ರಶ್ಮಿಕಾ-ವಿಜಯ್ ದೇವರಕೊಂಡ.. ಹಾಲು ಜೇನು ಒಂದಾದ ಹಾಗೆ ಅಂತ ಸಹಬಾಳ್ವೆ ಶುರು ಮಾಡಿ ಆಗಿದೆ. ಕಿಂಗ್ ಕೊಹ್ಲಿ ದಾಖಲೆಯನ್ನೇ ಸರಿಗಟ್ಟಿದೆ ಇವ್ರ ವಿವಾಹ ಮಹೋತ್ಸವದ ಫೋಟೋಗಳು. ಆದ್ರೀಗ ತೆಲುಗಿನ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ನುಡಿದ ಭವಿಷ್ಯ ಮತ್ತೆ ವೈರಲ್ ಆಗ್ತಿದೆ. ಮದ್ವೆ ಏನೋ ಆಗ್ತಾರೆ. ಆದ್ರೆ ಬಿಟ್ಟೋಗ್ತಾರೆ ಅಂತ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
- ರಶ್ಮಿಕಾ-ವಿಜಯ್ ಬಿಟ್ಟೋಗ್ತಾರಾ? ವೇಣುಸ್ವಾಮಿ ಭವಿಷ್ಯ ವೈರಲ್
- ಉದಯಪುರದಲ್ಲಿ ವೆಡ್ಡಿಂಗ್.. ನಂತ್ರ ಹೈದ್ರಾಬಾದ್‌ನಲ್ಲಿ ರಿಸೆಪ್ಷನ್
- ಖ್ಯಾತ ಟಾಲಿವುಡ್ ಸೆಲೆಬ್ರಿಟಿ ಜ್ಯೋತಿಷಿ ಶಾಕಿಂಗ್ ಸ್ಟೇಟ್‌ಮೆಂಟ್
- ಅದೇ ಕಾರಣಕ್ಕೆ ವಿಶೇಷ ಪೂಜೆ ಮಾಡಿಸಿದ್ರಾ ರಶ್ಮಿಕಾ ಮಂದಣ್ಣ..?!
ವಿರೋಶ್.. ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿಗೆ ತುಂಬಾ ಪ್ರೀತಿಯಿಂದ, ಅಭಿಮಾನದಿಂದ ಅಭಿಮಾನಿಗಳೇ ಕೊಟ್ಟಿರೋ ಹೆಸರು. ಅದೇ ಟೈಟಲ್‌ನಲ್ಲಿ ಇತ್ತೀಚೆಗೆ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಮದ್ವೆ ಕೂಡ ಮಾಡಿಕೊಂಡರು. ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್, ಹೈದ್ರಾಬಾದ್‌ನಲ್ಲಿ ಗ್ರ್ಯಾಂಡ್ ರಾಯಲ್ ರಿಸೆಪ್ಷನ್ ಮಾಡಿಕೊಳ್ಳೋ ಮೂಲಕ ಇಡೀ ದೇಶವೇ ಇವರುಗಳ ಬಗ್ಗೆ ಮಾತನಾಡುವಂತಾಯ್ತು.
ಯಾಕಂದ್ರೆ ಆಕೆ ನ್ಯಾಷನಲ್ ಕ್ರಶ್. ಈತ ಪ್ಯಾನ್ ಇಂಡಿಯಾ ಲೈಗರ್. ಸೋ.. ಇವರುಗಳು ಗೀತ ಗೋವಿಂದಂ ಸಿನಿಮಾ ಮಾಡಿದಾಗಲೇ ಆಹಾ ಈ ಜೋಡಿ ರೀಲ್‌ನಂತೆ ರಿಯಲ್ ಲೈಫ್‌ನಲ್ಲೂ ಒಂದಾದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ಅಂದುಕೊಂಡಿದ್ರು. ಅದ್ರಂತೆ ಡಿಯಲ್ ಕಾಮ್ರೆಡ್ ಸಿನಿಮಾದ ವೇಳೆಗೆ ಅವರಿಬ್ಬರ ಸ್ನೇಹ, ಪ್ರೀತಿ ಮತ್ತಷ್ಟು ಚಿಗುರೊಡೆದು, ಮದ್ವೆ ಆಗುವ ಮಟ್ಟಕ್ಕೆ ಅವ್ರನ್ನ ಕರೆದೊಯ್ದಿದೆ. ರಶ್ಮಿಕಾಗೆ ವಿಜಯ್ ಸಿಕ್ಕಾಪಟ್ಟೆ ಫ್ರೀಡಂ ಕೊಟ್ಟಿದ್ದಾರೆ. ಅದು ಅವ್ರ ಪೋಸ್ಟ್‌ಗಳಲ್ಲಿನ ಪ್ರೇಮ ನಿವೇದನೆಯಿಂದ ಗೊತ್ತಾಗ್ತಿದೆ.
ಇಂಟರೆಸ್ಟಿಂಗ್ ಅಂದ್ರೆ, ರಶ್ಮಿಕಾ-ವಿಜಯ್ ನಿಜ ಜೀವನದಲ್ಲಿ ಸತಿ ಪತಿ ಆಗ್ಬೇಕು ಅಂತ ಎಷ್ಟು ಜನ ಇಷ್ಟ ಪಟ್ಟಿದ್ರೋ, ಅದಕ್ಕಿಂತ ಜಾಸ್ತಿ ಮಂದಿಯೇ ಅವರಿಬ್ಬರೂ ದೂರ ಆದ್ರೆ ಸಾಕು ಅಂತ ಕಾಯ್ತಿದ್ದಾರೆ. ಯಾಕಂದ್ರೆ ರಶ್ಮಿಕಾ ಮೇಲೆ ಒಂದಷ್ಟು ಮಂದಿಗೆ ಇರೋ ಕೋಪವೂ ಅದಕ್ಕೆ ಕಾರಣ. ರಕ್ಷಿತ್ ಜೊತೆಗಿನ ಲವ್ ಬ್ರೇಕಪ್, ಕನ್ನಡ ವಿರೋಧಿ ರಶ್ಮಿಕಾ ಅಲೆ.. ಹೀಗೆ ಅದಕ್ಕೆ ಸಾಕಷ್ಟು ಕಾರಣಗಳಿವೆ. ಆದ್ರೀಗ ಜ್ಯೋತಿಷಿ ವೇಣುಸ್ವಾಮಿ ನೀಡಿರೋ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅದನ್ನ ವಿರೋಶ್ ದಂಪತಿ ಕೂಲ್ ಆಗಿ ತೆಗೆದುಕೊಂಡಿರಬಹುದು. ಆದ್ರೆ ಫ್ಯಾನ್ಸ್ ಅಕ್ಷರಶಃ ಆತಂಕಗೊಳ್ತಿದ್ದಾರೆ.
ಇಷ್ಟಕ್ಕೂ ವೇಣುಸ್ವಾಮಿ ಅಂಥದ್ದೇನು ಸ್ಟೇಟ್‌ಮೆಂಟ್ ನೀಡಿದ್ದಾರೆ ಅಂತೀರಾ..? ಗೀತ-ಗೋವಿಂದಂ ಸಿನಿಮಾ ಸಮಯದಲ್ಲೇ ಗೊತ್ತಿತ್ತು. ಅವರಿಬ್ಬರೂ ಮದ್ವೆ ಆಗ್ತಾರೆ ಅಂತ. ಆಗ್ತಾರೆ ಆದ್ರೆ ಬಿಟ್ಟೋಗ್ತಾರೆ ಅಂತ ಕರಾರುವಕ್ಕಾಗಿ ಮಾತನಾಡಿದ್ರು. ಅದನ್ನ ಕೇಳಿದ್ರೆ ನಿಜಕ್ಕೂ ಶಾಕ್ ಆಗೋದು ಗ್ಯಾರಂಟಿ.
ಯೆಸ್.. ಇದನ್ನ ತೆಲುಗಿನ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ನಿನ್ನೆ ಮೊನ್ನೆ ಹೇಳಿರೋದಲ್ಲ. ಕಳೆದ ವರ್ಷವೇ ಹೇಳಿರೋ ಮಾತಿದು. ಅಂದಹಾಗೆ ರಶ್ಮಿಕಾ ಕೂಡ ವಿಜಯ್ ವಿಚಾರ ಈ ಜ್ಯೋತಿಷಿಯ ಮೊರೆ ಹೋಗಿದ್ರು ಅಂದ್ರೆ ನೀವು ನಂಬಲೇ ಬೇಕು. ಗೀತ ಗೋವಿಂದಂ ಬಳಿಕ ನನ್ನ ಮತ್ತು ವಿಜಯ್ ರಿಲೇಷನ್‌ಶಿಪ್ ಚೆನ್ನಾಗಿರಬೇಕು. ಮದ್ವೆ ಆದ ಬಳಿಕ ನಮ್ಮಿಬ್ಬರ ದಾಂಪತ್ಯ ಜೀವನ ಸಹ ಚೆನ್ನಾಗಿರಬೇಕು ಅಂತ ಇದೇ ವೇಣುಸ್ವಾಮಿ ಬಳಿ ಸಾಕಷ್ಟು ವಿಶೇಷ ಪೂಜೆ, ಪುನಸ್ಕಾರಗಳನ್ನ ಮಾಡಿಸಿದ್ದಾರೆ ರಶ್ಮಿಕಾ.
ಆದ್ರೆ ವಿರೋಶ್ ಜೋಡಿ ಮದ್ವೆ ನಂತರ ಬಿಟ್ಟೋಗುತ್ತೆ ಅನ್ನೋದನ್ನ ಬಹಿರಂಗವಾಗಿ ರಶ್ಮಿಕಾಗೆ ವೇಣುಸ್ವಾಮಿ ಹೇಳಿದಾಗ ಅಕ್ಷರಶಃ ಅವರೇ ಶಾಕ್ ಆಗಿದ್ದಾರೆ. ನಂತ್ರ ವೇಣುಸ್ವಾಮಿ ತಂಟೆ ತಕರಾರೇ ಬೇಡ ಅಂತ ಒಂದು ಅಂತರ ಕಾಯ್ದುಕೊಂಡಿದ್ದಾರೆ. ಇದು ಲೇಟೆಸ್ಟ್ ಅಪ್ಡೇಟ್.
ಯಾರು ಏನೇ ಅಂದ್ರೂ ಸಹ, ಅವರಿಬ್ಬರ ನಡುವೆ ಪರಸ್ಪರ ನಂಬಿಕೆ, ಪ್ರೀತಿ, ಅಭಿಮಾನ, ಗೌರವಗಳು ಇದ್ರೆ ಆ ದಾಂಪತ್ಯ ಜೀವನದ ಬಗ್ಗೆ ವೇಣುಸ್ವಾಮಿ ಅಂತಹ ನೂರು ಮಂದಿ ಜ್ಯೋತಿಷಿಗಳು ಸ್ಟೇಟ್‌ಮೆಂಟ್ ನೀಡಿದ್ರೂ ಏನೂ ಆಗಲ್ಲ. ವೇಣುಸ್ವಾಮಿ ಭವಿಷ್ಯ ಸುಳ್ಳಾಗಲಿ. ಈಗಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಜೀವನದ ಬಂಡಿ ತುಂಬಾ ದೂರ ಸಾಗಬೇಕಿದೆ. ಅವ್ರ ಗಮ್ಯ ಸೇರಿಕೊಳ್ಳೋವರೆಗೂ ಯಾವುದೇ ಅಡೆ ತಡೆಗಳು ಬಾರದಿರಲಿ. ಯಾರ ಕೆಟ್ಟ ಕಣ್ಣು ಬೀಳದಿರಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





