನೇ ಜನುಮ ದಿನದ ಸಂಭ್ರಮ. ತಲೈವಾ ರಜನೀಕಾಂತ್ ಜೊತೆ ಕೂಲಿ ಸಿನಿಮಾದ ಬಳಿಕ ನೆಕ್ಸ್ಟ್ ಲೆವೆಲ್ ಬ್ಯುಸಿ ಆಗಿರೋ ಉಪ್ಪಿ ಕೈಯಲ್ಲಿ ಸಾಲು ಸಾಲು ಮೆಗಾ ಪ್ರಾಜೆಕ್ಟ್ಸ್ ಇವೆ. ಕತ್ರಿಗುಪ್ಪೆ ನಿವಾಸದಲ್ಲಿ ಸಾವಿರಾರು ಮಂದಿ ಅಭಿಮಾನಿಗಳ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಬುದ್ಧಿವಂತ, ನ್ಯೂ ಪ್ರಾಜೆಕ್ಟ್ಸ್ ಅಪ್ಡೇಟ್ಸ್ ಕೂಡ ನೀಡಿದ್ರು. ಇದರ ಫುಲ್ ಡಿಟೇಲ್ಸ್ ಇಲ್ಲಿದೆ…
- ಬುದ್ಧಿವಂತ ಉಪೇಂದ್ರಗೆ 58ನೇ ಬರ್ತ್ ಡೇ ಸಂಭ್ರಮ..!
- ಅಬ್ಬಬ್ಬಾ.. ಸಾಲು ಸಾಲು ಪ್ರಾಜೆಕ್ಟ್ಸ್.. ವೆರೈಟಿ ಫಸ್ಟ್‌ಲುಕ್ಸ್
- ಫ್ಯಾನ್ಸ್ ಜೊತೆ ಕೇಕ್ ಕಟ್ ಮಾಡಿ ಸಖತ್ ಸೆಲೆಬ್ರೇಷನ್
- ಕನ್ನಡ ಜೊತೆ ತೆಲುಗು, ತಮಿಳಲ್ಲೂ ಉಪ್ಪಿ ಫುಲ್ ಬ್ಯುಸಿ..!
ಭಿನ್ನ ಅಲೆಯ ಸಿನಿಮಾಗಳಿಗೆ ಓಂಕಾರ ಹಾಡಿದ ಸ್ಯಾಂಡಲ್‌ವುಡ್‌ನ ಟ್ರೆಂಡ್ ಸೆಟ್ಟರ್.. ನಟನೆ, ನಿರ್ದೇಶನ, ನಿರ್ಮಾಣ ಎಲ್ಲಕ್ಕೂ ಸೈ ಎನ್ನುವ ಮಾಸ್ಟರ್. ಭವಿಷ್ಯದ ಕಥೆಗಳನ್ನ ಇಂದೇ ಸಿನಿಮಾಗಳಲ್ಲಿ ತೋರಿಸೋ ಮಾಂತ್ರಿಕ. ಫಿಲ್ಟರ್‌ಲೆಸ್ ಸಿನಿಮಾಗಳ ಬ್ರಹ್ಮ.. ಮಾಸ್ಟರ್‌ಪೀಸ್ ಡೈರೆಕ್ಟರ್‌ಗಳ ಸಾಲಿನಲ್ಲಿ ರಾರಾಜಿಸ್ತಿರೋ ರಿಯಲ್ ಸ್ಟಾರ್ ಉಪೆಂದ್ರಗೆ ಇಂದು 58ನೇ ಬರ್ತ್ ಡೇ ಸಂಭ್ರಮ. ಪ್ರತೀ ವರ್ಷದಂತೆ ಈ ವರ್ಷವೂ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ಸಾವಿರಾರು ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಜನುಮ ದಿನವನ್ನ ಸೆಲೆಬ್ರೇಟ್ ಮಾಡಿಕೊಂಡರು.
ವಯಸ್ಸು ಆಗ್ತಾ ಆಗ್ತಾ ಸಿಕ್ಕಾಪಟ್ಟೆ ಯಂಗ್ ಆಗ್ತಿರೋ ಉಪ್ಪಿಗೆ ಈ ಬಾರಿ ಬರ್ತ್ ಡೇ ವಿಶೇಷ ನಿರ್ಮಾಪಕರುಗಳು ಸಖತ್ ಸರ್‌ಪ್ರೈಸ್ ಗಿಫ್ಟ್ಸ್ ನೀಡಿದ್ದಾರೆ. ಹೌದು.. ತಲೈವಾ ರಜನೀಕಾಂತ್ ಜೊತೆಗಿನ ಕೂಲಿ ಸಿನಿಮಾದ ಬಳಿಕ ಸೌತ್ ದುನಿಯಾದಲ್ಲಿ ನಮ್ಮ ಉಪೇಂದ್ರಗೆ ಡಿಮ್ಯಾಂಡ್ ದುಪ್ಪಟ್ಟಾಗಿದೆ. ನಿರ್ದೇಶನ ಮಾಡೋಕೂ ಬಿಡದೆ ಕನ್ನಡದ ಜೊತೆ ತೆಲುಗು, ತಮಿಳು ಚಿತ್ರರಂಗಗಳು ರೆಡ್ ಕಾರ್ಪೆಟ್ ಹಾಸಿ, ವೆಲ್ಕಮ್ ಹೇಳ್ತಿವೆ.
ಅದರಲ್ಲೂ ತರುಣ್ ಶಿವಪ್ಪ ನಿರ್ಮಾಣದ ಹಾಗೂ ಅರವಿಂದ್ ಕೌಶಿಕ್ ನಿರ್ದೇಶನದ ನೆಕ್ಸ್ಟ್ ಲೆವೆಲ್ ಸಿನಿಮಾದ ಫಸ್ಟ್‌ಲುಕ್ ಇಂದು ರಿಲೀಸ್ ಆಯ್ತು. ಕಾಟೇರ ನಂತ್ರ ಮಾಲಾಶ್ರೀ ಮಗಳು ಆರಾಧನಾ ರಾಮ್ ಈ ಚಿತ್ರದ ನಾಯಕನಟಿಯಾಗಿದ್ದು, ಉಪ್ಪಿ ಅಣ್ಣನ ಮಗ ನಿರಂಜನ್ ಸುಧೀಂದ್ರ ಕೂಡ ಕಮಾಲ್ ಮಾಡಲಿದ್ದಾರೆ. ಒಂದ್ಕಡೆ ಶಕ್ತಿಮಾನ್.. ಮಗದೊಂದು ಕಡೆ ಕ್ರಿಶ್ ರೀತಿಯ ಮಾಸ್ಕ್.. ಹೀಗೆ ಎರಡರ ಮಿಶ್ರಣದಂತಿದೆ ಈ ನೆಕ್ಸ್ಟ್ ಲೆವೆಲ್ ಸಿನಿಮಾ. ದಿ ಗೇಮ್ ಅನ್ನೋ ಟ್ಯಾಗ್‌ಲೈನ್ ಕೂಡ ಇದ್ದು, ನ್ಯೂ ಪೋಸ್ಟರ್ ಸಖತ್ ಕಿಕ್ ಕೊಡ್ತಿದೆ. ಈ ಕುರಿತು ನಟ ಉಪ್ಪಿ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಇದಲ್ಲದೆ ಉಪೇಂದ್ರ ಸದ್ಯ ಝಾಂಬಿ ರೆಡ್ಡಿ-2 ಅನ್ನೋ ತೆಲುಗು ಸಿನಿಮಾದಲ್ಲೂ ನಟಿಸ್ತಿದ್ದು, ಅದ್ರ ಫಸ್ಟ್‌ಲುಕ್ ಬೇರೆ ಲೆವೆಲ್‌ಗಿದೆ. ತೇಜ ಸಜ್ಜಾ ಲೀಡ್‌ನಲ್ಲಿ ನಟಿಸ್ತಿರೋ ಈ ಚಿತ್ರದಲ್ಲಿ ಉಪ್ಪಿ ವಿಲನ್ ಇದ್ದಂತಿದೆ. ಹಾಗಾಗಿಯೇ ಉಪ್ಪಿ ಕ್ರಿಯೇಟಿವಿಟಿಗೆ ತಕ್ಕನಾಗಿ ಉಲ್ಟಾ ಪೋಸ್ಟರ್ ಮಜಬೂತಾಗಿದೆ.
ಮತ್ತೊಂದು ತಮಿಳು ಮೂವಿ ಕೂಡ ಮಾಡ್ತಿರೋ ಉಪ್ಪಿ, ಸೂರಪ್ಪ ಬಾಬು ನಿರ್ಮಾಣದ ಭಾರ್ಗವ ಚಿತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಬುದ್ಧಿವಂತ-2 ರಿಲೀಸ್ ಆಗದೆ ಹಾಗೆಯೇ ಡಬ್ಬಿಯಲ್ಲಿ ಉಳಿದಿದ್ದು, ಸಾಲು ಸಾಲು ಸಿನಿಮಾಗಳಿಂದ ಸಖತ್ ಸದ್ದು ಮಾಡ್ತಿದ್ದಾರೆ. ಈ ಮಧ್ಯೆ ಮತ್ತೆ ಡೈರೆಕ್ಷನ್ ಯಾವಾಗ ಬಾಸ್ ಅಂತಿದ್ದಾರೆ ಫ್ಯಾನ್ಸ್. ಡೈರೆಕ್ಷನ್ ಆದಷ್ಟು ಬೇಗ ಅನೌನ್ಸ್ ಆಗಲಿ ಅಂತ ಹೇಳ್ತಾ ಬರ್ತ್ ಡೇ ಶುಭಾಶಯ ಕೋರೋಣ. ಹ್ಯಾಪಿ ಬರ್ತ್ ಡೇ ಉಪ್ಪಿ ಸರ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





