ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಈಗ ‘ಮಂಡೇ ಟೆನ್ಷನ್’ ಶುರುವಾಗಿದೆ. ಶುಕ್ರವಾರವೇ ಪವಿತ್ರಾ ಬೆಲ್ ಅರ್ಜಿ ಭವಿಷ್ಯ ಹೊರಬೀಳುತ್ತೆ, ಜೈಲಿನಿಂದ ರಿಲೀಫ್ ಸಿಗುತ್ತೆ ಅಂತ ಕಾದಿದ್ದ ಕೌಂಟಿಂಗ್‌ಗೆ ಶಾಕ್ ಸಿಕ್ಕಿದೆ. “ಒಂಚೂರು ವಿಷ ಕೊಡಿಸಿಬಿಡಿ” ಅಂತ ಜೈಲಿನಲ್ಲಿ ಕಣ್ಣೀರಿಡುತ್ತಿರುವ ಪವಿತ್ರಾಗೆ ಸೋಮವಾರ ಸಿಗುತ್ತಾ ಜಾಮೀನು..? ಇಲ್ಲಿದೆ ಈ ಹೈ-ಡ್ರಾಮಾ ಕೇಸ್‌ನ ಕಂಪ್ಲೀಟ್ ರಿಪೋರ್ಟ್.
- ಸೋಮವಾರ ಪವಿತ್ರಾ ಭವಿಷ್ಯಕ್ಕೆ ಕೋರ್ಟ್ ಕ್ಲೈಮ್ಯಾಕ್ಸ್
- ಮಗಳ ಭವಿಷ್ಯ ಮುಂದಿಟ್ಟು ಪವಿತ್ರಾಗೆ ಜಾಮೀನು ಮನವಿ
- ಸಾಕ್ಷಿಗಳ ವಿಚಾರಣೆ ಪೂರ್ಣ.. ಬೇಲ್‌ಗೆ ಪ್ರಬಲ ವಾದ
- ಪವಿತ್ರಾಗೆ ಜಾಮೀನು ಸಿಗುತ್ತಾ..? ಜೈಲೇ ಗತಿಯಾಗುತ್ತಾ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಜೈಲು ಹಕ್ಕಿಯಾಗಿರುವ ಪವಿತ್ರಾ ಗೌಡ ಜಾಮೀನು ಅರ್ಜಿಯ ಕ್ಲೈಮ್ಯಾಕ್ಸ್ ಈಗ ಕೌತುಕ ಮೂಡಿಸಿದೆ. 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಶುಕ್ರವಾರವೇ ಮಹತ್ವದ ತೀರ್ಪು ಹೊರಬೀಳಬೇಕಿತ್ತು. ಆದರೆ ನ್ಯಾಯಾಧೀಶರು ಗೈರಾಗಿದ್ದರಿಂದ ಪವಿತ್ರಾ ಗೌಡ ಅವರ ಜಾಮೀನು ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ಬಹುತೇಕ ಪೂರ್ಣಗೊಂಡಿರುವುದರಿಂದ ಜಾಮೀನು ನೀಡಬೇಕು, ಜೊತೆಗೆ ಮಗಳ ವಿದ್ಯಾಭ್ಯಾಸ ಹಾಗೂ ಭವಿಷ್ಯದ ದೃಷ್ಟಿಯಿಂದ ಬೆಲ್ ಮಂಜೂರು ಮಾಡಬೇಕೆಂದು ಪವಿತ್ರಾ ಪರ ವಕೀಲರು ಕೋರ್ಟ್‌ಗೆ ಪ್ರಬಲ ವಾದ ಮಂಡಿಸಿದ್ದಾರೆ.
ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ದಿನಗಳು ನರಕಯಾತನೆಯಾಗಿವೆ ಎಂಬ ಸತ್ಯ ವಿಚಾರಣೆ ವೇಳೆ ಬಹಿರಂಗವಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರಾಗಿದ್ದ ಪವಿತ್ರಾ ಕಣ್ಣೀರಿಟ್ಟು ತಮ್ಮ ಅಳಲು ತೋಡಿಕೊಂಡಿದ್ದರು. ಜೈಲಿನ ಭದ್ರತೆ ಹಾಗೂ ಬ್ಯಾರಕ್ ಪರಿಸ್ಥಿತಿಯಿಂದ ತೀವ್ರ ಕಿರಿಕಿರಿ ಅನುಭವಿಸುತ್ತಿರುವ ಪವಿತ್ರಾ, “ಒಂಚೂರು ವಿಷ ಕೊಡಿಸಿಬಿಡಿ” ಎಂದು ತಮ್ಮ ವಕೀಲರ ಬಳಿ ಅಳಲು ತೋಡಿಕೊಂಡಿದ್ದ ವಿಚಾರ ಕೋರ್ಟ್ ಅಂಗಳದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಬಳಿಕ ಅವರ ಮನವಿ ಮೇರೆಗೆ ಕಡಿಮೆ ಕೈದಿಗಳಿರುವ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ.
ಸಾಕ್ಷ್ಯ ನಾಶಪಡಿಸುವ ಯಾವುದೇ ಸಾಧ್ಯತೆ ಇಲ್ಲದ ಕಾರಣ ಪವಿತ್ರಾಗೆ ಜಾಮೀನು ಮಂಜೂರು ಮಾಡಬೇಕು ಎನ್ನುವುದು ರಕ್ಷಣಾ ತಂಡದ ವಾದ. ಆದರೆ, ಅತ್ಯಂತ ಭೀಕರ ಕೊಲೆ ಪ್ರಕರಣ ಇದಾಗಿರುವುದರಿಂದ ನ್ಯಾಯಾಲಯ ಸೋಮವಾರ ನೀಡಲಿರುವ ತೀರ್ಪು ಪವಿತ್ರಾ ಗೌಡ ಭವಿಷ್ಯವನ್ನು ನಿರ್ಧರಿಸಲಿದೆ. ಕಂಬಿ ಎಣಿಸುತ್ತಿರುವ ದರ್ಶನ್ ಗೆಳತಿಗೆ ಸೋಮವಾರ ಬಿಡುಗಡೆಯ ಭಾಗ್ಯ ಸಿಗುತ್ತಾ ಅಥವಾ ಜೈಲೇ ಗತಿಯಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





