ಬ್ಲಾಕ್ಬಸ್ಟರ್ ಹಿಟ್ ಪ್ರೇಮದ ಊರಲಿ ಸಕ್ಸಸ್ ಹಿಂದೆ ಸಾಕಷ್ಟು ಮಂದಿ ಕಲಾವಿದರು ಹಾಗೂ ತಂತ್ರಜ್ಞರ ಶ್ರಮವಿದೆ. ಆದ್ರೆ ರಮಿಕಾ ಶಿವು ಅನ್ನೋ ಚೆಂದುಳ್ಳಿ ಚೆಲುವೆಯ ಸಹಜ ಹಾಗೂ ಸ್ವಾಭಾವಿಕ ನಟನೆ ಕೂಡ ಸಿನಿಮಾಗೆ ಬಹುದೊಡ್ಡ ಪ್ಲಸ್ ಆಗಿದೆ. ಸ್ಯಾಂಡಲ್ವುಡ್ನ ಸಾಯಿ ಪಲ್ಲವಿ ಅನಿಸಿಕೊಳ್ತಿರೋ ರಮಿಕಾ ಶಿವು ಯಾರು..? ಆಕೆ ಹಿನ್ನೆಲೆ ಏನು..? ಆಕೆ ಎಷ್ಟು ಅದ್ಭುತ ನಟಿ ಅನ್ನೋದ್ರ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ…
- ಸ್ಯಾಂಡಲ್ವುಡ್ನ ಸಾಯಿಪಲ್ಲವಿ ಪ್ರೇಮದ ಊರಲಿ ‘ರಮಿಕಾ’
- ಈಕೆ ಸಹಜ ಹಾಗೂ ಸ್ವಾಭಾವಿಕ ನಟನೆಗೆ ಕೇರ್ ಆಫ್ ಅಡ್ರೆಸ್
- ಮೈಸೂರು ಮೂಲದ ಚೆಲುವೆ.. ಟಾಂಬಾಯ್ ಸ್ವಭಾವ.. ಪದವೀಧರೆ
- ಸೀರಿಯಲ್, ಸಿನಿಮಾಗಾಗಿ ರಮಿಕಾ ಶಿವು ಆದ ನಟಿ ಖುಷಿ ಶಿವು..!
ರಮಿಕಾ ಶಿವು.. ಸದ್ಯ ಇಡೀ ಸ್ಯಾಂಡಲ್ವುಡ್ ತುಂಬಾ ಈಕೆಯದ್ದೇ ಟಾಕ್. ಅದಕ್ಕೆ ಕಾರಣ ಪ್ರೇಮದ ಊರಲಿ ಸಿನಿಮಾದಲ್ಲಿ ಈಕೆ ನೀಡಿರೋ ಟಾಪ್ ನಾಚ್ ಪರ್ಫಾಮೆನ್ಸ್. ಹೌದು.. ವಸಂತ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರೋ ರಮಿಕಾ ಅಕ್ಷರಶಃ ಆ ಪಾತ್ರವನ್ನ ಜೀವಿಸಿಬಿಟ್ಟಿದ್ದಾರೆ. ಆಕೆಯ ಹಾವ, ಭಾವ, ಆಂಗಿಕ ಭಾಷೆ, ಡೈಲಾಗ್ ಡೆಲಿವರಿ, ಎಮೋಷನ್ಸ್ ಎಲ್ಲವೂ ಪ್ಯೂರ್ ಆಗಿದ್ದು.. ಸಖತ್ ಸಹಜ ಹಾಗೂ ಸ್ವಾಭಾವಿಕವಾಗಿದೆ. ಅದೇ ಕಾರಣದಿಂದ ಪ್ರೇಮದ ಊರಲಿ ಚಿತ್ರದ ಮೊದಲಾರ್ಧದಲ್ಲಿ ಈಕೆಯೇ ಹೈಲೈಟ್.
ಇಂತಹ ಕಲಾವಿದರು ದಶಕಕ್ಕೋ ಎರಡು ದಶಕಕ್ಕೋ ಒಬ್ಬರು ಇಂಡಸ್ಟ್ರಿಗೆ ಬರೋಕೆ ಸಾಧ್ಯ. ಬಂದರೂ ಹೆಸರು ಮಾಡೋಕೆ ಸಾಧ್ಯವಾಗುತ್ತೆ. ಸದ್ಯ ರಮಿಕಾ ಶಿವು ಎಲ್ಲರ ಮನೆ ಮಾತಾಗಿದ್ದಾರೆ. ಆಕೆಯ ಅಂದ, ಚೆಂದದ ಜೊತೆ ಮನೋಜ್ಞ ಅಭಿನಯದಿಂದ ಕನ್ನಡಿಗರ ಜೊತೆ ಪರಭಾಷಿಗರ ಹೃದಯ ಕೂಡ ಗೆದ್ದಿದ್ದಾರೆ. ದೇಶ, ವಿದೇಶಗಳಲ್ಲಿ ಸದ್ದು ಮಾಡ್ತಿರೋ ರಮಿಕಾ ಶಿವುರನ್ನ ಸ್ಯಾಂಡಲ್ವುಡ್ನ ಸಾಯಿ ಪಲ್ಲವಿ ಅಂತೆಲ್ಲಾ ಜನ ಕರೆಯುತ್ತಿದ್ದಾರೆ. ಯೆಸ್.. ಕಲಾವಿದರಿಗೆ ಇಂತಹ ಮೆಚ್ಚುಗೆ ಸಿಗೋದು ಅಪರೂಪ, ಅತಿ ವಿರಳ. ಅದ್ರಲ್ಲೂ ಪ್ಯಾನ್ ಇಂಡಿಯಾ ಸದ್ದು ಮಾಡ್ತಿರೋ ಅತ್ಯದ್ಭುತ ಕಲಾವಿದೆ ಸಾಯಿಪಲ್ಲವಿಗೆ ಈಕೆಯನ್ನ ಹೋಲಿಸ್ತಿರೋದು ಖುಷಿಯ ವಿಷಯ.
ಅಂದಹಾಗೆ ರಮಿಕಾ ಶಿವು ಹಿನ್ನೆಲೆ ಏನು ಅಂತ ನೋಡೋದಾದ್ರೆ ಈಕೆ ಅಪ್ಪಟ ಕನ್ನಡತಿ. ನಮ್ಮ ಅರಮನೆ ನಗರಿ ಮೈಸೂರಿನವರು. ಶಾಲಾದಿನಗಳಲ್ಲೇ ನಟಿಯಾಗೋ ಕನಸು ಕಂಡಿದ್ದ ಈಕೆ ನಟಿಮಣಿಯಾಗಿ ರಾರಾಜಿಸ್ತಿದ್ದಾರೆ. ಸ್ವಭಾವದಲ್ಲಿ ಟಾಂಬಾಯ್. ಎಲ್ಲರ ಜೊತೆ ಬೆರೆಯುವ.. ಸದಾ ಲವಲವಿಕೆಯಿಂದಿರೋ ಬ್ಯೂಟಿ. ಈಕೆ ಪದವೀಧರೆಯೂ ಹೌದು. ತಂದೆ ಹೋಟೆಲ್ ಉದ್ಯಮಿ ಆದ್ರೂ ತನಗಿಷ್ಟದ ಬಣ್ಣದ ಲೋಕಕ್ಕೆ ಸೀರಿಯಲ್ ಮೂಲಕ ಪದಾರ್ಪಣೆ ಮಾಡಿದ್ರು. ನೀನಾದೆ ನಾ ಧಾರಾವಾಹಿಯಿಂದ ಕನ್ನಡಿಗರ ದಿಲ್ ದೋಚಿದ್ರು.
ಅಷ್ಟೇ ಅಲ್ಲ.. ನಾ ನಿನಗೆ ನೀ ಎನಗೆ ಅನ್ನೋ ಒಂದು ಶಾರ್ಟ್ ಫಿಲ್ಮ್ ಕೂಡ ಮಾಡಿದ್ದಾರೆ ರಮಿಕಾ ಶಿವು. ಈಕೆಯ ಮೂಲ ಹೆಸರು ಖುಷಿ ಶಿವು. ಆದ್ರೆ ಆನ್ಸ್ಕ್ರೀನ್ಗಾಗಿ ರಮಿಕಾ ಶಿವು ಅಂತ ಹೆಸರನ್ನೇ ಬದಲಿಸಿಕೊಂಡಿದ್ದಾರೆ. ಅದೇನೇ ಇರಲಿ.. ರಮಿಕಾ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಒಳ್ಳೆಯ ಅವಕಾಶಗಳು ಕೂಡ ಆಕೆಯನ್ನ ಹರಸಿ ಬರ್ತಿವೆ. ಇನ್ನೂ ರಂಗಾಯಣ ರಘು ಮೊದಲೇ ಪರಭಾಷೆಗಳಿಗೆ ಹೋಗಲ್ಲ ಅಂತ ಪ್ರಮಾಣ ಸಹ ಮಾಡಿಸಿದ್ದು, ಅದಕ್ಕೆ ಪೂರಕವಾಗಿ ಇಲ್ಲೇ ಉಳಿದುಕೊಂಡು ಇಂತಹ ಹತ್ತಾರು, ನೂರಾರು ಸದಭಿರುಚಿಯ ಚಿತ್ರಗಳನ್ನ ಮಾಡುವಂತಾಗಲಿ ಅಂತ ಹಾರೈಸೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





