ಚಿತ್ರರಂಗದಲ್ಲಿ 50 ವರ್ಷಗಳ ಕಾಲ ಸುದೀರ್ಘ ಜರ್ನಿ ಮಾಡಿರೋ ತಲೈವಾ ರಜನಿಕಾಂತ್.. 75ರ ಇಳಿವಯಸ್ಸಿನಲ್ಲಿ ಕೂಡ ನೂತನ ದಾಖಲೆಯೊಂದನ್ನ ಮಾಡಿದ್ದಾರೆ. ಜೈಲರ್-2 ಬ್ಲಾಕ್ಬಸ್ಟರ್ ಹಿಟ್ ಜೊತೆ ಸೂಪರ್ ಸ್ಟಾರ್ ಮಾಡಿರೋ ಆ ನ್ಯೂ ಸೂಪರ್ ರೆಕಾರ್ಡ್ ಆದ್ರೂ ಏನು ಅನ್ನೋ ಡಬಲ್ ಧಮಾಕೇದಾರ್ ಸ್ಟೋರಿ ಇಲ್ಲಿದೆ.
- 75ರ ಹರೆಯದಲ್ಲಿ ರಜನಿ ಖಾತೆಗೆ ಮತ್ತೊಂದು ನ್ಯೂ ರೆಕಾರ್ಡ್
- 50 ವರ್ಷ ಜರ್ನಿ.. ಸಿನಿಸಂತನಿಗೆ ಶುಭಾಶಯಗಳ ಮಹಾಪೂರ
- 7 ಅಪ್ಡೇಟೆಡ್ ಫಾರ್ಮ್ಯಾಟ್ಸ್.. ಭಾರತದ ಮೊದಲ ಚಿತ್ರ ಜೈಲರ್
- ಜೈಲರ್-2 ವರ್ಲ್ಡ್ವೈಡ್ ಫಸ್ಟ್ ಡೇ ಕಲೆಕ್ಷನ್ 125 ಕೋಟಿ ರೂ
ಒನ್ಸ್ ಎ ಸೂಪರ್ ಸ್ಟಾರ್.. ಆಲ್ವೇಸ್ ಸೂಪರ್ ಸ್ಟಾರ್. ಹೌದು.. ತಲೈವಾ ರಜನಿಕಾಂತ್ಗೆ ರಜನಿಕಾಂತ್ ಮಾತ್ರವೇ ಸರಿಸಾಟಿ. ತಮ್ಮ 75 ವರ್ಷಗಳ ಸುದೀರ್ಘ ಸಿನಿಮಾರಂಗದ ಪಯಣದಲ್ಲಿ 170ರಿಂದ 180 ಸಿನಿಮಾಗಳನ್ನ ಮಾಡಿರೋ ರಜನಿ, 75ರ ಇಳಿವಯಸ್ಸಿನಲ್ಲಿ ಕೂಡ ಕಿಂಚಿತ್ತೂ ಕುಗ್ಗಿಲ್ಲ ಅವರ ಸಿನಿಮೋತ್ಸಾಹ. ಸ್ಟೈಲ್ ಐಕಾನ್, ಎನರ್ಜಿ ಹೌಸ್ ರಜನಿಯ ಜೀವನೋತ್ಸಾಹ ಅದೆಷ್ಟೋ ಮಂದಿಗೆ ಸ್ಫೂರ್ತಿ, ಪ್ರೇರಣೆ ಅಂದ್ರೆ ತಪ್ಪಾಗಲ್ಲ.
ಈ ವಾರ ತೆರೆಕಂಡಿರೋ ಜೈಲರ್-2 ಸಿನಿಮಾದಿಂದ ಒನ್ಸ್ ಅಗೈನ್ ಓಪನಿಂಗ್ ಡೇ ಬರೋಬ್ಬರಿ 125 ಕೋಟಿ ಗಳಿಕೆಯಿಂದ ಮತ್ತೊಂದು ದಾಖಲೆ ಬರೆದಿದ್ದಾರೆ ತಲೈವಾ ರಜನಿ. ನೆಲ್ಸನ್ ನಿರ್ದೇಶನದ ಜೈಲರ್-2ನಲ್ಲಿ ಸಾಲು ಸಾಲು ಪರಭಾಷಾ ಸೂಪರ್ ಸ್ಟಾರ್ಸ್ ಇದ್ರೂ ಸಹ.. ತಲೈವಾ ಇಮೇಜ್ ಮಾತ್ರ ಹಾಗೇ ಇದೆ. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರೋ ರಜನಿ ಔಟ್ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ಗೆ ಪ್ರೇಕ್ಷಕರು ಫಿದಾ ಆಗ್ತಿದ್ದಾರೆ. ಅಲ್ಲದೆ ಅವರ ಐದು ದಶಕದ ಜರ್ನಿಗೆ ಶುಭಾಶಯಗಳನ್ನ ಕೋರುತ್ತಿದ್ದಾರೆ.
ಕಮಲ್ ಹಾಸನ್, ಹೃತಿಕ್ ರೋಷನ್, ಧನುಷ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ಗಳೇ ತಲೈವಾಗೆ ಸಲಾಂ ಅಂತಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಜೈಲರ್-2 ಚಿತ್ರದಿಂದ ರಜನಿ ಮತ್ತೊಂದು ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಅದೇನಪ್ಪಾ ಅಂದ್ರೆ.. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಪ್ಡೇಟೆಡ್ ಡಿಜಿಟಲ್ ರಿಲೀಸ್ ಫಾರ್ಮ್ಯಾಟ್ಗಳಾದ ಏಳಕ್ಕೆ ಏಳೂ ಅವತರಣಿಕೆಗಳಲ್ಲಿ ಜೈಲರ್-2 ರಿಲೀಸ್ ಆಗಿದೆ. ಈ ಮೂಲಕ ಐಮ್ಯಾಕ್ಸ್, 4DX, ಡಿ ಬಾಕ್ಸ್, ಡಾಲ್ಬಿ ವಿಷನ್, ಎಪಿಕ್, HDR ಬೈ ಬಾರ್ಕೋ, HDR ಫಾರ್ LED ಸಿನಿಮಾ.. ಹೀಗೆ ಏಳೂ ಫಾರ್ಮ್ಯಾಟ್ಗಳಲ್ಲಿ ತೆರೆಕಂಡ ಮೊಟ್ಟ ಮೊದಲ ಇಂಡಿಯನ್ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ಜೈಲರ್-2.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





