ರಾಜಾಸಾಬ್ ನೋಡಿ ಬೇಸರದಲ್ಲಿದ್ದ ಚಿತ್ರಪ್ರೇಮಿಗಳು ಹಾಗೂ ತನ್ನ ಡೈ ಹಾರ್ಡ್ ಫ್ಯಾನ್ಸ್‌ಗೆ ಡಾರ್ಲಿಂಗ್ ಪ್ರಭಾಸ್ ಗುಡ್ ನ್ಯೂಸ್ ನೀಡಿದ್ದಾರೆ. ಯೆಸ್.. ಮೋಸ್ಟ್ ಎಕ್ಸ್‌ಪೆಕ್ಟೆಡ್ ಫೌಜಿ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಮೂರು ಮೂರು ಚಿತ್ರಗಳಲ್ಲಿ ಬ್ಯುಸಿ ಇರೋ ಡಾರ್ಲಿಂಗ್ ಕೊಟ್ಟಿರೋ ಸ್ವೀಟ್ ನ್ಯೂಸ್‌ಗೆ ಭಾರತೀಯ ಚಿತ್ರರಂಗ ಕೂಡ ದಿಲ್‌ಖುಷ್ ಆಗಿದೆ. ಈ ಕುರಿತ ಒಂದು ರಿಪೋರ್ಟ್ ನಿಮ್ಮ ಮುಂದೆ.
ಫೌಜಿಯಾದ ಪ್ರಭಾಸ್.. ಸೀತಾ ರಾಮಂ ಡೈರೆಕ್ಟರ್ ಸಾರಥ್ಯ
ಡಿ- 3ಕ್ಕೆ ಸ್ವತಂತ್ರಪೂರ್ವ ಕಥಾನಕ ಫೌಜಿ ಗ್ರ್ಯಾಂಡ್ ರಿಲೀಸ್
ರಾಜಾಸಾಬ್ ಫ್ಲಾಪ್ ನಂತ್ರ 3 ಮೆಗಾ ಪ್ರಾಜೆಕ್ಟ್ಸ್‌ನಲ್ಲಿ ಪ್ರಭಾಸ್
ಐತಿಹಾಸಿಕ ಘಟನೆಗಳ ಚಿತ್ರಣ.. ಸೈನಿಕನಾಗಿ ಡಾರ್ಲಿಂಗ್ ಅಬ್ಬರ
ಫೌಜಿ.. ಡಾರ್ಲಿಂಗ್ ಪ್ರಭಾಸ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿಯ ಅಫಿಶಿಯಲ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದೇ ಡಿಸೆಂಬರ್ 3ಕ್ಕೆ ವರ್ಲ್ಡ್‌ವೈಡ್ ತೆರೆಗಪ್ಪಳಿಸಲಿದೆ ಫೌಜಿ. ನಿರ್ದೇಶಕ ಹನು ರಾಘವಪುಡಿ ಅವ್ರ ಮಹತ್ವಾಕಾಂಕ್ಷೆಯ ಚಿತ್ರ ಇದಾಗಿದ್ದು, ಚಿತ್ರತಂಡ ಆಕರ್ಷಕ ಪೋಸ್ಟರ್‌ನ ಬಿಡುಗಡೆ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಅಜ್ಞಾತಪರ್ವ ಎಂಡ್ಸ್ ಅನ್ನೋ ಕುತೂಹಲಕಾರಿ ಘೋಷಣೆಯೊಂದಿಗೆ, ಚಿತ್ರದ ನಿರ್ಮಾಪಕರು ‘ದಿ ರೆಬೆಲಿಯನ್ ಬಿಗಿನ್ಸ್’ ಎಂದು ಸಾರಿದ್ದಾರೆ.
ಈ ಅನೌನ್ಸ್‌ಮೆಂಟ್ ಸಹಜವಾಗಿಯೇ ಚಿತ್ರರಸಿಕರಲ್ಲಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟರ್, ಚಿತ್ರದ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ರಕ್ತಸಿಕ್ತವಾದ ಉಡುಪಿನಲ್ಲಿ, ಸುತ್ತಲೂ ಶವಗಳ ನಡುವೆ ಕಲ್ಲಿನ ಮೇಲೆ ಕುಳಿತು ಗನ್ ಹಿಡಿದಿರುವ ಪ್ರಭಾಸ್ ಲುಕ್, ಸಿಕ್ಕಾಪಟ್ಟೆ ಕಿಕ್ಕು ಕೊಡ್ತಿದೆ. ಬಾಹುಬಲಿ ನಂತ್ರ ಪ್ರಭಾಸ್ ನಟನೆಯ ಬಹುದೊಡ್ಡ ಪೀರಿಯಾಡಿಕ್ ಡ್ರಾಮಾ ಇದು.
ಎ ಬೆಟಾಲಿಯನ್ ಹೂ ಫೈಟ್ಸ್ ಅಲೋನ್ ಅನ್ನೋ ಟ್ಯಾಗ್‌ಲೈನ್ ಹೊಂದಿರೋ ಈ ಚಿತ್ರವು, ಭಾವನಾತ್ಮಕ ಹಾಗೂ ಅದ್ಭುತ ದೃಶ್ಯ ವೈಭವದ ಅನುಭವವನ್ನು ನೀಡುವ ಭರವಸೆ ನೀಡಿದೆ. ಈ ಚಿತ್ರವು ಪ್ರಭಾಸ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ಮತ್ತು ದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿದೆ. ಮತ್ತೊಂದು ವಿಶೇಷತೆ ಏನಂದ್ರೆ, ಇದು ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಹನು ರಾಘವಪುಡಿ ಅವರ ಸಮಾಗಮವಾಗಿದೆ. ಇದನ್ನ ಭಾರತೀಯ ಚಿತ್ರರಂಗದ ತಲೆಮಾರುಗಳ ಸಂಘಟನೆ ಅಂತಲೇ ಕರೆಯಲಾಗುತ್ತಿದೆ.
ರಾಜಾಸಾಬ್ ಸಿನಿಮಾ ಅಟ್ಟರ್ ಫ್ಲಾಪ್ ಆದ ಹಿನ್ನೆಲೆ ಫ್ಯಾನ್ಸ್ ತುಂಬಾ ಬೇಸರದಲ್ಲಿದ್ರು. ಆದ್ರೀಗ ಡಾರ್ಲಿಂಗ್ ಒಂದಲ್ಲ ಎರಡಲ್ಲ ಮೂರು ಮೂರು ಮೆಗಾ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಪಿರಿಟ್, ಕಲ್ಕಿ-2 ಹಾಗೂ ಫೌಜಿ. ಆ ಪೈಕಿ ಫೌಜಿ ಚಿತ್ರದ ಫಸ್ಟ್‌ಲುಕ್ ಜೊತೆ ರಿಲೀಸ್ ಡೇಟ್ ರಿವೀಲ್ ಆಗಿದೆ. ಜನಿವಾರ ತೊಟ್ಟು, ಬೇರ್ ಬಾಡಿಯಲ್ಲಿ ಪ್ರಭಾಸ್ ಗನ್ ಹಿಡಿದು ರಕ್ತ ಹರಿಸಲಿರೋ ಈ ಚಿತ್ರ ಇತಿಹಾಸದಲ್ಲಿ ಹುದುಗಿ ಹೋಗಿರೋ ನಗ್ನ ಸತ್ಯಗಳನ್ನ ಬೆಳ್ಳಿತೆರೆ ಮೇಲೆ ಅನಾವರಣಗೊಳಿಸಲಿದೆ ಎನ್ನಲಾಗ್ತಿದೆ. ಹನು ರಾಘವಪುಡಿ ಈ ಹಿಂದೆ ಸೀತಾ ರಾಮಂ ಅನ್ನೋ ಅತ್ಯದ್ಭುತ ದೃಶ್ಯಕಾವ್ಯ ಕಟ್ಟಿಕೊಟ್ಟಿದ್ರು. ಹಾಗಾಗಿಈ ಜಾನರ್ ಚಿತ್ರದ ಮೇಲೆ ಅವರಿಗೆ ಒಳ್ಳೆಯ ಹಿಡತವೂ ಇದೆ. ಸೋ.. ವ್ಹಾವ್ ಫೀಲ್ ತರಿಸೋ ಚಿತ್ರವಾಗಿ ಹೊರಹೊಮ್ಮಲಿದೆ ಫೌಜಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





